ಶ್ರೀದೇವಿ ಸಾವಿಗೆ 7 ವರ್ಷ: ಸ್ವಂತ ತಂಗಿಗೇ ನಟಿಯಿಂದ ಮೋಸ? ಅಂತ್ಯಕ್ರಿಯೆಗೆ ಗೈರಾಗಿದ್ದೇಕೆ? ಯಾರೀ ನಿಗೂಢ ಸಹೋದರಿ?

Published : Feb 09, 2025, 05:16 PM ISTUpdated : Feb 10, 2025, 10:16 AM IST
ಶ್ರೀದೇವಿ ಸಾವಿಗೆ 7 ವರ್ಷ: ಸ್ವಂತ ತಂಗಿಗೇ ನಟಿಯಿಂದ ಮೋಸ? ಅಂತ್ಯಕ್ರಿಯೆಗೆ ಗೈರಾಗಿದ್ದೇಕೆ? ಯಾರೀ ನಿಗೂಢ ಸಹೋದರಿ?

ಸಾರಾಂಶ

2018ರಲ್ಲಿ ದುಬೈನ ಹೋಟೆಲ್‌ನಲ್ಲಿ ಬಾತ್‌ಟಬ್‌ನಲ್ಲಿ ಶ್ರೀದೇವಿ ನಿಗೂಢವಾಗಿ ಮೃತಪಟ್ಟರು. ತಾಯಿಯ ಆಸ್ಪತ್ರೆ ನಿರ್ಲಕ್ಷ್ಯ ಪ್ರಕರಣದ ಪರಿಹಾರ ಹಣದ ವಿಚಾರದಲ್ಲಿ ತಂಗಿ ಶ್ರೀಲತಾ ಜೊತೆ ದ್ವೇಷವಿತ್ತು. ಶ್ರೀದೇವಿ ಸಾವಿನ ಸಮಯದಲ್ಲಿ ಶ್ರೀಲತಾ ಉಪಸ್ಥಿತರಿದ್ದರೂ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಶ್ರೀದೇವಿ ಸಾವಿನ ನಂತರ ಶ್ರೀಲತಾ ದಂಪತಿ ಹಲವು ಆಸ್ತಿಗಳ ಒಡೆಯರಾದರು.

ಸಿನಿ ಪ್ರಿಯರ ಕನಸಿನ ಕನ್ಯೆ, ಒಂದು ಕಾಲದಲ್ಲಿ ಇಡೀ ಇಂಡಸ್ಟ್ರಿಯನ್ನು ಬೆರಳ ತುದಿಯಲ್ಲಿ ಆಡಿಸಿದಾಕೆ, ದಶಕದವರೆಗೆ ನಂಬರ್​ 1 ಪಟ್ಟವನ್ನು ಬಿಟ್ಟುಕೊಡದ ಸೌಂದರ್ಯದ ಘನಿ ಶ್ರೀದೇವಿ ದುರಂತ ಅಂತ್ಯಕಂಡು ಇದೀಗ ಏಳು ವರ್ಷ. 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. 

 ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್‌ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆದಿವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ   ಬದುಕಿರುತ್ತಿದ್ದರೆ, 62 ವರ್ಷ ವಯಸ್ಸಾಗಿರುತ್ತಿತ್ತು.  

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

ಇಂತಿಪ್ಪ ಶ್ರೀದೇವಿಗೆ ಓರ್ವ ಸಹೋದರಿ ಇದ್ದಾರಾ? ಆಕೆಗೆ ನಟಿ ಮೋಸ ಮಾಡಿದ್ರಾ? ಅಕ್ಕನಂತೆಯೇ ಸಿನಿಮಾದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಈ ಶ್ರೀಲತಾ ಯಾರು? ಇವೆಲ್ಲವೂ ಈಗ ಬೆಳಕಿಗೆ ಬಂದಿದೆ.  ದಿಢೀರ್​ ಎಂದು ಶ್ರೀದೇವಿ ತಂಗಿ ಶ್ರೀಲತಾ ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಯಾರೀ ಶ್ರೀಲತಾ ಎನ್ನುವುದು ಬಹುತೇಕರಿಗೆ ತಿಳಿದಿರಲಿಕ್ಕೇ ಇಲ್ಲ. ಅಷ್ಟಕ್ಕೂ ಇವರು ಶ್ರೀದೇವಿ ಅವರ ತಂಗಿ! ಹೌದು.  ಶ್ರೀದೇವಿ ಅವರಂತೆಯೇ ಸಿನಿಮಾದಲ್ಲಿ ಮಿಂಚಬೇಕು ಎಂಬ ಆಸೆ ಇದ್ದರೂ, ಶ್ರೀಲತಾ ಅವರ ಆಸೆ ಈಡೇರಿರಲಿಲ್ಲ. ಕೊನೆಗೆ ಅಕ್ಕನ ಮ್ಯಾನೇಜರ್​ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸಿನಿಮಾ ಶೂಟಿಂಗ್​ ವೇಳೆ ಶ್ರೀದೇವಿ  ಶ್ರೀಲತಾ ಜೊತೆ ಸೆಟ್‌ಗೆ ಬರುತ್ತಿದ್ದರು,  ಅವರ ನಡುವೆ ಸಾಕಷ್ಟು ಪ್ರೀತಿ ಇತ್ತು ಎಂದೇ ಹೇಳಲಾಗುತ್ತಿದೆ, ಸದಾ ಶ್ರೀದೇವಿ ತಂಗಿಯನ್ನು ಹೊಗಳುತ್ತಿದ್ದರು, ಶ್ರೀಲತಾ ಕೂಡ ಅಕ್ಕನನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಆಪ್ತ ವಲಯಗಳು ಹೇಳುತ್ತಿವೆ.

