Sara Ali khan: ಮೊಬೈಲ್ ಕಳ್ಕೊಂಡ್ರಾ ಬಾಲಿವುಡ್ ನಟಿ ? ಫೋನ್‌ಗಾಗಿ ಓಡಿದ್ದು ನೋಡಿ

Published : Dec 04, 2021, 05:53 PM ISTUpdated : Dec 04, 2021, 06:23 PM IST
Sara Ali khan: ಮೊಬೈಲ್ ಕಳ್ಕೊಂಡ್ರಾ ಬಾಲಿವುಡ್ ನಟಿ ? ಫೋನ್‌ಗಾಗಿ ಓಡಿದ್ದು ನೋಡಿ

ಸಾರಾಂಶ

Sara ali khan: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಮ್ಮ ಮೊಬೈಲ್ ಕಳೆದುಕೊಂಡಿದ್ದಾರಾ ? ಹೌದು, ಮೊಬೈಲ್‌ಗೋಸ್ಕರ ನಟಿ ಓಡಿ ಹೋಗೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟಿ ಸಾರಾ ಅಲಿ ಖಾನ್‌(Sara ali khan) ಅವರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರಾ ? ಹೌದು ಎಂಬಂತಹ ವಿಡಿಯೋ ಒಂದು ವೈರಲ್ ಆಗಿದೆ. ಅಟ್ರಾಂಗಿ ರೇ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರೋ ನಟಿಯ ಫೋನ್ ಬೇರೆ ಕಾಣೆಯಾದ್ರೆ ಕಥೆ ಏನು ? ನಟಿಯ ರಿಯಾಕ್ಷನ್ಸ್ ಹೇಗಿತ್ತು ? ವಿಡಿಯೋ ಸೋಷಿಯಲ್ ಮೀಡಿಯಾ(Social media) ತುಂಬಾ ಹರಿದಾಡುತ್ತಿದೆ. ಶುಕ್ರವಾರ ಮುಂಬೈನ ರೆಕಾರ್ಡಿಂಗ್ ಸ್ಟುಡಿಯೊದಿಂದ ಹೊರಗೆ ಬರುವಾಗ ಸಾರಾ ಅಲಿ ಖಾನ್ ತನ್ನ ಫೋನ್ ಅನ್ನು ಎಲ್ಲೋ ಇಟ್ಟು ಮರೆತುಬಿಟ್ಟಿದ್ದಾರೆ. ಫೋನ್ ಕಾಣದಾದಾಗ ನಟಿ ತುಂಬಾ ಒತ್ತಡದಲ್ಲಿ ಕಾಣಿಸಿಕೊಂಡರು. ಸಾರಾ ಕೂಡಲೇ ತನ್ನ ಫೋನ್ ಅನ್ನು ಕಂಡುಕೊಂಡಿದ್ದಾರೆ. ಆದರೆ ತನ್ನ ಕಾಣೆಯಾದ ಫೋನ್‌ನ ಬಗ್ಗೆ ಅವರು ಉದ್ವಿಗ್ನಗೊಂಡಿದ್ದರು.

ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಸಾರಾ ಅಲಿ ಖಾನ್ ತನ್ನ ಕಾರಿನಿಂದ ಇಳಿದು ನಂತರ ಸ್ಟುಡಿಯೋ ಆವರಣದೊಳಗೆ ಓಡುತ್ತಿರುವುದನ್ನು ಕಾಣಬಹುದು. ಅರೆ ನಾನು ನನ್ನ ಫೋನ್ ಕಳೆದುಕೊಂಡೆ ಎಂದು ನಟಿ ಸಾರಾ ಹೇಳುವುದು ಕೇಳಿಬರುತ್ತದೆ. ಅವರು ಸ್ವಲ್ಪ ಸಮಯದ ನಂತರ ಹಿಂತಿರುಗುತ್ತಾರೆ. ತನ್ನ ಫೋನ್‌ನ ಕುರಿತು ಒತ್ತಡದಲ್ಲಿದ್ದಾಗ ಪಾಪ್ಪರಾಜಿ ತನ್ನ ಫೋಟೋ ಕ್ಲಿಕ್ ಮಾಡುವುದನ್ನು ಮುಂದುವರೆಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ ನಟಿ.

Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

ಅರೆ ಯಾರ್ ನಾನು ನನ್ನ ಫೋನ್ ಕಳೆದುಕೊಂಡಿದ್ದೇನೆ. ನಿಮಗೆ ಫೋಟೋಗಳನ್ನು ಕ್ಲಿಕ್ ಮಾಡಬೇಕು ಎಂದು ನಟಿ ಹೇಳಿದ್ದಾರೆ. ಕೆಲವು ಕ್ಯಾಮರಾ ವ್ಯಕ್ತಿಗಳು ಆಕೆಗೆ ಭರವಸೆ ನೀಡಿದಾಗಲೂ ನಟಿ ತಾನು ಅದನ್ನು ಶೀಘ್ರದಲ್ಲೇ ಕಂಡುಕೊಳ್ಳುವೆ ಎಂದು ಹೇಳುತ್ತಾರೆ. ನಟಿಗೆ ಕೊನೆಗೂ ತನ್ನ ಫೋನ್ ಸಿಗುತ್ತದೆ. ನಂತರ ನಟಿ ಫೋನ್‌ನೊಂದಿಗೆ ಮರಳುತ್ತಾರೆ.

