ನಾಗ ಚೈತನ್ಯ ಮತ್ತು ಸಮಂತಾ ಅವರು ದೂರವಾದ ಮೇಲೆ ನಟನಿಗೆ ಹೊಸ ನಟಿ ಜೊತೆ ಕ್ರಶ್ ಆಗಿದೆಯಂತೆ. ಯಾರೀಕೆ?
ತಾರಾ ಜೋಡಿಗಳು ಸಂಬಂಧದಲ್ಲಿದ್ದ ಎಷ್ಟು ಸುದ್ದಿಯಾಗುತ್ತದೆಯೋ, ಅವರ ವಿಚ್ಛೇದನ ಪಡೆದರೆ ಅವರ ಮೇಲೆ ಇನ್ನೂ ಹೆಚ್ಚಿಗೆ ಕಣ್ಣು ನೆಟ್ಟಿರುತ್ತದೆ. ಅಂಥ ಜೋಡಿಗಳಲ್ಲಿ ಒಂದು ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್ ಪ್ರಭು ಜೋಡಿ. ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಈ ಜೋಡಿ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ ವಿಚ್ಛೇದನ ಘೋಷಿಸಿದ್ದರು. ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಇದಾಗಿ ಮೂರು ವರ್ಷ ಗತಿಸಿದರೂ ಜೋಡಿಯ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.
ಸಮಂತಾ ಅವರಿಂದ ದೂರವಾದ ಮೇಲೆ ಡೇಟಿಂಗ್ (Dating) ವಿಚಾರಕ್ಕೆ ನಾಗಚೈತನ್ಯ ಸುದ್ದಿಯಾಗುತ್ತಿದ್ದಾರೆ. ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಇಬ್ಬರೂ ಲಂಡನ್ ಹೋಟೆಲ್ ಒಂದರಲ್ಲಿ ಸಿಕ್ಕಿ ಕೂಡ ಬಿದ್ದಿದ್ದರು. ಆದರೆ ಕುತೂಹಲದ ಸಂಗತಿ ಎಂದರೆ ತಮ್ಮ ಕ್ರಶ್ ಹೆಸರನ್ನು ನಾಗಚೈತನ್ಯ ಬದಲಾಯಿಸಿದ್ದಾರೆ. ನಿಮ್ಮ ಕ್ರಶ್ ಯಾರು ಎಂದು ಕೇಳಿದ ಪ್ರಶ್ನೆಗೆ ಎಲ್ಲರ ಊಹೆಯನ್ನು ಮೀರಿದ ಉತ್ತರವನ್ನು ನಾಗಚೈತನ್ಯ ನೀಡಿದ್ದಾರೆ. ಸದ್ಯ ನಾಗ ಚೈತನ್ಯ ತಮ್ಮ ಸಿನಿ ಕೆರಿಯರ್ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದರೂ ಇವರ ಡೇಟಿಂಗ್, ಕ್ರಶ್ ಸುದ್ದಿ ಮಾತ್ರ ಸದ್ದು ಮಾಡುತ್ತಲೇ ಇದೆ.
ಸಮಂತಾರಿಂದ ದೂರವಾದ್ಮೇಲೆ KISS ಕೊಟ್ಟವರೆಷ್ಟು? ನಾಗಚೈತನ್ಯ ಬಾಯಿಬಿಟ್ಟ ರಹಸ್ಯ
ಅವರು ಹೋದಲ್ಲಿ, ಬಂದಲ್ಲಿ ಮದುವೆ, ಕ್ರಷ್, ಡೇಟಿಂಗ್ ವಿಚಾರವಾಗಿ ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಅದೇ ರೀತಿ ನಿಮ್ಮ ಸೀಕ್ರೆಟ್ ಕ್ರಶ್ ಯಾರು ಎಂದು ಕೇಳಿದಾಗ ಹಲವರು ಶೋಭಿತಾ ಹೆಸರು ಹೇಳಬಹುದು ಎಂದುಕೊಂಡಿದ್ದರು. ಆದರೆ ನಾಗಚೈತನ್ಯ ಅವರು ಎಲ್ಲರ ಊಹೆಯನ್ನು ಮೀರಿದ ಉತ್ತರ ನೀಡಿದ್ದಾರೆ. ಅವರು ‘ನಾನು ಈಚೆಗೆ ಬ್ಯಾಬಿಲೋನ್’ ದಇಂಗ್ಲಿಷ್ ಸಿನಿಮಾ ನೋಡಿದೆ. ನಟಿ ಮಾರ್ಗಾಟ್ ರಾಬಿ (Margot Robbie) ಈ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಆಕೆಯ ಅಭಿನಯ ನನಗೆ ತುಂಬಾ ಇಷ್ಟವಾಗಿದ್ದು, ಇದೀಗ ಆಕೆಯೇ ನನ್ನ ಸೀಕ್ರೇಟ್ ಕ್ರಶ್‘ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಂದು ಬಿಸಿಬಿಸಿ ಚರ್ಚೆಗೆ ದಾರಿಮಾಡಿಕೊಟ್ಟಿದ್ದಾರೆ ನಟ ನಾಗ ಚೈತನ್ಯ.
ಈಚೆಗಷ್ಟೇ ಅವರಿಗೆ ಕಿಸ್ ಬಗ್ಗೆಯೂ ಪ್ರಶ್ನಿಸಲಾಗಿತ್ತು. ನೀವೂ ಎಷ್ಟು ಜನರಿಗೆ ಕಿಸ್ ಮಾಡಿದ್ದೀರಿ ಎಂಬ ಪ್ರಶ್ನೆಗೆ ನಾಗಚೈತನ್ಯ ಕೌಂಟ್ ಮಾಡುವಂತೆ ನಟಿಸಿ, 'ಅಬ್ಬಾ ನನಗೆ ಗೊತ್ತಿಲ್ಲಪ್ಪ. ನಾನು ಎಣಿಕೆ ಮಾಡಿಲ್ಲ' ಎನ್ನುವ ಮೂಲಕ ಕೌಂಟ್ಲೆಸ್ ಎಂದು ನಕ್ಕಿದ್ದಾರೆ. ಅರ್ಥಾತ್ ಲೆಕ್ಕವಿಲ್ಲದಷ್ಟು ಬಾರಿ ಅವರು ಕಿಸ್ (Kiss) ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!
ಇವರ ಕೆಲಸದ ವಿಚಾರಕ್ಕೆ ಬರುವುದಾದರೆ, ಥ್ಯಾಂಕ್ಸ್ ಚಿತ್ರದ ನಂತರ ನಾಗ ಚೈತನ್ಯ ಅವರ ಹೊಸ ಸಿನಿಮಾ ಕಸ್ಟಡಿ, ತೆರೆ ಮೇಲೆ ಬರಲು ರೆಡಿಯಾಗಿದೆ. ವೆಂಕಟ್ ಪ್ರಭು ನಿರ್ದೇಶನದ ಈ ಸಿನಿಮಾ ಆಕ್ಷನ್ ಥ್ರಿಲ್ಲರ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಿನಿಮಾ ನಾಗ ಚೈತನ್ಯ ಅವರ ವೃತ್ತಿ ಜೀವನದಲ್ಲಿ 22ನೇ ಸಿನಿಮಾ ಆಗಲಿದೆ. ಈ ಚಿತ್ರದಲ್ಲಿ ನಾಗ ಚೈತನ್ಯಗೆ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರ ಇದೇ 12 ರಂದು ಸಿನಿಮಾ ಬಿಡುಗಡೆಯಾಗಲಿದೆ.