ಇವರು ಅರೆಕಾಲಿಕ ಗಾಯಕರಾದರೂ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಒಂದು ಹಾಡಿಗೆ ಇವರು ಪಡೆಯೋದು ಬರೋಬ್ಬರಿ 3 ಕೋಟಿ ರೂಪಾಯಿ.
60ರ ದಶಕದಲ್ಲಿ ಲತಾ ಮಂಗೇಶ್ಕರ್ ಅವರು ಬಾಲಿವುಡ್‌ನಲ್ಲಿ ಹಿನ್ನೆಲೆ ಗಾಯಕರ ಕಡಿಮೆ ಸಂಬಳದ ವಿರುದ್ಧ ಮೌನ ಪ್ರತಿಭಟನೆಯಲ್ಲಿ ಗೀತರಚನೆಕಾರ ಮತ್ತು ಸಂಯೋಜಕರಿಗಿಂತ 1 ರೂಪಾಯಿಯನ್ನು ಸಂಭಾವನೆಯಾಗಿ ಹೆಚ್ಚು ಬೇಡಿಕೆಯಿಟ್ಟರು. ಅಂದಿನಿಂದ ಉದ್ಯಮವು ಖಂಡಿತವಾಗಿಯೂ ಬಹಳ ದೂರ ಸಾಗಿದೆ. ಇಂದು, ಭಾರತದ ದೊಡ್ಡ ಮತ್ತು ಅತ್ಯಂತ ಜನಪ್ರಿಯ ಗಾಯಕರು ಇಡೀ ಆಲ್ಬಮ್ ಅನ್ನು ಬಿಟ್ಟು, ಪ್ರತಿ ಹಾಡಿಗೆ ಲಕ್ಷಗಳನ್ನು ವಿಧಿಸುತ್ತಾರೆ.
ಇಂದು ಸೋನು ನಿಗಮ್, ಶ್ರೇಯಾ ಘೋಷಾಲ್, ಅರಿಜೀತ್ ಸಿಂಗ್, ಮಿಕಾ ಸಿಂಗ್, ದಿಲ್ಜೀತ್ ದೊಸಾಂಜ್ ಮುಂತಾದ ಗಾಯಕರ ಸಂಭಾವನೆ ಅವರನ್ನು ಯಾವುದೇ ದೊಡ್ಡ ನಟರ ಮಟ್ಟಿಗೇ ಸೆಲೆಬ್ರಿಟಿ ಎಂದು ಒಪ್ಪಿಕೊಂಡಿರುವುದನ್ನು ತೋರಿಸುತ್ತದೆ. ಅಂದ ಹಾಗೆ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಈ ಮೇಲೆ ಹೇಳಿದ ಹೆಸರಿನವರ್ಯಾರೂ ಅಲ್ಲ, ಅದಕ್ಕಿಂತ ವಿಶೇಷ ಎಂದರೆ ಅವರು ಪೂರ್ಣ ಪ್ರಮಾಣದ ಗಾಯಕರೂ ಅಲ್ಲ. ಪಾರ್ಟ್ ಟೈಂ ಜಾಬ್‌ನಂತೆ ಹಾಡುವ ಈ ಗಾಯಕ ಒಂದೇ ಒಂದು ಹಾಡಿಗೆ ಪಡೆಯುವುದು ಬರೋಬ್ಬರಿ 3 ಕೋಟಿ ರೂಪಾಯಿ.
ಯಾರಪ್ಪಾ ಇದು ಎಂದು ಅಚ್ಚರಿ ಪಡ್ತಿದೀರಾ? ಅವರೇ ಸಂಗೀತ ಸಂಯೋಜಕ ಎಆರ್ ರೆಹಮಾನ್. ವರದಿಗಳ ಪ್ರಕಾರ, ಸಂಗೀತ ಸಂಯೋಜಕರು ಮತ್ತು ಸಾಂದರ್ಭಿಕ ಗಾಯಕರೂ ಆದ ರೆಹಮಾನ್ ಒಂದು ಹಾಡಿಗೆ 3 ಕೋಟಿ ಪಡೆಯುತ್ತಾರೆ. ಇದು ಭಾರತದ ಯಾವುದೇ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕಾರಣವೆಂದರೆ, ರೆಹಮಾನ್ ಅವರು ಸಾಂದರ್ಭಿಕವಾಗಿ ಮಾತ್ರ ಹಾಡುತ್ತಾರೆ ಮತ್ತು ಅವರ ಗಾಯನವನ್ನು ಪ್ರೀಮಿಯಂ ಆಗಿರಿಸಿಕೊಳ್ಳಲು ಇಷ್ಟಪಡುತ್ತಾರೆ.
