ಸೂರ್ಯ-ತ್ರಿಷಾ ಜೋಡಿಗೆ ಮಹಾನ್ ಕಷ್ಟ..! 500 ಜನರ ಮಧ್ಯೆ ಅದೇನೋ ಮಾಡ್ಬೇಕಂತೆ..!

Published : Mar 23, 2025, 10:26 PM ISTUpdated : Mar 23, 2025, 10:29 PM IST
ಸೂರ್ಯ-ತ್ರಿಷಾ ಜೋಡಿಗೆ ಮಹಾನ್ ಕಷ್ಟ..! 500 ಜನರ ಮಧ್ಯೆ ಅದೇನೋ ಮಾಡ್ಬೇಕಂತೆ..!

ಸಾರಾಂಶ

ನಟಿ ತ್ರಿಷಾ ಅವರು ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಯಸ್ಸು 40 ಪ್ಲಸ್ ಆಗಿದ್ದರೂ ಕೂಡ ಇನ್ನೂ ಮಾಸದ ಚೆಲುವು ಅವರಿಗೆ ಬಹುದೊಡ್ಡ ವರದಾನ.. ಜೊತೆಗೆ, ಯಾವುದೇ ನಟ, ನಿರ್ದೇಶಕರು.. 

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ತಮಿಳು ನಟ ಸೂರ್ಯ (Suriya) ಮತ್ತು ನಟಿ ತ್ರಿಷಾ (Trisha Krishan) ಸಜ್ಜಾಗಿದ್ದಾರೆ. ಸೂರ್ಯ ನಟನೆಯ 'ಸೂರ್ಯ 45' ಚಿತ್ರದಲ್ಲಿ (Suriya 45) ಇಬ್ಬರೂ ಒಟ್ಟಿಗೆ 500ಕ್ಕೂ ಹೆಚ್ಚು ನೃತ್ಯಗಾರರೊಂದಿಗೆ ಅದ್ಧೂರಿ ನೃತ್ಯ ಸಂಯೋಜನೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಾಡಿನ ಚಿತ್ರೀಕರಣವು ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ನಟ ಸೋತು ಸುಣ್ಣವಾಗಿರುವ ಸೂರ್ಯ, ಮತ್ತೆ ಸ್ಟಾರ್‌ಗಿರಿಗೆ ಏರಲು ಯತ್ನಿಸುತ್ತಿದ್ದಾರೆ. ಅದೃಷ್ಟವೂ ಕೈ ಹಿಡಿದರೆ ಅದೂ ಆಗಬಹುದು!

ಹೌದು, ಸೂರ್ಯ ಹಾಗೂ ತ್ರಿಷಾ ಜೋಡಿಯ ರೊಮಾಂಟಿಕ್ ನೃತ್ಯವನ್ನು ಸೆರೆ ಹಿಡಿಯಲು ಚಿತ್ರತಂಡ ಸಂಪೂರ್ಣ ಸಜ್ಜಾಗಿದೆ. ಚಿತ್ರತಂಡವು ಈ ದೃಶ್ಯವನ್ನು ಅದ್ಭುತವಾಗಿ ಮೂಡಿಬರುವಂತೆ ಮಾಡಲು ಭಾರಿ ಸಿದ್ಧತೆ ನಡೆಸಿದೆ. ನೃತ್ಯ ನಿರ್ದೇಶಕರು ಅತ್ಯಾಕರ್ಷಕ ಹೆಜ್ಜೆಗಳನ್ನು ಸಂಯೋಜಿಸಿದ್ದು, ಸೂರ್ಯ ಮತ್ತು ತ್ರಿಶಾ ತಮ್ಮ ಅದ್ಭುತ ಅಭಿನಯದೊಂದಿಗೆ ಹಾಡಿಗೆ ಜೀವ ತುಂಬಲಿದ್ದಾರೆ. ಚಿತ್ರದ ಈ ಹಾಡು ಬಿಡುಗಡೆಯಾದ ನಂತರ ಸಿನಿಪ್ರಿಯರ ಮನಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ. 

Mahira Sharma: ನಾನು ಯಾರದೇ ಜೊತೆಗೂ ಡೇಟಿಂಗ್ ಮಾಡ್ತಿಲ್ಲ.. ಕಟ್ಟುಕತೆ ಹಬ್ಬಿಸಬೇಡಿ!

ಹಾಡಿನ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡವು ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರವು ಸೂರ್ಯ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನಟ ಸೂರ್ಯ ಅವರಿಗೆ ತುರ್ತಾಗಿ ದೊಡ್ಡದೊಂದು ಬ್ರೇಕ್ ಬೇಕಾಗಿದೆ. ಕಾರಣ, ಮಾಡಿದ ಸಿನಿಮಾಳೆಲ್ಲವೂ ಮಕಾಡೆ ಮಲಗಿ ನಟ ಸೂರ್ಯ ಸದ್ಯ ಪ್ಲಾಪ್ ನಟ ಎನ್ನಿಸಿಕೊಂಡಾಗಿದೆ. 

ನಟಿ ತ್ರಿಷಾ ಅವರು ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಯಸ್ಸು 40 ಪ್ಲಸ್ ಆಗಿದ್ದರೂ ಕೂಡ ಇನ್ನೂ ಮಾಸದ ಚೆಲುವು ಅವರಿಗೆ ಬಹುದೊಡ್ಡ ವರದಾನ ಎನ್ನಬಹುದು. ಜೊತೆಗೆ, ಯಾವುದೇ ನಟ, ನಿರ್ದೇಶಕರು ಹಾಗೂ ನಿರ್ಮಾಪಕರ ಜೊತೆ ನಟಿ ತ್ರಿಚಾ ಅವರು ಕಿರಿಕ್ ಮಾಡಿಕೊಂಡಿಲ್ಲ. ಹೀಗಾಗಿ ಅವರನ್ನು ಸಿನಿಮಾಗೆ ಹಾಕಿಕೊಳ್ಳಲು ಯಾರಿಗೂ ಯಾವುದೇ ತರಹದಲ್ಲಿ ಸಮಸ್ಯೆ ಕಾಡುತ್ತಿಲ್ಲ. ಅದ್ದರಿಂದ ನಟಿ ತ್ರಿಷಾ ಇಂದೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಸೂರ್ಯ 45 ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಂತೂ ಮನೆ ಮಾಡಿದೆ.

ಮೊಣಕಾಲು ಮುರಿದರೂ Veer Savarkar ಪಾತ್ರಕ್ಕೆ ಜೀವ ತುಂಬಿದ ರಣದೀಪ್ ಹೂಡಾ, ಗ್ರೇಟ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?