ರಿಲೀಸ್‌ಗೂ ಮೊದಲೇ ಶಾರುಖ್ 'ಜವಾನ್' ಸಿನಿಮಾ ಲೀಕ್; ಕಟ್ಟುನಿಟ್ಟಿನ ಆದೇಶ ನೀಡಿದ ದೆಹಲಿ ಹೈಕೋರ್ಟ್​

Published : Apr 26, 2023, 01:21 PM IST
ರಿಲೀಸ್‌ಗೂ ಮೊದಲೇ ಶಾರುಖ್ 'ಜವಾನ್' ಸಿನಿಮಾ ಲೀಕ್; ಕಟ್ಟುನಿಟ್ಟಿನ ಆದೇಶ ನೀಡಿದ ದೆಹಲಿ ಹೈಕೋರ್ಟ್​

ಸಾರಾಂಶ

ರಿಲೀಸ್‌ಗೂ ಮೊದಲೇ ಶಾರುಖ್ 'ಜವಾನ್' ಸಿನಿಮಾ ಲೀಕ್ ಆಗಿರುವ ಬಗ್ಗೆ ದೆಹಲಿ ಹೈಕೋರ್ಟ್​ ಕಟ್ಟುನಿಟ್ಟಿನ ಆದೇಶ ನೀಡಿದೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಜವಾನ್ ಮತ್ತು ಡಂಕಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಠಾಣ್ ಸಕ್ಸಸ್​ ಬಳಿಕ ಶಾರುಖ್ ಮತ್ತಷ್ಟು ಬ್ಯುಸಿಯಾಗಿದ್ದಾರೆ.  ಅಟ್ಲಿ ಕುಮಾರ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜವಾನ್ ಸಿನಿಮಾದಲ್ಲಿ ಶಾರುಖ್​ ಖಾನ್​ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ ಇತ್ತೀಚೆಗೆ ಈ ಸಿನಿಮಾದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಆಗಿದ್ದು ವೈರಲ್ ಆಗಿದೆ.  ಅಂದಹಾಗೆ ಈ ಸಿನಿಮಾಗೆ ಶಾರುಖ್​ ಖಾನ್​ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್ ಬ್ಯಾನರ್​ ಮೂಲಕ ಈ ಸಿನಿಮಾ ಮೂಡಿ ಬರುತ್ತಿದೆ. ದೃಶ್ಯ ಲೀಕ್ ಆಗಿ ವೈರಲ್ ಆಗಿರುವ ಬಗ್ಗೆ ಶಾರುಖ್​ ಖಾನ್​ ದೆಹಲಿ ಹೈಕೋರ್ಟ್​  ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಜಯ ಸಿಕ್ಕಿದೆ.

ಜವಾನ್​ ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಇದರಿಂದ ಸಿನಿಮಾತಂಡ ಹಾಗೂ ನಟ ಶಾರುಖ್​ ಖಾನ್​ ಫುಲ್ ಗರಂ ಆಗಿದ್ದರು. ಲೀಕ್ ಮಾಡಿದ ಕಿಡಿಗೇಡಿಗಳ ವಿರುದ್ಧ ಶಾರುಖ್ ಕಾನೂನಿನ ಸಮರ ಸಾರಿದ್ದರು. ಇದೀಗ ದೆಹಲಿ ಹೈ ಕೋರ್ಟ್ ಸೋಶಿಯಲ್​ ಮೀಡಿಯಾ ಖಾತೆ​, ಯೂಟ್ಯೂಬ್​, ವೆಬ್​ಸೈಟ್​ ಮುಂತಾದ ಕಡೆಗಳಲ್ಲಿ ಈ ದೃಶ್ಯಗಳನ್ನು ಅಪ್​ಲೋಡ್​ ಮಾಡಿರುವವರು ಕೂಡಲೇ ಡಿಲೀಟ್​ ಮಾಡಬೇಕೆಂದು ಆದೇಶ ನೀಡಿದೆ. 

