ಅನಿಲ್ ಕಪೂರ್ ಚುಂಬಿಸಿದಾಗಲೇ ಸೀನ್ ಗೊತ್ತಾಗಿದ್ದು, ಬಾಲಿವುಡ್ ಕರಾಳ ಕತೆ ಬಿಚ್ಚಿಟ್ಟ ಅಂಜನಾ

Published : Feb 09, 2025, 05:21 PM IST
ಅನಿಲ್ ಕಪೂರ್ ಚುಂಬಿಸಿದಾಗಲೇ ಸೀನ್ ಗೊತ್ತಾಗಿದ್ದು, ಬಾಲಿವುಡ್ ಕರಾಳ ಕತೆ ಬಿಚ್ಚಿಟ್ಟ ಅಂಜನಾ

ಸಾರಾಂಶ

ಚುಂಬನ ಸೀನ್ ಬಗ್ಗೆ ನನಗೆ ಹೇಳಲೇ ಇಲ್ಲ.ಅನಿಲ್ ಕಪೂರ್ ಬಂದು ತುಟಿಗೆ ತುಟಿ ತಾಗಿಸಿದಾಗಲೇ ಸೀನ್ ಬಗ್ಗೆ ಗೊತ್ತಾಯ್ತು. ಬಲವಂತವಾಗಿ ಚುಂಬಿಸಿದ್ದರು. ಶೂಟಿಂಗ್ ವೇಳೆ ನನಗೆ ಅಳು ಬಂದಿತ್ತು. ಅಂದು ಸಲಾಮ್ ಇ ಇಷ್ಕ್ ಸೆಟ್‌ನಲ್ಲಿ ಏನೆಲ್ಲಾ ನಡೆದಿತ್ತು? ನಟಿ ಅಂಜನಾ ಸುಖಾನಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮುಂಬೈ(ಫೆ.09) ಚಿತ್ರರಂಗ ಹಲವು ಕತೆಗಳು ಈಗಾಗಲೇ ಹೊರಬದ್ದಿದೆ. ಇವು ಕೋಲಾಹಲ ಸೃಷ್ಟಿಸಿದೆ. ಇದೀಗ ಬಾಲಿವುಡ್‌ನ ಮತ್ತೊಂದು ಘಟನೆ ಹೊರಬಿದ್ದಿದೆ.ಅದು ಸಲಾಮ್ ಇ ಇಷ್ಕ್ ಚಿತ್ರ.ಬಾಲಿವುಡ್‌ನ ಈ ಚಿತ್ರ ಮೋಡಿ ಮಾಡಿತ್ತು. ಆದರೆ ಈ ಚಿತ್ರದ ಸೆಟ್‌ನಲ್ಲಿ ನಡೆದ ಘಟನೆ ಇದೀಗ ಹೊರಬಿದ್ದಿದೆ. ಖುದ್ದು ಈ ಚಿತ್ರದ ನಟಿ ಅಂಜನಾ ಸುಖಾನಿ ಚುಂಬನ ಕುರಿತು ದೃಶ್ಯದ ಮೂಲಕ ಮನದಾಳ ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್, ನಾಯಕಿ ನಟಿ ಅಂಜನಾ ಸುಖಾನಿ ಚುಂಬಿಸುವ ದೃಶ್ಯವಿದೆ. ಆದರೆ ಈ ದೃಶ್ಯದ ಕುರಿತು ನಟಿಗೆ ಹೇಳೇ ಇರಲಿಲ್ಲ. ಅನಿಲ್ ಕಪೂರ್ ಬಲವಂತವಾಗಿ ಚುಂಬಿಸಿದಾಗಲೇ ಈ ಸೀನ್ ಕುರಿತು ನಟಿಗೆ ಗೊತ್ತಾಗಿದೆ. ಈ ಕಿಸ್ ಹಾಗೂ ಇದರ ಸುತ್ತ ನಡೆದ ಘಟನೆಗಳನ್ನು ಅಂಜನಾ ಸುಖಾನಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಹಂಗಾಮ ಸಂದರ್ಶನದಲ್ಲಿ ಅಂಜನಾ ಈ ಕುರಿತ ಮಾಹಿತಿ ಬಹಿರಂಗಪಡಿಸಿದ್ದಾರೆ. ಚಿತ್ರರಂಗಕ್ಕೆ ನಾನು ಹೊಸಬಳಾಗಿದ್ದೆ. ಹೀಗಾಗಿ ಎಲ್ಲವನ್ನು ಪ್ರತಿಭಟಿಸಲು ಸಾಧ್ಯವಾಗುತ್ತಿರಲಿಲ್ಲ. ಬಾಲಿವುಡ್‌ನಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆ ನನಗಿತ್ತು ಎಂದು ಅಂಜನಾ ಹೇಳಿದ್ದಾರೆ.ಸಲಾಮ್ ಇ ಇಷ್ಕ್ ಚಿತ್ರದ ಶೂಟಿಂಗ್ ವೇಳೆ ನಡೆದ ಹಲವು ಘಟನೆಗಳು ಅಳು, ನೋವು, ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡಿತ್ತು. ನಟ ಅನಿಲ್ ಕಪೂರ್ ಜೊತೆಗೆ ಒಂದು ರೋಮ್ಯಾಂಟಿಕ್ ದೃಶ್ಯವಿತ್ತು. ಒಂದೆರಡು ಡೈಲಾಗ್ ಹಾಗೂ ಪ್ರೀತಿ,ಪ್ರಣಯದ ಅಭಿನಯದ ಕುರಿತು ಡೈರೆಕ್ಟರ್ ಅಂಜನಾಗೆ ಹೇಳಿದ್ದರು. ಆದರೆ ಸೆಟ್‌ನಲ್ಲಿ ನಡೆದಿತ್ತು ಮಾತ್ರ ಬೇರೆ.

