'ಧಾಕಡ್' ಹೀನಾಯ ಸೋಲಿನಿಂದ ಕಂಗಾಲಾಗಿರುವ ನಟಿ ಕಂಗನಾಗೆ OTTಯಿಂದ ಬಿಗ್ ಶಾಕ್

Published : May 28, 2022, 12:26 PM IST
'ಧಾಕಡ್' ಹೀನಾಯ ಸೋಲಿನಿಂದ ಕಂಗಾಲಾಗಿರುವ ನಟಿ ಕಂಗನಾಗೆ OTTಯಿಂದ ಬಿಗ್ ಶಾಕ್

ಸಾರಾಂಶ

ಕಂಗನಾ ಸಿನಿಮಾ ಖರೀದಿಸಲು ಒಟಿಟಿ ಪ್ಲಾಟ್‌ಫಾರ್ಮ್ ಕೂಡ ನಿರಾಕರಿಸಿವೆ ಎನ್ನಲಾಗಿದೆ. ಒಟಿಟಿ ದೈತ್ಯಗಳಾಗಿದ್ದ ನೆಟ್‌ಫ್ಲಿಕ್ಸ್, ಅಮೆಜಾನ್, ಹಾಟ್‌ಸ್ಟಾರ್ ಅಂತ ಒಟಿಟಿ ಪ್ಲಾಟ್‌ಫಾರ್ಮ್ ಕಂಗನಾ ಸಿನಿಮಾ ಖರೀದಿಸಲು ಹಿಂದೇಟು ಹಾಕುತ್ತಿವೆಯಂತೆ.

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಟನೆಯ ಧಾಕಡ್(Dhaakad) ಸಿನಿಮಾ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಈ ಸೋಲು ಕಂಗನಾಗೆ ದೊಡ್ಡ ಆಘಾತ ತಂದಿದೆ. ಕಂಗನಾ ನಂಬಿ ಕೋಟಿ ಕೋಟಿ ಸುರಿದಿದ್ದ ನಿರ್ಮಾಪಕರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಮೂಲಗಳ ಪ್ರಕಾರ ಧಾಕಡ್ ಸೋಲಿನಿಂದ ಬರೋಬ್ಬರಿ 70 ಕೋಟಿ ರೂಪಾಯಿ ನಷ್ಟ ಆಗಿದೆ ಎನ್ನಲಾಗಿದೆ. ಚಿತ್ರಮಂದಿರಗಳಲ್ಲಿ ಧಾಕಡ್ ನೋಡಲು ಜನರೇ ಇಲ್ಲ. ಖಾಲಿ ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳಲ್ಲಿ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಪ್ರದರ್ಶನ ಮಾಡಲಾಗಿದೆ.

ಈ ಸಿನಿಮಾದಲ್ಲಿ ಕಂಗನಾ ಏಜೆಂಟ್ ಅಗ್ನಿಯಾಗಿ ಅನೇಕ ಗ್ಲಾಮರ್ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾದಲ್ಲಿ ಕಂಗನಾ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದರು. ಆದರೆ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ನೆಲಕಚ್ಚಿದೆ. ಪ್ರೇಕ್ಷಕರನ್ನು ಸೆಳೆಯುವಲ್ಲಿಯೂ ವಿಫಲವಾಗಿದೆ. ಹೀನಾಯ ಸೋಲಿನಿಂದ ಕಂಗಾಲಾಗಿದ್ದ ಕಂಗನಾಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

