Ileana D’Cruz: ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ: ಮಗುವಿನ ವಿಚಿತ್ರ ಹೆಸರಿನ ಬಗ್ಗೆ ತಲೆ ಕೆರೆದುಕೊಳ್ತಿರೋ ನೆಟ್ಟಿಗರು

Published : Aug 06, 2023, 09:15 AM ISTUpdated : Aug 07, 2023, 10:03 AM IST
Ileana D’Cruz: ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ: ಮಗುವಿನ ವಿಚಿತ್ರ ಹೆಸರಿನ ಬಗ್ಗೆ ತಲೆ ಕೆರೆದುಕೊಳ್ತಿರೋ ನೆಟ್ಟಿಗರು

ಸಾರಾಂಶ

ಆಗಸ್ಟ್‌ 1, 2023 ರಂದು ನಟಿ ಇಲಿಯಾನಾ ಡಿ'ಕ್ರೂಜ್‌ ಗಂಡು ಮಗುವಿಗೆ ಜನ್ಮ ನೀಡಿದ್ದು, ಶನಿವಾರ ರಾತ್ರಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ನವದೆಹಲಿ (ಆಗಸ್ಟ್‌ 6, 2023): ದಕ್ಷಿಣ ಭಾರತದ ಖ್ಯಾತ ನಟಿ ಇಲಿಯಾನಾ ಡಿ'ಕ್ರೂಜ್ ಮದ್ವೆಯಾಗದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ನಟಿ ಇಲಿಯಾನಾ ಮಗುವನ್ನು ಸ್ವಾಗತಿಸಿದ್ದು, ಹಲವು ಸೆಲೆಬ್ರಿಟಿಗಳು ಹಾಗೂ ನಟಿಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 

ಇಲಿಯಾನಾ ಡಿ'ಕ್ರೂಜ್ (Ileana D’Cruz) ಗಂಡು ಮಗುವನ್ನು ಸ್ವಾಗತಿಸಿದ್ದು, ಶನಿವಾರ ರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಗಸ್ಟ್‌ 1, 2023 ರಂದು ಮಗುವಿಗೆ ಜನ್ಮವಿತ್ತ ನಟಿ, ಗಂಡು ಮಗುವಿಗೆ ಕೋವಾ ಫೀನಿಕ್ಸ್ ಡೋಲಾನ್ ಎಂದು ಹೆಸರಿಸಿದ್ದಾರೆ. ಇದರ ಅರ್ಥ ಏನು ಅಂತೀರಾ..?

ಇದನ್ನು ಓದಿ: Ileana D'Cruz ಬಾಯ್‌ಫ್ರೆಂಡ್‌ ಫೋಟೋ ರಿವೀಲ್​? ಕತ್ರಿನಾಳ ಅಣ್ಣನಾ ಅಂದೋರಿಗೆ ಸಿಕ್ತು ಉತ್ತರ!

ಕೋವಾ ಎಂದರೆ 'ಯೋಧ' ಅಥವಾ 'ಶೌರ್ಯಶಾಲಿ' ಎಂದರ್ಥ. ಹಾಸಿಗೆಯ ಮೇಲೆ ಮಲಗಿರುವ ಮಗುವಿನ ಫೋಟೋವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು,  ''ಕೋವಾ ಫೀನಿಕ್ಸ್ ಡೋಲಾವನ್ನು ಪರಿಚಯಿಸಲಾಗುತ್ತಿದೆ. ಆಗಸ್ಟ್ 1, 2023 ರಂದು ಜನಿಸಿದೆ’’ ಎಂದು ಫೋಟೋದಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ, "ನಮ್ಮ ಪ್ರೀತಿಯ ಹುಡುಗನನ್ನು ಜಗತ್ತಿಗೆ (ಕಪ್ಪು ಹಾರ್ಟ್‌ ಎಮೋಜಿ ಬರೆದುಕೊಂಡಿದ್ದು) ಸ್ವಾಗತಿಸಲು ನಾವು ಎಷ್ಟು ಸಂತೋಷವಾಗಿದ್ದೇವೆ ಎಂಬುದನ್ನು ವಿವರಿಸಲು ಯಾವುದೇ ಪದಗಳಿಲ್ಲ. ತುಂಬಿದ ಹೃದಯ (ಸ್ಪಾರ್ಕಲ್ಸ್‌ ಹಾಗೂ ಇತರೆ ಎಮೋಜಿಗಳನ್ನು ಬರೆದುಕೊಂಡಿದ್ದಾರೆ)’’ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯಾದ ಬಳಿಕ ಮೊದಲ ಬಾರಿಗೆ ಬಾಯ್‌ಫ್ರೆಂಡ್ ಫೋಟೋ ಹಂಚಿಕೊಂಡ ಇಲಿಯಾನಾ: ಯಾರಾತ?

