ಮಹಿಳೆಗೆ ಡ್ರಗ್ಸ್‌ ನೀಡಿ ಅತ್ಯಾಚಾರ ಮಾಡಿದ ಖ್ಯಾತ ಗಾಯಕ ಅರೆಸ್ಟ್‌!

Suvarna News   | Asianet News
Published : Feb 09, 2022, 01:22 PM IST
ಮಹಿಳೆಗೆ ಡ್ರಗ್ಸ್‌ ನೀಡಿ ಅತ್ಯಾಚಾರ ಮಾಡಿದ ಖ್ಯಾತ ಗಾಯಕ ಅರೆಸ್ಟ್‌!

ಸಾರಾಂಶ

ಡಿಸೆಂಬರ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಖ್ಯಾತ ಗಾಯಕನೀಗ ಪೊಲೀಸರ ವಶದಲ್ಲಿ! ಅಷ್ಟು ನಡೆದ ಘಟನೆ ಬೇರೆಯೇ ಇದೆ....

ಅಮೆರಿಕ ಪಾಪ್ ಗಾಯಕ, ನಟ ಹಾಗೂ ಗೀತರಚನೆಕಾರ ಕ್ರಿಸ್ಟೋಫರ್ ಮಾರಿಸ್ ಬ್ರೌನ್ ಉರ್ಫ್‌ ಕ್ರಿಸ್ ಬ್ರೌನ್ ವಿರುದ್ಧ ಪದೇ ಪದೇ ಅತ್ಯಾಚಾರ ಆರೋಪ ಕೇಳಿ ಬರುತ್ತಿವೆ. ಹಾಲಿವುಡ್‌ ಜನಪ್ರಿಯ ನಟಿಯರನ್ನು ಡೇಟ್ ಮಾಡಿದ ಗಾಯಕ ಇದೀಗ ಮಹಿಳೆಯನ್ನು ಟಾರ್ಗೆಟ್ ಮಾಡಿದ್ದಾನೆ ಎನ್ನಲಾಗಿದೆ. ಇದುವರೆಗೂ ಕ್ರಿಸ್ ಮಾಡಿದ ಕೃತ್ಯಕ್ಕೆ ಯಾವುದೇ ಸಾಕ್ಷಿ ಸಿಗುತ್ತಿರಲಿಲ್ಲ. ಅದರೆ ಡಿಸೆಂಬರ್ 2020ರಲ್ಲಿ ನಡೆದ ಘಟನೆಯಿಂದ ಈಗ ಕಂಬಿ ಹಿಂದೆ ನಿಲ್ಲುವ ಸ್ಥಿತಿ ಎದುರಾಗಿದೆ. 

ಏನಿದು ಘಟನೆ?: 
ಡಿಸೆಂಬರ್ 2020ರಂದು ಕ್ರಿಸ್ ಬ್ರೌನ್ ಅಪ್ರಾಪ್ತ ಮಹಿಳೆಯನ್ನು ಎಳೆದುಕೊಂಡು, ಒತ್ತಾಯಿಸಿ ಡ್ರಗ್ಸ್ ಸೇವಿಸುವಂತೆ ಮಾಡಿದ್ದಾನೆ. ಆನಂತರ ಆಕೆ ಮೇಲೆಯೆ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಎಂದು ಅನೇಕ ಇಂಗ್ಲಿಷ್ ವೆಬ್‌ಸೈಟ್‌ಗಳಲ್ಲಿ ಸುದ್ದಿ ಹರಿದಾಡುತ್ತಿದ್ದವು. ಅತ್ಯಾಚಾರಕ್ಕೆ ಒಳಗಾದ 32 ವರ್ಷದ ಮಹಿಳೆ ಜನವರಿ 27ರಂದು ಲಾಸ್ ಏಂಜಲೆಸ್‌ನ ಕಂಟ್ರಿ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾಳೆ. ಆಕೆ ಬಹಿರಂಗವಾಗಿ ತನ್ನ ಹೆಸರನ್ನೂ ರಿವೀಲ್ ಮಾಡಿದ್ದಾಳೆ. 

ಈ ಘಟನೆ ನಡೆದಿರುವುದು ಮಿಯಾಮಿ ಬೀಜ್‌ ಬಳಿ ಇರುವ ಸ್ಟಾರ್ ಬೀಜ್‌ನಲ್ಲಿ ಎನ್ನಲಾಗಿದೆ. ಈ ಮಹಿಳೆ ಕ್ರಿಸ್ ಬ್ರೌನ್ ಅಭಿಮಾನಿಯಾಗಿದ್ದ ಈ ಸ್ಥಳದಲ್ಲಿ ನಿಂತು ಅವರ ಸಂಗೀತ ಲೋಕದ ಬಗ್ಗೆ ಚರ್ಚೆ ಮಾಡುತ್ತಿದ್ದರಂತೆ. ಈಕೆ ಕೂಡ ಗಾಯಕಿ ಆಗಿದ್ದು, ಮಾಡಲಿಂಗ್ ಮತ್ತು ಡ್ಯಾನ್ಸ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾಳೆ. ಇಬ್ಬರೂ ಹಲವು ಗಂಟೆಗಳ ಕಾಲ ಮಾತನಾಡಿದ್ದಾರೆ. ಆಗ ಕ್ರಿಸ್ ಪಾನೀಯ ಸೇವಿಸುವಂತೆ ಕೊಟ್ಟಿದ್ದಾರೆ. ಅದರಲ್ಲಿ ಯಾವುದೋ ಡ್ರಗ್ಸ್ ಹಾಕಲಾಗಿತ್ತು, ಸೇವಿಸುತ್ತಿದ್ದಂತೆ ನಾನು ತಲೆ ತಿರುಗಿ ಬಿದ್ದೆ, ಎಂದು ಕಂಟ್ರಿ ಕೋರ್ಟಲ್ಲಿ ಮಾಹಿತಿ ನೀಡಿದ್ದಾರೆ. 

