ವಾರೆವ್ಹಾ, ಇದೆಂಥಾ ಲೈಫ್ ಸೀಕ್ರೆಟ್ ಹೇಳ್ಬಿಟ್ರು ಪ್ರಿಯಾಂಕಾ ಚೋಪ್ರಾ ಅಂತೀರಾ; ಒಮ್ಮೆ ನೋಡ್ರೀ!

By Shriram Bhat  |  First Published Jul 20, 2024, 7:36 PM IST

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವೀಡಿಯೋ ಒಂದರಲ್ಲಿನಟಿ ಪ್ರಿಯಾಂಕಾ ಚೋಪ್ರಾ ಆಡಿರುವ ಮಾತುಗಳನ್ನು ಕೇಳಿಸಿಕೊಂಡರೆ ಎಂಥವರೂ 'ವಾಹ್' ಎಂದು ಮೆಚ್ಚಲೇಬೇಕು. ಹಾಗಿದೆ ಮಾತು, ಹಾಗಿದೆ ಥಿಂಕಿಂಗ್. 


ಈಗ ಹಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅದೆಂಥ ಮಾತು ಹೇಳಿದ್ದಾರೆ ಗೊತ್ತಾ? ಒಂದು ದಶಕದ ಹಿಂದೆ ಬಾಲಿವುಡ್‌ ಚಿತ್ರರಂಗವನ್ನು ಸ್ಟಾರ್ ನಟಿಯಾಗಿ ಆಳಿದ್ದ ಪ್ರಿಯಾಂಕಾ ಚೋಪ್ರಾ, ಈಗ ಅಮೆರಿಕಾ ವಾಸಿ ಎಂಬುದಂತೂ ಬಹುತೇಕರಿಗೆ ಗೊತ್ತಿದೆ. ಅಮೆರಿಕಾದ ನಿಕ್ ಜೊನಾಸ್ ಎಂಬ ಪಾಪ್ ಸಿಂಗರ್ ಅವರನ್ನು ಪ್ರೀತಿಸಿ ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ, ಈಗ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿ.
 
ಆದರೆ, ನಟಿ ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಸಂದರ್ಶನಗಳಲ್ಲಿ ಮಾತನಾಡುತ್ತ ಹಲವು ಸಂಗತಿಗಳನ್ನು ಜಗತ್ತಿನೆದುರು ಹೇಳುತ್ತಾರೆ. ಅವುಗಳಲ್ಲಿ ಅನೇಕ ವಿಷಯಗಳು ಹಲವರ ಕಣ್ತೆರೆಸುತ್ತವೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವೀಡಿಯೋ ಒಂದರಲ್ಲಿನಟಿ ಪ್ರಿಯಾಂಕಾ ಚೋಪ್ರಾ ಆಡಿರುವ ಮಾತುಗಳನ್ನು ಕೇಳಿಸಿಕೊಂಡರೆ ಎಂಥವರೂ 'ವಾಹ್' ಎಂದು ಮೆಚ್ಚಲೇಬೇಕು. ಹಾಗಿದೆ ಮಾತು, ಹಾಗಿದೆ ಥಿಂಕಿಂಗ್. 

ನನ್ನರಸಿ ರಾಧೆ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗ!

Tap to resize

Latest Videos

undefined

ಹಾಗಿದ್ದರೆ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು ಗೊತ್ತಾ? 'ನಾನು ಚಿಕ್ಕವಳಿದ್ದಾಗ ಬಹಳಷ್ಟು ಅವಮಾನ ಎದುರಿಸಿದ್ದೇನೆ. ಕಪ್ಪಗೆ ಇದ್ದೇನೆ ಎಂದಿದ್ದಾರೆ, ದಪ್ಪಗೆ ಇದ್ದೇನೆ ಎಂದಿದ್ದಾರೆ. ಅಷ್ಟೇ ಅಲ್ಲ, ಮೂಗು ಸರಿ ಇಲ್ಲ, ಬಾಯಿ ಸರಿ ಇಲ್ಲ, ಅಷ್ಟೇ ಏಕೆ, ಮುಖದಲ್ಲಿ ಲಕ್ಷಣವೇ ಇಲ್ಲ ಎಂದೂ ಹೇಳಿ ಅವಮಾನ ಮಾಡಿದ್ದಾರೆ. ಅದಕ್ಕಾಗಿಯೇ ನಾನು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗಿದ್ದೂ ಇದೆ. ಸ್ವಲ್ಪ ಮುಖದ ಆಕಾರವನ್ನು, ತುಟಿಯ ಶೇಪ್‌ ಅನ್ನು ಬದಲಾಯಿಸಿದ್ದೂ ಆಗಿದೆ. 