ಸಿನಿಮಾದ ಪ್ರತಿ ಕಾಂಟೆಂಟ್​ ಕೂಡ ಪ್ರಚಾರಕ್ಕೆ ಸಹಕಾರಿ ಆಗುತ್ತದೆ. ಸೂಕ್ತ ಸಂದರ್ಭದಲ್ಲಿ ಕಲಾವಿದರ ಫಸ್ಟ್​ ಲುಕ್​, ಥೀಮ್​ ಮ್ಯೂಸಿಕ್​, ಡ್ಯಾನ್ಸ್​ ತುಣುಕು ಮುಂತಾದ ಕಾಂಟೆಂಟ್​ ಬಿಡುಗಡೆ ಮಾಡುವ ಮೂಲಕ ಪ್ರಚಾರ ಮಾಡಬೇಕು ಎಂದು ಚಿತ್ರತಂಡದವರು ಪ್ಲ್ಯಾನ್​ ರೂಪಿಸಿರುತ್ತಾರೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಹೀಗಿರುವಾಗ ಕಿಡಿಗೇಡಿಗಳು ದೃಶ್ಯ ಲೀಕ್​ ಮಾಡಿದರೆ ಚಿತ್ರತಂಡಕ್ಕೆ ನಷ್ಟ ಆಗುತ್ತದೆ. ಹಾಗಾಗಿ ‘ಜವಾನ್​’ ತಂಡದವರು ಕೋರ್ಟ್​ ಮೆಟ್ಟಿಲು ಏರಿದ್ದರು.

Shah Rukh Khan: ಸೋಫಾ ಖರೀದಿಗೆ ದುಡ್ಡಿಲ್ಲದಾಗ ಗೌರಿ ಖಾನ್​ ಹೀಗೆ ಪಣ ತೊಟ್ಟಿದ್ದರಂತೆ!

ಲೀಕ್ ಆಗಿರುವ ಜವಾನ್ ದೃಶ್ಯಗಲ್ಲಿ ಒಂದು ಶಾರುಖ್ ಖಾನ್ ಫೈಟಿಂಗ್ ದೃಶ್ಯ ಹಾಗೂ ಮತ್ತೊಂದು ದೃಶ್ಯದಲ್ಲಿ ಶಾರುಖ್ ಮತ್ತು ನಾಯಕಿ ನಾಯನತಾರ ಇಬ್ಬರ ಡಾನ್ಸ್ ವಿಡಿಯೋ ಆಗಿತ್ತು. ಇದೀಗ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಸಿನಿಮಾದ ಪ್ರಮುಖ ದೃಶ್ಯಗಳು ಲೀಕ್ ಆಗಿರುವುದು ಸಿನಿಮಾತಂಡಕ್ಕೆ ದೊಡ್ಡ ಹಿನ್ನಡೆ ಆಗಲಿದೆ. ಅಲ್ಲದೇ ಪ್ರಚಾರಕ್ಕೆ ಧಕ್ಕೆ ತರುತ್ತದೆ. ಪ್ರಚಾರಕ್ಕಾಗಿ ಸಿನಿಮಾಂತಡ ಕೋಟಿಗಟ್ಟಲೇ ಖರ್ಚು ಮಾಡುತ್ತದೆ. ಇದು ಸಿನಿಮಾತಂಡಕ್ಕೆ ನಷ್ಟವಾಗಲಿದೆ. ಅಷ್ಟೆಯಲ್ಲದೇ ಸಿನಿಮಾ ರಿಲೀಸ್ ಬಳಿಕ ಪೈರಸಿ ಕಾಟ ಶುರುವಾಗಬಹುದು ಎನ್ನುವ ಕಾರಣಕ್ಕೆ ಶಾರುಖ್ ಕೋರ್ಟ್ ಮೆಟ್ಟಿಲೇರಿದ್ದರು. 

2023ರ ನಿರೀಕ್ಷೆಯ ಸಿನಿಮಾಗಳಲ್ಲಿ ದಕ್ಷಿಣದ ಏಕೈಕ ಚಿತ್ರ; ಶಾರುಖ್, ಸಲ್ಮಾನ್ ಹಿಂದಿಕ್ಕಿದ ಅಲ್ಲು ಅರ್ಜುನ್

ಜವಾನ್ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ನಯನತಾರಾ ನಟಿಸುತ್ತಿದ್ದಾರೆ. ವಿಶೇಷ ಎಂದರೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ವಿಶೇಷ ಹಾಡಿನಲ್ಲಿ ದೀಪಿಕಾ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ವಿಜಯ್​ ಸೇತುಪತಿ ಕೂಡ ನಟಿಸಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜೂನ್​ 2ರಂದು ಬಿಡುಗಡೆ ಆಗಲಿದೆ. ಪಠಾಣ್ ಸಕ್ಸಸ್ ನಲ್ಲಿರುವ ಶಾರುಖ್ ಜವಾನ್ ಮೂಲಕ ಮತ್ತೊಂದು ಹಿಟ್ ನೀಡುತ್ತಾರಾ ಕಾದುನೋಡಬೇಕು.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?