Puneeth James Teaser:  ಅಭಿಮಾನದ ಪರಾಕಾಷ್ಠೆ.. ಜೇಮ್ಸ್ ಟೀಸರ್ ನೋಡಿ ಎದೆ ಮೇಲೆ ಅಪ್ಪು ಎಂದು ಕೊಯ್ದುಕೊಂಡ!

Published : Feb 11, 2022, 04:29 PM IST
Puneeth James Teaser:  ಅಭಿಮಾನದ ಪರಾಕಾಷ್ಠೆ.. ಜೇಮ್ಸ್ ಟೀಸರ್ ನೋಡಿ ಎದೆ ಮೇಲೆ ಅಪ್ಪು ಎಂದು ಕೊಯ್ದುಕೊಂಡ!

ಸಾರಾಂಶ

* ಪುನೀತ್ ರಾಜ್‌ ಕುಮಾರ್ ಜೇಮ್ಸ್ ಟೀಸರ್ ಬಿಡುಗಡೆ * ಅಭಿಮಾನದ ಪರಾಕಾಷ್ಠೆ ಎಂದರೆ ಇದೇನಾ? * ಟೀಸರ್ ನೋಡಿ ಎದೆ ಕೊಪಯ್ದುಕೊಂಡ ವಿಜಯನಗರದ ಅಭಿಮಾನಿ 

ವಿಜಯನಗರ( ಫೆ. 11)   ಇದನ್ನು ಅಭಿಮಾನದ ಪರಾಕಾಷ್ಠೆ ಎನ್ನಬೇಕೋ  ಗೊತ್ತಿಲ್ಲ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಪುನೀತ್ ರಾಜ್‌​ಕುಮಾರ್ (Puneeth Rajkumar)​  ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಮೊದಲೇ ಘೋಷಣೆ ಮಾಡಲಾಗಿತ್ತು.  ಇತ್ತೀಚೆಗಷ್ಟೇ 'ಜೇಮ್ಸ್' ಸಿನಿಮಾದ ಪೋಸ್ಟರ್ ರಿವೀಲ್ ಮಾಡಿ ಚಿತ್ರತಂಡ ಭಾರೀ ಸದ್ದು ಮಾಡಿತ್ತು. 

ಜೇಮ್ಸ್ ಟೀಸರ್ ನೋಡಿದ ಅಭಿಮಾನಿ ಎದೆ ಕೊಯ್ದುಕೊಂಡಿದ್ದಾರೆ. ಟೀಸರ್ ನೋಡಿದ ಬಳಿಕೆ ಎದೆ ಮೇಲೆ ಅಪ್ಪು ಎಂದು ಬರೆದುಕೊಂಡಿದ್ದಾರೆ. ವಿಜಯನಗರ (Vijayanagara) ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಅಪ್ಪು ಅಭಿಮಾನಿ ಕನಕ ಅಭಿಮಾನದ ಪರಾಕಾಷ್ಠೆ ತೋರಿದವರು.

ಜೇಮ್ಸ್ ಚಿತ್ರದ ಟೀಸರ್ ಹೇಗಿದೆ

ಟೀಸರ್ ನೋಡಿದ ಬಳಿಕ, ಅಪ್ಪು ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವ ಎಂಬುವರ  ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಮನೆಗೆ ಹೋಗಿದ್ದಾನೆ... ನಂತರ ಮನೆಯಲ್ಲಿ ಯಾರು ಇಲ್ಲದ  ವೇಳೆ ಎದೆ ಕೊಯ್ದುಕೊಂಡ ಅಭಿಮಾನಿ ಅಪ್ಪು ಹೆಸರು ಕರೆದುಕೊಂಡಿದ್ದಾನೆ. ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಟೀಸರ್ ನೋಡಲು LED ಪರದೇ ವ್ಯವಸ್ಥೆ ಮಾಡಲಾಗಿತ್ತು.  ಈ ಟೀಸರ್ ನೋಡಿದ ನಂತರ ಇಂಥ ಕೆಲಸ ಮಾಡಿಕೊಂಡಿದ್ದಾನೆ. 

ಸೋಲ್ಜರ್ ಪಾತ್ರದಲ್ಲಿ ನಟಿಸಬೇಕೆಂಬುದು ಪುನೀತ್ ಕನಸು: ದೇಶವೇ ಆರಾಧಿಸುವ, ಅಭಿಮಾನಿಸುವ ನಾಯಕ ನಟನ ಜತೆ ಎರಡುವರೆ ವರ್ಷ ಪ್ರಯಾಣಿಸಿದ್ದೇನೆ, ‘ಜೇಮ್ಸ್ ’ ಎನ್ನುವ ಸಿನಿಮಾ ಮಾಡಿದ್ದೇನೆ ಎಂಬುದೇ ನನ್ನ ಭಾಗ್ಯ. ಅವರು ಇಲ್ಲ ಎನ್ನುವ ನೋವು ಇದ್ದೇ ಇರುತ್ತದೆ. ಆದರೆ, ಅವರು ತಮ್ಮ ಚಿತ್ರಗಳ ಮೂಲಕ ನಮ್ಮೊಂದಿಗೆ ಇರುತ್ತಾರೆ. ಆ ಧೈರ್ಯವೇ ‘ಜೇಮ್ಸ್’ ಚಿತ್ರದ ಹಿಂದೆ ಕೆಲಸ ಮಾಡುತ್ತಿದೆ. ಅಪ್ಪು ಫಾರ್ ಎವರ್ ಎಂದು ನಿರ್ದೇಶಕ ಚೇತನ್ ಕುಮಾರ್  ಹೇಳಿದ್ದರು. ಯೋಧನ ಪಾತ್ರದಲ್ಲಿ ಅಭಿನಯಿಸಬೇಕು ಎನ್ನುವುದು ಪುನೀತ್ ಅವರ ಕನಸಿನಲ್ಲಿ ಒಂದಾಗಿತ್ತು ಎಂದು  ಹೇಳಿದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shiva Raj Kumar) ಅಭಿಮಾನಿಗಳಿಗೆ ಒಂದು ದೊಡ್ಡ ಸುದ್ದಿಯನ್ನು ಶಿವರಾಜ್ ಕುಮಾರ್ ನೀಡಿದ್ದರು. ಜೇಮ್ಸ್ ಚಿತ್ರಕ್ಕೆ ಶಿವಣ್ಣ ದನಿ ನೀಡಿದ್ದರ ಜೇಮ್ಸ್ ಚಿತ್ರಕ್ಕೆ ನಟ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದು ಅಪ್ಪು ಪಾತ್ರಕ್ಕೆ‌ ವಾಯ್ಸ್  ನೀಡುತ್ತಿರುವ ಚಿತ್ರಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. 

ಕಿಶೋರ್ ಪ್ರೊಡಕ್ಷನ್‌ನಲ್ಲಿ (Kishore Productions) ಬಂಡವಾಳದಲ್ಲಿ, ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shivarajkumar), ರಾಘವೇಂದ್ರ ರಾಜ್‌ಕುಮಾರ್(Raghavendra Rajkumar), ಪ್ರಿಯಾ ಆನಂದ್, ಶರತ್ ಕುಮಾರ್ (Sharat Kumar), ಶ್ರೀಕಾಂತ್ ಮೆಹಕ್, ಆದಿತ್ಯ ಮೆನನ್, ಮುಕೇಶ್, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ (Chickanna), ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್ ಮತ್ತು ಕೇತನ್ ಕರಂದ್ರೆ ನಟಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?