Anushka Shetty ಟ್ವಿಟರ್​ನಲ್ಲಿ ದಾಖಲೆಯ ಖುಷಿ ಹಂಚಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳಬಹುದಾ?

Published : Apr 27, 2023, 03:17 PM IST
Anushka Shetty ಟ್ವಿಟರ್​ನಲ್ಲಿ ದಾಖಲೆಯ ಖುಷಿ ಹಂಚಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳಬಹುದಾ?

ಸಾರಾಂಶ

ಟ್ವಿಟರ್​ನಲ್ಲಿ 10 ಲಕ್ಷ ಫಾಲೋವರ್ಸ್​ ಕಂಪ್ಲೀಟ್​ ಮಾಡಿರುವ ಖುಷಿಯನ್ನು ನಟಿ ಅನುಷ್ಕಾ ಶೆಟ್ಟಿ ಹಂಚಿಕೊಂಡಿದ್ದರೆ, ಆಕೆಯ ಮದುವೆ, ಮಕ್ಕಳ ಬಗ್ಗೆ ಫ್ಯಾನ್ಸ್​ ಬುದ್ಧಿಮಾತು ಹೇಳಿದ್ದಾರೆ.   

ತಮಿಳು ಹಾಗೂ ತೆಲಗು ಚಿತ್ರರಂಗದಲ್ಲಿ ಸೂಪರ್​ಸ್ಟಾರ್​ (Super Star) ಆಗಿ ಮಿಂಚುತ್ತಿರುವ ನಟಿಯರಲ್ಲಿ ಟಾಪ್​ ಮೋಸ್ಟ್​ ಸ್ಥಾನದಲ್ಲಿ ಇರುವವರು ಕನ್ನಡತಿ ಅನುಷ್ಕಾ ಶೆಟ್ಟಿ. ಮಂಗಳೂರಿನ ಸ್ವೀಟಿ ಶೆಟ್ಟಿ, ಚಿತ್ರರಂಗಕ್ಕೆ ಕಾಲಿಟ್ಟು ಅನುಷ್ಕಾ ಶೆಟ್ಟಿಯಾಗಿ  ವರ್ಷಗಳೇ ಗತಿಸಿದ್ದು, ಈಕೆ ಬಹಳ ಬೇಡಿಕೆಯಲ್ಲಿರುವ ನಟಿ. 31 ವರ್ಷದ ಈ ಬೆಡಗಿ ಹಿಂದೆ ಭಾರಿ ಸುದ್ದಿಯಲ್ಲಿದ್ದುದು ಮದುವೆಯಿಂದಾಗಿ. ಕೆಲ ತಿಂಗಳ ಹಿಂದೆ ಇವರ ಮದುವೆ ಎನ್ನುವ ಸುದ್ದಿ  ಭಾರಿ ವೈರಲ್​ ಆಗಿತ್ತು. ಇವರು  ಸಿನಿಮಾರಂಗದವರನ್ನು ಮದುವೆಯಾಗುತ್ತಿಲ್ಲ. ಬದಲಿಗೆ ಉದ್ಯಮಿಯ ಹಿಡಿಯುತ್ತಿದ್ದಾರೆ. ಅದೂ  ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹರಡಿ ಅದು ಸದ್ಯ ತಣ್ಣಗಾಗಿದೆ. ಆದರೆ ಈ ನಟಿ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅದಕ್ಕೆ ಕಾರಣ ಅವರು ಹಾಕಿರುವ ಪೋಸ್ಟ್​.

ಅನುಷ್ಕಾ ಶೆಟ್ಟಿ  ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಸೋಷಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ.  ಎರಡು ವರ್ಷಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ 30 ಲಕ್ಷ ಫ್ಯಾನ್ಸ್​ ಹೊಂದಿದ್ದಾಗ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶೆಟ್ಟಿ (Anushka Shetty) ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಆಗಾಗ ಟ್ವೀಟ್​ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಅವರು ಕನ್ನಡದಲ್ಲಿ ಪೋಸ್ಟ್​​ ಮಾಡುತ್ತಾರೆ. ಇದೀಗ ಟ್ವಿಟರ್ ಸರದಿ. ಅನುಷ್ಕಾ ಶೆಟ್ಟಿ  ಬರೋಬ್ಬರಿ 10 ಲಕ್ಷ ಫಾಲೋವರ್ಸ್​ ಪಡೆದಿದ್ದು,  ಈ ಖುಷಿಯಲ್ಲಿ ಟ್ವೀಟ್​ ಮಾಡಿದ್ದಾರೆ. ತಮ್ಮ ಫ್ಯಾನ್ಸ್​ಗೆ  ಹಾರ್ಟ್​ ಎಮೋಜಿ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 2020ರಲ್ಲಿ ಅನುಷ್ಕಾ ಶೆಟ್ಟಿ ಅವರು ಟ್ವಿಟರ್​ನಲ್ಲಿ ಖಾತೆ ತೆರೆದಿದ್ದಾರೆ.  ಎರಡೂವರೆ ವರ್ಷಗಳಲ್ಲಿಯೂ ಒಂದು ಮಿಲಿಯನ್​ ಅಂದರೆ 10 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?

