ನಟ ಹಗ್​ ಮಾಡಿದ ಖುಷಿ ತಾಳಲಾಗದೇ ಕುಸಿದು ಬಿದ್ದ ಕಾಲೇಜು ಯುವತಿ: ಶಾಕಿಂಗ್​ ವಿಡಿಯೋ ವೈರಲ್​

By Suchethana D  |  First Published Sep 6, 2024, 12:32 PM IST

ಅಭಿಮಾನವೋ, ಅತಿರೇಕವೊ? ತನ್ನ ನೆಚ್ಚಿನ ಬಾಲಿವುಡ್​ ನಟನನ್ನು ಅಪ್ಪಿಕೊಳ್ಳುತ್ತಲೇ ಖುಷಿ ತಾಳಲಾಗದೇ ಅಲ್ಲಿಯೇ ಕುಸಿದು ಬಿದ್ದ ಯುವತಿ! 
 


ಚಿತ್ರ ತಾರೆಯರ ಮೇಲಿನ ಅಭಿಮಾನ ಎಂದರೆ ಸುಮ್ಮನೇ ಅಲ್ಲ. ಚಿತ್ರ ನಟರನ್ನು ಕಣ್ಣಿಗೆ ಕಾಣುವ ದೇವರು ಎಂದು ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಅವರನ್ನು ನೋಡಲು ಪ್ರಾಣವನ್ನೂ ಪಣಕ್ಕಿಡುವವರೂ ಇದ್ದಾರೆ. ಅವರ ದರ್ಶನ ಭಾಗ್ಯವೊಂದೇ ತಮ್ಮ ಏಳೇಳು ಜನ್ಮದ ಪುಣ್ಯ ಎಂದುಕೊಳ್ಳುವ ಅತಿರೇಕದ ಅಭಿಮಾನಿಗಳಿಗೂ ಕೊರತೆಯೇನಿಲ್ಲ. ಇದೇ ಕಾರಣಕ್ಕೆ, ಚಿತ್ರತಾರೆಯರನ್ನೇ, ತಮ್ಮ ನೆಚ್ಚಿನ ನಟರನ್ನೇ ಅನುಸರಿಸಿ ರಕ್ತಪಾತ ಹರಿಸುತ್ತಿರುವವರೂ ಇದ್ದಾರೆ, ಲಾಂಗು- ಮಚ್ಚು ಬೀಸುತ್ತಾ ಅಪರಾಧ ಮಾಡುವವರೂ ಇದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರೂ ಇದ್ದಾರೆ, ಮದ್ಯ ವ್ಯಸನ- ಸ್ಟೈಲ್​ ಸ್ಟೈಲಾಗಿ ಸ್ಮೋಕಿಂಗ್ ಮಾಡುವವರೂ ಇದ್ದಾರೆ, ಗುಟಕಾದಂಥ ಕೆಟ್ಟ ವ್ಯಸನಗಳಿಗೆ ದಾಸರಾಗುವವರೂ ಇದ್ದಾರೆ. ಅಪರಾಧ ಪ್ರಪಂಚದ ಒಳಹೊಕ್ಕವರು ಸಿಕ್ಕಿಬಿದ್ದಾಗ ಪೊಲೀಸರು ಕೇಳಿದಾಗ ಬಹುತೇಕ ಮಂದಿ ಹೇಳುವುದು ಇದನ್ನೇ. ಆ ಚಿತ್ರ ನೋಡಿ ಪ್ರೇರೇಪಿತನಾದೆ ಎನ್ನುವುದೇ. ಅದಕ್ಕೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುವ ಸಲುವಾಗಿ ರಕ್ತಪಾತ ಹರಿಸುವ ಚಿತ್ರಗಳು ಇಂದು ಯಥೇಚ್ಛವಾಗಿ ಬರುತ್ತಿವೆ. ಇದು ಅಭಿಮಾನದ ಅತಿರೇಕಕ್ಕೆ ಇರುವ ಸಾಕ್ಷಿ. ಎಷ್ಟೆಂದರೂ ಯುವ ಸಮುದಾಯ ಒಳ್ಳೆಯದ್ದಕ್ಕಿಂತ ಕೆಟ್ಟದ್ದನ್ನೇ ಸ್ವೀಕರಿಸುವುದು ಹೆಚ್ಚಲ್ಲವೆ? 

ಅದೇನೇ ಇರಲಿ. ಇಲ್ಲಿ ಹೇಳಹೊರಟಿರುವುದು ಯುವತಿಯೊಬ್ಬಳ ಘಟನೆ. ತನ್ನ ನೆಚ್ಚಿನ ನಟನನ್ನು ಒಮ್ಮೆ ನೋಡಿ, ಆತನನ್ನು ಸ್ಪರ್ಶಿಸುವುದೇ  ಈಕೆಯ ಬದುಕಿನ ಗುರಿಯಾಗಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಚಿತ್ರನಟ ಆಶಿಮ್​ ಅವರನ್ನು ಪ್ರೀತಿಯಿಂದ ಹಗ್​ ಮಾಡಿದ ತಕ್ಷಣ ತಲೆತಿರುಗಿ ವೇದಿಕೆಯ ಮೇಲೆ ಬಿದ್ದಿದ್ದಾಳೆ ಯುವತಿ. ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಯುವತಿ ಬಾಲಿವುಡ್​ ನಟ ಆಶಿಮ್​  ಗುಲಾಟಿಯನ್ನು ಅಪ್ಪಿಕೊಂಡಿದ್ದಾಳೆ. ನಟನ ಅಪ್ಪಿಕೊಂಡ ನಂತರ ಯುವತಿ ಭಾವುಕಳಾಗಿದ್ದಾಳೆ. ಸ್ಥಳದಲ್ಲಿಯೇ ತಲೆತಿರುಗಿ ಬಿದ್ದಿದ್ದಾಳೆ. ಇಷ್ಟನ್ನು ವಿಡಿಯೋದಲ್ಲಿ ನೋಡಬಹುದು.

