ಪತಿ ರವೀಂದರ್ ಅವರು ಜೈಲಿನಲ್ಲಿದ್ದಾಗ ಅವರೊಬ್ಬ ಮೋಸಗಾರ ಎಂದು ಗೋಳೋ ಎಂದಿದ್ದ ನಟಿ ಮಹಾಲಕ್ಷ್ಮಿ, ಪತಿ ಜೈಲಿನಿಂದ ಹೊರಕ್ಕೆ ಬರುತ್ತಿದ್ದಂತೆಯೇ ವರಸೆ ಬದಲಾಯಿಸಿದ್ದಾರೆ!
ಅತಿ ಹೆಚ್ಚು ಟ್ರೋಲ್ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi). ಈಚೆಗಷ್ಟೇ ಇವರು ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಇರುವಾಗಲೇ ಈ ಜೋಡಿಗೆ ಶಾಕಿಂಗ್ ಎದುರಾಗಿತ್ತು. ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಇದಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದು ಅವರು ಬಂಧನದಲ್ಲಿದ್ದರು. ಇವರ ವಿರುದ್ಧ ವಂಚನೆ ಆರೋಪ ದಾಖಲಾಗಿದೆ. ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 15.83 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರವೀಂದರ್ ಚಂದ್ರಶೇಖರ್ ಪೊಲೀಸ್ ಅವರನ್ನು ಬಂಧಿಸಿದ್ದರು. ಈಗ ಮೂಲಗಳ ಪ್ರಕಾರ, ರವೀಂದರ್ ಅವರನ್ನು ಮದ್ರಾಸ್ ಹೈಕೋರ್ಟ್ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಅವರೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪತಿ ಜೈಲಿನಲ್ಲಿದ್ದಾಗ, ಅವರು ತಮಗೆ ಮೋಸ ಮಾಡಿದ್ದರೆಂದು ಮಹಾಲಕ್ಷ್ಮಿ ಕಣ್ಣೀರು ಸುರಿಸಿದ್ದರು. ಪತಿ ಜೈಲಿಗೆ ಹೋಗುತ್ತಿದ್ದಂತೆಯೇ ಫೋಟೋಷೂಟ್ ಮಾಡಿಸಿಕೊಂಡಿದ್ದ ಮಹಾಲಕ್ಷ್ಮಿ, ಎಲ್ಲವೂ ಸರಿಯಾಗುತ್ತದೆ ಎಂದಿದ್ದರು. ಆದರೆ ಬಳಿಕ ಪತಿಗೆ ಜಾಮೀನು ಸಿಗುವುದು ತುಂಬಾ ಕಷ್ಟ ಎಂದು ತಿಳಿಯುತ್ತಲೇ ಮಾಧ್ಯಮಗಳ ಮುಂದೆ ಗೋಳೋ ಎಂದಿದ್ದರು. ನನಗೆ ಈ ದಢೂತಿ ಮನುಷ್ಯ ಮೋಸ ಮಾಡಿದ್ದಾನೆ. ತಾನು ಹೀಗೆ ಹತ್ತಾರು ಕೋಟಿ ರೂಪಾಯಿ ಮೋಸ ಮಾಡಿರುವ ವಿಷಯವನ್ನು ನನಗೆ ತಿಳಿಸದೇ ಮದುವೆಯಾಗಿದ್ದಾನೆ. ನಾನು ನನ್ನ ಮೊದಲ ಪತಿಗೆ ಡಿವೋರ್ಸ್ ಕೊಟ್ಟು ಈತನ ಜೊತೆ ಮದುವೆಯಾಗಿ ಮೋಸ ಹೋದೆ ಎಂದು ಗೋಳೋ ಎಂದು ಅತ್ತಿದ್ದರು. ಆತ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಮೋಸ ಮಾಡುತ್ತಿದ್ದ. ಇದ್ಯಾವುದೂ ನನ್ನ ಅರಿವಿಗೆ ಬರಲಿಲ್ಲ ಎಂದಿದ್ದರು.
