ಮೋದಿಯನ್ನು ಅಂಬೇಡ್ಕರ್ ಗೆ ಹೋಲಿಸಿ ಸಂಕಷ್ಟಕ್ಕೆ ಸಿಲುಕಿದ ಇಳಯರಾಜ; ಪರ-ವಿರೋಧ ಚರ್ಚೆ

By Shruiti G Krishna  |  First Published Apr 19, 2022, 12:08 PM IST

ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi ) ಹೊಗಳಿ ರನ್ನು ಅಂಬೇಡ್ಕರ್(Ambedkar) ಅವರಿಗೆ ಹೋಲಿಸಿದ ಸಂಗೀತ ಮಾಂತ್ರಿಕ ಇಳಯರಾಜ(Ilayaraja) ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇಳಯರಾಜ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.


ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi ) ಹೊಗಳಿ ಬಳಿಕ ಅಂಬೇಡ್ಕರ್(Ambedkar) ಅವರಿಗೆ ಹೋಲಿಸಿದ ಸಂಗೀತ ಮಾಂತ್ರಿಕ ಇಳಯರಾಜ(Ilayaraja) ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋದ ಚರ್ಚೆ ಪ್ರಾರಂಭವಾಗಿದೆ. ಅನೇಕರು ಇಳಯರಾಜ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದರೆ ಇನ್ನು ಕೆಲವರು ಸಂಗೀತ ಮಾಂತ್ರಿಕನ ಬೆಂಬಲಕ್ಕೆ ನಿಂತಿದ್ದಾರೆ. ದೆಹಲಿ ಮೂಲದ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಟಿಸಿದ ಅಂಬೇಡ್ಕರ್ ಮತ್ತು ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಷನ್ ಎಂಬ ಕೃತಿಗೆ ಮುನ್ನುಡಿ ಬರೆದಿರುವ ಇಳಯರಾಜ. 'ಈ ಇಬ್ಬರು ಗಮನಾರ್ಹ ವ್ಯಕ್ತಿಗಳು, ಇಬ್ಬರೂ ಬಡತನ ಮತ್ತು ಉಸಿರುಗಟ್ಟಿಸುವ ಸಮಾಜವನ್ನು ತುಂಬಾ ಹತ್ತಿರದಿಂದ ನೋಡಿದವರು. ಮತ್ತು ಅದರಿಂದ ಹೊರಬರಲು ಶ್ರಮಿಸಿದ್ದಾರೆ' ಎಂದಿದ್ದಾರೆ.

'ಸಾಮಾಜಿಕ ಪರಿವರ್ತನೆಗೆ ಕಾರಣವಾದ ಐತಿಹಾಸಿಕ ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನ, ತ್ರಿವಳಿ ತಲಾಕ್ ನಿಷೇಧ ಹೀಗೆ ಮಹಿಳಾ ಪರ ಕಾನೂನುಗಳು ಡಾ. ಬಿ ಆರ್ ಅಂಬೇಡ್ಕರ್ ಹೆಮ್ಮೆಪಡುವ ಸಂಗತಿಯಾಗಿವೆ' ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಸಂವಿದಾನ ಶಿಲ್ಪಿ ಅಂಬೇಡ್ಕರ್ ನಡುವೆ ಅನೇಕ ಸಾಮ್ಯತೆಗಳಿವೆ ಇಬ್ಬರು ಭಾರತಕ್ಕಾಗಿ ದೊಡ್ಡ ಕನಸು ಕಂಡವರು ಎಂದು ಹೇಳಿದ್ದಾರೆ.

Tap to resize

Latest Videos

ಇಳಯರಾಜ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಟ್ವೀಟ್ ಮಾಡಿ, ಇಳಯರಾಜ ಬಗ್ಗೆ ಅಪಾರ ಗೌರವವಿದೆ ಆದರೆ ಮೋದಿ ಅವರನ್ನು ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. 

Ilayaraja - Gangai Amaran: 13 ವರ್ಷಗಳ ನಂತರ ಮತ್ತೆ ಒಂದಾದ ಇಳಯರಾಜ-ಗಂಗೈ ಅಮರನ್!

ಇನ್ನು ಇಳಯರಾಜ ಹೇಳಿಕೆಯನ್ನು ತಮಿಳು ದಲಿತ ಪರ ಸಂಘಟನೆಗಳು ಮತ್ತು ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇನ್ನು ಮೋದಿ ಬಗ್ಗೆ ಇಳಯರಾಜ ಹೇಳಿಕೆಗೆ ತಮ್ಮ ಪಕ್ಷದ ಯಾವ ಸದಸ್ಯರೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆಡಳಿತರೂಢ ಡಿಎಂಕೆ ಸ್ಪಷ್ಟಪಡಿಸಿದೆ.

ಇನ್ನು ಇಳಯರಾಜ ಹೆಸರನ್ನು ಎಲ್ಲಾ ಉಲ್ಲೇಖ ಮಾಡದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬರೆದಿರುವ ಪತ್ರವನ್ನು ತಮಿಳು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪಾತ್ರದಲ್ಲಿ ನಡ್ಡಾ, ತಮಿಳುನಾಡಿನಲ್ಲಿ ಆಡಳಿತ ಪಕ್ಷದ ಜೊತೆ ಗುರುತಿಸಿಕೊಂಡಿರುವ ಶಕ್ತಿಗಳು ಟೀಕಾ ಪ್ರಹಾರ, ಚೀರಾಟ ಮತ್ತು ಸಂಗೀತ ದಿಗ್ಗಜರೊಬ್ಬರನ್ನು ಅವಮಾನಿಸುತ್ತಿದೆ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಭಿಪ್ರಾಯಗಳು ಭಿನ್ನವಾಗಿರಬಹುದು ಆದರೆ ಯಾಕೆ ಅವಮಾನಿಸಬೇಕು ಎಂದು ಕೇಳಿದ್ದಾರೆ.

ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

ಬಿಜೆಪಿ ನಾಯಕ ಕೇಂದ್ರ ಸಚಿವ ಎಲ್ ಮುರುಗನ್ ಅವರು ಇಳಯರಾಜ ಅವರ ಬೆಂಬಲಕ್ಕೆ ನಿಂತಿದ್ದು, ಮೋದಿಯನ್ನು ಹೊಗಳಲು ಇಳಯರಾಜ ಅವರಿಗೆ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ. ಇಳಯರಾಜ ಹೇಳಿಕೆ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದರು ಸಂಗೀತ ಮಾಂತ್ರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

 

click me!