KGF ರಾಕಿ ಭಾಯ್ ಸ್ಫೂರ್ತಿ; ಒಂದು ಪ್ಯಾಕ್ ಸಿಗರೇಟ್ ಸೇದಿ 15 ವರ್ಷದ ಬಾಲಕ ಅಸ್ವಸ್ಥ

By Shruiti G KrishnaFirst Published May 28, 2022, 3:05 PM IST
Highlights

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2(KGF 2) ಸಿನಿಮಾ ವಿಶ್ವದ ಗಮನ ಸೆಳೆದ ಚಿತ್ರವಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಕೆಜಿಎಫ್-2 ಸಿನಿಮಾ ದಾಖಲೆಯ ಕಲೆಕ್ಷನ್ ಮಾಡಿದೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2 ಸಿನಿಮಾದ ರಾಕಿ ಭಾಯ್ ಪಾತ್ರದಿಂದ ಸ್ಫೂರ್ತಿಯಾಗಿ ಹೈದರಾಬಾದ್‌ನ 15 ವರ್ಷದ ಯುವಕನೊಬ್ಬ ರಾಕಿ ಭಾಯ್ ನೋಡಿ ತಾನು ಹಾಗೆ ಸಿಗರೇಟ್ ಸೇದು ಆಸ್ಪತ್ರೆ ಸೇರಿದ್ದಾನೆ.

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2(KGF 2) ಸಿನಿಮಾ ವಿಶ್ವದ ಗಮನ ಸೆಳೆದ ಚಿತ್ರವಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಕೆಜಿಎಫ್-2 ಸಿನಿಮಾ ದಾಖಲೆಯ ಕಲೆಕ್ಷನ್ ಮಾಡಿದೆ. ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಕೆಜಿಎಫ್-2 ಮೂರನೇ ಸ್ಥಾನದಲ್ಲಿದೆ. ಸಿನಿಮಾದಲ್ಲಿ ರಾಕಿ ಭಾಯ್ ಸ್ಟೈಲ್, ಆಕ್ಷನ್, ಆಕ್ಟಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪಕ್ಕಾ ಮಾಸ್ ಅಂಡ್ ಆಕ್ಷನ್ ಚಿತ್ರಕ್ಕೆ ಭಾರತೀಯ ಚಿತ್ರ ಪ್ರೇಕ್ಷಕರು ಮನಸೋತಿದ್ದಾರೆ. ಆದರೆ 15 ವರ್ಷದ ಯುವಕನೊಬ್ಬ ರಾಕಿ ಭಾಯ್ ನೋಡಿ ತಾನು ಹಾಗೆ ಸಿಗರೇಟ್ ಸೇದು ಆಸ್ಪತ್ರೆ ಸೇರಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌ ಮೂಲದ 15 ವರ್ಷದ ಬಾಲಕ ಕೆಜಿಎಫ್-2 ಸಿನಿಮಾವನ್ನು ಎರಡು ದಿನಗಳಲ್ಲಿ ಮೂರು ಬಾರಿ ನೋಡಿದ ಬಳಿಕ ರಾಕಿ ಭಾಯ್ ಹಾಗೆ ತಾನು ಕೂಡ ಒಂದು ಪ್ಯಾಕ್ ಸಿಗರೇಟ್ ಅನ್ನು ಒಮ್ಮಗೆ ಸೇದಿದ್ದಾನೆ. ಬಳಿಕ ತೀವ್ರ ಅಸ್ವಸ್ಥನಾದ ಹುಡುಗನನ್ನು ಆಸ್ಪತ್ರೆಗೆ ದಾಖಲಾಗಿದೆ. 15 ವರ್ಷದ ಬಾಲಕನಿಗೆ ತೀವ್ರ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿದೆ. ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಇಂಡಿಯಾ ಟುಡೇ ಆಂಗ್ಲ ಮಧ್ಯಮ ವರದಿ ಮಾಡಿದೆ.

ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಕೌನ್ಸೆಲಿಂಗ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣ ಬಗ್ಗೆ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯೆ ನೀಡಿದ್ದು ಚಿಕ್ಕ ಮಕ್ಕಳು ಇಂತ ಪಾತ್ರಗಳಿಂದ ಬಹುಬೇಗ ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ.

