ಈ ನಟಿ ಬೇಕಾದರೆ 50 ಸೆಕೆಂಡ್‌ಗೆ ರೂ. 5 ಕೋಟಿ ಕೊಡಿ! ದೀಪಿಕಾನೂ ಅಲ್ಲ, ಪ್ರಿಯಾಂಕಾನೂ ಅಲ್ಲ; ಯಾರೀಕೆ?

By Bhavani Bhat  |  First Published Oct 15, 2024, 7:50 PM IST

ಈಕೆ ಇತ್ತೀಚೆಗೆ ಒಂದು ಜಾಹೀರಾತಿನಲ್ಲಿ 50 ಸೆಕೆಂಡ್‌ ಕಾಣಿಸಿಕೊಳ್ಳಲು 5 ಕೋಟಿ ರೂಪಾಯಿ ಸಂಭಾವನೆ ಚಾರ್ಜ್‌ ಮಾಡಿದಳು. ಈಕೆ ರಜನಿಕಾಂತ್, ಶಾರುಖ್ ಖಾನ್, ಜಯರಾಮ್ ಮತ್ತು ನಾಗಾರ್ಜುನ ಅಕ್ಕಿನೇನಿ ಮುಂತಾದ ಎಲ್ಲ ಸ್ಟಾರ್‌ಗಳ ಜೊತೆ ನಟಿಸಿದವಳು.


ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆಯೇ ಇರಬಹುದು. ಈಕೆ ಒಂದು ಜಾಹೀರಾತಿನ 50 ಸೆಕೆಂಡ್‌ ಅವಧಿಗೆ ಮಾಡಿದ ಚಾರ್ಜ್ 5 ಕೋಟಿ ರೂಪಾಯಿ. ಈಕೆ ದೀಪಿಕಾ, ಪ್ರಿಯಾಂಕಾ, ಐಶ್ವರ್ಯ, ಆಲಿಯಾ, ಕತ್ರಿನಾ, ಸಮಂತಾ, ರಶ್ಮಿಕಾ ಯಾರೂ ಅಲ್ಲ!

ಈಕೆ ಇತ್ತೀಚೆಗೆ ಒಂದು ಜಾಹೀರಾತಿನಲ್ಲಿ 50 ಸೆಕೆಂಡ್‌ ಕಾಣಿಸಿಕೊಳ್ಳಲು 5 ಕೋಟಿ ರೂಪಾಯಿ ಸಂಭಾವನೆ ಚಾರ್ಜ್‌ ಮಾಡಿದಳು. ಈಕೆ ರಜನಿಕಾಂತ್, ಶಾರುಖ್ ಖಾನ್, ಜಯರಾಮ್ ಮತ್ತು ನಾಗಾರ್ಜುನ ಅಕ್ಕಿನೇನಿ ಮುಂತಾದ ಎಲ್ಲ ಸ್ಟಾರ್‌ಗಳ ಜೊತೆ ನಟಿಸಿದವಳು. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬಳು. ದಕ್ಷಿಣ ಭಾರತವೇ ಈಕೆಯ ಮನೆ. 2018ರ ಫೋರ್ಬ್ಸ್ ಇಂಡಿಯಾದ 'ಸೆಲೆಬ್ರಿಟಿ 100' ಪಟ್ಟಿಯಲ್ಲಿ ಕೂಡ ಕಾಣಿಸಿಕೊಂಡಳು. ಹಾಗೆ ಏಕೈಕ ದಕ್ಷಿಣ ಭಾರತದ ಪ್ರಮುಖ ಮಹಿಳಾ ನಟಿ. 

Tap to resize

Latest Videos

undefined

ಈಕೆ ಬೇರೆ ಯಾರೂ ಅಲ್ಲ, ನಯನತಾರಾ. 20 ವರ್ಷಗಳಲ್ಲಿ ಈಕೆ ನಟಿಸಿದ ಚಲನಚಿತ್ರಗಳು 80. ಹಲವು ಫಿಲಂಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದಿವೆ. ಮೊದಲಿನಿಂದಲೂ ಆಕೆಗೆ ನಟಿಯಾಗಬೇಕೆಂಬ ಆಸೆ ಇರಲಿಲ್ಲ. ಅವಳು ಚಾರ್ಟರ್ಡ್ ಅಕೌಂಟೆನ್ಸಿಯಲ್ಲಿ ಸಾಧನೆ ಮುಂದುವರಿಸಲು ಹೊರಟಿದ್ದಳು. ಆದರೆ ಮೊದಲು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಳು ಮತ್ತು ಸಿಎ ಆಗುವತ್ತ ದೃಷ್ಟಿ ನೆಟ್ಟಳು. ಆದರೆ ಅಂತಿಮವಾಗಿ ತನ್ನ ಹೃದಯದ ಮಾತು ಕೇಳಿ ಚಲನಚಿತ್ರ ನಟನೆಗೆ ಪ್ರವೇಶಿಸಿದಳು.

ಇಂಡಸ್ಟ್ರಿಯಲ್ಲಿ ಒಂದು ಸಮಯದಲ್ಲಿ ಈಕೆಯ ಕೆರಿಯರ್‌ ಮುಗೀತು ಎಂದು ಭಾವಿಸಿದ್ದರು. ಆದರೆ ಆಕೆ ಬಹಳ ಬಲವಾಗಿ ಕಮ್‌ಬ್ಯಾಕ್ ಮಾಡಿದಳು.ಇದೀಗ ಆಕೆ ಸೌತ್ ಮೂವಿ ಇಂಡಸ್ಟ್ರಿಯ ಮಿನಿಮಂ ಗ್ಯಾರಂಟಿ ನಟಿ. ಎಲ್ಲಾ ಚಿತ್ರ ನಿರ್ಮಾಪಕರು ದೊಡ್ಡ ಹೀರೋಗಳೊಂದಿಗೆ ಆಕೆಗೆ ಪಾತ್ರ ನೀಡಲು ಪ್ರಾರಂಭಿಸಿದರು.

