ಹೊಟ್ಟೆಯಲ್ಲಿ ಮಗು ಡಾನ್ಸ್ ಪಾರ್ಟಿ ಮಾಡ್ತಿದೆ, ನಿದ್ದೆ ಕಷ್ಟ; ಗರ್ಭಿಣಿ ಇಲಿಯಾನಾ

By Shruthi KrishnaFirst Published May 5, 2023, 4:13 PM IST
Highlights

ಹೊಟ್ಟೆಯಲ್ಲಿ ಮಗು ಡಾನ್ಸ್ ಪಾರ್ಟಿ ಮಾಡ್ತಿದೆ, ನಿದ್ದೆ ಕಷ್ಟವಾಗುತ್ತಿದೆ ಎಂದು ಗರ್ಭಿಣಿ ಇಲಿಯಾನಾ ಹೇಳಿದ್ದಾರೆ.  

ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ತಾಯಿಯಾಗುತ್ತಿರುವ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಹಂಚಿಕೊಳ್ಳುವ ಮೂಲಕ ಇಲಿಯಾನಾ ಅಚ್ಚರಿ ಮೂಡಿಸಿದ್ದರು.  ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದ ಇಲಿಯಾನಾ ಹೆಚ್ಚಾಗಿ ಹಾಟ್ ಫೋಟೋ ಶೂಟ್ ಮೂಲಕ ಮಿಂಚುತ್ತಿದ್ದರು. ಇದೀಗ ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಇಲಿಯಾ. ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುವ ಮೂಲಕ ಗರ್ಭಿಣಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. 

ಸದ್ಯ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನಾ ಹೊಟ್ಟೆಯಲ್ಲಿರುವ ಮಗು ನಿದ್ದೆ ಮಾಡಲು ಬಿಡುವುದಿಲ್ಲ ಡಾನ್ಸ್ ಪಾರ್ಟಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಇಲಿಯಾನಾ ಶೇರ್ ಮಾಡಿರುವ ಫೋಟೋದಲ್ಲಿ, 'ಸ್ವಲ್ಪ ನಿದ್ರೆ ನಿದ್ರೆ ಮಾಡಲು ಬಯಸಿದಾಗ ಮಗು ಹೊಟ್ಟೆಯಲ್ಲಿ ಡಾನ್ಸ್ ಪಾರ್ಟಿ ಮಾಡಲು ನಿರ್ಧರಿಸುತ್ತೆ' ಎಂದು ಹೇಳಿದ್ದಾರೆ. ಮತ್ತೊಂದು ಫೋಟೋ ಶೇರ್ ಮಾಡಿ ಒಂದಿಷ್ಟು ತಿನಿಸಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ 'ನಮಗೆ ಸ್ವಲ್ಪ ನಿದ್ರೆ ಸಿಕ್ಕಿತು' ಎಂದು ಹೇಳಿದ್ದಾರೆ. 

Latest Videos

ಮನೆಯಲ್ಲಿಯೇ ಮಾಡುವ ರುಚಿಕರವಾದ ತಿನಿಸುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಇಲಿಯಾನಾ. ಮೃದುವಾದ ಬ್ರೆಡ್ ಹೇಗೆ ತಯಾರಿಸುವುದು ಎಂಬುದರ ಕುರಿತು ಚಿಕ್ಕ ತುಣುಕು ಶೇರ್ ಮಾಡಿದ್ದಾರೆ. ಮನೆಯಲ್ಲಿ ಇಲಿಯಾನಾ ತನಗಿಷ್ಟಗರವಾದ ತಿನಿಸುಗಳನ್ನು ಮಾಡಿಸಿಕೊಂಡು ತಿನ್ನುತ್ತಿದ್ದಾರೆ. ಈ ಮೂಲಕ ಗರ್ಭಿಣಿ ಬಯಕೆ ಈಡೇರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಇಲಿಯಾ ಬ್ಲಾಕ್ ಫಾರೆಸ್ಟ್ ಕೇಕ್ ಮಾಡಿಸಿಕೊಂಡು ತಿಂದಿದ್ದರು. ಇಲಿಯಾನಾ ಸಹೋದರಿ ಬ್ಲಾಕ್ ಫಾರೆಸ್ಟ್ ಕೇಕ್ ಮಾಡಿ ತಿನಿಸಿದ್ದರು.  

ಗರ್ಭಿಣಿ ಇಲಿಯಾನಾ ಬಯಕೆ ತೀರಿಸಿದ ಸಹೋದರಿ; ಫೋಟೋ ಮೂಲಕ ಸಂತಸ ವ್ಯಕ್ತಪಡಿಸಿದ ನಟಿ

ಅಂದಹಾಗೆ ಇಲಿಯಾನಾ ಯಾರನ್ನು ಮದುವೆಯಾಗಿದ್ದಾರೆ ಅಥವಾ ಯಾರ ಜೊತೆ ಸಂಬಂಧದಲ್ಲಿದ್ದಾರೆ, ಮಗುವಿನ ತಂದೆಯಾರು ಎನ್ನುವ ಬಗ್ಗೆ ಬಹಿರಂಗ ಪಡಿಸಿಲಿಲ್ಲ. ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲೂ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. 

Ileana D'Cruz: ಮದ್ವೆ ಆಗದೆ ಪ್ರೆಗ್ನೆಂಟ್ ಆದ ಇಲಿಯಾನಾ; ಮಗಳ ನಿರ್ಧಾರಕ್ಕೆ ತಾಯಿಯ ರಿಯಾಕ್ಷನ್ ಹೀಗಿದೆ

ಗರ್ಭಿಣಿ ಎಂದು ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದ ಇಲಿಯಾ

ತಾಯಿ ಆಗುತ್ತಿರುವ ಸಂತಸದ ವಿಚಾರವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶಾಕ್ ನೀಡಿದ್ದರು. ಇಲಿಯಾನಾ ಎರಡು ಪೋಟೋ ಶೇರ್ ಮಾಡಿ, ಒಂದು ಫೋಟೋದಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಹಂಚಿಕೊಂಡಿದ್ದರು ಮತ್ತೊಂದು ಫೋಟೋದಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಫೋಟೋ ಹಂಚಿಕೊಂಡಿದ್ದರು. ಜೊತೆಗೆ 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದರು.
 
 

click me!