
ನಟಿ ಸಾಯಿ ಪಲ್ಲವಿ (Sai Pallavi) ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 'ಮಹಿಳಾ ಪ್ರಧಾನ ಸಿನಿಮಾ ಮಾಡುವ, ಮಹಿಳಾ ಕಲಾವಿದರಿಗೆ ಆದ್ಯತೆ ನೀಡುವ ಪರಿಪಾಠ ಇತ್ತೀಚೆಗೆ ಸಡನ್ನಾಗಿ ಬೆಳೆದು ಬಂದಿದೆ' ಎಂದು ಸಂದರ್ಶರು ಹೇಳುತ್ತಿದ್ದಂತೆ ಅವರ ಮಾತನ್ನು ಮಧ್ಯೆಯೇ ತಡೆದಿದ್ದಾರೆ ನಟಿ ಸಾಯಿ ಪಲ್ಲವಿ. 'ನನಗೇನೂ ಹಾಗೆ ಅನ್ನಿಸುತ್ತಿಲ್ಲ, ಅದೆಷ್ಟೋ ದಶಕಗಳ ಹಿಂದೆಯೇ ಮಣಿರತ್ನಂ ಸರ್ ಅವರು 'ಮೌನರಾಗಂ' ಸಿನಿಮಾ ಮಾಡಿದ್ದರು. ಅದರಲ್ಲಿ ಮಹಿಳಾ ಪ್ರಧಾನ ವಸ್ತು-ವಿಷಯವೇ ಚಿತ್ರವಾಗಿದೆ' ಎಂದಿದ್ದಾರೆ.
ಅದಕ್ಕೆ ನಿರೂಪಕರು, 'ಹಾಗಲ್ಲ, ಮೊದಲೂ ಇತ್ತು, ಈಗಲೂ ಇದೆ, ಆದರೆ ಮಧ್ಯೆ ಸ್ವಲ್ಪ ಕಾಲ ಮಹಿಳಾ ಪ್ರಧಾನ ಸಿನಿಮಾಗಳು ಮರೆಯಾಗಿದ್ದವು. ಆದರೆ, ಅಚ್ಚರಿ ಎಂಬಂತೆ, ಅಂಥ ಸಿನಿಮಾಗಳು ಮಲಯಾಳಂ ಇಂಡಸ್ಟ್ರಿಯಲ್ಲಿ ಆಗಲೂ, ಈಗಲೂ ಮತ್ತು ಯಾವಾಗಲೂ ಇದ್ದವು. ಆದರೆ, ಮಲಯಾಳಂ ಹರತುಪಡಿಸಿ ಬೇರೆ ಸಿನಿಉದ್ಯಮದಲ್ಲಿ ಒಮ್ಮೆ ಮರೆಯಾಗಿ ಮತ್ತೆ ಮೂಡಿಬರುತ್ತಿವೆ' ಎಂದಿದ್ದಾರೆ. ಅದಕ್ಕೆ ನಟಿ ಸಾಯಿ ಪಲ್ಲವಿ 'ಅದು ಹೌದು, ಆದರೆ ನಾನು ಈಗ ಉದ್ಯಮದಲ್ಲಿರುವ ಮೂಲಕ ಲಕ್ಕಿ ಎಂದಿದ್ದಾರೆ ನಟಿ ಸಾಯಿ ಪಲ್ಲವಿ.
ಬಿಗ್ ಬಾಸ್ ಕಪ್ ಗೆಲ್ಲದ ನಟಿ ಸಂಗೀತಾ ಶೃಂಗೇರಿ ಅಳೆದೂ ತೂಗಿ ಅದೆಂಥಾ ಮಾತು ಹೇಳ್ಬಿಟ್ರು ನೋಡಿ!
'ಆಗಲೂ ಇತ್ತು, ಈಗಲೂ ಇದೆ, ಆದರೆ ಮಧ್ಯದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಮಾಯವಾಗಿದ್ದ ಕಾಲದಲ್ಲಿ ನಾನು ಈ ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಸತ್ಯ. ಹೀಗಾಗಿ ನನ್ನ ದೃಷ್ಟಿಯಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಇವೆ. ನನಗಂತೂ ಅದೃಷ್ಟ ಎಂಬಂತೆ ಅಂಥ ಪಾತ್ರಗಳೇ ಹುಡುಕಿಕೊಂಡು ಬರುತ್ತವೆ. ನನಗೆ ಯಾವತ್ತೂ ಸುಮ್ಮನೇ ಕ್ಯಾಮೆರಾ ಮುಂದೆ ಸುತ್ತುವ ಪಾತ್ರಗಳು ಸಿಗಲೇ ಇಲ್ಲ. ಆ ಬಗ್ಗೆ ನಾನು ನನ್ನ ನಿರ್ಮಾಪಕರು, ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಲೇಬೇಕು' ಎಂದಿದ್ದಾರೆ ನಟಿ ಸಾಯಿ ಪಲ್ಲವಿ.
ಬಟ್ಟೆಯಲ್ಲಿ ಕಲ್ಲು ಸುತ್ತಿ ಹೊಡೆದ ನಟಿ ಮೃಣಾಲ್ ಠಾಕೂರ್; ಕೆಲವರ ಬಗ್ಗೆ ಕೆರಳಿ ಕೆಂಡಕಾರಿದ ಚೆಲುವೆ!
ಅಂದಹಾಗೆ, ಸದ್ಯ ನಟಿ ಸಾಯಿ ಪಲ್ಲವಿ ಅವರು ಯಶ್ (Yash) ಹಾಗು ರಣಬೀರ್ ಕಪೂರ್ (Ranbir Kapoor) ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ 'ರಾಮಾಯಣ' ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ನಟನೆಯ, ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ಸಿನಿಮಾದಲ್ಲಿ (Toxic) ಕೂಡ ನಟಿ ಸಾಯಿ ಪಲ್ಲವಿಯೇ ನಾಯಕಿ ಎನ್ನಲಾಗುತ್ತಿದೆ. ಆದರೆ, ಈ ಸುದ್ದಿ ಇನ್ನೂ ಕನ್ಫರ್ಮ್ ಆಗಿಲ್ಲ. ಒಟ್ಟಿನಲ್ಲಿ, ಸಾಯಿ ಪಲ್ಲವಿಗೆ ಶುಕ್ರದೆಸೆ ಆರಂಭವಾಗಿದೆ.
ಪರಮೇಶ್ವರ್ ಗುಂಡ್ಕಲ್- ಧನಂಜಯ್ ಜೋಡಿ 'ಕೋಟಿ' ಸಿನಿಮಾ ಪೋಸ್ಟರ್ ಯುಗಾದಿ ಹಬ್ಬಕ್ಕೆ ಬಿಡುಗಡೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.