ಆದರೆ, ಅಕ್ಕ-ತಂಗಿಯರ ನಡುವೆ ದ್ವೇಷದ ಜ್ವಾಲೆ ಭುಗಿಲೆದ್ದಿದ್ದು ಇವರ ತಾಯಿಯ ಸಾವಿನ ಬಳಿಕ.  1996 ರಲ್ಲಿ  ತಾಯಿ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ತಾಯಿ ಸಾವನ್ನಪ್ಪಿದರು.  ಶ್ರೀದೇವಿಯವರು ಆಸ್ಪತ್ರೆ ವಿರುದ್ಧ ಕೋರ್ಟ್​ ಮೊರೆ ಹೋದರು.  ಈ ಪ್ರಕರಣದಲ್ಲಿ ಗೆದ್ದು ಇವರಿಗೆ ಆಸ್ಪತ್ರೆಯಿಂದ 7.2 ಕೋಟಿ ರೂಪಾಯಿ ಪರಿಹಾರ ಸಿಕ್ಕಿತು. ಆದರೆ ಶ್ರೀದೇವಿಯವರು ಸಂಪೂರ್ಣ ಹಣವನ್ನು ತಾವೊಬ್ಬರೇ ಇಟ್ಟುಕೊಂಡರು, ತಂಗಿಗೆ ಬಿಡಿಗಾಸೂ ನೀಡಲಿಲ್ಲ ಎನ್ನಲಾಗಿದೆ. ಇದೇ ಸಹೋದರರಿಯರ ನಡುವೆ ಜಗಳಕ್ಕೆ ನಾಂದಿ ಹಾಡಿತು. ಕೊನೆಗೆ ಶ್ರೀಲತಾ ಅವರು, ಶ್ರೀದೇವಿ ವಿರುದ್ಧ  ಪ್ರಕರಣವನ್ನು ದಾಖಲಿಸಿದರು. ಅವರಿಗೆ ಎರಡು ಕೋಟಿ ರೂಪಾಯಿ ಪಾಲು ಸಿಕ್ಕಿತು.  ಅಕ್ಕ-ತಂಗಿಯ ನಡುವೆ ಕಹಿ ಇದ್ದ ನಡುವೆಯೇ,  ಫೆಬ್ರವರಿ 24, 2018 ರಂದು ದುಬೈನಲ್ಲಿ ಶ್ರೀದೇವಿ ನಿಗೂಢವಾಗಿ ಸಾವನ್ನಪ್ಪಿದ ಸಮಯದಲ್ಲಿ ಅವರ ಜೊತೆ ಇದ್ದ ಕೆಲವರ ಪೈಕಿ  ಶ್ರೀಲತಾ ಕೂಡ ಒಬ್ಬರು ಎನ್ನಲಾಗುತ್ತದೆ. ಆದರೆ ಸಾವಿನ ಕುರಿತು ಅವರು ಏನೂ ಹೇಳದೇ ಇರುವುದು ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಶ್ರೀಲತಾ ಬರದೇ ಇರುವುದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಶ್ರೀದೇವಿ ಸಾವಿನ ಬಳಿಕ ಅವರು ಹಲವು ಆಸ್ತಿಗಳಿಗೆ ಶ್ರೀಲತಾ ದಂಪತಿಯೇ ಒಡೆಯರಾದರು ಎಂದೂ ಹೇಳಲಾಗುತ್ತಿದ್ದು, ಇದೀಗ ಶ್ರೀಲತಾ ಅವರ ಹೆಸರು ಮತ್ತೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. 

ಚೈತ್ರಾ ವಾಸುದೇವನ್​ ಮನದಲ್ಲಿ 2ನೇ ಬಾರಿ ಪ್ರೀತಿ ಹುಟ್ಟಿದ್ಹೇಗೆ? ಹುಟ್ಟುಹಬ್ಬದ ರೋಚಕ ಸ್ಟೋರಿ ತೆರೆದಿಟ್ಟ ಆ್ಯಂಕರ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!