ಸಿಕಂದರ್ ಸಿನಿಮಾದ ಹೀರೋ ಸಲ್ಮಾನ್ ಖಾನ್ ಹಾಗೂ ನಾಯಕಿ ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರ 31 ವರ್ಷ. ಈ ಕುರಿತು ಎದುರಾದ ಪ್ರಶ್ನೆಗೆ ಸಲ್ಮಾನ್ ಖಾನ್ ನೀಡಿದ ಉತ್ತರ ಇದೀಗ ಭಾರಿ ಚರ್ಚೆಯಾಗುತ್ತಿದೆ.
ಮುಂಬೈ(ಮಾ.23) ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸಿನಿಮಾ ಮಾರ್ಚ್ 30ಕ್ಕೆ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಮೋಶನ್ ನಡೆಯುತ್ತಿದೆ. ಸಿನಿಮಾ ಪ್ರಚಾರದ ವೇಳೆ ಸಲ್ಮಾನ್ ಖಾನ್ ಕೆಲ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಪ್ರಮುಖವಾಗಿ ನಾಯಕ ಹಾಗೂ ನಾಯಕಿ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 31. ಈ ಕುರಿತು ಹಲವರು ಪ್ರಶ್ನಿಸಿದ್ದಾರೆ. ವಯಸ್ಸಿನ ಅಂತರ ಸಮಸ್ಯೆ ಯಾರಿಗೆ? ರಶ್ಮಿಕಾ ಮಂದಣ್ಣ ಪತಿಯ ಅನುತಿ ಇರುತ್ತೆ, ಮತ್ತೇನು ಸಮಸ್ಯೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಖಾನ್ ಹೇಳಿದ್ದೇನು? ಡೇಟಿಂಗ್‌ನಲ್ಲಿರುವ ರಶ್ಮಿಕಾ ಮಂದಣ್ಣ ಮದುವೆ, ಪತಿ ಕುರಿತು ಸಲ್ಮಾನ್ ಖಾನ್ ಹೇಳಿದ್ದೇಕೆ ಅನ್ನೋ ವಿಡಿಯೋ ಇಲ್ಲಿದೆ.
ಮುಂಬೈನಲ್ಲಿ ಸಿಕಂದರ್ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಾಗಿದೆ. ಈ ವೇಳೆ ಮಾಧ್ಯಮಗಳು ಹಲವು ಪ್ರಶ್ನೆಗಳನ್ನು ಸಲ್ಮಾನ್ ಖಾನ್‌ಗೆ ಕೇಳಿದೆ. ಈ ವೇಳೆ ರಶ್ಮಿಕಾ ಮಂದಣ್ಣ ವಯಸ್ಸು 28. ಸಲ್ಮಾನ್ ಖಾನ್ ವಯಸ್ಸು 59. ಹೀಗಾಗಿ ವಯಸ್ಸಿನ ಅಂತರ 31 ಇದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಸಲ್ಮಾನ್ ಖಾನ್ ಉತ್ತರಿಸಿದ್ದಾರೆ.
ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಸಿಕಂದರ್ ಹಾಡಿಗೆ ಭಾರಿ ಟೀಕೆ
ವಯಸ್ಸಿನ ಅಂತರ ಕುರಿತು ಹೀರೋಇನ್‌ಗೆ ಯಾವುದೇ ಸಮಸ್ಯೆ ಇಲ್ಲ. ನಾಯಕಿ ತಂದೆಗೂ ಯಾವುದೇ ಸಮಸ್ಯೆ ಇಲ್ಲ. ನಾಳೆ ನಟಿ ರಶ್ಮಿಕಾ ಮಂದಣ್ಣಗೆ ಮದುವೆಯಾಗುತ್ತೆ. ಅವರಿಗೆ ಮಕ್ಕಳಾಗುತ್ತೆ. ರಶ್ಮಿಕಾ ಮಂದಣ್ಣ ಮದುವೆಯಾದ ಬಳಿಕವೂ ಸಿನಿಮಾದಲ್ಲಿ ಕೆಲಸ ಮಾಡಲು ಪತಿಯ ಅನುಮತಿ ಇರುತ್ತೆ ಎಂದುಕೊಂಡಿದ್ದೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ ರಶ್ಮಿಕಾ ಮಂದಣ್ಣ ವೃತ್ತಿಪರತೆಯನ್ನು ಸಲ್ಮಾನ್ ಖಾನ್ ಹೊಗಳಿದ್ದಾರೆ.
ಸಿಕಂದರ್ ಶೂಟಿಂಗ್ ಸಮಯದಲ್ಲೇ ಪುಷ್ಪಾ 2 ಶೂಟಿಂಗ್ ನಡೆಯುತ್ತಿತ್ತು. ಪುಷ್ಪಾ2 ಸಿನಿಮಾ ಶೂಟಿಂಗ್ ಮುಗಿಯುವಾಗ ಸಂಜೆ 7 ಗಂಟೆಯಾಗುತ್ತಿತ್ತು. ಬಳಿಕ ರಾತ್ರಿ 9 ಗಂಟೆಗೆ ಸಿಕಂದರ್ ಶೂಟಿಂಗ್‌ಗೆ ಹಾಜರಾಗುತ್ತಿದ್ದರು. ಬೆಳಗಿನ ಜಾವ 6.30ರ ವರೆಗೆ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮತ್ತೆ ಪುಷ್ಪಾ ಶೂಟಿಂಗ್‌ಗೆ ಹಿಂದಿರುಗುತ್ತಿದ್ದರು. ಇದರ ನಡುವೆ ರಶ್ಮಿಕಾ ಆರೋಗ್ಯ ಸಮಸ್ಯೆ ಕಾಡಿತ್ತು. ರಶ್ಮಿಕಾ ಮಂದಣ್ಣ ಕಾಲಿಗೂ ಗಾಯವಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಶೂಟಿಂಗ್ ನಿಲ್ಲಿಸಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾ ಮೇಲಿನ ನಿರೀಕ್ಷೆಗಳು ಹೆಚ್ಚಿದೆ. ರಶ್ಮಿಕಾ ಮಂದಣ್ಣ ಅಭಿನಯದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಆ್ಯನಿಮಲ್, ಪುಷ್ಪಾ 2, ಛಾವಾ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದೆ. ಹೀಗಾಗಿ ಸಿಕಂದರ್ ಸಿನಿಮಾ ಕೂಡ ಬಾಕ್ಸ್ ಅಫೀಸ್ ಕೊಳ್ಳೆ ಹೊಡೆಯಲಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.
ಅಯ್ಯಯ್ಯೋ...ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋಕೆ ರಶ್ಮಿಕಾ ಮಂದಣ್ಣ ಇಷ್ಟೋಂದ ಹಣ ಕೇಳಿದ್ರಾ?