'ಅವನು ಪಠಾಣ್, ನಾನು ಸರ್ದಾರ್, ನನ್ನ ಜೀವ ಇರೋವರೆಗೆ ಸಲ್ಮಾನ್ ಭಾಯ್ ರಕ್ಷಣೆ ಮಾಡ್ತೇನೆ; ಶೇರಾ ನೇರ ಮಾತು

By Ravi Janekal  |  First Published Oct 15, 2024, 7:21 PM IST

ನಮ್ಮ ಜೋಡಿ ಅನನ್ಯವಾಗಿದೆ. ಅವನು ಪಠಾಣ್, ನಾನು ಸರ್ದಾರ್ ಇಬ್ಬರೂ ಮೂವತ್ತು ವರ್ಷಗಳಲ್ಲಿ ಒಟ್ಟಿಗೆ ಇದ್ದೇವೆ. ಅನೇಕ ಅಂಗರಕ್ಷಕರು ಇತರ ಸ್ಟಾರ್‌ ನಟರಿಗೆ ರಕ್ಷಣೆ ನೀಡಲು ಹೋಗುತ್ತಾರೆ. ಆದರೆ  ನಾನು ಮೂರು ದಶಕಗಳಿಂದ ಸಲ್ಮಾನ್ ಭಾಯ್ ಜೊತೆಗೆ ಇದ್ದೇನೆ ಎಂದು ಶೇರಾ ಹೇಳಿಕೊಂಡಿದ್ದಾರೆ


Shera Salman Khan Bodyguard: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಸರಣಿ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ, ಹಿಂದಿನಿಂದಲೂ ಬೆದರಿಕೆ ಇತ್ತಾದರೂ ಕಳೆದ ವರ್ಷದಿಂದ ಪರಿಸ್ಥಿತಿ ಉಲ್ಬಣಗೊಂಡಿದೆ. ಇತ್ತೀಚೆಗೆ ಎನ್‌ಸಿಪಿ ನಾಯಕ ಮತ್ತು ಬಾಬಾ ಸಿದ್ದಿಕ್ ಅವರ ಇತ್ತೀಚಿನ ಹತ್ಯೆ ಬಳಿಕ ಸಲ್ಮಾನ್ ಖಾನ್ ಭದ್ರತೆ ಇನ್ನಷ್ಟು ಹೆಚ್ಚಿಸಲಾಗಿದೆ. ಬಿಷ್ಣೋಯ್ ಗ್ಯಾಂಗ್ ಮುಂದಿನ ಗುರಿ ಸಲ್ಮಾನ್ ಖಾನ್ ಎಂಬುದು ಬಹಿರಂಗಗೊಂಡ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿದೆ.

ಸಲ್ಮಾನ್ ಖಾನ್ ಭದ್ರತೆ ವ್ಯವಸ್ಥೆ ವಿಚಾರದಲ್ಲಿ ದೀರ್ಘಕಾಲದಿಂದ ಅಂಗರಕ್ಷಕರಾಗಿರುವ ಶೇರಾ, ಮಾತನಾಡಿದ್ದಾರೆ. ಸುಮಾರು ಮೂವತ್ತು ವರ್ಷಗಳಿಂದ ಸಲ್ಮಾನ್ ಖಾನ್ ಅಂಗರಕ್ಷಕನಾಗಿರುವ ಶೇರಾ. ಕೇವಲ ಅಂಗರಕ್ಷಕನಾಗಿರದೆ ಸಲ್ಮಾನ್ ಖಾನ್‌ನೊಂದಿಗಿನ ಪ್ರಯಾಣ, ನಟನ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾನೆ.

Tap to resize

Latest Videos

undefined

ಬಾಬಾ ಸಿದ್ದಿಕಿ ಹತ್ಯೆ ಬಳಿಕ ಬಿಷ್ಣೋಯಿ ಗ್ಯಾಂಗ್‌ನ ಮುಂದಿನ ಗುರಿ ಸಲ್ಮಾನ್ ಖಾನ್!

ಶೇರಾ ಸಲ್ಮಾನ್ ಖಾನ್ ಭೇಟಿಯಾಗಿದ್ದು ಹೇಗೆ?

