ಹೀರೋಗಳು ಅರ್ಧ ವಯಸ್ಸಿನ ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡುವಾಗ ನಾನ್ಯಾಕೆ ಕಿಡ್ಸ್ ಜೊತೆ ರೊಮ್ಯಾನ್ಸ್ ಮಾಡಬಾರದು ಎಂದಿದ್ದಾರೆ ನಟಿ ಭೂಮಿಕಾ ಚಾವ್ಲಾ.
ಬಾಲಿವುಡ್ ತಾರೆ ಭೂಮಿಕಾ ಚಾವ್ಲಾ (Bhumika Chawla), ಸಲ್ಮಾನ್ ಖಾನ್ ಜೊತೆ ನಟಿಸಿದ ತೇರೆ ನಾಮ್ ಚಿತ್ರ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಸಕ್ಸಸ್ ಬಳಿಕ ಭೂಮಿಕಾ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ನಟಿಸಿದ ಸಿನಿಮಾ ಜಬ್ ವಿ ಮೆಟ್’ ಸಿನಿಮಾಗೆ ನಟಿ ಭೂಮಿಕಾ ಸಹಿ ಹಾಕಿದ್ದರಂತೆ, ಆದ್ರೆ ಕಾರಣಾಂತರಿಂದ ಸಿನಿಮಾದಿಂದ ನಟಿ ಹೊರಗಿಳಿದ್ದಾರೆ. ಹೀಗೆ ಕೆಲವು ಸಿನಿಮಾಗಳು ಇವರನ್ನು ಪರೀಕ್ಷೆ ಮಾಡಿದ್ದು ಇದೆ. ಕೆಲ ಸಿನಿಮಾಗಳಲ್ಲಿ ಸೆಲೆಕ್ಟ್ ಆಗಿ ಕೊನೆಗೆ ಇವರನ್ನು ಕೈಬಿಟ್ಟಿರುವುದೂ ಇದೆ. ಅದಕ್ಕೆ ಉದಾಹರಣೆ ಮುನ್ನಾಭಾಯಿ ಎಂಬಿಬಿಎಸ್. ಬಾಲಿವುಡ್ ಸೂಪರ್ ಹಿಟ್ ಮೂವಿ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು, ನಾನು ಕೂಡ ಸಹಿ ಮಾಡಿದೆ. ಕೊನೆ ಕ್ಷಣದಲ್ಲಿ ಪಾತ್ರ ನನ್ನ ಕೈತಪ್ಪಿತು ಎಂದು ನಟಿ ಭೂಮಿಕಾ ಬೇಸರ ಹೊರ ಹಾಕಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಇದೆಲ್ಲಾ ಕಾಮನ್ ಎಂದಿದ್ದರು. ಬಾಲಿವುಡ್ನಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಗದ ಹಿನ್ನೆಲೆ ಭೂಮಿಕಾ ಸೌತ್ (south) ಸಿನಿಮಾದತ್ತ ಮುಖ ಮಾಡಿದ್ದಾರೆ. 'ಯುವಕುಡು' ಸಿನಿಮಾ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಆ ನಂತರ ತೆಲುಗಿನ ಟಾಪ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಟಿದ್ದಾರೆ. ಖುಷಿ ಸಿನಿಮಾ ಬಳಿಕ ನಂತರ ಭೂಮಿಕಾ ಅತಡು, ಸಿಂಹಾದ್ರಿ, ಸಾಂಬಾ, ವಾಸು ಸಿನಿಮಾ ಮಾಡಿದ್ದಾರೆ.