ಸುತ್ತಲಿನವರ ಮಾತಿಗೆ ತಲೆ ಕೆಡಿಸಿಕೊಂಡು ಅತ್ತಿದ್ದೇನೆ. ಮನೆಯವರ ಮೇಲೆ ಕೋಪಿಸಿಕೊಂಡಿದ್ದೇನೆ. ನನ್ನ ಈ ವಿಚಿತ್ರ ಮುಖಕ್ಕೆ, ಕಪ್ಪು ಮೈ ಬಣ್ಣಕ್ಕೆ ನೀವೇ ಕಾರಣ ಎಂದು ಪೋಷಕರಿಗೆ ಹೇಳಿ ಕೋಪಿಸಿಕೊಂಡಿದ್ದೂ ಇದೆ. ಆಮೇಲೆ ಅದಕ್ಕಾಗಿ ಪಶ್ಚಾತ್ತಾಪವನ್ನೂ ಪಟ್ಟಿದ್ದೇನೆ. ಮನೆಯಿಂದ ಹೊರಗೆ ಹೋದರೆ ಅವಮಾನ ಎದುರಿಸಿ ಅಳುತ್ತಾ ಬಂದಿದ್ದೂ ಇದೆ. ಸಿನಿಮಾ ನಟಿಯಾಗಬೇಕೆಂದು ಆಡಿಶನ್‌ಗೆ ಹೋದಾಗ ಅಲ್ಲೂ ರಿಜೆಕ್ಟ್ ಆಗಿದ್ದೇನೆ, ಅಪಮಾನದಿಂದ ನೊಂದಿದ್ದೇನೆ. 

ಲಡ್ಡು ಬಂದು ಬಾಯಿಗೆ ಬಿದ್ದಿಲ್ಲ, ಸಿಕ್ಕಿರುವ ಹಾಲಿವುಡ್ ಚಾನ್ಸ್ ಹಿಂದೆ ನೂರಾರು ಕಥೆಗಳಿವೆ!

ಆದರೆ, ಇವತ್ತು ನಾನು ನನ್ನ ಜೀವನದ ಅನುಭವಗಳ ಮೂಲಕ ಕೆಲವು ಸತ್ಯಗಳನ್ನು ಕಂಡುಕೊಂಡಿದ್ದೇನೆ. ಅದನ್ನು ನಾನು ಎಲ್ಲರೊಂದಿಗೂ ಹಂಚಿಕೊಳ್ಳಲೇಬೇಕು. ನೀವು ಹೇಗೆ ಇದ್ದರೂ ಮೊದಲು ಒಪ್ಪಿಕೊಂಡು ಬಿಡಿ. ನಾನಿರುವುದೇ ಹೀಗೆ, ಇದನ್ನಿಟ್ಟುಕೊಂಡೇ ನಾನು ಬೆಳೆಯಬೇಕು, ಬದುಕಬೇಕು. ಜಗತ್ತಿನಲ್ಲಿ ಎಲ್ಲವೂ ನಾನು ಹೇಳಿದಂತೆ ನಡೆಯುವುದಿಲ್ಲ, ನಡೆಯಲೂ ಬಾರದು. ಏಕೆಂದರೆ, ಎಲ್ಲವೂ ನನ್ನಿಷ್ಟದಂತೆ ಆದರೆ ಉಳಿದವರ ಪಾಡೇನು?