ಮೊಬೈಲ್ ಸಂಖ್ಯೆ ಬದಲಿಸಿ ಪತಿಯಿಂದ ವಂಚನೆ! ಮೋಸ ಹೋದೆನೆಂದು ಬಿಕ್ಕಿಬಿಕ್ಕಿ ಅಳ್ತಿರೋ ಮಹಾಲಕ್ಷ್ಮಿ
ಆದರೆ ಈಗ ಪತಿಯ ಜೊತೆ ಮಹಾಲಕ್ಷ್ಮಿ ಪೋಸ್ ಕೊಟ್ಟಿದ್ದಾರೆ. ಜೈಲಿನಲ್ಲಿ ಇದ್ದ ಹಿನ್ನೆಲೆಯಲ್ಲಿ ರವೀಂದರ್ ಅವರಿಗೆ ಗಡ್ಡ ಸಿಕ್ಕಾಪಟ್ಟೆ ಬೆಳೆದಿದ್ದು, ಅದೇ ಸ್ಥಿತಿಯಲ್ಲಿಯೇ ಮಹಾಲಕ್ಷ್ಮಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪೋಟೋದಲ್ಲಿ ರವೀಂದರ್ ಗಡ್ಡ ಸ್ವಲ್ಪ ಉದ್ದವಾಗಿ ಬೆಳೆದಿದೆ ಅಷ್ಟೇ. ಇಂದಿಗೂ ತನ್ನನ್ನು ನಗಿಸುವ ಪತಿಯೇ ಎಂಬ ಮಹಾಲಕ್ಷ್ಮಿ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಹೊಸ ಪೋಸ್ಟ್ನಲ್ಲಿ ನಟಿ ಮಹಾಲಕ್ಷ್ಮಿ ಇಂದಿಗೂ ನಾನು ನನ್ನ ಪತಿಯನ್ನು ಹೆಚ್ಚು ನಂಬುವುದಾಗಿ ಬರೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಟ್ರೋಲ್ಗೆ ಒಳಗಾಗುತ್ತಿದೆ. ಗಂಡ ಜೈಲಿನಲ್ಲಿದ್ದಾಗ ಒಂದು ಅವತಾರ, ಈಗ ಇನ್ನೊಂದು ಅವತಾರನಾ ಎಂದು ಮಹಾಲಕ್ಷ್ಮಿಗೆ ಟ್ರೋಲಿಗರು ಪ್ರಶ್ನಿಸುತ್ತಿದ್ದಾರೆ. ಜೈಲಿಗೆ ಹೋದಾಗ ಆತ ಮೋಸಗಾರ, ಹೊರಗಡೆ ಇದ್ದಾಗ ಅವನಂಥ ಗಂಡ ಇಲ್ಲ ಅನ್ನುವೆಯಾ ಅಂತಿದ್ದಾರೆ.
ಅಷ್ಟಕ್ಕೂ ರವೀಂದರ್ ಮೇಲೆ ಕೇಸ್ ಹಾಕಿರುವವರು ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬ ಉದ್ಯಮಿ. ರವೀಂದರ್ ಚಂದ್ರಶೇಖರ್ ತಮಗೆ ವಂಚನೆ ಮಾಡಿದ್ದಾರೆಂದು ಅವರು ದೂರು ದಾಖಲಿಸಿದ್ದಾರೆ. ರವೀಂದ್ರರ್ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಕಾಪಾರನ್ನು ಪ್ರೇರೇಪಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.
Rekha Birthday: ಅಮಿತಾಭ್ ಕೈಕೊಟ್ಟು, ಪತಿಯ ಸಾವಿನ ಬಳಿಕ ಮತ್ತೊಂದು ಮದ್ವೆ ಆಸೆ ಬಿಚ್ಚಿದ್ದರು ರೇಖಾ!