20 ಕಿಸ್ಸಿಂಗ್, 30 ಲಿಪ್‌ಲಾಕ್ ಸೀನ್; ಆದ್ರೂ ಫ್ಲಾಪ್‌ ಪಟ್ಟಿಗೆ ಸೇರಿದ ಹಾರರ್‌ ಥ್ರಿಲ್ಲರ್ ಸಿನಿಮಾ

Published : Jan 20, 2025, 02:20 PM IST
20 ಕಿಸ್ಸಿಂಗ್, 30 ಲಿಪ್‌ಲಾಕ್ ಸೀನ್; ಆದ್ರೂ ಫ್ಲಾಪ್‌ ಪಟ್ಟಿಗೆ ಸೇರಿದ ಹಾರರ್‌ ಥ್ರಿಲ್ಲರ್ ಸಿನಿಮಾ

ಸಾರಾಂಶ

20 ಕಿಸ್‌ ಮತ್ತು 30ಕ್ಕೂ ಹೆಚ್ಚು ಲಿಪ್‌ಲಾಕ್ ದೃಶ್ಯಗಳನ್ನು ಹೊಂದಿದ್ದರೂ, 2013ರಲ್ಲಿ ಬಿಡುಗಡೆಯಾದ ಚಿತ್ರವೊಂದು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿದೆ. ಚಿತ್ರದ ಸೋಲಿನಿಂದಾಗಿ ನಟಿ ಬಾಲಿವುಡ್‌ಗೆ ವಿದಾಯ ಹೇಳಿದರು.

ಮುಂಬೈ: ಒಂದು ಸಿನಿಮಾ ಸಕ್ಗಸ್ ಆಗಬೇಕಾದ್ರೆ ಅದು ಎಲ್ಲಾ ವರ್ಗದ ಜನರನ್ನು ತಲುಪಬೇಕು. ಹೊಸ ಕಥೆಯಾಗಿದ್ರೂ ಅದನ್ನು ತೆರೆ ಮೇಲೆ ಹೇಗೆ ತೋರಿಸಲಾಗುತ್ತೆ ಎಂಬುವುದು ಪ್ರಮುಖ ಅಂಶವಾಗುತ್ತದೆ. 2000ರ ಬಳಿಕ ಬಾಲಿವುಡ್‌ ಸಿನಿಮಾಗಳಲ್ಲಿ ಒಂದೆರಡು ಕಿಸ್ಸಿಂಗ್ ಸೀನ್ ಕಡ್ಡಾಯ ಎಂಬ ಅಲಿಖಿತ ನಿಯಮ ಬಂದಿದೆ. ಆದ್ರೂ ಯಾವುದೇ ಅಸಹ್ಯ ದೃಶ್ಯಗಳನ್ನು ಹೊಂದಿರದ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ 100 ಕೋಟಿಯ ಕ್ಲಬ್ ಸೇರಿವೆ.  2000 ನಂತರ ಬಿಡುಗಡೆಗೊಂಡ ಮರ್ಡರ್, ಜೆಹರ್, ಅಕ್ಸರ್, ಆಶಿಕ್ ಬನಾಯಾ ಅಪ್ನೇ ಅಂತಹ ಚಿತ್ರಗಳು ಎಲ್ಲಾ ಎಲ್ಲೆಗಳನ್ನು ಮೀರಿ ಪ್ರೇಕ್ಷಕರ ಮುಂದೆ ಬಂದಿದ್ದವು. ಈ ತರಹದ ಸಿನಿಮಾಗಳಲ್ಲಿ ನಟಿಸಿದ ನಟ ಇಮ್ರಾನ್ ಹಶ್ಮಿ, ಸೀರಿಯಲ್ ಕಿಸ್ಸರ್ ಎಂಬ ಬಿರುದು ಸಹ ಪಡೆದರು. ಇದೇ ರೀತಿಯ ಸಿನಿಮಾವೊಂದು ಬಿಡುಗಡೆಯಾಗಿ ಫ್ಲಾಪ್ ಪಟ್ಟಿಗೆ ಸೇರಿತ್ತು.