ಇದೀಗ ಇದೇ ನಟಿ ಇನ್ನೊಂದು ವಿಷಯದ ವಿರುದ್ಧ ದನಿ ಎತ್ತಿದ್ದಾರೆ. ಅದೇನೆಂದರೆ, ಇಂದಿನ ನಾಯಕ ಮತ್ತು ನಾಯಕಿಯರ ನಡುವಿನ ವಯಸ್ಸಿನ ಅಂತರದ ಕುರಿತು. ಈ ವಿಷಯ ಬಹಳ ಮುನ್ನೆಲೆಗೆ ಬಂದದ್ದು ಹತ್ತಿಪ್ಪತ್ತು ವರ್ಷ ಚಿಕ್ಕ ವಯಸ್ಸಿನ ನಟಿಯರ ಜೊತೆ ನಟ ಶಾರುಖ್ ಖಾನ್ (Shahrukh Khan) ಪಠಾಣ್ನಲ್ಲಿ, ನಟ ಸಲ್ಮಾನ್ ಖಾನ್ ಕಿಸೀ ಕಾ ಭಾಯಿ ಕಿಸೀ ಕೀ ಜಾನ್ನಲ್ಲಿ ನಟಿಸಿದ ಬಳಿಕ. ಹಾಗಂತ ಈ ಏಜ್ ಗ್ಯಾಪ್ ಇದೇ ಮೊದಲೇನಲ್ಲ. ಬಾಲಿವುಡ್ ಮಾತ್ರವಲ್ಲದೇ ಬಹುತೇಕ ಸ್ಟಾರ್ ನಟರು 60ರ ನಂತರವೂ 20ರ ನಟಿಯ ಜೊತೆ ರೊಮ್ಯಾನ್ಸ್ ಮಾಡುತ್ತಾರೆ. ಈ ಹಿಂದೆ ಕೂಡ ಹಲವು ನಟರು ತಮಗಿಂತ ಅತಿ ಚಿಕ್ಕ ವಯಸ್ಸಿನ, ಇನ್ನೂ ಹೇಳಬೇಕೆಂದರೆ ಮಗಳ ವಯಸ್ಸಿನವರ ಜೊತೆ ರೊಮ್ಯಾನ್ಸ್ ಮಾಡಿರುವುದು, ತೆರೆಯ ಮೇಲೆ ಲಿಪ್ಲಾಕ್ (Liplock) ಮಾಡಿರುವುದು ಎಲ್ಲವೂ ಇದೆ. ನಟಿಯರಿಗೂ ಒಂದೆಡೆ ಸ್ಟಾರ್ ನಟನೆಂಬ ಹೆಮ್ಮೆ, ಇನ್ನೊಂದು ಹಣ ಇವುಗಳಿಂದ ಅಪ್ಪನ ವಯಸ್ಸಿನ ಜೊತೆಗಾದರೂ ಅಂಗಾಂಗ ಪ್ರದರ್ಶನ ಮಾಡುತ್ತಾ ರೊಮ್ಯಾನ್ಸ್ ಸೀನ್ನಲ್ಲಿ ಯಾವುದೇ ಮುಜುಗರವಿಲ್ಲದೇ ಕಾಣಿಸಿಕೊಳ್ಳುತ್ತಿದ್ದಾರೆ.
Asha Parekh: ನಟನಿಗೆ ವಯಸ್ಸಾದ್ರೆ ಹಾಗೆ, ನಟಿಗೆ ಆದ್ರೆ ಹೀಗೆ! ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ ನಟಿ
ಇದರ ಬಗ್ಗೆನೇ ಈಗ ಭೂಮಿಕಾ ಮಾತನಾಡಿದ್ದಾರೆ. ನಟಿಯರಿಗೆ ಒಂದು ವಯಸ್ಸು ದಾಟುತ್ತಿದ್ದಂತೆಯೇ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ನಟರಿಗೆ ಹಾಗಲ್ಲ ಎನ್ನುವುದು ಭೂಮಿಕಾ ಮಾತು. ಒಂದು ಕಾಲದಲ್ಲಿ ತಮಿಳು, ತೆಲುಗು, ಹಿಂದಿಯಲ್ಲಿ ಹೀರೋಯಿನ್ ಆಗಿ ಮಿಂಚಿದ್ದ ಬಹುಭಾಷಾ ನಟಿ ಭೂಮಿಕಾ ಚಾವ್ಲಾ ಅವರು ಈಗ ಅತ್ತಿಗೆ ಪಾತ್ರ, ಸೈಡ್ ರೋಲ್ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ನಟಿಯರಿಗೆ ಒಳ್ಳೆಯ ಅವಕಾಶ ಸಿಗದ ಬಗ್ಗೆ ಮಾತನಾಡಿದ್ದಾರೆ.
