'ದೇಶದ್ರೋಹಿ ವಿರಾಟ್‌ ಕೊಹ್ಲಿ..' ಟ್ರೆಂಡ್‌ ಮಾಡಿದ ಶಾರುಖ್‌ ಖಾನ್‌ ಫ್ಯಾನ್ಸ್‌, ಕಾರಣವೇನು?

By Santosh Naik  |  First Published Mar 29, 2023, 6:41 PM IST

ಇನ್ನೇನು ಐಪಿಎಲ್‌ಗೆ ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಟ್ವಿಟರ್‌ನಲ್ಲಿ ಶಾರುಖ್‌ ಖಾನ್‌ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿಗಳು ಯುದ್ಧ ಆರಂಭಿಸಿದ್ದಾರೆ. ಟ್ವಿಟರ್‌ನಲ್ಲಿ ದೇಶದ್ರೋಹಿ ವಿರಾಟ್‌ ಕೊಹ್ಲಿ ಎನ್ನುವ ಟ್ಯಾಗ್‌ಗೆ 30 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಬಂದಿವೆ.


ಬೆಂಗಳೂರು (ಮಾ.29): ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಅಭಿಮಾನಿಗಳ ನಡುವೆ ಫ್ಯಾನ್‌ ವಾರ್‌ ಜೋರಾಗಿದೆ. ಇದು ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ, ಟ್ವಿಟರ್‌ನಲ್ಲಿ ದೇಶದ್ರೋಹಿ ವಿರಾಟ್‌ ಕೊಹ್ಲಿ ಎನ್ನುವ ಟ್ಯಾಗ್‌ಅನ್ನು ಶಾರುಖ್‌ ಅಭಿಮಾನಿಗಳು ಇಂಡಿಯಾ ಟ್ರೆಂಡಿಂಗ್‌ನಲ್ಲಿ ಇರಿಸಿದ್ದಾರೆ. ಸಂಜೆ ಆರು ಗಂಟೆಯ ವೇಳೆಗೆ ಅಂದಾಜು 30 ಸಾವಿರಕ್ಕೂ ಅಧಿಕ ಟ್ವೀಟ್ಸ್‌ಗಳೊಂದಿಗೆ ದೇಶದ್ರೋಹಿ ವಿರಾಟ್‌ ಕೊಹ್ಲಿ ಟ್ರೆಂಡಿಂಗ್‌ನಲ್ಲಿತ್ತು. ಒಂದೆಡೆ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಲು ಸಜ್ಜಾಗುತ್ತಿದ್ದು, ಆ ನಿಟ್ಟಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇನ್ನೊಂದೆಡೆ ಶಾರುಖ್‌ ಖಾನ್‌ ಇತ್ತೀಚಿನ ಪಠಾಣ್‌ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದು, ಮುಂಬರುವ ಜವಾನ್‌ ಚಿತ್ರದ ಬಿಡುಗಡೆ ಹಾಗೂ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಡುವೆ ಅವರ ಮಾಲೀಕ್ವತದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಅಣಿಯಾಗುತ್ತಿದೆ. ಐಪಿಎಲ್‌ಗೆ ಇನ್ನೇನು ಕೆಲವೇ ದಿನಗಳಿರುವಾಗ ಸೋಶಿಯಲ್‌ ಮೀಡಿಯಾದಲ್ಲಿ ಶಾರುಖ್‌ ಖಾನ್‌ ಗ್ರೇಟಾ? ವಿರಾಟ್‌ ಕೊಹ್ಲಿ ಗ್ರೇಟಾ? ಎನ್ನುವ ವಿಚಾರದಲ್ಲಿ ಪೋಲ್‌ ಮಾಡಲಾಗಿತ್ತು. ಇದೇ ವಿಚಾರವೀಗ ಎರಡೂ ಕಡೆಯ ಅಭಿಮಾನಿಗಳ ಟ್ವಿಟರ್‌ ಯುದ್ಧಕ್ಕೆ ಕಾರಣವಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು ಬಿಗ್‌ ಸ್ಟಾರ್‌ಗಳ ಅಭಿಮಾನಿಗಳು ಫ್ಯಾನ್ಸ್‌ ವಾರ್‌ಗಳಿಗೆ ಕಾರಣವಾಗೋದದು ಹೊಸದೇನಲ್ಲ. ಬಾಲಿವುಡ್‌ನ ಬಿಗ್‌ ಸ್ಟಾರ್‌ಗಳ ನಡುವೆ ಇಂಥ ವಾರ್‌ಗಳು ನಡೆಯುತ್ತಲೇ ಇರುತ್ತದೆ. ಇನ್ನು ಕನ್ನಡದಲ್ಲೀ ಕೂಡ ಅಗ್ರ ನಟರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಕಿತ್ತಾಡೋದಿದೆ. ಆದರೆ, ವಿರಾಟ್‌ ಕೊಹ್ಲಿ ಹಾಗೂ ಶಾರುಖ್‌ ಖಾನ್‌ ಇಬ್ಬರದು ಬೇರೆ ಬೇರೆ ಕ್ಷೇತ್ರ. ಕೊಹ್ಲಿ ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಯಾಗಿದ್ದರೆ, ಶಾರುಖ್‌ ಖಾನ್‌ ಸಿನಿಮಾದ ಅತಿದೊಡ್ಡ ಸೆಲೆಬ್ರಿಟಿ. ಇಬ್ಬರೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಭಾರತದ ಖ್ಯಾತಿಯನ್ನು ಉತ್ತುಂಗಕ್ಕೇರಿಸಿದವರು. ಆದರೆ, ಇವರಿಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯರು ಎಂಬ ಬಗ್ಗೆ ಇಬ್ಬರೂ ಸೆಲೆಬ್ರಿಟಿಗಳ ಅಭಿಮಾನಿಗಳು ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಅದು ಅಭಿಮಾನಿಗಳ ನಡುವಿನ ಜಗಳಕ್ಕೆ ತಿರುಗಿತು. ಇದರ ಬೆನ್ನಲ್ಲಿಯೇ ದೇಶದ್ರೋಹಿ ವಿರಾಟ್‌ ಕೊಹ್ಲಿ ಎನ್ನುವ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿದೆ. 

