
ನವದೆಹಲಿ(ಫೆ.09) ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಡಿಯಾ ಹೀಗೆ ಸುಂದರ ಯುವತಿಯರಿಗೆ ಹಲವು ವೇದಿಕೆ ಇರುವಂತೆ ಪುರುಷರಿಗೂ ಇದೆ. ವಿಶ್ವದ ಅತ್ಯಂತ ಸುಂದರ ಪುರುಷ ಅಥವಾ ಮೋಸ್ಟ್ ಹ್ಯಾಂಡ್ಸಮ್ ಮ್ಯಾನ್ ಹಣೆಪಟ್ಟಿ ಯಾರಿಗೆ ಸಿಕ್ಕಿದೆ? ಇದೀಗ ವಿಶ್ವದ ಮೋಸ್ಟ್ ಹ್ಯಾಂಡ್ಸಮ್ ಲಿಸ್ಟ್ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ಹೀರೋ ಹೃತಿಕ್ ರೋಷನ್ ಸ್ಥಾನ ಪಡೆದಿದ್ದಾರೆ. ಹೌದು, ಟಾಪ್ 5 ಪಟ್ಟಿಯಲ್ಲಿ ಹೃತಿಕ್ ರೋಷನ್ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ ನಂಬರ್ 1 ಸ್ಥಾನ, ದಕ್ಷಿಣ ಕೊರಿಯಾದ ಗಾಯಕ ಹಾಗೂ ಸಾಹಿತ್ಯಕಾರ ಬಿಟಿಎಸ್ ವಿ.
ಕಿಮ್ ತಹ್ಯಂಗ್(ಬಿಟಿಎಸ್ ವಿ) ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ಸೂಪರ್ ಹೀರೋ ಹೃತಿಕ್ ರೋಶನ್ 5ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅನ್ನೋ ಹೆಗ್ಗಳಿಕೆಗೆ ಹೃತಿಕ್ ರೋಶನ್ ಪಾತ್ರರಾಗಿದ್ದಾರೆ. ವಯಸ್ಸು 51 ಆದರೂ ಹೃತಿಕ್ ಈಗಲೂ ಕಟ್ಟುಮಸ್ತಾದ ದೇಹ, ಆಕರ್ಷಕ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಸಾಹಸಮಯ ಪಾತ್ರಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಹೃತಿಕ್ ರೋಶನ್ ಇದೀಗ ವಿಶ್ವದ ಅತ್ಯಂತ ಸುಂದರ ಪರುಷರ ಪಟ್ಟಿಯಲ್ಲಿ ಸ್ಥಾನ ಪಡೆದ 5ನೇ ಹ್ಯಾಂಡ್ಸಮ್. ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಅದ್ಧೂರಿಯಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟ ಹೃತಿಕ್ ರೋಶನ್ ಯುವ ಸಮೂಹದ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ. ಬಳಿಕ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹೃತಿಕ್ ಜನಪ್ರಿಯತೆ ಹಾಗೇ ಇದೆ.
ಯುವಕರೇ, ಹ್ಯಾಂಡ್‌ಸಮ್ ಹಂಕ್ ಆಗಲು ಬಯಸುವಿರಾ? ನಿಮ್ಮ ಈ ಶೈಲಿ ಬದಲಿಸಿಕೊಳ್ಳಿ
ವಿಶ್ವದ ಟಾಪ್ 10 ಸುಂದರ ಪುರುಷರು
ಬಿಟಿಎಸ್ ವಿ(ಕಿಮ್ ತಹ್ಯಂಗ್)
ಬ್ರಾಡ್ ಪಿಟ್
ರೊಬರ್ಟ್ ಪ್ಯಾಟಿನ್ಸನ್
ನೊಹಾ ಮಿಲ್ಸ್
ಹೃತಿಕ್ ರೋಶನ್
ಜಸ್ಟಿನ್ ಟ್ರುಡು
ಕ್ರಿಸ್ ಇವಾನ್ಸ್
ಹೆನ್ರಿ ಕ್ಯಾವಿಲ್
ಟಾಮ್ ಕ್ರೂಸ್
ಬ್ರಾಡ್ಲಿ ಕೂಪರ್
ಹಾಲಿವುಡ್ ತಾರೆಗಳಾದ ಬ್ರಾಡ್ ಪಿಟ್, ರಾಬರ್ಟ್ ಪ್ಯಾಟಿನ್ಸನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ನೋವಾ ಮಿಲ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೆನಡಾದ ಮಾಡೆಲ್ ಮತ್ತು ನಟ. ಜಸ್ಟಿನ್ ಟ್ರೂಡೊ ಆರನೇ ಸ್ಥಾನದಲ್ಲಿದ್ದಾರೆ.
ಕ್ರಿಸ್ ಇವಾನ್ಸ್, ಹೆನ್ರಿ ಕ್ಯಾವಿಲ್, ಟಾಮ್ ಕ್ರೂಸ್ ಇತರ ಸ್ಥಾನಗಳಲ್ಲಿದ್ದಾರೆ. ಆಸ್ಕರ್ ನಾಮನಿರ್ದೇಶನಗೊಂಡ ನಟ ಬ್ರಾಡ್ಲಿ ಕೂಪರ್ ಹತ್ತನೇ ಸ್ಥಾನದಲ್ಲಿದ್ದಾರೆ.
ಹ್ಯಾಂಡ್ ಸಮ್ ಹುಡುಗ ನೀವಾಗಿದ್ರೆ ಮದುವೆಗೆ ಸಿದ್ಧರಾಗಿ! ವೈರಲ್ ಆಗಿದೆ ವರಾನ್ವೇಷಣೆ ಪೋಸ್ಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.