Tap to resize

Latest Videos

ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?

ಕಹಾಂ ಶುರು ಕಹಾಂ ಖತಂ, ಪ್ರಚಾರದ ಸಮಯದಲ್ಲಿ ನಟ ಆಶಿಮ್ ಕಾಲೇಜಿಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.  ಅಂದಹಾಗೆ ಆಶಿಮ್​ ಅವರು ಕಿರುತೆರೆಯ ಜನಪ್ರಿಯ ನಟ.  ನೀಲ್ ಗುಜ್ರಾಲ್, ದಿಲ್ ಸಂಭಾಲ್ ಜಾ ಜರಾದಲ್ಲಿ ರೆಹಾನ್ ಖನ್ನಾ ಮತ್ತು ಕರ್ಣ್ ಸಂಗಿನಿಯಲ್ಲಿ ಇವರು  ಖ್ಯಾತರಾಗಿದ್ದಾರೆ. ಅದರಲ್ಲಿಯೂ ಕರ್ಣ್ ಸಂಗಿನಿ ಸೀರಿಯಲ್​ನ ಕರ್ಣನ ಪಾತ್ರದಲ್ಲಿ ಮನೆಮಾತಾಗಿದ್ದಾರೆ.  ಗುಲಾಟಿ 2015 ರಲ್ಲಿ ಗುಲ್ಮೊಹರ್ ಗ್ರ್ಯಾಂಡ್ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ನಟ ಬೆಳ್ಳಿ ಪರದೆಯ ಮೇಲೆಯೂ ಮಿಂಚಿದ್ದಾರೆ.  2016 ರಲ್ಲಿ,  ನೇಹಾ ಶರ್ಮಾ ಅವರೊಂದಿಗೆ ತುಮ್ ಬಿನ್ II ​​ನಲ್ಲಿ ಅಮರ್ ಆಗಿ ತಮ್ಮ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು.  ಅದೇ ವರ್ಷದಲ್ಲಿ, ಅವರು ಯೇ ಹೈ ಆಶಿಕಿಯಲ್ಲಿ ಆಯುಷ್ ಪಾತ್ರವನ್ನು ನಿರ್ವಹಿಸಿದರು . 

2017 ರಲ್ಲಿ, ಗುಲಾಟಿ ಅವರು ಸ್ಟಾರ್ ಪ್ಲಸ್‌ನ ದಿಲ್ ಸಂಭಾಲ್ ಜಾ ಜರಾದಲ್ಲಿ ಸ್ಮೃತಿ ಕಲ್ರಾ ಅವರೊಂದಿಗೆ ರೆಹಾನ್ ಪಾತ್ರವನ್ನು ನಿರ್ವಹಿಸಿದರು . 2018ರಲ್ಲಿ  ಸ್ಟಾರ್ ಪ್ಲಸ್‌ನ ಕರ್ಣ್ ಸಂಗಿನಿಯಲ್ಲಿ ತೇಜಸ್ವಿ ಪ್ರಕಾಶ್ ಎದುರು ಕರ್ಣ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರಿಂದ ಕಿರುತೆರೆ ಪ್ರೇಕ್ಷಕರಿಗೆ ಹಾಗೂ ಸಿನಿಮಾ ಪ್ರೇಕ್ಷಕರಿಗೆ ಇವರು ಅಚ್ಚುಮೆಚ್ಚು. ಅದರಲ್ಲಿಯೂ ಸೀರಿಯಲ್​ ಮೂಲಕ ಮನಗೆದ್ದಿರುವ ನಟನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಮುಂಬರುವ ಸಿನಿಮಾದ ಪ್ರಚಾರಕ್ಕಾಗಿ ಕಾಲೇಜಿಗೆ ಬಂದಾಗ ಈ ಘಟನೆ ನಡೆದಿದ್ದು, ಅದಕ್ಕೆ ಥಹರೇವಾರಿ ಕಮೆಂಟ್ಸ್​ ಬರುತ್ತಿವೆ.  

ಸಮಂತಾ ಎಸ್​ಎಸ್​ಎಲ್​ಸಿ ಅಂಕಪಟ್ಟಿ ವೈರಲ್​: ಇಂಥ ದಾಖಲೆ ಮನುಷ್ಯರಿಂದ ಸಾಧ್ಯನೇ ಇಲ್ಲ ಬಿಡಿ! ಅಷ್ಟಕ್ಕೂ ಆಗಿರೋದೇನು?

click me!