ಕಂಗನಾ ಸಿನಿಮಾ ಖರೀದಿಸಲು ಒಟಿಟಿ ಪ್ಲಾಟ್‌ಫಾರ್ಮ್ ಕೂಡ ನಿರಾಕರಿಸಿವೆ ಎನ್ನಲಾಗಿದೆ. ಒಟಿಟಿ ದೈತ್ಯಗಳಾಗಿದ್ದ ನೆಟ್‌ಫ್ಲಿಕ್ಸ್, ಅಮೆಜಾನ್, ಹಾಟ್‌ಸ್ಟಾರ್ ಅಂತ ಒಟಿಟಿ ಪ್ಲಾಟ್‌ಫಾರ್ಮ್ ಕಂಗನಾ ಸಿನಿಮಾ ಖರೀದಿಸಲು ಹಿಂದೇಟು ಹಾಕುತ್ತಿವೆಯಂತೆ. ಅನೇಕ ಫ್ಲಾಪ್ ಸಿನಿಮಾಗಳನ್ನು ಈ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಖರೀದಿ ಮಾಡವೆ. ಆದರೆ ಕಂಗನಾ ನಟನೆಯ ಧಾಕಡ್ ಖರೀದಿಸಲು ಯಾರು ಮುಂದೆ ಬರದೆ ಇರುವುದು ಕಂಗನಾ ಆಂಡ್ ಟೀಂಗೆ ಆಘಾತ ನೀಡಿದೆ.

ಸದಾ ಗೆಲ್ಲುತ್ತಿತ್ತು ಕಂಗನಾ ರಣಾವತ್ ಸಿನಿಮಾ, ಧಾಕಡ್ ಮಾತ್ರ ಫುಲ್ ಫ್ಲಾಪ್!

ಮೂಲಗಳ ಪ್ರಕಾರ ಒಟಿಟಿ ಪ್ಲಾಟ್‌ಫಾರ್ಮ್ ಹಿಂದೇಟು ಹಾಕಲು ಕಾರಣವಾಗಿದ್ದು ಕಂಗನಾ ದುರಾಸೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಮೊದಲೇ ಒಟಿಟಿಗೆ ಚಿತ್ರವನ್ನು ಸೇಲ್ ಮಾಡಲಾಗುತ್ತದೆ. ಆದರೆ ಕಂಗನಾ ಬ್ಲಾಕ್ ಬಸ್ಟರ್ ಆಗುತ್ತೆ ಎನ್ನುವ ಕಾರಣಕ್ಕೆ ಬಿಡುಗಡೆಗೂ ಮೊದಲೇ ಸಿನಿಮಾದ ಡಿಜಿಟಲ್ ರೈಟ್ಸ್ ಸೇಲ್ ಮಾಡದಂತೆ ನಿರ್ಮಾಪಕರಿಗೆ ಹೇಳಿದ್ದರು ಎನ್ನಲಾಗಿದೆ. ಹಾಗಾಗಿ ಇದೀಗ ಸೋತ ಸಿನಿಮಾವನ್ನು ಖರೀದಿ ಮಾಡಲು ಯಾರು ಮುಂದೆ ಬರುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

ಇದೀಗ ಧಾಕಡ್ ನಿರ್ಮಾಪಕರು ಹೇಗಾದರೂ ಮಾಡಿ ದೈತ್ಯ ಒಟಿಟಿ ಪ್ಲಾಟ್‌ಫಾರ್ಮ್‌ಗೆ ತರಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇದು ಅಕ್ಷರಶಃ ಕಡಲೆಕಾಯಿ ವ್ಯಾಪಾರದ ಹಾಗೆ ಆಗಿದೆಯಂತೆ.

ಕಂಗನಾ 'ಧಾಕಡ್'ಗೆ ಹೀನಾಯ ಸೋಲು; ಚಿತ್ರಮಂದಿರಗಳಿಂದ ಕಿತ್ತೆಸೆದು ಕಾರ್ತಿಕ್ ಆರ್ಯನ್ ಸಿನಿಮಾ ಪ್ರದರ್ಶನ

ಅಂದಹಾಗೆ ಕಂಗನಾ ಸಿನಿಮಾ ರಿಲೀಸ್ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಂಗನಾ ಸಿನಿಮಾ ಸೋಲಿನ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಸದಾ ಒಂದಲ್ಲೊಂದು ಪೋಸ್ಟ್ ಮಾಡುತ್ತಿದ್ದ ಕಂಗನಾ ಧಾಕಡ್ ಬಿಡುಗಡೆ ಬಳಿಕ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಕಂಗನಾ ಪ್ರತಿಕ್ರಿಯೆ ಏನಾಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?