 ಮಾಧುರಿ ಜೊತೆ 'ಆ' ಸೀನ್‌ನಲ್ಲಿ ನಟಿಸುವುದಕ್ಕೆ ಭಯಗೊಂಡಿದ್ದೆ, ಆದರೆ ಅವರ ವರ್ತನೆ ನನ್ನ ಭಯ ಕಡಿಮೆ ಮಾಡ್ತು

ರೊಮ್ಯಾಂಟಿಕ್ ದೃಶ್ಯದಲ್ಲಿ ಚುಂಬನ ದೃಶ್ಯವಿದೆ ಅನ್ನೋ ಮಾಹಿತಿಯನ್ನು ನಿರ್ದೇಶಕರು ನನಗೆ ಹೇಳಲೇ ಇಲ್ಲ.ಅನಿಲ್ ಕಪೂರ್ ಸೇರಿದಂತೆ ಎಲ್ಲರಿಗೂ ಶೂಟಿಂಗ್ ಕುರಿತು ಸ್ಪಷ್ಟ ಕಲ್ಪನೆ ಇತ್ತು. ಆದರೆ ನನಗೆ ಈ ಮಾಹಿತಿಯೇ ಇರಲಿಲ್ಲ. ನೈಟ್ ಕ್ಲಬ್ ಶೈಲಿಯದ ಉಡುಪು, ಅದಕ್ಕೆ ಬೇಕಾದ ಸೆಟ್‌ಅಪ್ ಮಾಡಲಾಗಿತ್ತು. ಈ ಸೆಟ್ಅಪ್ ನೋಡಿ ಒಂದು ಕ್ಷಣ ನನಗೆ ಅಚ್ಚರಿಯಾಗಿತ್ತು. ಕಾರಣ ನನಗೆ ತಿಳಿಸಿದ ಶೂಟಿಂಗ್ ಸ್ಕ್ರೀನ್ ಪ್ಲೇ ಹಾಗೂ ಇಲ್ಲಿ ನಡೆಯುತ್ತಿರುವುದಕ್ಕೆ ವ್ಯತ್ಯಾಸವಾಗಿ ಕಂಡಿತ್ತು. ಆ್ಯಕ್ಷನ್ ಎಂದು ಹೇಳಿದ ಬೆನ್ನಲ್ಲೇ ನಟನೆ ಆರಂಭಗೊಂಡಿತ್ತು. ಆದರೆ ಬಳಿಕ ನಡೆದಿದ್ದು ಆಘಾತ ತಂದಿದ್ದು ಎಂದಿದ್ದಾರೆ.