KGF ಸ್ಟಾರ್ ಯಶ್‌ಗೆ ಮಿ. ಶೋ ಆಫ್ ಎಂದಿದ್ದ ರಶ್ಮಿಕಾ; ಮತ್ತೆ ವೈರಲ್ ಆದ ಹಳೆ ಹೇಳಿಕೆ

ಶ್ವಾಸಕೋಶತಜ್ಞ ಡಾ. ರೋಹಿತ್ ರೆಡ್ಡಿ ಮಾತನಾಡಿ, 'ಹದಿಹರೆಯದವರು ರಾಕಿ ಭಾಯ್ ಅಂತಹ ಪಾತ್ರಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಈ ವೇಳೆ ಬಾಲಕ ಒಂದು ಪ್ಯಾಕ್ ಸಿಗರೇಟ್ ಪ್ಯಾಕ್ ಅನ್ನು ಸೇದಿ ತೀವ್ರ ಅಸ್ವಸ್ಥನಾಗಿದ್ದ. ಸಿನಿಮಾಗಳು ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ನಿರ್ಮಾಪಕರು ಮತ್ತು ನಟರು ಸಿಗರೇಟ್, ತಂಬಾಕು, ಅಲ್ಕೋಹಾಲ್ ಸೇವನೆಯನ್ನು ಹೆಚ್ಚು ಗ್ಲಾಮರೈಸ್ ಮಾಡದಂತೆ ನೈತಿಕ ಜವಾಬ್ದಾರಿ ಹೊಂದಿರುತ್ತಾರೆ. ರಾಕಿ ಭಾಯ್ ಅಂತ ಪಾತ್ರಗಳು ಯುವಕರ ಮೇಲೆ ಬೇಗ ಪರಿಣಾಮ ಬೀರುತ್ತವೆ' ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಪೋಷಕರಿಗೂ ತಮ್ಮ ಜವಾಬ್ದಾರಿಯ ಅರಿವು ಮಾಡಿಕೊಟ್ಟಿದ್ದಾರೆ. 'ಪಾಲಕರು ಸಹ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಮತ್ತು ಮಕ್ಕಳ ಬಗ್ಗೆ ನಿಗಾ ಇಟ್ಟಿರಬೇಕು. ನಂತರ ಪಶ್ಚಾತ್ತಾಪ ಪಡುವ ಬದಲು ಮೊದಲೇ ಜಾಗೃತಿ ಮೂಡಿಸಬೇಕೆೆಂದು' ಹೇಳಿದ್ದಾರೆ.

ಸಿಗರೇಟ್ ಜನರಲ್ಲಿ ಅನೇಕ ಆರೋಗ್ಯ ಸಮಸ್ಯೆ ಉಂಟುಮಾಡುತ್ತದೆ. ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತದೆ. ಶ್ವಾಸಕೋಶದ ಬೆಳವಣಿಗೆ ಮತ್ತು ಕಾರ್ಯಚಟುವಟಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೂ ಯುವಕರು ಇಂಥ ಕೆಟ್ಟ ಚಟಕ್ಕೆ ಬೀಳುತ್ತಿರುವುದು ದುರಂತ.

ಪ್ಯಾನ್ ಇಂಡಿಯಾ ಏನು ಹೊಸದಲ್ಲ; KGF, RRRಗೂ ಮೊದಲೇ ಇತ್ತು- ಕಮಲ್ ಹಾಸನ್

ಕೆಜಿಎಫ್-2 ಸಿನಿಮಾ ಬಗ್ಗೆ

ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗಿ ಮಿಂಚಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ರೀನಾ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಬಂದ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ರವಿ ಬಸ್ರೂಸ್ ಸಂಗೀತ, ಭುವನ್ ಗೌಡ ಛಾಯಾಗ್ರಾಹಣ ಅಭಿಮಾನಿಗಳ ಹೃದಯ ಗೆದ್ದಿದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾ ಹಿಟ್ ಆಗಿದೆ.

click me!