ತುಂಬಾ ಮುಖ್ಯವಾದ ಗೀತೆಗಳಿಗೆ ಅವರೇ ಹಾಡುವ ಅವಶ್ಯಕತೆ ಇದೆ ಎಂದು ಯಾರಾದರೂ ಪರಿಗಣಿಸಿದಾಗ ಮಾತ್ರ ಅವರು ಹಾಡುತ್ತಾರೆ. ಸಾಮಾನ್ಯವಾಗಿ ರೆಹಮಾನ್ ತಮ್ಮದೇ ಆದ ಹಾಡುಗಳನ್ನು ಹಾಡುತ್ತಾರೆ ಮತ್ತು ಬಹಳ ಅಪರೂಪವಾಗಿ ಅವರು ಬೇರೆಯವರಿಂದ ಸಂಯೋಜಿಸಲ್ಪಟ್ಟ ಹಾಡಿಗೆ ಧ್ವನಿಯನ್ನು ನೀಡುತ್ತಾರೆ.
'ಕಾರಲ್ಲೂ ಕೂರದವಳು ಪ್ರೈವೇಟ್ ಜೆಟ್‌ನಲ್ಲಿ..' ದತ್ತು ಮಗಳ ಅದೃಷ್ಟದ ಬಗ್ಗೆ ಮಾತಾಡಿದ ಮಂದಿರಾ ಬೇಡಿ
ನಂತರದ ಅತಿ ಹೆಚ್ಚು ಸಂಭಾವನೆ ಇವರದ್ದು..
ಶ್ರೇಯಾ ಘೋಷಾಲ್ ಅವರು ರೆಹಮಾನ್ ನಂತರ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕಿಯಾಗಿದ್ದಾರೆ. ಅವರು ಪ್ರತಿ ಹಾಡಿಗೆ 25 ಲಕ್ಷ ರೂ. ಪಡೆಯುತ್ತಾರೆ.
ಆಕೆಯ ನಂತರದಲ್ಲಿ ಆಕೆಯ ಸ್ನೇಹಿತೆ ಮತ್ತು ಪ್ರತಿಸ್ಪರ್ಧಿ ಸುನಿಧಿ ಚೌಹಾಣ್ ಹಾಗೂ ಅರಿಜಿತ್ ಸಿಂಗ್ ಇದ್ದು, ಅವರಿಬ್ಬರೂ ಪ್ರತಿ ಹಾಡಿಗೆ ರೂ 18-20 ಲಕ್ಷ ಗಳಿಸುತ್ತಾರೆ ಎಂದು ವರದಿಯಾಗಿದೆ.
ಶಾನ್ ಮತ್ತು ಸೋನು ನಿಗಮ್ ಇಬ್ಬರೂ ಪ್ರತಿ ಹಾಡಿಗೆ 15-18 ಲಕ್ಷ ರೂ.ಗಳ ಶುಲ್ಕದೊಂದಿಗೆ ಪಟ್ಟಿಯಲ್ಲಿದ್ದಾರೆ. ದಿಲ್ಜಿತ್ ದೋಸಾಂಜ್, ಬಾದ್‌ಶಾ, ಮಿಕಾ ಮತ್ತು ನೇಹಾ ಕಕ್ಕರ್ ಸೇರಿದಂತೆ ಹಲವಾರು ಇತರ ಗಾಯಕರು ಪ್ರತಿ ಹಾಡಿಗೆ 10 ಲಕ್ಷ ರೂ. ಪಡೆಯುತ್ತಾರೆ.