ಈಕೆಯ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ನಯನತಾರಾ, ಸಿಂಬು ಅಥವಾ ಸಿಲಂಬರಸನ್ ಜೊತೆ ಡೇಟಿಂಗ್ ಮಾಡಿದ್ದಾಳೆ ಎಂದು ವರದಿಯಾಗಿತ್ತು.. ವಲ್ಲಲನ್ (2006) ಚಿತ್ರದ ಸೆಟ್‌ಗಳಲ್ಲಿ ಅವರು ಫ್ಲರ್ಟ್  ಮಾಡುತ್ತಿದ್ದರು. ಆದರೆ ಅವರು ಕೆಲವು ತಿಂಗಳ ನಂತರ ಬೇರ್ಪಟ್ಟರು. ಆದರೆ ಅವರು ಆತ್ಮೀಯವಾಗಿರುವ ಚಿತ್ರಗಳು ಸೋರಿಕೆಯಾದವು. ಅದು ಚರ್ಚೆಯಾಗಿತ್ತು.

ನಂತರ ನಟ ಪ್ರಭುದೇವ ಅವರೊಂದಿಗೆ ಸುಮಾರು ಮೂರೂವರೆ ವರ್ಷಗಳು ಡೇಟಿಂಗ್ ಮಾಡುತ್ತಿದ್ದಳು. 2009ರಲ್ಲಿ ಅವರು ಮದುವೆಯಾಗುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತು. ಆದರೆ ಅವರ ಸಂಬಂಧ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ನಯನತಾರಾ ನಂತರ 2015ರಲ್ಲಿ ನಾನು ರೌಡಿ ಧಾನ್ ಚಿತ್ರದಲ್ಲಿ ಕೆಲಸ ಮಾಡುವಾಗ ವಿಘ್ನೇಶ್ ಶಿವನನ್ನು ಭೇಟಿಯಾದಳು. ಇಬ್ಬರ ನಡುವೆ ಪ್ರೀತಿ ಅರಳಿತು ಮತ್ತು ಅವರು ಡೇಟಿಂಗ್ ಪ್ರಾರಂಭಿಸಿದರು. ಇಬ್ಬರೂ ಮದುವೆಯಾದರು. ನಂತರ ನಯನತಾರಾ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಳು. 

"ಎರಡು ತಿಂಗಳ ಒಳಗೆ ನನಗೆ ದೊಡ್ಡ ಸ್ತನಗಳು ಬೇಕು" ಡಾಕ್ಟರ್‌ ಮುಂದೆ ಸಿಲಿಕಾನ್‌ ಸ್ತನ ಹಿಡಿದುಕೊಂಡು ಕುಳಿತ ಉರ್ಫಿ ಜಾವೇದ್‌!
 

2023ರಲ್ಲಿ ಶಾರುಖ್ ಖಾನ್ ಅವರೊಂದಿಗೆ ನಯನತಾರಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಳು. ಜವಾನ್‌ ಸಿನಿಮಾದಲ್ಲಿ ಅವರ ಜೋಡಿ ಮೋಡಿ ಮಾಡಿತು. ಇತ್ತೀಚೆಗೆ 50 ಸೆಕೆಂಡ್‌ಗಳ ಜಾಹೀರಾತಿಗೆ 5 ಕೋಟಿ ರೂಪಾಯಿಗಳನ್ನು ಪಡೆದಳು ಎಂದು ಸುದ್ದಿ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೆನ್ನಿಸಿದಳು. ಆಕೆ ಟಾಟಾ ಸ್ಕೈಗಾಗಿ ಮಾಡಿದ ಜಾಹೀರಾತು ಅದು. ನಯನತಾರಾ ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾಳೆ ಎನ್ನಲಾಗುತ್ತದೆ. 

ನಯನತಾರಾ ನಟಿಸಿದ ಲೇಟೆಸ್ಟ್‌ ಫಿಲಂ ʼಅನ್ನಪೂರ್ಣಿ: ದಿ ಗಾಡೆಸ್‌ ಆಫ ಫುಡ್‌ʼ. ಅದರಲ್ಲಿ ಆಕೆ ಅನ್ನಪೂರ್ಣಿ. ಆಕೆಯ ಮುಂಬರುವ ಪ್ರಾಜೆಕ್ಟ್‌ಗಳು ಟೆಸ್ಟ್, ಮಣ್ಣಂಗಟ್ಟಿ ಸಿನ್ಸ್‌ 1960, ಡಿಯರ್‌ ಸ್ಟೂಡೆಂಟ್ಸ್‌ ಮತ್ತು ಥನಿ ಒರುವನ್ 2.

15ನೇ ವರ್ಷದಲ್ಲೇ ರೇಖಾಗೆ 5 ನಿಮಿಷದ ದೀರ್ಘ ಕಿಸ್‌; ಬಲವಂತವಾಗಿ ಚುಂಬಿಸಿದ್ದರಂತೆ ನಟ ಬಿಸ್ವಜಿತ್‌ ಚಟರ್ಜಿ!
 

click me!