ಶ್ರೀದೇವಿ ಮೇಲಿದ್ದ ಭಯಂಕರ ಆರೋಪವೇನು? ಅದಕ್ಕೆ ಕಾರಣವಾದ ಅಂಶ ತಿಳಿದರೆ ಶಾಕ್ ಗ್ಯಾರಂಟಿ!

By Shriram Bhat  |  First Published Sep 6, 2024, 3:39 PM IST

ನಟಿ ಶ್ರೀದೇವಿ ಅವರು ತೀರಾ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಬಂದವರು. ಅವರು ಶಾಲಾ ದಿನಗಳಲ್ಲೇ ಬಾಲನಟಿ ಆಗಿದ್ದರಿಂದ ಅವರು ಶಾಲಾ ಶಿಕ್ಷಣದಿಂದ ಹೆಚ್ಚೂಕಡಿಮೆ ವಂಚಿತರಾಗಿದ್ದರು. ಹೀಗಾಗಿ ಅವರಿಗೆ ಮಾತೃಭಾಷೆ ತಮಿಳು, ವೃತ್ತಿ ಭಾಷೆ ತೆಲುಗು ಬಿಟ್ಟರೆ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು..


ಭಾರತೀಯ ಚಿತ್ರರಂಗದಲ್ಲಿ ನಭೋ ನಭವಿಷ್ಯತಿ ಎಂಬಂತೆ ಮೆರೆದವರು ನಟಿ ಶ್ರೀದೇವಿ. ತಮ್ಮ 54ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಶ್ರೀದೇವಿ (Sridevi) ಅವರ ಬಗ್ಗೆ ಬಹಳಷ್ಟು ಜನರಿಗೆ ತಿಳಿಯದ ಹಲವಾರು ಸಂಗತಿಗಳು ಈಗ ಸೋಷಿಯಲ್ ಮೀಡಿಯಾ ಮೂಲಕ ಹರಿದಾಡುತ್ತಿವೆ. ಕಾರಣ, ಆಗ ಸಾಮಾಜಿಕ ಜಾಲತಾಣಗಳು ಅಷ್ಟು ಸ್ಟ್ರಾಂಗ್ ಆಗಿರಲಿಲ್ಲ ಎಂಬುದಕ್ಕಿಂತ ನಟಿ ಶ್ರೀದೇವಿ ಅವರು ಹೊರಜಗತ್ತಿಗೆ ತೀರಾ ಓಪನ್‌ ಆಗಿ ತೆರೆದುಕೊಂಡಿರಲಿಲ್ಲ ಎನ್ನುತ್ತಾರೆ ಬಲ್ಲವರು.

ಹಾಗೆಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. 1985-90ರ ದಶಕಲ್ಲಿ ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ಗೆ ಕಾಲಿಟ್ಟ ಶ್ರೀದೇವಿ ತಮ್ಮ ಅಪರೂಪ,-ಅಮೋಘ ಸೌಂದರ್ಯ ಹಾಗೂ ಪ್ರತಿಭೆಯಿಂದ ಹೇರಳವಾದ ಅವಕಾಶವನ್ನು ಪಡೆದರು. ಆದರೆ ಅವರಿಗೆ ಹಿಂದಿ ಭಾಷೆ ಮಾತನಾಡಲು ಬರುತ್ತಿರಲಿಲ್ಲ. ಸಿನಿಮಾದಲ್ಲಿ ಹೇಗೋ ಡಬ್ಬಿಂಗ್ ತೆಗದುಕೊಂಡು ಬಚಾವ್ ಆಗಿದ್ದರು. ಆದರೆ, ಉತ್ತರ ಭಾರತದ ಮಾಧ್ಯಮಗಳಲ್ಲಿ, ಶೂಟಿಂಗ್‌ ಸೆಟ್‌ನಲ್ಲಿ ಮಾತನಾಡುವಾಗ ತುಂಬಾ ಕಷ್ಟಪಡುತ್ತಿದ್ದರು. 

Latest Videos

undefined

ಸ್ಟಾರ್ ನಟಿಯಾಗಿದ್ದ ಸೌಂದರ್ಯ ಚುನಾವಣೆ ಪ್ರಚಾರಕ್ಕೆ ಹೊರಟು ಸಾವು ಕಂಡಿದ್ದು ಯಾಕೆ?

ಇದಕ್ಕೆಲ್ಲಾ ಮುಖ್ಯ ಕಾರಣ, ನಟಿ ಶ್ರೀದೇವಿ ಅವರು ತೀರಾ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಬಂದವರು. ಅವರು ಶಾಲಾ ದಿನಗಳಲ್ಲೇ ಬಾಲನಟಿ ಆಗಿದ್ದರಿಂದ ಅವರು ಶಾಲಾ ಶಿಕ್ಷಣದಿಂದ ಹೆಚ್ಚೂಕಡಿಮೆ ವಂಚಿತರಾಗಿದ್ದರು. ಹೀಗಾಗಿ ಅವರಿಗೆ ಮಾತೃಭಾಷೆ ತಮಿಳು, ವೃತ್ತಿ ಭಾಷೆ ತೆಲುಗು ಬಿಟ್ಟರೆ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಬರೆಯಲು ಅಥವಾ ಮಾತನಾಡಲು ಅಷ್ಟಾಗಿ ಬರುತ್ತಿರಲಿಲ್ಲ. ತಮ್ಮ ಈ ಕೊರತೆಯಿಂದ ಅವರು ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. 

