ಅಂಬಾನಿ ಮದ್ವೆಯಲ್ಲಿ ಸೈಫ್‌ ಪುತ್ರನಿಂದ ನಾಚಿಕೆಗೇಡಿನ ವರ್ತನೆ! ದುಂಬಾಲು ಬಿದ್ದರೂ ಸಿಗ್ಲಿಲ್ಲ ಗಾಯಕನ ಜಾಕೆಟ್‌

By Suchethana D  |  First Published Jul 16, 2024, 4:49 PM IST

ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯಲ್ಲಿ ಸೈಫ್‌ ಅಲಿ ಪುತ್ರನ ನಾಚಿಕೆಗೇಡಿನ ವಿಡಿಯೋ ಒಂದು ವೈರಲ್‌ ಆಗಿದೆ. ಏನದು? 
 


 ಭಾರತೀಯ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆ ಮುಗಿದರೂ ಇನ್ನೂ ಕೆಲವು ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇವುಗಳ ನಡುವೆಯೇ ಒಂದೊಂದಾದ ವಿಡಿಯೋಗಳು ವೈರಲ್‌ ಆಗುತ್ತಿವೆ. ಇದಾಗಲೇ ನೂರಾರು ಕೋಟಿ ರೂಪಾಯಿ ಕೊಟ್ಟು ಕೆಲವು ವಿದೇಶಗಳ ಗಾಯಕರನ್ನು ಮುಕೇಶ್‌ ಅಂಬಾನಿ ಕರೆಸಿ ಜನರನ್ನು ಮನರಂಜಿಸಿರುವ ವಿಷಯ ತಿಳಿದದ್ದೇ.  ಜಸ್ಟಿನ್ ಬೈಬರ್, ರೆಮಾ ಪ್ರದರ್ಶನಗಳು ಮತ್ತು ಕಿಮ್ ಕಾರ್ಡಶಿಯಾನ್ ಮತ್ತು ಅವರ ಸಹೋದರಿ ಖ್ಲೋ ಅವರಂತಹ ಅಂತರರಾಷ್ಟ್ರೀಯ ಸಂವೇದನೆಗಳೊಂದಿಗೆ  ನಾಲ್ಕು-ದಿನಗಳ ವಿವಾಹ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ದವು. ಶಾರುಖ್ ಖಾನ್, ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಯಶ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು.  

ಇದೀಗ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಅವರ ವಿಡಿಯೋ ಒಂದು ವೈರಲ್‌ ಆಗಿದ್ದು, ಸೈಫ್‌ ಪುತ್ರನ ಈ ನಡವಳಿಕೆಗೆ ಸಕತ್‌ ಟೀಕೆಗಳು ಕೇಳಿಬರುತ್ತಿವೆ. ನವಾಬ್‌ ಕುಟುಂಬದ ಕುಡಿಯೊಂದು ಸಹಸ್ರಾರು ಕೋಟಿ ರೂಪಾಯಿಗಳ ಒಡೆಯ ಈ ರೀತಿ ಒಂದು ಜಾಕೆಟ್‌ಗಾಗಿ ಗಾಯಕನ ದುಂಬಾಲು ಬಿದ್ದಿರುವುದನ್ನು ಸಕತ್‌ ಟ್ರೋಲ್‌ ಮಾಡಲಾಗುತ್ತಿದೆ. 

Tap to resize

Latest Videos

ಮಗನ ಮದುವೆಯ ಬೆನ್ನಲ್ಲೇ ಎಲ್ಲರ ಕ್ಷಮೆ ಕೋರಿದ ನೀತಾ ಅಂಬಾನಿ: ವಿಡಿಯೋದಲ್ಲಿ ಹೇಳಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ,  ,  "ಬೇಬಿ ಕಾಮ್ ಡೌನ್" ಹಾಡಿನ ಹಿಂದಿನ ಸಂವೇದನಾಶೀಲರಾದ ರೆಮಾ ಅವರು ಬಾರಾತ್‌ನಲ್ಲಿ ಪ್ರದರ್ಶನ ನೀಡುತ್ತಿದ್ದರು. ಇಬ್ರಾಹಿಂ ಅವರ ಹಾಡು ಮತ್ತು ನೃತ್ಯಕ್ಕೆ ಮನಸೋತರು. ಇವರ ಹಾಡಿಗೆ ಕುಣಿದು ಕುಪ್ಪಳಿಸಿದವರು ಎಲ್ಲರೂ. ರೆಮಾ ಅವರ ಅಭಿಮಾನಿಗಳೂ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಅವರಲ್ಲಿ ಒಬ್ಬ ಇಬ್ರಾಹಿಂ. ಆದರೆ ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ. ಗಾಯಕನ ಹಾಡಿಗೆ ಮೈಮರೆತು ಕುಣಿದು ಕುಪ್ಪಳಿಸುವುದೂ ಓಕೆ. ಆದರೆ ಅತ್ಯಂತ ಕೆಟ್ಟದ್ದಾಗಿ ಗಾಯಕನ ಜಾಕೆಟ್‌ ಪಡೆಯಲು ಇಬ್ರಾಹಿಂ ದುಂಬಾಲು ಬಿದ್ದಿರುವ ಅಸಭ್ಯ ಘಟನೆಯೂ ಇದರಲ್ಲಿ ನಡೆದಿದೆ.

ಇದರ ವಿಡಿಯೋ ವೈರಲ್‌ ಆಗುತ್ತಿದೆ.  ಬ್ರಾಹಿಂ ಮೊದಲ ಸಾಲಿನಲ್ಲಿ ನಿಂತು ಜಾಕೆಟ್‌ ಕೇಳಿದ್ದಾರೆ. ಆದರೆ  ರೆಮಾ ಅವರು ಅದನ್ನು ತೆಗೆದು ಬೇರೆಯವರಿಗೆ ನೀಡಿದ್ದಾರೆ. ಇಷ್ಟು ನಾಚಿಕೆ ಸಾಕಾಗಲ್ವಾ ಎಂದು ಸೈಫ್‌ ಪುತ್ರನ ಮರ್ಯಾದೆ ತೆಗೆಯುತ್ತಿದ್ದಾರೆ ನೆಟ್ಟಿಗರು. ಅವರು ನಟ ಆದರೂ ಓರ್ವ ಅಭಿಮಾನಿ, ಹೀಗೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಕೆಲವರು ನಟನ ಸಮರ್ಥನೆಗೆ ನಿಂತಿದ್ದರೆ, ತಾವು ಎಲ್ಲಿ ಇದ್ದೇವೆ, ತಮ್ಮ ಅಂತಸ್ತು ಏನು ಎಂಬ ಬಗ್ಗೆ ಸೆಲೆಬ್ರಿಟಿಯೊಬ್ಬನಿಗೆ ತಿಳಿದಿರಬೇಕು. ಮದುವೆಯ ಮನೆಯಲ್ಲಿ ಗತಿ ಇಲ್ಲದವರ ರೀತಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಹಲವರು ಕಿಡಿಕಾರುತ್ತಿದ್ದಾರೆ. 

ಮದುಮಗಳ ಭರ್ಜರಿ ಎಂಟ್ರಿ: ಅಬ್ಬಬ್ಬಾ ವರಮಾಲಾ ಹಾಕಲು ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಸುಸ್ತಾದ ಜನರು!

click me!