ಮತ್ತೆ ಸ್ಲಿಮ್ ಆದ ಇಲಿಯಾನ ವರ್ಕ್ಔಟ್ ಚಿತ್ರಗಳು ಬಿಸಿ ದೋಸೆ!

Suvarna News   | Asianet News
Published : Jul 08, 2020, 04:32 PM IST
ಮತ್ತೆ ಸ್ಲಿಮ್ ಆದ ಇಲಿಯಾನ ವರ್ಕ್ಔಟ್ ಚಿತ್ರಗಳು ಬಿಸಿ ದೋಸೆ!

ಸಾರಾಂಶ

ದಕ್ಷಿಣ ಭಾರತದ ಹಾಗೂ ಬಾಲಿವುಡ್‌ನ ಬಲು ಬೇಡಿಕೆಯ ನಟಿ ಇಲಿಯಾನ ಡಿಕ್ರುಜ್‌, ಮಧ್ಯೆ ಕೊಂಚ ದಪ್ಪವಾಗಿದ್ದರು. ಈಗ ಮತ್ತೆ ತೂಕ ಇಳಿಸಿಕೊಂಡ ಇಲಿಯಾನಳ ಬಿಕಿನಿ ಚಿತ್ರಗಳು ಇನ್‌ಸ್ಟಗ್ರಾಂಗೆ ಬೆಂಕಿ ಹಚ್ಚಿವೆ.  

ಈ ಮಧ್ಯೆ ಕೆಲವು ದಿನಗಳ ಹಿಂದೆ ಬಲು ಬೇಡಿಕೆಯ ನಟಿ ಇಲಿಯಾನ ಡಿಕ್ರುಜ್‌ ಅವರು ದಪ್ಪಗಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದು ನಿಜ ಎನ್ನುವಂತೆ ಇಲಿಯಾನ ತಮ್ಮ ಸೋಶಿಯಲ್‌ ಸೈಟ್‌ ಇನ್‌ಸ್ಟಗ್ರಾಮ್‌ ಅಕೌಂಟ್‌ನಿಂದ ದೂರವಾಗಿದ್ದರು. ತಮ್ಮ ಯಾವುದೇ ಹೊಸ ಫೋಟೋ ಹಾಕುತ್ತಿರಲಿಲ್ಲ. ಮಧ್ಯೆ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡಾಗ ಒಮ್ಮೆ ಭಾವುಕಗೊಂಡು ಒಂದು ಪತ್ರವನ್ನು ಬರೆದು ಪೋಸ್ಟ್‌ ಮಾಡಿದ್ದರು. ಇಲಿಯಾನಗೆ ಇದೇ ಅವಧಿಯಲ್ಲಿ ಯಾವುದೋ ಗಂಭೀರ ಕಾಯಿಲೆಯೂ ಆಗಿತ್ತು ಎಂಬ ಸುದ್ದಿಯೂ ಬಂತು. 

ಸದ್ಯ ಇಲಿಯಾನ ಇನ್‌ಸ್ಟಗ್ರಾಂಗೆ ಮರಳಿದ್ದಾರೆ. ಈ ಬಾರಿ ತಮ್ಮ ಫಳಫಳ ಹೊಳೆಯುವ ತ್ವಚೆಯ ಹಾಗೂ ಸ್ಲಿಮ್‌ ಆದ ದೇಹವನ್ನು ಪ್ರದರ್ಶಿಸಲು ಮರೆತಿಲ್ಲ. ಜೊತೆಗೆ ತಾವು ವರ್ಕ್ಔಟ್‌ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಅಪ್‌ಲೋಡ್‌ ಮಾಡಿದ್ದಾರೆ. ಈಕೆಯ ಚಿತ್ರ ಹಾಗೂ ವಿಡಿಯೋಗೆ ಲಕ್ಷಾಂತರ ವ್ಯೂಗಳು ಹಾಗೂ ಲೈಕ್‌ಗಳು ಬಂದಿವೆ. ಇಲಿಯಾನಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇಲಿಯಾನ ಅವರ ಹೊಕ್ಕುಳ ಭಾಗ ಎಲ್ಲರ ಆಕರ್ಷಣೆಯ ಕೇಂದ್ರ. ಇಲಿಯಾನಳ ಸೊಂಟ ಭಾಗ ಅಗಲವಾಗಿದ್ದು ಹೊಕ್ಕುಳ ಆಳವಾದ ಸುಳಿಯಂತೆ ಎಲ್ಲರನ್ನೂ ಸೆಳೆಯುತ್ತದೆ. ಇದರಿಂದಲೇ ಆಕೆ ಲಕ್ಷಾಂತರ ಅಭಿಮಾನಿಗಳ ಹಾಟ್‌ ಫೇವರಿಟ್‌ ಆಗಿದ್ದಾರೆ.

