
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶನಕ ಸಿದ್ದಕಿ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಗಸ್ಟ್ 7ರಂದು ಸುಮಾರು 3ಗಂಟೆ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದರು. ನ್ಯುಮೋನಿಯಾ ಮತ್ತು ಯಕೃತ್ತಿನ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಿಕಿ ಹೃದಯಾಘಾತದಿಂದ ಅಗಸ್ಟ್ 8ರಂದು ಕೊನೆಯುಸಿರೆಳೆದಿದ್ದಾರೆ.
Extracorporeal Membrane Oxygenation (ECMO) ಸಹಾಯದಿಂದ ಸಿದ್ದಿಕಿ ಉಸಿರಾಡುತ್ತಿದ್ದರು. ಗಂಭೀರ ಸ್ಥಿತಿ ಪರಿಗಣಿಸಿ ಮುಂದೆ ಏನು ಮಾಡಬೇಕು ಎಂದು ವೈದ್ಯರು ಚರ್ಚೆ ಮಾಡುವಷ್ಟರಲ್ಲಿ ಅಗಲಿದ್ದಾರೆ.
ಈಗಲೂ ಚಿರು ಜೊತೆ ಮಾತನಾಡುತ್ತೀನಿ; ಹಾಸ್ಯ ಮಾಡುವವರಿಗೆ ಸ್ಪಷ್ಟನೆ ಕೊಟ್ಟ ಮೇಘನಾ ರಾಜ್!
'ಮೃದು ಸ್ವಭಾವದ ವ್ಯಕ್ತಿ. ತುಂಬಾ ಒಳ್ಳೆ ವ್ಯಕ್ತಿ. ಬರಹಗಾರ ಮತ್ತು ನಿರ್ದೇಶಕನಾಗಿ ಬದುಕಬೇಕು ಎಂದು ಆ ದೇವರೆ ಬರೆದು ಬಿಟ್ಟಿದ. ನೋಡಲು ಸಖತ್ ಸಾಫ್ಟ್ ವ್ಯಕ್ತಿತ್ವದವರಾಗಿದ್ದರೂ ಅವರಲ್ಲಿ ಒಂದು ತಮಾಷೆ ಮಾಡುವ ಗುಣವಿತ್ತು. ನಮ್ಮ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನನ್ನ ದಿನದ ಮಾತುಕಥೆಯಲ್ಲಿ ಅವರು ಆಗಾಗ ಪಾಪ್ ಕಲ್ಚರ್‌ನ ತರುತ್ತಿದ್ದರು. ಇದು ನಮಗೆ ದೊಡ್ಡ ನಷ್ಟ. ಈ ನೋವು ನಷ್ಟ ತಡೆದುಕೊಳ್ಳಲು ಸಿದ್ದಿಕಿ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ' ಎಂದು ನಟ ದುಲ್ಕರ್ ಸಲ್ಮಾನ್ ಬರೆದಿದ್ದಾರೆ.
RIP: ಬಾಲಿವುಡ್ ತಾರೆಯರ ನಿಗೂಢ ಸಾವಿಗೆ ಕಾರಣ ಏನು?; ಜ್ಯೋತಿಷ್ಯದಲ್ಲಿ ಸಿಕ್ತು ಮರಣದ ರಹಸ್ಯ..!
1989ರಲ್ಲಿ ಸಿದ್ದಿಕಿ ರಾಮಾಜಿ ರಾವ್ ಸ್ಪೀಕಿಂಗ್ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶನ ಮಾಡಿದರು. ಮೊದಲ ಚಿತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಮೆಚ್ಚುಗೆ ಪಡೆದುಕೊಂಡರು. ಸಿನಿಮಾ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದ ಸಿದ್ದಿಕಿ ನಿರ್ದೇಶಕರಾಗಿ ಮಾತ್ರವಲ್ಲದೆ ಸ್ಕ್ರಿನ್‌ರೈಟರ್ ಆಗಿಯೂ ಕೆಲಸ ಮಾಡಿದ್ದಾರೆ. ಅದರಲ್ಲಿ 'ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್' ಮತ್ತು 'ಬಿಗ್ ಬ್ರದರ್' ಹೆಸರು ಮಾಡಿರುವ ಸಿನಿಮಾಗಳು.
ಸಿದ್ದಿಕಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.