Sara Ali khan: ನನ್ನಮ್ಮನ ಜೊತೆ ಬದುಕುವವರನ್ನು ನಾನು ಮದ್ವೆಯಾಗ್ತೀನಿ ಎಂದ ನಟಿ

Suvarna News   | Asianet News
Published : Dec 04, 2021, 06:56 PM ISTUpdated : Dec 04, 2021, 07:25 PM IST
Sara Ali khan: ನನ್ನಮ್ಮನ ಜೊತೆ ಬದುಕುವವರನ್ನು ನಾನು ಮದ್ವೆಯಾಗ್ತೀನಿ ಎಂದ ನಟಿ

ಸಾರಾಂಶ

Sara Ali Khan speaks about Marriage: ಅಮ್ಮನ ಜೊತೆಗೆ ಬದುಕೋಕಾಗುವವರ ಜೊತೆ ನನ್ನ ಮದುವೆ ಸೈಫ್-ಅಮೃತಾ ಮಗಳ ಮದುವೆ ಕುರಿತ ಮಾತುಗಳಿವು

ಬಾಲಿವುಡ್ ನಟಿ ಸಾರಾ ಅಲಿ ಖಾನ್(Sara ali khan) ಸ್ಟಾರ್ ಕಿಡ್. ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಅವರ ಪುತ್ರಿ. ನಂತರ ಸೈಫ್ ಪತ್ನಿ ಅಮೃತಾಗೆ ವಿಚ್ಚೇದನೆ ಕೊಟ್ಟು ಕರೀನಾ ಕಪೂರ್ ಖಾನ್ ಅವರನ್ನು ವರಿಸಿದ್ದಾರೆ. ಸಾರಾ ಅಲಿ ಖಾನ್ ಬಾಲಿವುಡ್‌ನಲ್ಲಿ ಸದ್ಯ ಯಶಸ್ವಿ ನಟಿ. ಸಕ್ಸಸ್‌ಫುಲ್ ಕೆರಿಯರ್‌ ಹೊಂದುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಅದರ ನಂತರ ಬಹಳಷ್ಟು ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಇದೀಗ ತಮ್ಮ ವಿವಾಹದ ಕುರಿತು ನಟಿ ಮಾತನಾಡಿದ್ದಾರೆ.

ಬಾಲಿವುಡ್(Bollywood) ನಟಿ ಸಾರಾ ಅಲಿ ಖಾನ್ ಇತ್ತೀಚೆಗಷ್ಟೇ ತಮ್ಮ ಮದುವೆಯಾಗುವ ಪ್ಲಾನ್ ಬಗ್ಗೆ ತಮ್ಮ ಆಲೋಚನೆಗಳನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತೀಚೆಗೆ ನಟಿ ನೀಡಿದ ಸಂದರ್ಶನದಲ್ಲಿ, ಸಾರಾ ತನ್ನ ತಾಯಿ, ಹಿರಿಯ ನಟಿ ಅಮೃತಾ ಸಿಂಗ್ ಅವರನ್ನು 'ದೈನಂದಿನ ಜೀವನದಲ್ಲಿ ತನ್ನ ಮೂರನೇ ಕಣ್ಣು' ಎಂದು ಬಣ್ಣಿಸಿದ್ದಾರೆ. ಅವರ ಭಾವಿ ಪತಿ ಅವರ ತಾಯಿಯೊಂದಿಗೆ ಹೊಂದಿಕೊಂಡು ಹೋಗಬೇಕಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ. 'ಕೇದಾರನಾಥ' ನಟಿ ತಾನು ತನ್ನ ತಾಯಿಯ ಮೇಲೆ ಅವಲಂಬಿತವಾಗಿದ್ದೇನೆ. ಆಕೆಯಿಂದ ದೂರವಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Sara Ali khan: ಮೊಬೈಲ್ ಕಳ್ಕೊಂಡ್ರಾ ಬಾಲಿವುಡ್ ನಟಿ ? ಫೋನ್‌ಗಾಗಿ ಓಡಿದ್ದು ನೋಡಿ

ಸಾರಾ ಅವರ ಮುಂಬರುವ ಚಿತ್ರ 'ಅಟ್ರಾಂಗಿ ರೇ' ಯಲ್ಲಿ ರಿಂಕು ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾನು ಪ್ರೀತಿಸುವ ವ್ಯಕ್ತಿಯೊಂದಿಗೆ ಓಡಿಹೋಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ನಿಜ ಜೀವನದಲ್ಲಿ ತಾಯಿಯಿಂದ ಓಡಿಹೋಗುವ ಸಾಮರ್ಥ್ಯ ನನಗಿಲ್ಲ ಎಂದು ನಟಿ ಉತ್ತರಿಸಿದ್ದಾರೆ. ಅವಳು ಎಲ್ಲಿಗೆ ಓಡಿಹೋದರೂ, ಪ್ರತಿದಿನ ಅವಳು ಹಿಂತಿರುಗಬೇಕಾದ ಮನೆ ತಾಯಿ ಎಂದು ನಟಿ ಹೇಳಿದ್ದಾರೆ.