ಈ ನಡುವೆ ಅವರು ಹಲವಾರು ಸಿನಿಮಾ ಆಫರ್‌ಗಳನ್ನು ರಿಜೆಕ್ಟ್‌ ಮಾಡಿದ್ದರು. ಸ್ಲಿಂ ಫಿಗರ್ ಆಗಿದ್ದ ಇಲಿಯಾನಾ ಇದ್ದಕ್ಕಿದಂತೆ ದಪ್ಪ ಆಗಿರುವುದರಿಂದಲೇ ಸಿನಿಮಾ ಆಫರ್‌ಗಳನ್ನು ರಿಜೆಕ್ಟ್‌ ಮಾಡುತ್ತಿದ್ದಾರೆ ಎಂಬ ಆಫರ್‌ ಬಂದಿತ್ತು. ದಪ್ಪ ಆಗಿರುವುದರಿಂದ ಆಕೆಯ ದಪ್ಪಕ್ಕೆ ತಕ್ಕಂತ ಪಾತ್ರಗಳನ್ನು ನಿರ್ದೇಶಕರು ಆಫರ್‌ ಮಾಡಿದ್ದರು. ಆದರೆ ಅಂಥ ಆಫರ್‌ಗಳನ್ನು ಇಲಿಯಾನ ತಿರಸ್ಕರಿಸಿದ್ದರು. "ದಪ್ಪ ಆಗಿದ್ದೇನೆ ಎಂದ ಮಾತ್ರಕ್ಕೆ ನನ್ನನ್ನು ಎರಡನೇ ದರ್ಜೆಯ ಪಾತ್ರಗಳಿಗೆ ಬಳಸಿಕೊಳ್ಳಬಹುದು ಅಥವಾ ನಾನು ಅಂತದಕ್ಕೆ ಒಪ್ಪುತ್ತೇನೆ ಎಂದು ಅರ್ಥವಲ್ಲ. ನಾನು ನನಗೆ ಸರಿಯಾದ ನಾಯಕಿ ಪಾತ್ರ ಸಿಗುವವರೆಗೆ ಬೇಕಾದರೆ ಕಾಯುತ್ತೇನೆ. ಇಷ್ಟವಾಗದ ಪಾತ್ರಗಳನ್ನು ಮಾಡುವುದಿಲ್ಲ'' ಎಂದು ಖಡಾತುಂಡವಾಗಿ ಹೇಳಿದ್ದರು.

ಇತ್ತೀಚೆಗೆ ನಟ ನಾಗಾರ್ಜುನ ಜೊತೆಗೆ ಒಂದು ಫಿಲಂನಲ್ಲಿ ಇಲಿಯಾನ‌ ನಟಿಸುತ್ತಿದ್ದಾರೆ.  ಈ ಫಿಲಂ ಸೆಟ್‌ ಏರುವಷ್ಟರಲ್ಲೇ ಕೊರೋನಾದಿಂದಾಗಿ ಅದರ ಶೂಟಿಂಗ್‌ ನಿಂತುಹೋಗಿದೆ. ನಾಗಾರ್ಜುನ ಜೊತೆ ನಟಿಸಬೇಕು ಎಂಬುದು ಇಲಿಯಾನಾರ ಬಹುದಿನದ ಕನಸು. ಈಗ ನನಸಾಗುತ್ತಿದೆ. 