ಶೂಟಿಂಗ್ ಸೀನ್‌ನಲ್ಲಿ ಅನಿಲ್ ಕಪೂರ್ ಬಂದು ತುಟಿಗೆ ತುಟಿ ತಾಗಿಸಿದ್ದರು. ನಟ ಚುಂಬಿಸುತ್ತಿದ್ದಂತೆ ನಾನು ಮಾನಸಿಕವಾಗಿ ಕುಗ್ಗಿ ಹೋದೆ. ಏನಾಗುತ್ತಿದೆ ಅನ್ನೋದು ಅರ್ಥವಾಗಲಿಲ್ಲ. ಈ ಘಟನೆ ಭಯ ಹುಟ್ಟಿಸಿತ್ತು. ಆತಂಕ ಹೆಚ್ಚಿಸಿತ್ತು. ಒಂದು ರೀತಿಯಲ್ಲಿ ಬಲವಂತವಾಗಿ ಚುಂಬಸಿದ್ದರು. ಕಾರಣ ಈ ದೃಶ್ಯ ನನಗೆ ತಿಳಿದಿರಲಿಲ್ಲ. ಈ ದೃಶ್ಯಕ್ಕೆ ನಾನು ಕನಿಷ್ಠ ಮಾನಸಿಕವಾಗಿ ತಯಾರಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಚುಂಬನ ಸೀನ್ ಬಲವಂತವಾಗಿ ನಡೆದಿತ್ತು ಎಂದಿದ್ದಾರೆ.

ದೃಶ್ಯ ಚಿತ್ರೀಕರಿಸಿದ ನಿರ್ದೇಶಕರು ಶಹಬ್ಬಾಷ್ ಚೆನ್ನಾಗಿ ಬಂದಿದೆ ಎಂದಿದ್ದರು. ಆಗಲೇ ಈ ಚಿತ್ರದ ಸೀನ್ ಗೊತ್ತಾಗಿತ್ತು. ಇದೇ ಸೆಲೆಬ್ರೆಟಿಗಳ ಮಕ್ಕಳಾಗಿದ್ದರೇ ಹೀಗೆ ಆಗುತ್ತಿತ್ತಾ? ಈ ಘಟನೆ ನನಗೆ ತೀವ್ರ ಆಘಾತ ತಂದಿತ್ತು. ಕೆಲವು ಕತೆಗಳು ರೊಮ್ಯಾಂಟಿಕ್ ದೃಶ್ಯಗಳನ್ನು ಬಯಸುತ್ತದೆ. ಅದಕ್ಕೆ ನನ್ನ ವಿರೋಧವಿಲ್ಲ. ಅಥವಾ ನಾನು ಈ ರೀತಿಯ ದೃಶ್ಯ ಮಾಡುವುದಿಲ್ಲ ಎಂದೂ ಹೇಳಿಲ್ಲ. ಆದರೆ ಕನಿಷ್ಠ ದೃಶ್ಯದ ಕುರಿತು ಮಾಹಿತಿ ನೀಡಬೇಕು. ಮಾನಸಿಕವಾಗಿ ಸಿದ್ಧಳಾಗಬೇಕು. ಆದರೆ ನನಗೆ ಈ ಅವಕಾಶವೇ ನೀಡಲಿಲ್ಲ ಎಂದು ಅಂಜನಾ ಹೇಳಿದ್ದಾರೆ. ಕನಿಷ್ಠ ಅರ್ಧ ಗಂಟೆ ಮೊದಲು ಹೇಳಿದ್ದರೂ ತಯಾರಿ ಮಾಡಿಕೊಳ್ಳುತ್ತಿದ್ದೆ. ಆದರೆ ಏಕಾಏಕಿ ಬಂದು ಚುಂಬಿಸಿದಾಗ ನನ್ನ ಪರಿಸ್ಥಿತಿ ಹೇಗಾಗಿರಬೇಡ? ಎಂದು ಅಂಜನಾ ಹೇಳಿದ್ದಾರೆ.

ಈ ದೃಶ್ಯದ ಕುರಿತು ವಿರೋಧ ವ್ಯಕ್ತಪಡಿಸಬೇಕೆಂದು ನಾನು ನಿರ್ಧರಿಸಿದ್ದೆ. ಆದರೆ ನನಗೆ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲದ ಕಾರಣ ಚಿತ್ರದದಿಂದ ತೆಗೆದು ಹಾಕುವ ಭಯ ಕಾಡಿತ್ತು. ಹೀಗಾಗಿ ಅನಿವಾರ್ಯವಾಗಿ ಮೌನವಹಿಸಬೇಕಾಯಿತು.ಈ ಮೌನವನ್ನು ನಿರ್ದೇಶಕರು ಹಲವು ಬಾರಿ ದೃಶ್ಯಗಳ ಶೂಟಿಂಗ್ ನಡೆಸುವಾಗ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅಂಜನಾ ಹೇಳಿದ್ದಾರೆ. 

ನಟಿ ಪೂಜಾ ಹೆಗ್ಡೆಗೆ ಕಷ್ಟದ ಸಮಯ: ಈ ಚಿತ್ರದ ಲಿಪ್‌ಲಾಕ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!