ಟ್ವೀಟರ್‌ನಲ್ಲಿ ದೇಶದ್ರೋಹಿ ವಿರಾಟ್‌ ಕೊಹ್ಲಿ, ಕೊಹ್ಲಿ ಕಾ ಬಾಪ್‌ ಎಸ್‌ಆರ್‌ಕೆ (ಕೊಹ್ಲಿಯ ಅಪ್ಪ ಶಾರುಖ್‌ ಖಾನ್‌), ಎಸ್ಸಾರ್ಕೆಯನ್ಸ್‌ ಕಾ ಮೂತ್‌ ಕೊಹ್ಲಿ (ಎಸ್‌ಆರ್‌ಕೆ ಅಭಿಮಾನಿಗಳ ಮೂತ್ರ ವಿರಾಟ್‌ ಕೊಹ್ಲಿ) ಎನ್ನುವ ಸಾಲುಗಳನ್ನು ಕೊಹ್ಲಿಯನ್ನು ಟೀಕೆ ಮಾಡಲು ಬರೆದಿದ್ದಾರೆ. ಕೊಹ್ಲಿಯ ಕುರಿತಾಗಿ ಅಂದಾಜು 30 ಸಾವಿರಕ್ಕೂ ಅಧಿಕ ದ್ವೇಷ ಪೂರಿತ ಕಾಮೆಂಟ್‌ಗಳು ಬಂದಿವೆ. ವಿರಾಟ್‌ ಕೊಹ್ಲಿ ಈವರೆಗೂ ಐಸಿಸಿ ಹಾಗೂ ಐಪಿಎಲ್‌ ಟ್ರೋಫಿ ಗೆದ್ದಿಲ್ಲ. ಇದೇ ವಿಚಾರವನ್ನುಇರಿಸಿಕೊಂಡು ಶಾರುಖ್‌ ಖಾನ್‌ ಅಭಿಮಾನಿಗಳು ವಿರಾಟ್‌ ಕೊಹ್ಲಿಯನ್ನು ಗುರಿಯಾಗಿರಿಸಿದ್ದಾರೆ.

Even Google knows who is the father of

DESHDROHI VIRAT CHOKLI
SRKIANS KA MOOT KOHLI
KOHLI KA BAAP SRK pic.twitter.com/5DIgGgqJf9

— 𝐁𝐀𝐁𝐀 𝐘𝐀𝐆𝐀 (@yaga_18)

World Richest Cricketer: ತೆಂಡುಲ್ಕರ್‌, ಕೊಹ್ಲಿ, ಧೋನಿಯಲ್ಲ, ವಿಶ್ವದ ಶ್ರೀಮಂತ ಕ್ರಿಕೆಟಿಗ ಇವರಂತೆ!

ಅದರೊಂದಿಗೆ ಆರ್‌ಸಿಬಿ ಟ್ರೋಫಿ ಗೆದ್ದಿಲ್ಲ ಅನ್ನೋ ಕಾರಣಕ್ಕೆ ಮಾಧ್ಯಮಗಳ ಮುಂದೆ ಕಣ್ಣೀರಿಡುವ ವಿರಾಟ್‌ ಕೊಹ್ಲಿ, ದೇಶಕ್ಕಾಗಿ ಐಸಿಸಿ ಟ್ರೋಫಿ ಗೆಲ್ಲದೇ ಇದ್ದಾಗ ನಗುತ್ತಿರುತ್ತಾರೆ. ಆತ ದೇಶದ್ರೋಹಿ ಎನ್ನುವ ಕಾಮೆಂಟ್‌ಗಳನ್ನು ಮಾಡಲಾಗಿದೆ.

Tap to resize

Latest Videos

Indian Sports honors 2023: ಅನುಷ್ಕಾ- ವಿರಾಟ್‌ ದಂಪತಿ, ತಂದೆ, ಪತಿ ಜೊತೆ ದೀಪಿಕಾ ಪಡುಕೋಣೆ

ಇನ್ನು ವಿರಾಟ್‌ ಕೊಹ್ಲಿಯ ಅಭಿಮಾನಿಗಳೇನೂ ಸುಮ್ಮನಿಲ್ಲ. ಶಾರುಖ್‌ ಖಾನ್‌ಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭದ್ರತಾ ಅಧಿಕಾರಿ ಕೆನ್ನೆಗೆ ಹೊಡೆದ ವಿಚಾರವನ್ನು ಇರಿಸಿಕೊಂಡು ಅವರನ್ನು ಟೀಕಿಸಿದ್ದಾರೆ. ಇನ್ನು ಶಾರುಖ್‌ ಖಾನ್‌ಗೆ ಈಗ 57 ವರ್ಷ. ವಿರಾಟ್‌ ಕೊಹ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಶಾರುಖ್‌ಗಿಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಹೇಳುವ ಮೂಲಕ ಶಾರುಖ್‌ ಖಾನ್‌ ಅಭಿಮಾನಿಗಳನ್ನು ಕೆರಳಿಸಿದ್ದಾರೆ.

click me!