2013ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಇಮ್ರಾನ್ ಹಶ್ಮಿ ಅವರ ಕಿಸ್ಸಿಂಗ್ ದಾಖಲೆಯನ್ನು ಬ್ರೇಕ್ ಮಾಡಿತ್ತು. 20 ಕಿಸ್‌, 30ಕ್ಕೂ ಅಧಿಕ ಲಿಪ್‌ಲಾಕ್ ದೃಶ್ಯಗಳನ್ನು ಹೊಂದಿದ್ದ ಸಿನಿಮಾಗೆ ಹಾಕಿದ ಅರ್ಧದಷ್ಟು ಹಣವೂ ಹಿಂದಿರುಗಿ ಬರಲಿಲ್ಲ. ಚಿತ್ರದ ಸೋಲಿನಿಂದಾಗಿ ಸಿನಿಮಾ ನಟಿ ಬಾಲಿವುಡ್‌ಗೆ ವಿದಾಯ ಹೇಳಿದರು. 

3G -ಎ ಕಿಲ್ಲರ್ ಕನೆಕ್ಷನ್ ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. ನೀಲ್ ನಿತಿನ್ ಮುಕೇಶ್ ಮತ್ತು ಸೋನಲ್ ಚೌಹಾಣ್ ಚಿತ್ರದ ಲೀಡ್‌ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ 20 ಸಾಮಾನ್ಯ ಚುಂಬನ ಮತ್ತು 30 ಲಿಪ್‌ಲಾಕ್ ಸೀನ್‌ಗಳಿದ್ದವು. ಮರ್ಡರ್ ಸಿನಿಮಾದಲ್ಲಿ  ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ನಡುವೆ 20 ಕಿಸ್ಸಿಂಗ್ ಸೀನ್‌ಗಳಿದ್ದವು. ಇವರಿಬ್ಬರ ದಾಖಲೆಯನ್ನು 3G -ಎ ಕಿಲ್ಲರ್ ಕನೆಕ್ಷನ್ ಬ್ರೇಕ್ ಮಾಡಿತ್ತು.

2013ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ 13 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿತ್ತು. ಭಾರತದಲ್ಲಿ ಕೇವಲ 5.48 ಕೋಟಿ ರೂ. ಗಳಿಸಿತ್ತು. ಭಾರತ ಸೇರಿದಂತಗೆ ವಿಶ್ವದಾದ್ಯಂತ ಚಿತ್ರ ಕೇವಲ 7.45 ಕೋಟಿ ರೂಪಾಯಿ ಹಣ ಗಳಿಸಲು ಮಾತ್ರ ಶಕ್ತವಾಯ್ತು. ಹಾಗಾಗಿ ಈ ಸಿನಿಮಾವನ್ನು ಬಾಲಿವುಡ್‌ ಅಂಗಳದ ಅತ್ಯಂತ ಕೆಟ್ಟ ಚಿತ್ರ ಎಂದು ಕರೆಯಲಾಗುತ್ತದೆ. ಶಾಂತನು ರೈ ಛಿಬ್ಬರ್ ಮತ್ತು ಶೀರ್ಷಾಕ್ ಆನಂದ್ ತಾವೇ ಬರೆದ ಕಥೆಗೆ ಆಕ್ಷನ್ ಕಟ್ ಹೇಳಿದ್ದರು. ಸುನಿಲ್ ಲುಲ್ಲಾ ಮತ್ತು ವಿಕ್ಕಿ ರಜನಿ ಜಂಟಿಯಾಗಿ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದರು.

ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!

ಬೇಫಿಕ್ರೆಯಲ್ಲಿ ರಣ್‌ವೀರ್ ಸಿಂಗ್- ವಾಣಿ ಕಪೂರ್  ಬಿಂದಾಸ್ ಕಿಸ್ 
2016ರಲ್ಲಿ ಬಿಡುಗಡೆಯಾಗಿದ್ದ ಆದಿತ್ಯಾ ಚೋಪ್ರಾ ನಿರ್ದೇಶನದ ಬೇಫಿಕ್ರೆ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಮತ್ತು ವಾಣಿ ಕಪೂರ್ ಬಿಂದಾಸ್ ಆಗಿ ನಟಿಸಿದ್ದರು. ಈ ಚಿತ್ರದಲ್ಲಿ ಇಬ್ಬರ ನಡುವೆ 25 ಕಿಸ್ಸಿಂಗ್ ಸೀನ್‌ಗಳಿದ್ದವು. ಈ ಚಿತ್ರ ಮ್ಯೂಸಿಕಲ್ ಹಿಟ್ ಆಗಿತ್ತು.

ಇದನ್ನೂ ಓದಿ: 20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?