Valimai Trailer: ಅಜಿತ್ ಕುಮಾರ್ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್!

Suvarna News   | Asianet News
Published : Feb 10, 2022, 10:45 PM IST
Valimai Trailer: ಅಜಿತ್ ಕುಮಾರ್ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್!

ಸಾರಾಂಶ

ಕಾಲಿವುಡ್‌ನ ಖ್ಯಾತ ನಟ ಅಜಿತ್ ಕುಮಾರ್ ಅಭಿನಯದ 'ವಲಿಮೈ' ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದು, 'ವಲಿಮೈ' ಸಿನಿಮಾದ ಕನ್ನಡ ವರ್ಷನ್ ಟ್ರೇಲರ್‌ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಲಾಂಚ್ ಮಾಡುವ ಮೂಲಕ ಅಜಿತ್ ಸಿನಿಮಾಗೆ ಬೆಂಬಲವನ್ನು ನೀಡಿದ್ದಾರೆ.

ಸ್ಯಾಂಡಲ್‌ವುಡ್‌ (Sandalwood) ಚಿತ್ರಗಳು ಈಗಾಗಲೇ ಪ್ಯಾನ್ ಇಂಡಿಯಾ (Pan India) ಲೆವಲ್‌ನಲ್ಲಿ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ದಕ್ಷಿಣ ಭಾರತದ ಸಿನಿಮಾ ತಾರೆಯರು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದಿದ್ದಾರೆ. ಈ ಮಾತಿಗೆ ಪೂರಕವಾಗಿ ಕನ್ನಡದ ಸ್ಟಾರ್ ನಟರು, ಬೇರೆ ಭಾಷೆಯ ಸ್ಟಾರ್​ಗಳ ಸಿನಿಮಾಗಳಿಗೆ ಬೆಂಬಲಿಸುತ್ತಿದ್ದಾರೆ. ಮಾತ್ರವಲ್ಲದೇ ಬೇರೆ ಭಾಷೆಯ ನಟರು ಕೂಡ ಕನ್ನಡ ಸಿನಿಮಾಗಳ ಬೆಳವಣಿಗೆಗೆ ಕೈ ಜೋಡಿಸುತ್ತಿದ್ದಾರೆ. ಇದೀಗ ತಮಿಳು ನಟ ಅಜಿತ್ ಕುಮಾರ್ (Ajith Kumar) ಅಭಿನಯದ ಬಹು ನಿರೀಕ್ಷಿತ ಚಿತ್ರ 'ವಲಿಮೈ' (Valimai) ತಮಿಳು ಸೇರಿದಂತೆ ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಚಿತ್ರಕ್ಕೆ ಕನ್ನಡದ ಸ್ಟಾರ್‌ ನಟರೊಬ್ಬರು ಸಾಥ್ ನೀಡಿದ್ದಾರೆ.

ಹೌದು! ಕಾಲಿವುಡ್‌ನ ಖ್ಯಾತ ನಟ ಅಜಿತ್ ಕುಮಾರ್ ಅಭಿನಯದ 'ವಲಿಮೈ' ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಸಾಥ್ ನೀಡಿದ್ದು, 'ವಲಿಮೈ' ಸಿನಿಮಾದ ಕನ್ನಡ ವರ್ಷನ್ ಟ್ರೇಲರ್‌ನ್ನು (Trailer) ತಮ್ಮ ಟ್ವಿಟರ್ (Twitter)​​ ಖಾತೆಯಲ್ಲಿ ಲಾಂಚ್ ಮಾಡುವ ಮೂಲಕ ಅಜಿತ್ ಸಿನಿಮಾಗೆ ಬೆಂಬಲವನ್ನು ನೀಡಿದ್ದಾರೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ (Boney Kapoor) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತೆಲುಗಿನಲ್ಲಿ ಟಾಲಿವುಡ್‌ ನಟ ಪ್ರಿನ್ಸ್ ಮಹೇಶ್ ಬಾಬು (Mahesh Babu) ಟ್ರೇಲರ್‌ನ್ನು ರಿಲೀಸ್ ಮಾಡಿದ್ರೆ, ಹಿಂದಿಯಲ್ಲಿ ಅಜಯ್ ದೇವಗನ್ (Ajay Devgan) 'ವಲಿಮೈ' ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. 

