70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟಗೊಂಡಿದೆ. ಈ ಬಾರಿ ಸ್ಯಾಂಡಲ್‌ವುಡ್‌ಗೆ ಪ್ರಶಸ್ತಿಯ ಸುರಿಮಳೆಯಾಗಿದೆ. ಅತ್ಯುತ್ತಮ ಚಿತ್ರ ಕಾಂತಾರ, ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಒಲಿದಿದೆ. ರಾಷ್ಟ್ರೀಯ ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ.
ನವದೆಹಲಿ(ಆ.17) ಬಹುನಿರೀಕ್ಷಿತ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟಗೊಂಡಿದೆ. ಈ ಬಾರಿ ಸ್ಯಾಂಡಲ್‌ವುಡ್ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭ್ಯವಾಗಿದೆ. ಇನ್ನು ಅತ್ಯುತ್ತಮ ನಟರ ವಿಭಾಗದಲ್ಲಿ ಭಾರಿ ಸ್ಪರ್ಧೆ ಎರ್ಪಟ್ಟಿತು. ಅಂತಿಮವಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತ ನಟ ಪ್ರಶಸ್ತಿ ಒಲಿದಿದೆ. ಇದೇ ವೇಳೆ ಯಶ್ ಅಭಿನಯದ ಕೆಜಿಎಪ್ 2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿದೆ.
ಅತ್ಯುತ್ತಮ ನಟ, ರಿಷಬ್ ಶೆಟ್ಟಿ
ಅತ್ಯುತ್ತಮ ಮನೋರಂಜನಾ ಚಿತ್ರ; ಕಾಂತಾರ
ಅತ್ಯುತ್ತ ಕನ್ನಡ ಚಿತ್ರ: ಕೆಜಿಎಫ್ 2
ಕನ್ನಡ ಚಿತ್ರರಂಗ ಉದ್ಧಾರಕ್ಕೆ ಹೋಮ ಹವನ, ಸ್ಯಾಂಡಲ್ ವುಡ್ ಗೆ ಖಡಕ್ ಎಚ್ಚರಿಕೆ ಕೊಟ್ಟ ನಾಗದೇವ
ಅತ್ಯುತ್ತಮ ಸಹಾಯಕ ನಟಿ, ನೀನಾ ಗುಪ್ತ
ಅತ್ಯುತ್ತಮ ಸಹಾಯಕ ನಟ , ಪವನ ರಾಜ್
ಅತ್ಯುತ್ತಮ ನಾಯಕಿ, ನಿತ್ಯಾ ಮೆನನ್ ಹಾಗೂ ಮಾನ್ಸಿ ಪರೆಖ್
ಅತ್ಯುತ್ತಮ ಸಿನಿಮಾ AVGC, ಬ್ರಹಾಸ್ತ್ರ (ಹಿಂದಿ)
ಅತ್ಯುತ್ತಮ ಫೀಚರ್ ಫಿಲ್ಮ್: ಕಚ್ ಎಕ್ಸ್‌ಪ್ರೆಸ್(ಗುಜರಾತಿ)
ಅತ್ಯುತ್ತಮ ನಿರ್ದೇಶಕ, ಸೂರಜ್ ಬರ್ಜಾತ್ಯ( ಉಂಚಾಯಿ ಚಿತ್ರ)
ಅತ್ಯುತ್ತಮ ಮಲೆಯಾಳಂ ಚಿತ್ರ, ಆಟಂ
ಅತ್ಯುತ್ತಮ ಪ್ಲೇಬ್ಯಾಕ್ ಸಿಂಗರ್, ಅರಿಜಿತ್ ಸಿಂಗ್
ಅತ್ಯುತ್ತಮ ಸಂಗೀತ ನಿರ್ದೇಶಕ, ಪ್ರೀತಮ್( ಬ್ರಹ್ಮಾಸ್ತ್ರ)
ಯಾರು ಯಾರಿಗೆ ಒಲಿಯಿತು ರಾಷ್ಟ್ರಪ್ರಶಸ್ತಿ?
ಅತ್ಯುತ್ತಮ ನಟರ ರೇಸ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ಮಲೆಯಾಳಂ ನಟ ಮಮ್ಮುಟ್ಟಿ ನಡುವೆ ಭಾರಿ ಸ್ಪರ್ಧೆ ಎರ್ಪಟ್ಟಿತ್ತು. ಬಾಲಿವುಡ್‌ನ 12th ಫೇಲ್ ಚಿತ್ರ ಸೇರಿದಂತೆ ಹಲವು ಚಿತ್ರಗಳ ನಡುವೆ ಸ್ಪರ್ಧೆ ಎರ್ಪಟ್ಟಿತು.ಜನವರಿ 1, 2022 ರಿಂದ ಡಿಸೆಂಬರ್ 31,2022ರ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸಿ ಇದೀಗ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. 2023ರ ಮೇ ತಿಂಗಳಲ್ಲಿ ಈ ಪ್ರಶಸ್ತಿಗಳ ಘೋಷಣೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಪ್ರಶಸ್ತಿ ಘೋಷಣೆ ವಿಳಂಭವಾಗಿತ್ತು.
ಕಾಂತಾರ ಸಿನಿಮಾ 10 ಫಿಲ್ಮ್‌ಫೇರ್ ಅವರಾಡ್ ಪಡೆದುಕೊಂಡಿದೆ. ಇದರ ಜೊತೆ 10 ಸೈಮಾ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ ಇದೀಗ ರಾಷ್ಟ್ರೀಯ ಪ್ರಶಸ್ತಿ ಗರಿಯೂ ಸೇರಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶನಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದರು.
ಸೋನಲ್ ಜೊತೆಗೆ ಬ್ಲಾಕ್ ಬಸ್ಟರ್ ಜೀವನ ಆರಂಭಿಸೋಕೆ ತರುಣ್ ಸುಧೀರ್ ರೆಡಿ, ಮುದ್ದಾದ ಫೋಟೊ ಹಂಚಿಕೊಂಡ ಜೋಡಿ