25ನೇ ವರ್ಷಕ್ಕೆ ಗರ್ಲ್‌ಫ್ರೆಂಡ್‌ ಜೊತೆ 3 ಮಿಲಿಯನ್ ಡಾಲರ್ ಮನೆ ಖರೀದಿಸಿದ Spider Man ನಟ!

ಮರು ದಿನ ಕ್ರಿಸ್ ಬ್ರೌನ್ ಆ ಮಹಿಳೆಗೆ ಕರೆ ಮಾಡಿ, ನಡೆದ ಘಟನೆ ಬಗ್ಗೆ ನನಗೇನೂ ನೆನಪಿಲ್ಲ ಹೀಗಾಗಿ ಒಂದು ಎಮರ್ಜೆನ್ಸಿ ಕಾಂಟ್ರಸೆಪ್ಟಿವ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಆಕೆ ತಕ್ಷಣವೇ ಮಾತ್ರೆಯನ್ನು ಸೇವಿಸಿದ್ದಾಳೆ. ಈ ಘಟನೆಯಿಂದ ತನ್ನ ಜೀವನ ಹಾಳಾಗುತ್ತಿದೆ ಎಂದು ಅರಿವಿಗೆ ಬಂದ ನಂತರ ಮಹಿಳೆ ದೂರು ನೀಡಿರುವುದು ಎಂದು ಒಂದು ವೆಬ್ ವರದಿ ಮಾಡಿದೆ. ಮತ್ತೊಂದರಲ್ಲಿ ಈ ಘಟನೆ ನಡೆದ ಬಳಿಕವೂ ಆಕೆ ಜನವರಿ ತಿಂಗಳಲ್ಲಿ ಕ್ರಿಸ್ ಜೊತೆ ಎರಡು ಸಲ ಮಲಗಿಸಿಕೊಂಡಿದ್ದಾಳೆ, ಎನ್ನಲಾಗಿದೆ. 

Three Dimension Motion Picture; ಹೊಸ ನಿರ್ಮಾಣ ಸಂಸ್ಥೆ ತೆರೆದ ಸಂಜಯ್ ದತ್!

ಕ್ರಿಸ್ ಬ್ರೌಸ್‌ ಜೊತೆ ಆಕೆ ಆಗಸ್ಟ್ 2021ರಂದು ಕೂಡ ಸೆಕ್ಸ್‌ ಮಾಡಿದ್ದು, ಆಗ ಆ ಮನೆಯಲ್ಲಿ ಮಹಿಳೆ ನಿರ್ಮಾಪಕಿಯೊಬ್ಬರಿದ್ದರು ಎನ್ನಲಾಗಿದೆ. ಈ ಅಪ್ರಾಪ್ತ ಮಹಿಳೆ ಮುಜುಗರಕ್ಕೆ ಒಳಗಾಗಿ ಆತನ ರೂಮ್‌ಗೆ ಮತ್ತೆ ಹೋಗಲು ನಿರಾಕರಿಸಿದ್ದಾಳೆ. ಆತನನ್ನು ಭೇಟಿ ಮಾಡಿದಾಗಲೆಲ್ಲಾ ಪ್ಯಾನಿಕ್ ಅಟ್ಯಾಕ್ ಆಗುತ್ತದೆ, ಭಯವಾಗುತ್ತದೆ ಎಂದು ಹೇಳಿ, ಆತನ ವಿರುದ್ಧ 20 ಮಿಲಿಯನ್ ಡಾಲರ್ ಲೈಂಗಿಕ ದೌರ್ಜನ್ಯ, ಬ್ಯಾಟರಿ ಮತ್ತು ಅತ್ಯಾಚಾರ ಆರೋಪ ಮಾಡಿದ್ದಾಳೆ.

ಘಟನೆ ಬಗ್ಗೆ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಕ್ರಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತ ಇನ್‌ಸ್ಟಾಗ್ರಾಂನಲ್ಲಿ ಕೊನೆಯದಾಗಿ ಅಪ್ಲೋಡ್ ಮಾಡಿದ ಪೋಸ್ಟ್‌  ಜನವರಿ 28ರಂದು. 'ನಾನು ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ, ಒಳ್ಳೆಯ ಹಾಡು ಅಥವಾ ಹೊಸ ಪ್ರಾಜೆಕ್ಟ್‌ ಅನೌನ್ಸ್‌ ಮಾಡುವಾಗಲೇ ಕೆಲವರು ಕೆಟ್ಟ ಪ್ಲ್ಯಾನ್ ಮಾಡಿ ರೆಡ್ ಬುಲ್ಸ್‌ನ ಅಡ್ಡ ಬಿಡುತ್ತಾರೆ,' ಎಂದು ಕ್ರಿಸ್ ಬರೆದುಕೊಂಡಿದ್ದರು. 2009ರಲ್ಲೂ ಕೂಡ ಕ್ರಿಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!