Bad Newz ಚಿತ್ರದಲ್ಲಿ ತೃಪ್ತಿ ದಿಮ್ರಿ ಹಾಟ್ ಅವತಾರ ಅಭಿಮಾನಿಗಳ ನಿದ್ದೆಗೆಡಿಸಿದೆ. ವಿಕ್ಕಿ ಕೌಶಾಲ್ ಜೊತೆಗಿನ ರೊಮ್ಯಾನ್ಸ್ ಭಾರಿ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರದಲ್ಲಿನ 27 ಸೆಕೆಂಡ್ ಚುಂಬನ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ.
ಮುಂಬೈ(ಜು.16) ವಿಕ್ಕಿ ಕೌಶಾಲ್, ತಪ್ತಿ ದಿಮ್ರಿ ಹಾಗೂ ಆ್ಯಮಿ ಅಭಿನಯದ ಬ್ಯಾಡ್ ನ್ಯೂಝ್ ಚಿತ್ರ ಜುಲೈ 19ರಂದು ಬಿಡುಗಡೆಯಾಗುತ್ತಿದೆ. ಈಗಾಲೇ ಟೀಸರ್ ಹಾಗೂ ಚಿತ್ರದ ಹಾಡು ರಿಲೀಸ್ ಆಗಿದೆ. ಬೋಲ್ಡ್ ಅವತಾರದಲ್ಲಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದಾರೆ. ತೌಬಾ ತೌಬಾ ಸಾಂಗ್ ಈಗಾಗಲೇ ಭಾರಿ ವೈರಲ್ ಆಗಿದೆ. ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ರೊಮ್ಯಾನ್ಸ್ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಇದರ ನಡುವೆ ಅಭಿಮಾನಿಗಳ ಕುತೂಹಲಕ್ಕೆ ಸಿನಿಮಾ ಸೆನ್ಸಾರ್ ಬೋರ್ಡ್ ತಣ್ಮೀರು ಎರಚಿದೆ. ಈ ಚಿತ್ರದಲ್ಲಿ ವಿಕ್ಕಿ ಹಾಗೂ ತೃಪ್ತಿ ನಡುವಿನ 27 ಸೆಕೆಂಡ್‌ಗಳ ಚುಂಬನ ದೃಶ್ಯಕ್ಕೆ ಕತ್ತರಿ ಹಾಕಲು ಸೂಚಿಸಿದೆ.
ಚಿತ್ರದಲ್ಲಿ ಹಲವು ಭಾಗದಲ್ಲಿ ವಿಕ್ಕಿ ಹಾಗೂ ತೃಪ್ತಿ ದಿಮ್ರಿ ನಡುವಿನ ಕಿಸ್ಸಿಂಗ್ ಸೀನ್‌ಗಳಿವೆ. ಈ ಪೈಕಿ ಮೂರು ಭಾಗದಲ್ಲಿನ ಒಟ್ಟು 27 ಸೆಕೆಂಡ್ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಲು ಸೆನ್ಸಾರ್ ಬೋರ್ಡ್ ಸೂಚಿಸಿದೆ. 9 ಸೆಕೆಂಡ್, 10 ಸೆಕೆಂಡ್ ಹಾಗೂ 8 ಸೆಕೆಂಡ್‌ಗಳ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಲು ಸೂಚಿಸಿದೆ. ಜೊತೆಗೆ ಬ್ಯಾಡ್ ನ್ಯೂಝ್ ತಂಡಕ್ಕೆ U/A ಸರ್ಟಿಫಿಕೇಟ್ ನೀಡಿದೆ. ಇದರ ಜೊತೆಗೆ ಲಿಪ್ ಲಾಕ್ ಸೀನ್ ಒಂದಕ್ಕೆ ಕೆಲ ಬದಲಾವಣೆ ತರಲು ಸೂಚಿಸಿದೆ. ಜೊತೆಗೆ ಮದ್ಯ ಸೇವನೆ ದೃಶ್ಯಗಳ ವೇಳೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋ ಸೂಚನೆಯನ್ನು ದಪ್ಪ ಅಕ್ಷರಗಳಲ್ಲಿ ಹಾಕುವಂತೆ ಸೂಚಿಸಿದೆ.
