RRR ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾಗೆ ನೆಟ್ಟಿಗರ ತರಾಟೆ

Published : Mar 29, 2023, 05:02 PM IST
RRR ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾಗೆ ನೆಟ್ಟಿಗರ ತರಾಟೆ

ಸಾರಾಂಶ

RRR ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಎಲ್ಲಾ ಗೌರವ ಕಳೆದುಕೊಂಡ್ರಿ ಎಂದು ಹೇಳುತ್ತಿದ್ದಾರೆ. 

ಕಳೆದ ಎರಡು ದಿನಗಳಿಂದ ಪ್ರಿಯಾಂಕಾ ಚೋಪ್ರಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಬಿಟ್ಟು ಹೋದ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಬಹಿರಂಗ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಬಾಲಿವುಡ್‌ನ ಕರಾಳ ಮುಖ ಬಹಿರಂಗ ಪಡಿಸದ್ದು ಪರ ವಿರೋಧ ಚರ್ಚೆ ನಡೆಯುತ್ತಿದೆ. ಡಾಕ್ಸ್ ಶೆಫರ್ಡ್ ಅವರ ಪಾಡ್‌ಕಾಸ್ಟ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನಲ್ಲಿ ಮಾತನಾಡದ ಪ್ರಿಯಾಂಕಾ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಆರ್ ಆರ್ ಆರ್ ಸಿನಿಮಾದ ಬಗ್ಗೆ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಆರ್ ಆರ್ ಆರ್ ತಮಿಳು ಸಿನಿಮಾ ಎಂದಿರುವ ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಡಾಕ್ಸ್ ಶೆಪರ್ಡ್ ಆರ್ ಆರ್ ಆರ್ ಸಿನಿಮಾವನ್ನು ಬಾಲಿವುಡ್ ಸಿನಿಮಾ ಎಂದು ಉಲ್ಲೇಖಿಸಿದರು. ಆಗ  ಪ್ರಿಯಾಂಕಾ ಇದು ಬಾಲಿವುಡ್ ಸಿನಿಮಾ ಅಲ್ಲ ತಮಿಳು ಸಿನಿಮಾ ಎಂದು ಹೇಳಿದರು. ತಮಿಳು ಸಿನಿಮಾ ಎಂದಿದ್ದಕ್ಕೆ ತೆಲುಗು ಮಂದಿ ಅಸಮಾಧಾನ ಹೊರಹಾಕುತ್ತಿದ್ದಾರೆ. 'ಅದು (RRR) ತಮಿಳು ಸಿನಿಮಾ. ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ತಮಿಳು ಎಲ್ಲವನ್ನೂ ಮಾಡುತ್ತದೆ. ನಮ್ಮ   ಅವೆಂಜರ್ಸ್‌ನಂತಿದೆ' ಎಂದು ಹೇಳಿದ್ದಾರೆ. 

ಪ್ರಿಯಾಂಕಾ ಮಾತಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಎಲ್ಲಾ ಗೌರವವನ್ನು ಕಳೆದುಕೊಂಡರಿ' ಎಂದು ಹೇಳಿದರು. ಮತ್ತೋರ್ವ ಕಾಮೆಂಟ್ ಮಾಡಿ, ಹೇಳುವ ಮೊದಲು ಸ್ವಲ್ಪವಾದರೂ ತಿಳಿದುಕೊಳ್ಳಬೇಕು. ಭಾರತೀಯ ಸಿನಿಮಾ ಅಂತನಾದ್ರೂ ಹೇಳಬಹುದಿತ್ತು' ಎಂದು ಹೇಳಿದ್ದಾರೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಪ್ರಿಯಾಂಕಾ ಚೋಪ್ರಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಕರಣ್ ಬ್ಯಾನ್ ಮಾಡಿದ್ದು ಎಲ್ಲರಿಗೂ ಗೊತ್ತು; ಭಾರತ ಬಿಟ್ಟ ಬಗ್ಗೆ ಪ್ರಿಯಾಂಕಾ ಮಾತಿಗೆ ಕಂಗನಾ ಪ್ರತಿಕ್ರಿಯೆ

ಆರ್ ಆರ್ ಆರ್ ಸಿನಿಮಾ ಬಗ್ಗೆ 

ರಾಜಮೌಳಿ ನಿರ್ದೇಶನದಲ್ಲಿ ಬಂದ ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರ್ ಆರ್ ಆರ್ ಸಿನಿಮಾಗೆ ಸಂಗೀತ ಸಂಯೊಜನೆ ಮಾಡಿದ ಎಂ ಎಂ ಕೀರವಾಣಿ ಮತ್ತು ಚಿತ್ರಾಸಾಹಿಗಿ ಚಂದ್ರಬೋಷ್ ಪ್ರತಿಷ್ಠಿತ ಆಸ್ಕರ್‌ಗೆ ಮುತ್ತಿಟ್ಟಿದ್ದಾರೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು.. ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಇನ್ನೂ ಸಿನಿಮಾದಲ್ಲಿ  ಬಾಲಿವುಡ್ ಸ್ಟಾರ್‌ಗಳಾದ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಸಾಲು ಸಿನಿಮಾ ಸೋತಾಗ ಭಯವಾಗಿತ್ತು, ಯಾಕಂದ್ರೆ ನಾನು ನೆಪೋ ಕಿಡ್ ಅಲ್ಲ; ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ಬಗ್ಗೆ ಪ್ರಿಯಾಂಕಾ ಹೇಳಿಕೆ 

ಇದೇ ಶೋನಲ್ಲಿ ಪ್ರಿಯಾಂಕಾ ಭಾರತ ಬಿಟ್ಟು ಯಾಕೆ ಬಂದೆ ಎಂದು ಬಹಿರಂಗಪಡಿಸಿದ್ದಾರೆ. 'ನಾನು ಇಂಡಸ್ಟ್ರಿಯಲ್ಲಿ (ಬಾಲಿವುಡ್) ಮೂಲೆಗೆ ತಳ್ಳಲ್ಪಟ್ಟಿದ್ದೆ, ನನ್ನನ್ನು ಯಾವುದೇ ಸಿನಿಮಾಗೆ ಆಯ್ಕೆ ಮಾಡುತ್ತಿರಲಿಲ್ಲ. ನಾನು ಬಾಲಿವುಡ್ ಜನರ ಜೊತೆ ಗೋಮಾಂಸ ತಿಂದಿದ್ದೇನೆ. ನನಗೆ ಆ ಆಟದಲ್ಲಿ ಆಡಲು ಇಷ್ಟವಿರಲ್ಲ. ಆ ರಾಜಕೀಯದಿಂದ ಬೇಸತ್ತಿದ್ದೆ ಮತ್ತು ನನಗೆ ಬ್ರೇಕ್ ಬೇಕಿತ್ತು' ಎಂದು ಬಹಿರಂಗ ಪಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?