ಇಲಿಯಾನಾಗೆ ಸೆಲೆಬ್ರಿಟಿಗಳಿಂದ ಶುಭಾಶಯಗಳ ಸುರಿಮಳೆ
ಇಲಿಯಾನಾ ಮೊದಲ ಮಗುವನ್ನು ಸಾಮಾಜಿಕ ಜಾಲತಾಣದ ಮೂಲಕ ಸ್ವಾಗತಿಸಿದ್ದು, ಈ ಪೋಸ್ಟ್‌ಗೆ ನರ್ಗೀಸ್ ಫಕ್ರಿ ಪ್ರತಿಕ್ರಿಯೆ ನೀಡಿದ್ದಾರೆ. OMG ಅಭಿನಂದನೆಗಳು !!!!!! ದೇವರು ಆಶೀರ್ವದಿಸುತ್ತಾನೆ ಎಂದು ಪೋಸ್ಟ್‌ ಮಾಡಿದ್ದಾರೆ. "ಲಿಯೋ ಬಾಯ್" ಎಂದೂ ಬರೆದಿದ್ದಾರೆ. ಅಲ್ಲದೆ, ಅಥಿಯಾ ಶೆಟ್ಟಿ, ಹುಮಾ ಖುರೇಷಿ ಮತ್ತು ಅರ್ಜುನ್ ಕಪೂರ್ ಅವರು ಸಹ ರೆಡ್‌ ಹಾರ್ಟ್‌, ಮೇಲೆತ್ತಿದ ಕೈಗಳು ಮತ್ತು ಅಪ್ಪುಗೆಯ ಮುಖದ ಎಮೋಜಿಗಳನ್ನು ಪೋಸ್ಟ್ ಮಾಡಿ ಶುಭ ಕೋರಿದ್ದಾರೆ. ಮಾರಿಯಾ ಗೊರೆಟ್ಟಿ ಸಹ  "ಒಂದು ಪುಟ್ಟ ಮರಿ, ಬಹಳಷ್ಟು ಮತ್ತು ಬಹಳಷ್ಟು ಪ್ರೀತಿ" ಎಂದು ಪ್ರತಿಕ್ರಿಯಿಸಿದ್ದಾರೆ. ಸೋಫಿ ಚೌಧರಿ ಸಹ, "OMG ಅಭಿನಂದನೆಗಳು ಇಲಿಯಾನಾ! ಸೋ ಹ್ಯಾಪಿ ಫಾರ್‌ ಯೂ ಗಯ್ಸ್‌. ದೇವರು ನಿಮ್ಮ ಹುಡುಗನನ್ನು ಆಶೀರ್ವದಿಸಲಿ’’ ಎಂದೂ ಪೋಸ್ಟ್‌ ಮಾಡಿದ್ದಾರೆ.

ಇಲಿಯಾನಾ ಬಾಯ್ ಫ್ರೆಂಡ್ / ಪತಿ ಯಾರು..
ಮೊದಲಿನಿಂದಲೂ ಇಲಿಯಾನಾ ಡಿ’ಕ್ರೂಜ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹಂಚಿಕೊಳ್ಳುವುದಿಲ್ಲ. ಆದರೆ, ಇತ್ತೀಚೆಗಷ್ಟೇ ಇಲಿಯಾನಾ ತಮ್ಮ ಬಾಯ್‌ಫ್ರೆಂಡ್‌ನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. ತನ್ನ Instagram ಸ್ಟೋರೀಸ್‌ನಲ್ಲಿ ಫೋಟೋ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದು, ಮತ್ತು "ಡೇಟ್ ನೈಟ್" ಎಂದು ಬರೆದುಕೊಂಡಿದ್ದರು. ಹಾಗೂ, ಗರ್ಭಿಣಿಯಾಗಿದ್ದಾಗಲೂ, ಇಲಿಯಾನಾ ಆಗಾಗ್ಗೆ ತನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಳು. ಇಲಿಯಾನಾ ಬಾಯ್‌ಫ್ರೆಂಡ್‌ ಹೆಸರು ಮೈಕೆಲ್‌ ಡೋಲಾನ್‌ ಆಗಿದ್ದು, ಇವರು ಈ ವರ್ಷ ಮೇ 13 ರಂದು ಮದ್ವೆಯಾಗಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಶೇರ್ ಮಾಡಿದ ಇಲಿಯಾನಾ; ಮಗುವಿನ ತಂದೆ ಯಾರೆಂದು ಇನ್ನೂ ರಿವೀಲ್ ಮಾಡದ ನಟಿ

ಇದನ್ನೂ ಓದಿ: ಬೇಬಿ ಬಂಪ್ ತೋರಿಸುತ್ತಾ ಡ್ರೈವ್ ಹೊರಟ ನಟಿ ಇಲಿಯಾನಾ; ವಿಡಿಯೋ ಶೇರ್ ಮಾಡಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Victory Venkatesh ಕಟೌಟ್ ನೋಡಿ ಬೆಚ್ಚಿಬಿದ್ದಿದ್ದ ಮೆಗಾಸ್ಟಾರ್ ಚಿರಂಜೀವಿ: ಆ ಕಥೆ ನಿಮಗೆ ಗೊತ್ತಾ?
Niharika Konidela: ಎರಡನೇ ಮದುವೆ ಬಗ್ಗೆ ಮೆಗಾ ಡಾಟರ್ ಸ್ಪಷ್ಟನೆ: ಟ್ರೋಲಿಗರಿಗೆ ಕೊಟ್ರೂ ಖಡಕ್ ಉತ್ತರ