ಶೇರಾ ಎಂದೇ ಗುರುತಿಸಿಕೊಂಡಿರುವ ಅಂಗರಕ್ಷಕನ ನಿಜವಾದ ಹೆಸರು ಗುರ್ಮಿತ್ ಸಿಂಗ್. 30 ವರ್ಷಗಳ ಹಿಂದೆಯೇ ಸಲ್ಮಾನ್ ಖಾನ್ ಭದ್ರತಾ ತಂಡ ಸೇರಿದ್ದ ಶೇರಾ. ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಸಹೋದರ ಸೊಹೈಲ್ ಖಾನ್ ಸಲ್ಮಾನ್‌ಖಾನ್‌ಗೆ ಪರಿಚಯಿಸಿದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಾನು ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನ ಸಹೋದರ ಸೊಹೈಲ್ ಖಾನ್ ಮೂಲಕ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆ. ಸ್ಟೇಜ್ ಶೋ ಒಂದರಲ್ಲಿ ಭದ್ರತೆ ಸಮಸ್ಯೆ ಎದುರಾಗಿತ್ತು ಆಗ ಸೊಹೈಲ್ ಖಾನ್ ಭದ್ರತೆ ನೀಡುವಂತೆ ಕೇಳಿಕೊಂಡಿದ್ದರು. ನಾನು ಆಗ ಪೇಟ ಧರಿಸುತ್ತಿದ್ದೆ. ಸೊಹೈಲ್ ಭಾಯ್ ನನ್ನ ಕಂಡಾಗ 'ನೀನ್ಯಾಕೆ ಸಲ್ಮಾನ್ ಭಾಯ್‌ ಜೊತೆ ಇರಬಾರದು?' ಎಂದು ಕೇಳಿದರು. ನಾನು ಅದಕ್ಕೆ ಒಪ್ಪಿಕೊಂಡೆ. ಆರಂಭದಲ್ಲಿ ಅವರೊಂದಿಗೆ(ಸಲ್ಮಾನ್ ಖಾನ್) ಕಾರ್ಯಕ್ರಮಗಳಿದ್ದಾಗ ಮಾತ್ರ ಬಾಡಿಗಾರ್ಡ್‌ ಆಗಿ ಇರುತ್ತಿದ್ದೆ. ಆದರೆ ಒಬ್ಬ ಬಾಲಿವುಡ್ ಸ್ಟಾರ್‌ನೊಂದಿಗೆ ಇರುವುದು, ಆತನಿಗೆ ಭದ್ರತೆ ಕೊಡುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಆದರೆ ಇಂದಿಗೆ ಮೂವತ್ತು ವರ್ಷಗಳು ಕಳೆದಿವೆ. ನನ್ನ ಮತ್ತು ಸಲ್ಮಾನ್ ಭಾಯ್ ನಡುವಿನ ಸಂಬಂಧ ಇಂದಿಗೂ ಉಳಿದುಕೊಂಡಿದೆ ಇನ್ನಷ್ಟು ಗಟ್ಟಿಯಾಗಿದೆ ಎಂದು ಸಂದರ್ಶನವೊಂದರಲ್ಲಿ ಶೇರಾ ಹೇಳಿಕೊಂಡಿದ್ದಾರೆ.

ಅವನು ಪಠಾಣ್, ನಾನು ಸರ್ದಾರ್:

ನಮ್ಮ ಜೋಡಿ ಅನನ್ಯವಾಗಿದೆ. ಅವನು ಪಠಾಣ್, ನಾನು ಸರ್ದಾರ್ ಇಬ್ಬರೂ ಮೂವತ್ತು ವರ್ಷಗಳಲ್ಲಿ ಒಟ್ಟಿಗೆ ಇದ್ದೇವೆ. ನಾನು ಸಲ್ಮಾನ್‌ ಭಾಯ್‌ಗೆ 'ಜಬ್ ತಕ್ ಮೇ ಹೂ, ಟ್ಯಾಬ್ ತಕ್ ಮೇ ಆಪ್ಕಿ ಸೇವಾ ಕರುಂಗಾ' (ನಾನು ಇಲ್ಲಿರುವವರೆಗೂ ನಾನು ನಿಮಗೆ ಸೇವೆ ಸಲ್ಲಿಸುತ್ತೇನೆ) ಎಂದು ಹೇಳಿದ್ದೇನೆ. ಮೂರು ದಶಕಗಳಿಂದ ಅವರಿಗೆ ಅಂಗರಕ್ಷಕನಾಗಿದ್ದೇನೆ. ಅನೇಕ ಅಂಗರಕ್ಷಕರು ಇತರ ಸ್ಟಾರ್‌ ನಟರಿಗೆ ರಕ್ಷಣೆ ನೀಡಲು ಹೋಗುತ್ತಾರೆ. ಆದರೆ  ನಾನು ಮೂರು ದಶಕಗಳಿಂದ ಸಲ್ಮಾನ್ ಭಾಯ್ ಜೊತೆಗೆ ಇದ್ದೇನೆ. ನನ್ನಂತೆ ಬೇರೆ ಯಾರೂ ಅವರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ. ನನ್ನ ಉಸಿರುವವರೆಗೂ ಅವರ ರಕ್ಷಣೆ ಮಾಡುತ್ತೇನೆ. ಕಳೆದ ವರ್ಷ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ನಂತರ ಸಲ್ಮಾನ್ ಖಾನ್ ರಕ್ಷಣೆಯಲ್ಲಿ ತೀವ್ರ ನಿಗಾ ಇಟ್ಟಿರುವ ಶೇರಾ, ಸಲ್ಮಾನ್ ಭಾಯ್ ಭದ್ರತೆ ಬಿಗಿಗೊಳಿಸಲಾಗಿದೆ. ವೈ ಶ್ರೇಣಿ ಭದ್ರತೆ ನೀಡಲಾಗಿದೆ. 

ಬಾಬಾ ಸಿದ್ದಿಕಿ ಅಂತ್ಯಕ್ರಿಯೆಗೆ ಸ್ನೇಹಿತ ಶಾರುಖ್ ಗೈರಾಗಿದ್ದಕ್ಕೆ ಕಾರಣವಿದು!

ಸಾರ್ವಜನಿಕ ಪ್ರದರ್ಶನ ವೇಳೆ ಭದ್ರತೆ ಸವಾಲಾಗಿದೆ. ಅಲ್ಲಿನ ಜನಸಂದಣಿಯಲ್ಲಿ , ಅವರ ಅಭಿಮಾನಿಗಳ ನಡುವೆ ನಾವು ಸಲ್ಮಾನ್ ಭಾಯ್ ಅವರನ್ನು ರಕ್ಷಿಸುತ್ತೇವೆ ಇದು ಸವಾಲಾಗಿದೆ.  ನಾನು ಇಲ್ಲಿರುವವರೆಗೂ ಸಲ್ಮಾನ್ ಭಾಯ್ ರಕ್ಷಣೆ ಮಾಡುತ್ತೇನೆ ಎಂದಿದ್ದಾರೆ.

click me!