ಈ ಕಾರಣಕ್ಕೇ ನಟಿ ಜಯಪ್ರದಾ ಸೇರಿದಂತೆ, ಹಲವರು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು, ಶ್ರೀದೇವಿಗೆ ಅಹಂಕಾರ ಜಾಸ್ತಿ, ಅವರು ಆರೋಗೆಂಟ್ ಎಂದೆಲ್ಲಾ ಸುದ್ದಿ ಹಬ್ಬಿಸಿದ್ದರು. ಆದರೆ, ಅಂಥ ಸುದ್ದಿಗಳಿಗೆಲ್ಲಾ ಹೆಚ್ಚು ತಲೆ ಕೆಡಿಸಿಕೊಳ್ಳಲು ವೇಳೆಯಿಲ್ಲದ ನಟಿ ಶ್ರೀದೇವಿ, ತಾವಾಯಿತು, ತಮ್ಮ ಕೆಲಸವಾಯಿತು ಎಂದು ನಟಿಯಾಗಿ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದರು. 

ನಟಿ ಶ್ರೇದೇವಿ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, 90ರ ದಶಕದಲ್ಲಿ ಅವರು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಒಂದು 'ಮೇರಿ ಬೀವಿ ಕಾ ಜವಾಬ್ ನಹೀ' (Meri Biwi Ka Jawaab Nahin) ಹಾಗೂ ಇನ್ನೊಂದು ಹಮ್ರೇ ಸಾಜನ್ ಸಾಂಗ್‌ ಕಾ ವಾದಾ (Hamre Saajan Sang Ka Waada). ಅದೆರಡೂ ಚಿತ್ರೀಕರಣದ ವೇಳೆಯಲ್ಲಿ ನಟಿ ಶ್ರೀದೇವಿ ಅವರಿಗೆ  ಅದೆಷ್ಟು ಸಂಕೋಚ ಇತ್ತು ಎಂದರೆ, ಶೂಟಿಂಗ್ ಮುಗಿದ ಬಳಿಕ ಅವರು ಯಾರ ಕಣ್ಣನ್ನೂ ನೊಡುತ್ತಿರಲಿಲ್ಲ. ಜೊತೆಗೆ, ಶೂಟಿಂಗ್ ಮಾಡುವಾಗಲೂ ಅಷ್ಟೇ, ಡೈರೆಕ್ಟರ್, ಕ್ಯಾಮೆರಾಮ್ಯಾನ್ ಹಾಗೂ ಸಹನಟರನ್ನು ಬಿಟ್ಟರೆ ಅವರು ನೆಲವನ್ನು ಮಾತ್ರ ನೋಡುತ್ತಿದ್ದರಂತೆ. 

ಪ್ರೀತಿ ಮತ್ತೆ ಸಂಬಂಧನಾ ಬಲವಂತವಾಗಿ ಇಟ್ಕೊಳ್ಳೋಕೆ ಆಗಲ್ಲ ಅಂದ್ಬಿಟ್ರು ಅದಿತಿ ಪ್ರಭುದೇವ..! 

ಅಂತಹ ನಟಿ ಶ್ರೀದೇವಿ ಮುಂದೊಮ್ಮೆ 'ಇಂಗ್ಲಿ‍ಷ್ ವಿಂಗ್ಲಿಷ್' ಎಂಬ ತಮ್ಮದೇ ನಿಸ್ಸಹಾಯಕ ಸ್ಥಿತಿಗೆ ಹೋಲುತ್ತಿದ್ದ ಪಾತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರವೇ ತೆರೆಗೆ ಬಂದಿರುವ ಅವರ ಸೋಲೋ ನಾಯಕಿ ಸಿನಿಮಾ. ಬಳಿಕ ಅವರು ತಮಿಳಿನ 'ಪುಲಿ' ಚಿತ್ರದಲ್ಲಿ ರಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ, ಸಾಯುವ ಸಮಯದಲ್ಲೂ ಅವರ ಕೈ ನಲ್ಲಿ ಕೆಲವು ಚಿತ್ರಗಳಿದ್ದವು. ಒಟ್ಟಿನಲ್ಲಿ, ಭಾರತದ 'ಅತಿಲೋಕ ಸುಂದರಿ' ಪಟ್ಟದಲ್ಲಿ ರಾರಾಜಿಸಿದ್ದ ನಟಿ ಶ್ರೀದೇವಿ, ದುರಂತ ಸಾವು ಕಂಡಿದ್ದು ಮಾತ್ರ ವಿಪರ್ಯಾಸ..!

click me!