'ಸಿನಿಮಾ ಆಗಲಿ ಅಥವಾ ನಿಜ ಜೀವನ ಆಗಲಿ. ಆದರೆ ಮಹಿಳೆ ತನಗಿಂತ ಚಿಕ್ಕ ವಯಸ್ಸಿನ ಯುವಕ ಅಥವಾ ಹುಡುಗನ ಜೊತೆ ರೊಮ್ಯಾನ್ಸ್ ಮಾಡುವುದನ್ನು ಎಷ್ಟು ಬೇಗನೆ ಜಡ್ಜ್ ಮಾಡುತ್ತಾರೆ. ಇದು ಸರಿಯಲ್ಲ ಎಂದಿದ್ದಾರೆ ಭೂಮಿಕಾ. ನನಗೆ ಈ ತಾರತಮ್ಯ ಇಷ್ಟವಾಗುವುದಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡಾ ಹೀರೋ ತನಗಿಂತ ಅರ್ಧ ವಯಸ್ಸು ಚಿಕ್ಕ ಹೀರೋಯಿನ್ ಜೊತೆ ರೊಮ್ಯಾನ್ಸ್ ಮಾಡಬಹುದು. ನಟಿಯರಿಗೆ ಹಾಗಿಲ್ಲ ಎಂದಿದ್ದಾರೆ. ಆದರೆ ಇವರು ಆಡಿರುವ ಒಂದು ಮಾತು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ ನಟರು ತಮಗಿಂದ ಅರ್ಧ ವಯಸ್ಸಿನ ನಟಿಯರ ಜೊತೆ ರೊಮ್ಯಾನ್ಸ್ ಮಾಡಬಹುದು ಎಂದರೆ, ನಾನು ಕೂಡಾ ಕಿಡ್ ಜೊತೆ ರೊಮ್ಯಾನ್ಸ್ ಮಾಡಬಹುದಲ್ಲ ಎಂದು ತಮಾಷೆ ಮಾಡಿದ್ದು, ಇದೇ ಈಗ ಹೈಲೈಟ್ ಆಗುತ್ತಿದೆ.
ಚಿಕ್ಕ ವಯಸ್ಸಿನ, ಚೆನ್ನಾಗಿ ಕಾಣುವ ಯುವಕನ ಜೊತೆ ನಾನ್ಯಾಕೆ ರೊಮ್ಯಾನ್ಸ್ (Romance) ಮಾಡಬಾರದು ಎಂದು ಪ್ರಶ್ನಿಸಿ ಜೋರಾಗಿ ನಕ್ಕು ಮಾತು ಮುಗಿಸಿದ್ದಾರೆ ನಟಿ ಭೂಮಿಕಾ. ಅವರು ಕೊಟ್ಟಿರುವ ಹೇಳಿಕೆ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಯ್ಯೋ ಮೇಡಂ ಇಷ್ಟು ದೊಡ್ಡೋರಾಗಿ ನೀವೇನ್ ಹೇಳಿಬಿಟ್ರಿ ಎಂದು ಕೆಲವು ಪ್ರಶ್ನಿಸಿದರೆ ಇನ್ನು ಕೆಲವರು ನಟಿ ಹೇಳಿದ್ದರಲ್ಲಿ ತಪ್ಪೇನು, ಆಕೆ ಹೇಳಿದ್ದೂ ಕೂಡಾ ಸರಿ ಇದೆ ಎಂದು ಸಪೋರ್ಟ್ ಮಾಡಿದ್ದಾರೆ.
ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್: ವಿಚ್ಛೇದನದ ಬಳಿಕ ಮಗುವಿನ ಅಮ್ಮ!