Latest Videos

ಕರ್ನಾಟಕದಲ್ಲಿ ಉಳಿದುಕೊಂಡ ಸನ್ನಿ ಲಿಯೋನ್, ಈ ಗ್ರಾಮದಲ್ಲಿ ನಟಿಯ ಶೂಟಿಂಗ್!

By Chethan KumarFirst Published Jun 16, 2024, 7:41 PM IST
Highlights

ಬಾಲಿವುಡ್ ನಟಿ ಸನ್ನಿ ಲಿಯೋನ್ ಸದ್ಯ ಕರ್ನಾಟಕದಲ್ಲಿದ್ದಾರೆ. ಮುಂದಿನ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ಸನ್ನಿ ಲಿಯೋನ್ ಈ ಗ್ರಾಮದ ಶಾಲೆಯಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ.

ಬೆಂಗಳೂರು(ಜೂ.17) ಮಾದಕ ತಾರೆ ಸನ್ನಿ ಲಿಯೋನ್ ಇದೀಗ ಕರ್ನಾಟಕದಲ್ಲಿದ್ದಾರೆ. ಹೌದು, ಮುಂದಿನ ಬಹು ನಿರೀಕ್ಷಿತ ಚಿತ್ರದ ಶೂಟಿಂಗ್‌ನಲ್ಲಿ ಸನ್ನಿ ಲಿಯೋನ್ ಬ್ಯೂಸಿಯಾಗಿದ್ದಾರೆ. ಇದಕ್ಕಾಗಿ ಕರ್ನಾಟಕದ ಗ್ರಾಮಕ್ಕೆ ಆಗಮಿಸಿದ್ದಾರೆ. ಶೂಟಿಂಗ್ ನಡುವೆ ಸನ್ನಿ ಲಿಯೋನ್ ಶಾಲಾ ಮಕ್ಕಳ ಜೊತೆ ಕಾಲ ಕಳೆದಿದ್ದಾರೆ. ಅಷ್ಟಕ್ಕೂ ಸನ್ನಿ ಲಿಯೋನ್ ಶೂಟಿಂಗ್ ನಡೆಯುತ್ತಿರುವ ಗ್ರಾಮ ಹಾಸನ ಜಿಲ್ಲಿಯ ಚೆನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮ. 

ಬಹುನಿರೀಕ್ಷಿತ ಚಿತ್ರದ ಶೂಟಿಂಗ್‌ಗದಾಗಿ ಸನ್ನಿ ಲಿಯೋನ್ ಕಬ್ಬಳಿ ಗ್ರಾಮಕ್ಕೆ ಆಗಮಿಸಿದ್ದಾರೆ. ಕಬ್ಬಳಿ ಗ್ರಾಮದ ಶಾಲೆಯಲ್ಲಿ ಸನ್ನಿ ಲಿಯೋನ್ ಶೂಟಿಂಗ್ ನಡೆಸಿದ್ದಾರೆ. ಇದೇ ವೇಳೆ ಮಕ್ಕಳ ಜೊತೆ ಸನ್ನಿ ಲಿಯೋನ್ ಕೆಲ ಹೊತ್ತು ಕಳೆದಿದ್ದಾರೆ. ಶಾಲೆಗೆ ಭೇಟಿ ನೀಡಿದ ಸನ್ನಿ ಲಿಯೋನ್ ಶಾಲಾ ಮಕ್ಕಳ ಜೊತೆ ಕಳೆದಿದ್ದಾರೆ. ತರಗತಿಗೂ ಭೇಟಿ ನೀಡಿದ ಸನ್ನಿ ಲಿಯೋನ್ ಮಕ್ಕಳ ಜೊತೆ ಮಾತನಾಡಿದ್ದಾರೆ. ಇದೇ ವೇಳೆ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿ ಶರ್ಟ್, ಬ್ಲಾಕ್ ಟಿ ಶರ್ಟ್ ಹಾಗೂ ಬ್ಲಾಕ್ ಜೀನ್ಸ್‌‌ನಲ್ಲಿ ಸನ್ನಿ ಲಿಯೋನ್ ಶಾಲೆಗೆ ತೆರಳಿ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.  

ರೆಡ್ ಹಾಟ್ ಬಿಕಿನಿಯಲ್ಲಿ ಸನ್ನಿ ಲಿಯೋನ್, ಥಾಯ್ಲೆಂಡ್ ಸ್ವಿಮ್ಮಿಂಗ್ ಪೂಲ್ ವಿಡಿಯೋ ಔಟ್!

ಸನ್ನಿ ಲಿಯೋನ್ ಹಾಗೂ ಚಿತ್ರತಂಡ ಕರ್ನಾಟಕದಲ್ಲಿ ಬಹುತೇಕ ಶೂಟಿಂಗ್ ಅಂತ್ಯಗೊಳಿಸಿದೆ. ಸ್ಥಳೀಯ ಕೆಲ ಅಭಿಮಾನಿಗಳು ಸನ್ನಿ ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇತ್ತೀಚೆಗೆ ಸನ್ನಿ ಲಿಯೋನ್ ಅಭಿನಯದ ತಮಿಳು ಚಿತ್ರ ಕೊಟೇಶನ್ ಗ್ಯಾಂಗ್ ಟ್ರೇಲರ್ ಬಿಡುಗಡೆಯಾಗಿತ್ತು.  ಇದರ ಜೊತೆಗೆ ಹಲವು ಚಿತ್ರಗಳಲ್ಲಿ ಸನ್ನಿ ಲಿಯೋನ್ ಬ್ಯೂಸಿಯಾಗಿದ್ದಾರೆ. ಜಾಕಿ ಶ್ರಾಫ್, ಪ್ರಿಯಾ ಮಣಿ ಒಳಗೊಂಡ ಪ್ರಮುಖ ತಾರಾ ಬಣದ ಜೊತೆಗೂ ಸನ್ನಿ ಲಿಯೋನ್ ಮುಂದಿನ ಚಿತ್ರ ಬಿಡುಗಡೆಯಾಗುತ್ತಿದೆ. ಕ್ಯಾನಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸನ್ನಿ ಅಭಿನಯ ಕೆನಡಿ ಚಿತ್ರ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ.

ಸಿನಿಮಾ ಜೊತೆ ಹಲವು ಕಾರ್ಯಕ್ರಮಗಳಲ್ಲೂ ಸನ್ನಿ ಲಿಯೋನ್ ಬ್ಯೂಸಿಯಾಗಿದ್ದಾರೆ. ದೇಶ ವಿದೇಶಗಳಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಗಳಿಗೆ ಆಹ್ವಾನಿತ ಗಣ್ಯರಾಗಿ ತೆರಳುತ್ತಾರೆ. ಆದರೆ ಕೇರಳದಲ್ಲಿ ಆಯೋಜಿಸಿದ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಎಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ.  ಕಾಲ್ತುಳಿತ ಸಾಧ್ಯತೆ ಇರುವ ಕಾರಣ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ.

ಬಟ್ಟೆ ಕಳಚಿಟ್ಟು ಈಜುಕೊಳಕ್ಕೆ ಹಾರಿದ ಸನ್ನಿ ಲಿಯೋನ್, ದುಬೈ ವೆಕೇಶನ್ ವಿಡಿಯೋ ವೈರಲ್!

click me!