 'ಆ' ಪಾತ್ರಗಳೇ ಬೇಕು; ದಪ್ಪಗಾದರೇನು ನಾನು ಮಾಡಲು ರೆಡಿ ಎಂದ ನಟಿ! 

ಇಲಿಯಾನಾಳಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವೂ ಇದೆ. ಇದು ಇತರ ಗಂಭೀರ ಸಮಸ್ಯೆಗಳು ಇರುವ ಸೂಚನೆಯೂ ಇರಬಹುದು. ಅಥವಾ ಬದುಕನ್ನು ತುಂಬ ಒತ್ತಡಯುಕ್ತವಾಗಿ ಎದುರಿಸುತ್ತಿರುವುದರಿಂದ ಹಾಗೆ ಆಗುತ್ತಿರಲೂ ಬಹುದು. ನಿದ್ದೆಯಲ್ಲಿ ನಡೆದು ಬಿದ್ದು ತರಚಿ ಗಾಯ ಮಾಡಿಕೊಂಡದ್ದೂ ಉಂಟು. ಆದರೆ ನಿದ್ದೆಯಲ್ಲಿ ನಡೆಯುವವರು ಸಾಮಾನ್ಯವಾಗಿ ತಮಗೆ ಬಳಕೆಯಲ್ಲಿರುವ ಮನೆಯಲ್ಲೇ ಓಡಾಡಿ ಕೆಲವು ಕೆಲಸಗಳನ್ನು ಮಾಡಿ ಹಾಗೇ ಮಲಗಿಬಿಡುತ್ತಾರೆ. ಬೆಳಗ್ಗೆ ಎದ್ದು ನೋಡಿದರೆ ಅದರ ನೆನಪೂ ಅವರಿಗೆ ಇರುವುದಿಲ್ಲ. ಒತ್ತಡ, ಚಿಂತೆ, ಅತಿಯಾದ ಕೆಲಸ, ಮೆದುಳಿಗೆ ರೆಸ್ಟ್‌ ಕೊಡದೆ ಇರುವುದು ಮುಂತಾದವುಗಳು ಇದಕ್ಕೆ ಕಾರಣ. 

ಶಾಕಿಂಗ್‌: ಇಲಿಯಾನಾ 6 ಪುರುಷರಿಂದ ಒಮ್ಮೆ ಕಿರುಕುಳಕ್ಕೊಳಗಾಗಿದ್ರಂತೆ! 

ಕಳೆದ ವರ್ಷ ಇಲಿಯಾನ ತಮ್ಮ ಲಿವ್‌ ಇನ್‌ ಬಾಯ್‌ಫ್ರೆಂಡ್‌ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದರು. ವಿದೇಶಿ ಫೋಟೋಗ್ರಾಫರ್‌, ಆಂಡ್ರ್ಯೂ ಎಂಬಾತನೊಂದಿಗೆ ಅವರ ಬಹುದಿನಗಳ ಸಾಂಗತ್ಯ ಇತ್ತು. ಇನ್‌ಸ್ಟಗ್ರಾಂನಲ್ಲಿ ಆತನ ಜೊತೆಗಿನ ಫೋಟೋ ಕೂಡಾ ಹಾಕಿ ಬೆಸ್ಟ್‌ ಹಬ್ಬಿ ಎವರ್‌ ಎಂದೂ ಬರೆದುಕೊಂಡಿದ್ದರು. ಆದರೆ ಬ್ರೇಕಪ್‌ ಆದ ಬಳಿಕ, ಆ ಫೋಟೋಗಳನ್ನು ಇಲಿಯಾನ ಅಳಿಸಿ ಹಾಕಿದ್ದಾರೆ.

ಸೊಂಟದ ಸುಂದರಿ ಬಿಕಿನಿ ಫೋಟೋ ವೈರಲ್! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!