ಸಾರಾ ಅಲಿ ಖಾನ್ ಶೀಘ್ರದಲ್ಲೇ ಆನಂದ್ ಎಲ್ ರೈ ಅವರ ಅಟ್ರಾಂಗಿ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಮಾಂಶು ಶರ್ಮಾ ಬರೆದಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಕೂಡ ಇದ್ದಾರೆ. ಚಿತ್ರವು ಡಿಸೆಂಬರ್ 24 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮಾತ್ರ ಬಿಡುಗಡೆಯಾಗಲಿದೆ. ವಾರಣಾಸಿ, ಮಧುರೈ ಮತ್ತು ದೆಹಲಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ, ಸಾರಾ ಅಲಿ ಖಾನ್ 2018 ರಲ್ಲಿ ಅಭಿಷೇಕ್ ಕಪೂರ್ ಅವರ ಕೇದಾರನಾಥ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಹ ಪ್ರಮುಖ ಪಾತ್ರವನ್ನು ಹೊಂದಿದ್ದರು. ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಾರಾ ಕೂಡ ಕಾಣಿಸಿಕೊಂಡಿದ್ದಾರೆ. ವರುಣ್ ಧವನ್ ಜೊತೆಗೆ ಡೇವಿಡ್ ಧವನ್ ಅವರ ಕೂಲಿ ನಂ 1 ನಲ್ಲಿ ಸಾರಾ ಕೂಡ ಕಾಣಿಸಿಕೊಂಡಿದ್ದಾರೆ. ಇಮ್ತಿಯಾಜ್ ಅಲಿಯವರ ಲವ್ ಆಜ್ ಕಲ್ ಚಿತ್ರದಲ್ಲಿ ಅವರು ಕಾರ್ತಿಕ್ ಆರ್ಯನ್ ಜೊತೆ ನಟಿಸಿದ್ದಾರೆ.

ಹಾಯ್ ಚಕ್ ಚಕ್ ಸಾಂಗ್ ವೈರಲ್:

ಅಕ್ಷಯ್ ಕುಮಾರ್ (Akshay Kumar), ಸಾರಾ ಅಲಿ ಖಾನ್ (Sara Ali Khan) ಮತ್ತು ಧನುಷ್ (Dhanush) ಅಭಿನಯದ ಅತ್ರಾಂಗಿ ರೇ (Atrangi Re)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೀಗ ಆನಂದ್ ಎಲ್ ರೈ (Anand L Rai) ನಿರ್ದೇಶನದ ಈ ಚಿತ್ರದ ಮೊದಲ ಹಾಡು ಚಕ ಚಕ್... ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಚಿತ್ರದ ಟ್ರೇಲರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಈ ಸಿನಿಮಾದ ಮೊದಲ ಹಾಡು ಚಕ ಚಕ್ .. ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾರೆ.  ವೀಡಿಯೊವನ್ನು ಹಂಚಿಕೊಳ್ಳುತ್ತಾ,'ಬಿಹಾರ ಕಿ ಛೋರಿ ಹಾಡು, ಈಗ ಪ್ರತಿ ಮದುವೆಯಲ್ಲೂ  ಪ್ಲೇ ಆಗುತ್ತದೆ, ಗ್ಯಾರಂಟಿ'  ಎಂದು ಅವರು ಬರೆದಿದ್ದಾರೆ. ಎ ಆರ್ ರೆಹಮಾನ್  ( AR Rahman) ಸಂಗೀತ ಸಂಯೋಜಿಸಿರುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.

ಸಾರಾ ಅಲಿ ಖಾನ್ ತನ್ನ ಸಿನಿಮಾದ ಪತಿ ಧನುಷ್ ಅವರೊಂದಿಗೆ ದಕ್ಷಿಣ ಭಾರತದ ಮದುವೆಗೆ ಹಾಜರಾಗಿರುವ ಫನ್‌ ಮೂಡ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ನಮ್ಮ ಸ್ವಂತ ಗಂಡನ ನಿಶ್ಚಿತಾರ್ಥದಿಂದ ತುಂಬಾ ಸಂತೋಷವಾಗಿರುವ ದೇಶದ ಏಕ ಮಾತ್ರ ಹೆಂಡತಿ ನಾನು ಎಂದು ಈ ಹಾಡಿನ ಆರಂಭದಲ್ಲಿ, ಸಾರಾ ಹೇಳುತ್ತಾರೆ. ಅವರು ಹಾಡಿನಲ್ಲಿ ಸಖತ್‌ ಸ್ಟೆಪ್ಸ್‌ ಹಾಕಿರುವುದು ಕಂಡುಬಂದಿದೆ. ಹಾಡಿನಲ್ಲಿ ಸಾರಾ ಅವರ ಎಕ್ಸ್‌ಪ್ರೆಷನ್‌  ಅದ್ಭುತವಾಗಿದೆ. ಅವರು ನಿಯಾನ್ ಹಸಿರು ಸೀರೆ ಮತ್ತು ಗುಲಾಬಿ ಬಣ್ಣದ ಬ್ಲೌಸ್‌ ಧರಿಸಿ  ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?