ಬದುಕಿನಲ್ಲಿ, ಜೀವನದಲ್ಲಿ ಯಾವುದಕ್ಕೆ ತಲೆ ಕೆಡಿಸಿಕೊಳ್ಳಬೇಕು ಯಾವುದಕ್ಕೆ ತಲೆ ಕೆಡಿಸಿಕೊಳ್ಳಬಾರದು ಎಂಬ ಸ್ಪಷ್ಟತೆ ಎಲ್ಲರಲ್ಲೂ ಇರಲಿ. ಬದಲಾಗದು, ಬದಲಾಯಿಸಿಕೊಳ್ಳಲೂ ಆಗದು ಎಂಬ ಸಂಗತಿಗಳನ್ನು ಒಪ್ಪಿಕೊಂಡು ಬಿಡಿ. ಹಾಗೇ, ಕಾಲಕ್ಕೆ ತಕ್ಕಂತೆ ನಿಮ್ಮಲ್ಲಿ ಆಗುವ ಬದಲಾವಣೆಯನ್ನೂ ಒಪ್ಪಿಕೊಳ್ಳಿ. ಏಕೆಂದರೆ, ನಾವು ಹುಟ್ಟಿನಿಂದ ಸಾಯುವ ತನಕ ಒಂದೇ ತರಹ ಇರಲು ಸಾಧ್ಯವಿಲ್ಲ. ಬದಲಾವಣೆ ಅನಿವಾರ್ಯ, ಬದಲಾಗಿದ್ದನ್ನು, ಬದಲಾಗುವುದನ್ನು ಹಾಗೂ ಬದಲಿಸಲಾಗದ್ದನ್ನು ಎಲ್ಲವನ್ನೂ ಒಪ್ಪಿಕೊಂಡು ಮುನ್ನಡೆಯಿರಿ.

ನನ್ನದು ಸಿನಿಮಾ ಫೀಲ್ಡ್, ಅದರಂತೆ ಗೇಮ್ಸ್, ನಾಟಕಗಳು ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸರ್ಟಾನಿಟಿ ಕಡಿಮೆ. ಇಲ್ಲಿ 'ನಿಶ್ಚಿತತೆ' ಇಲ್ಲ. ಮುಂದಿನ ತಿಂಗಳು ನನಗೆ ಇಷ್ಟೇ ಸಂಬಳ ಬರುತ್ತೆ, ಇಷ್ಟೇ ಮೊತ್ತದ ಚೆಕ್ ನನ್ನ ಕೈ ಸೇರುತ್ತೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ. ಹೀಗಾಗಿ, ನಮ್ಮ ಜೀವನದ ಆದ್ಯತೆಯನ್ನು ಚೆನ್ನಾಗಿ ಅರಿತು ಖರ್ಚು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮುಂದೆ ನಮಗೆ ಸಂಪಾದನೆ ಇಲ್ಲದೇ ಹೋದರೂ ಬದುಕುವ ಅನಿವಾರ್ಯತೆ, ಅಗತ್ಯತೆ ಇರುತ್ತದೆ.

ಏನಾಗ್ತಿದೆ ಶಿವಾ.. ಮೋಡ ಕವಿದ ವಾತಾವರಣ, ಪ್ರಿಯಾಂಕಾ-ನಿಕ್ ದಾಂಪತ್ಯಕ್ಕೆ ಬಿತ್ತಾ ಕಾಕದೃಷ್ಟಿ? 

ಹೀಗಾಗಿ ಜೀವನದಲ್ಲಿ ಆದ್ಯತೆಗೆ ಮಾತ್ರ ಗಮನ ಕೊಡಬೇಕು, ಅನಾವಶ್ಯಕ ಖರ್ಚುವೆಚ್ಚ, ಅನಾವಶ್ಯಕ ಹೋಲಿಕೆ, ಚಿಂತೆಗೆ ಯಾವತ್ತೂ ಅವಕಾಶ ನೀಡಬಾರದು. ನಮ್ಮ ಇಷ್ಟದ ಪ್ರಕಾರ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ, ಮಾಡುವ ಕೆಲಸವನ್ನೇ ಪ್ರೀತಿಸುವುದನ್ನು ಕಲಿತುಕೊಳ್ಳಬೇಕು. ನೂರು ವರ್ಷ ಬದುಕಿದರೂ ಕೂಡ, ಬದುಕು ತುಂಬಾ ಕಡಿಮೆಯೆಂದೇ ಹೇಳಬೇಕು. ಸರಿಯಾಗಿ ಅರ್ಥ ಮಾಡಿಕೊಂಡರೆ ಬದುಕು ತುಂಬಾ ಸುಂದರ, ಸುಲಭ. ಅಪಾರ್ಥ ಮಾಡಿಕೊಂಡರೆ ಜೀವನ ಕಠಿಣ, ಕೆಟ್ಟದು ಎನಿಸುತ್ತದೆ ಅಷ್ಟೇ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

click me!