 

ಆದರೆ ವಿಷಯ ಇಷ್ಟಕ್ಕೇ ನಿಲ್ಲುವುದಿಲ್ಲ. ಫ್ಯಾನ್ಸ್​ ಅಭಿನಂದನೆಗಳ ಮಹಾಪೂರ ಹರಿಸುತ್ತಿದ್ದರೂ ಹಲವರು ಅನುಷ್ಕಾಗೆ ಬುದ್ಧಿಮಾತನ್ನೂ ಹೇಳಿದ್ದಾರೆ! ಹೌದು. ಇಂಥ ಸಂಭ್ರಮ ಪಡುವುದನ್ನೆಲ್ಲಾ ಬಿಟ್ಟುಬಿಡಿ ಮದುವೆಯ ಕಡೆ ಗಮನ ಹರಿಸಿ ಎಂದು ಕಮೆಂಟ್​ (comment) ಮೂಲಕ ಬುದ್ಧಿಮಾತು ಹೇಳುತ್ತಿದ್ದಾರೆ. ಇದಾಗಲೇ ಸಿನಿರಂಗದಲ್ಲಿನ ನಟ-ನಟಿಯರ ಮದುವೆ, ಮಕ್ಕಳ ಸಂಭ್ರಮ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ವರ್ಷ 41 ಆದರೂ ಇನ್ನೂ ಅವಿವಾಹಿತೆಯಾಗಿಯೇ ಉಳಿದಿರುವ ಅನುಷ್ಕಾ ಶೆಟ್ಟಿಗೆ ಬುದ್ಧಿಮಾತು ಹೇಳುವ ಮೂಲಕ, ಮದುವೆ, ಮಕ್ಕಳು ಎಂದೆಲ್ಲಾ ಸಂಸಾರ ಮಾಡಿಕೊಂಡು ಹಾಯಾಗಿ ಇರುವಂತೆ ಫ್ಯಾನ್ಸ್​ ಹೇಳುತ್ತಿದ್ದಾರೆ. ವಯಸ್ಸು ಹೆಚ್ಚಾದಂತೆ ಜೀವನ ಆನಂದ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಬೇಗ ಜೀವನದಲ್ಲಿ ನೆಲೆಗೊಳ್ಳುವುದು ಉತ್ತಮ ಎಂದಿರುವ ಫ್ಯಾನ್ಸ್​,  ಕುಟುಂಬ ಜೀವನ ಮತ್ತು ಮಾತೃತ್ವವನ್ನು ಆನಂದಿಸಿ.  ಐಷಾರಾಮಿ ಜೀವನಕ್ಕೆ ಬೇಕಾದಷ್ಟು ಸಂಪತ್ತು ಮಾಡಿಯಾಗಿದೆ.  ಯೋಚಿಸಿ ನೋಡಿ ಎಂದಿದ್ದಾರೆ. 

ಅಷ್ಟಕ್ಕೂ  ನಟಿ ಅನುಷ್ಕಾ ಶೆಟ್ಟಿ ಸುತ್ತಲೂ ಮೊದಲಿನಿಂದಲೂ ಹಲವಾರು ಗಾಸಿಪ್​ಗಳು ನಡೆಯುತ್ತಲೇ ಇವೆ. ತಮ್ಮ ಮದುವೆ ವಿಚಾರಕ್ಕೆ ಹತ್ತಾರು ಬಾರಿ ನಟಿ ಅನುಷ್ಕಾ ಹೆಡ್ ಲೈನ್ ಆಗಿದ್ದಾರೆ. ಅವರ ಜೊತೆ ಮದುವೆ ಅಂತೆ, ಇವರ ಜೊತೆ ಮದುವೆ ಅಂತೆ ಡೇಟಿಂಗ್‌ನಲ್ಲಿ ಇದ್ದಾರಂತೆ, ಹೀಗೆ ಹತ್ತಾರು ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಕೆಲ ತಿಂಗಳ ಹಿಂದೆಯೂ ಇದೇ ರೀತಿ ಬಹಳ ಸುದ್ದಿಯಾಗಿತ್ತು. ಆದರೆ  ಈ ಬಾರಿ ಗಾಸಿಪ್ ಅಲ್ಲ, ಇದು ನಿಜ ಎನ್ನಲಾಗಿತ್ತು.   ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ ಹೆಸರು ಸದಾ ಕೇಳಿಬರುತ್ತಿತ್ತು. ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಜೋಡಿ ಹಿಟ್ ಜೋಡಿ ಎನಿಸಿಕೊಂಡಿತ್ತು. ಅಲ್ಲಿಂದಲೇ ಇವರ ಮದುವೆ ಗಾಸಿಪ್ ಹಬ್ಬಿತ್ತು.  ಇನ್ನು ಬಾಹುಬಲಿ ಸಿನಿಮಾದ ನಂತರ ಇವರಿಬ್ಬರು ಮದುವೆ ಆಗಿ ಬಿಡುತ್ತಾರೆ ಎನ್ನುವ ಬಗ್ಗೆ ಹಲವು ಬಾರಿ ಸುದ್ದಿಗಳು ಹರಿದಾಡಿತ್ತು. ಆದರೆ ಅದಾದ ಬಳಿಕ ನಟಿ ಸಿನಿಮಾರಂಗದವರನ್ನ ಮದುವೆಯಾಗುತ್ತಿಲ್ಲ. ಬದಲಿಗೆ ಉದ್ಯಮಿಯ ಹಿಡಿಯುತ್ತಿದ್ದಾರೆ ಎಂದು ಸುದ್ದಿಯಾಯಿತು. ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ (Marriage fix) ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.  ನಂತರ ಈಚೆಗಷ್ಟೇ ಪುನಃ ಪ್ರಭಾಸ್​ (Prabhas) ಜೊತೆ ಮತ್ತೆ ಹೆಸರು ಥಳಕು ಹಾಕಿಕೊಂಡಿತ್ತು.

Anushka Shetty: ಅನುಷ್ಕಾ ಶೆಟ್ಟಿ ಸಿಗ್ತಾರೆಂದು 51 ಲಕ್ಷ ಟೋಪಿ ಹಾಕಿಸ್ಕೊಂಡ ಖ್ಯಾತ ನಿರ್ಮಾಪಕ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?