Bad Newz ತೃಪ್ತಿ ದಿಮ್ರಿ ಜೊತೆ ಈಜುಕೊಳದಲ್ಲಿ ವಿಕ್ಕಿ ರೊಮ್ಯಾನ್ಸ್, ಕತ್ರೀನಾಗೆ ಟ್ಯಾಗ್ ಮಾಡಿದ ನೆಟ್ಟಿಗರು!
ಬ್ಯಾಡ್ ನ್ಯೂಝ್ ಚಿತ್ರದಲ್ಲಿ 3 ಪ್ರಮುಖ ಕಿಸ್ಸಿಂಗ್ ಸೀನ್‌ಗಳಿಗೆ ಕತ್ತರಿ ಹಾಕಾಗಿದೆ ಎಂದು ಅಭಿಮಾನಿಗಳು ಬೇಸರಪಡಬೇಕಿಲ್ಲ. ಕಾರಣ ಈ ಚಿತ್ರದಲ್ಲಿ ಹಲವು ಬೋಲ್ಡ್ ಹಾಗೂ ಹಾಟ್ ದೃಶ್ಯಗಳಿವೆ. ಈ ದೃಶ್ಯಗಳಿಗೆ ಸೆನ್ಸಾರ್ ಬೋರ್ಡ್ ಗ್ರೀನ್ ಸಿಗ್ನಲ್ ನೀಡಿದೆ. ಇದೀಗ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.
ಇತ್ತೀಚೆಗೆ ಚಿತ್ರದ ತೌಬಾ ತೌಬಾ ಹಾಡು ಬಿಡುಗಡೆಯಾಗಿತ್ತು. ತೃಪ್ತಿ ಹಾಗೂ ವಿಕ್ಕಿ ಕೌಶಾಲ್ ನಡುವಿನ ಜನಮ್ ರೊಮ್ಯಾಂಟಿಕ್ ಹಾಡು, ಬೋಲ್ಡ್ ದೃಶ್ಯಗಳು ಅಭಿಮಾನಿಗಳಿಗೆ ಕಚಕುಳಿ ಇಟ್ಟಿತ್ತು. ಆ್ಯನಿಮಲ್ ಚಿತ್ರದಲ್ಲಿ ಬೆತ್ತಲಾಗಿದ್ದ ತೃಪ್ತಿ ದಿಮ್ರಿ ಬಳಿಕ ಬ್ಯಾಡ್ ನ್ಯೂಝ್ ಚಿತ್ರದಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ವಿಕ್ಕಿ ಕೌಶಾಲ್ ಅದ್ಬುತ ಸ್ಟೆಪ್ಸ್ ಮೂಲಕ ಮಿಂಚಿದ್ದರು. ಇಷ್ಟೇ ಅಲ್ಲ ತೃಪ್ತಿ ಜೊತೆಗಿನ ರೊಮ್ಯಾನ್ಸ್ ವೈರಲ್ ಆಗಿತ್ತು.
ಜನಮ್ ಹಾಡಿನ ಬಳಿಕ ಮೆಹಬೂಬ್ ಮೇರೆ ಸನಮ್ ಹಾಡು ಬಿಡುಗಡೆಯಾಗಿದೆ. ಬಾಲಿವುಡ್‌ನಲ್ಲಿ ಬಹುನಿರೀಕ್ಷಿತ ಚಿತ್ರವಾಗಿ ಮಾರ್ಪಟ್ಟಿದೆ. ಆ್ಯನಿಮಲ್ ಚಿತ್ರದ ಬಳಿಕ ಇದೀಗ ಬ್ಯಾಡ್ ನ್ಯೂಝ್ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಸೂಚನೆ ನೀಡಿದೆ. ಸೂಪರ್ ಹಿಟ್ ಚಿತ್ರವಾಗಲಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತೃಪ್ತಿ ದಿಮ್ರಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಬ್ಯಾಡ್ ನ್ಯೂಝ್ ಸಿನಿಮಾ ಹಾಡು ರಿಲೀಸ್!