Ajith Kumar: ನನ್ನ ತಲ ಅಂತ ಕರೀಬೇಡಿ, AK ಅನ್ನಿ ಸಾಕು ಎಂದ ಸೌತ್ ನಟ

'ವಲಿಮೈ' ಚಿತ್ರದಲ್ಲಿ ಅಜಿತ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡು​ ಸಿಕ್ಕಾಪಟ್ಟೆ ಆ್ಯಕ್ಷನ್​ ಮಾಡಿದ್ದಾರೆ. ಸಾಹಸ ದೃಶ್ಯಗಳೇ ಸಿನಿಮಾದ ಹೈಲೈಟ್​ ಆಗಿರಲಿವೆ ಎಂಬುದಕ್ಕೆ ಟ್ರೈಲರ್​ ಮೂಲಕ ಸಾಕ್ಷಿ ಸಿಕ್ಕಿದೆ. ಅದರಲ್ಲೂ ಅಜಿತ್​ ವಿಶೇಷವಾಗಿ ಬೈಕ್​ ಸ್ಟಂಟ್ (Bike Stunt)​ ಮಾಡಿದ್ದಾರೆ. ಅದನ್ನು ಕಂಡರೆ ಮೈನವಿರೇಳುವಂತಿದೆ. ಜೊತೆಗೆ ಈ ಚಿತ್ರ ಬೈಕ್​ ರೇಸ್​ನ ಸುತ್ತ ಹೆಣೆದಿರುವ ಕಥೆ ಎಂಬುದು ಟ್ರೈಲರ್​ ಮೂಲಕ ಸಾಬೀತಾಗಿದೆ. 'ನೇರ್ಕೊಂಡ ಪಾರ್ವೈ' (Nerkonda Paarvai) ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದ ಎಚ್​. ವಿನೋದ್​ (H.Vinoth) ಅವರೇ 'ವಲಿಮೈ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.



ಬೈಕ್​ ರೇಸ್​ನ ಸುತ್ತ ಹೆಣೆದಿರುವ 'ವಲಿಮೈ' ಚಿತ್ರಕ್ಕೆ ದೊಡ್ಡ ಓಟಿಟಿ (OTT) ಕಂಪನಿಯೊಂದು 300 ಕೋಟಿ ರೂ. ಆಫರ್ ನೀಡಿದೆ ಎಂಬ ಮಾಹಿತಿ ಈ ಹಿಂದೆ ಕೇಳಿಬಂದಿತ್ತು. ಆದರೆ, ಈ ಆಫರ್‌ಗೆ ಚಿತ್ರದ ನಿರ್ಮಾಪಕ ಬೋನಿ ಕಪೂರ್ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಇನ್ನು ಈ ಚಿತ್ರದಲ್ಲಿ ಅಜಿತ್‌ಗೆ ನಾಯಕಿಯಾಗಿ ಹುಮಾ ಖುರೇಶಿ (Huma Qureshi) ಕಾಣಿಸಿಕೊಂಡಿದ್ದು, ಈ ಕಾಂಬಿನೇಷನ್​ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮುಖ್ಯವಾಗಿ ಅಜಿತ್ ಎದುರಿಗೆ ಮೊದಲ ಬಾರಿಗೆ 'ಆರ್‌ಎಕ್ಸ್ 100' ಚಿತ್ರದ ನಾಯಕ ಕಾರ್ತೀಕೆಯ (Karthikeya) ವಿಲನ್ ಆಗಿ ಅಬ್ಬರಿಸಿದ್ದಾರೆ. 

ತಲಾ ಅಜಿತ್ ಮನೆಯೆದುರು ಆತ್ಮಹತ್ಯೆಗೆ ಯತ್ನಿಸಿದ ನರ್ಸ್

ಜೊತೆಗೆ ಹಾಸ್ಯ ನಟ ಯೋಗಿಬಾಬು ( Yogi Babu) ಹಾಗೂ ಕನ್ನಡ ಚಿತ್ರರಂಗದ ಅಚ್ಯುತ್​ ಕುಮಾರ್ (Achyunth Kumar)​ ಈ ಚಿತ್ರದಲ್ಲಿ ನಟಿಸಿರೋದು ವಿಶೇಷವಾಗಿದೆ. ಬೇವ್ಯೂ ಪ್ರಾಜೆಕ್ಟ್ ಎಲ್​ಎಲ್​ಪಿ ಅಡಿಯಲ್ಲಿ ಜೀ ಸ್ಟುಡಿಯೋಸ್ ಮತ್ತು ಕಪೂರ್ 'ವಲಿಮೈ' ಚಿತ್ರವನ್ನು ನಿರ್ಮಿಸಿದ್ದಾರೆ. ಕ್ರೈಂನಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಗುಂಪುಗಳನ್ನು ಭೇದಿಸುವ ಪಾತ್ರದಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 'ವಲಿಮೈ' ಸಿನಿಮಾ ಜನವರಿ 13ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಸಂಕಷ್ಟದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಮಸ್ಯೆಯನ್ನು ಕಂಡಿತ್ತು. ಹಾಗಾಗಿ ಇದೇ ಫೆಬ್ರವರಿ 24ರಂದು 'ವಲಿಮೈ' ಸಿನಿಮಾ ತೆರೆ ಕಾಣಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?