'ಅಟ್ರಾಂಗಿ ರೇ' ಸಿನಿಮಾದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ಮತ್ತು ಅಕ್ಷಯ್ ಕುಮಾರ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಾರಾ ಉತ್ತರ ಭಾರತದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು, ಧನುಷ್ ಪಾತ್ರಕ್ಕೆ ಬಲವಂತವಾಗಿ ಮದುವೆಯಾಗಿದ್ದಾರೆ. ಆದರೂ ಸಾರಾ ಅಕ್ಷಯ್ ಕುಮಾರ್ ಪಾತ್ರದ ಕಲಾವಿದನನ್ನು ಪ್ರೀತಿಸುತ್ತಾಳೆ.

ಟ್ರೇಲರ್ ಪ್ರಕಾರ, ಸಾರಾ ತಮಿಳು ಮಾತನಾಡುವ ಧನುಷ್‌ನನ್ನು ಮದುವೆಯಾಗುವುದಕ್ಕೆ ಇಷ್ಟಪಡುವುದಿಲ್ಲ. ಈಗಾಗಲೇ ಬೇರೊಬ್ಬರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಕೆಲವು ದಿನಗಳ ನಂತರ ದಂಪತಿಗಳು ಪರಸ್ಪರ ಬೇರೆಯಾಗಲು ನಿರ್ಧರಿಸುತ್ತಾರೆ, ಆದರೆ ವಿಷಯಗಳು ತಿರುವು ಪಡೆದುಕೊಳ್ಳುತ್ತವೆ. ಧನುಷ್‌ನೊಂದಿಗೆ ಸ್ವಲ್ಪ ಸಮಯ ಕಳೆದ ನಂತರ ಸಾರಾ ಅವರ ಪಾತ್ರಕ್ಕೆ ಬೀಳುತ್ತಾರೆ. ನಟಿ ಯಾರೊಂದಿಗೆ ಇರಲು ಬಯಸುತ್ತಾಳೆ ಎಂಬುದೇ ಸಿನಿಮಾದ ಕುತೂಹಲದ ಪಾಯಿಂಟ್. ಸಿನಿಮಾ ಡಿಸೆಂಬರ್ 24, 2021 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಹಾಯ್ ಚಕ್ ಚಕ್ ಸಾಂಗ್ ವೈರಲ್:

ಅಕ್ಷಯ್ ಕುಮಾರ್ (Akshay Kumar), ಸಾರಾ ಅಲಿ ಖಾನ್ (Sara Ali Khan) ಮತ್ತು ಧನುಷ್ (Dhanush) ಅಭಿನಯದ ಅತ್ರಾಂಗಿ ರೇ (Atrangi Re)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೀಗ ಆನಂದ್ ಎಲ್ ರೈ (Anand L Rai) ನಿರ್ದೇಶನದ ಈ ಚಿತ್ರದ ಮೊದಲ ಹಾಡು ಚಕ ಚಕ್... ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಚಿತ್ರದ ಟ್ರೇಲರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಈ ಸಿನಿಮಾದ ಮೊದಲ ಹಾಡು ಚಕ ಚಕ್ .. ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾರೆ.  ವೀಡಿಯೊವನ್ನು ಹಂಚಿಕೊಳ್ಳುತ್ತಾ,'ಬಿಹಾರ ಕಿ ಛೋರಿ ಹಾಡು, ಈಗ ಪ್ರತಿ ಮದುವೆಯಲ್ಲೂ  ಪ್ಲೇ ಆಗುತ್ತದೆ, ಗ್ಯಾರಂಟಿ'  ಎಂದು ಅವರು ಬರೆದಿದ್ದಾರೆ. ಎ ಆರ್ ರೆಹಮಾನ್  ( AR Rahman) ಸಂಗೀತ ಸಂಯೋಜಿಸಿರುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