'ಬಾಹುಬಲಿ'ಯ ದೊಡ್ಡ ಸಕ್ಸಸ್ ಯಾರು ನಿರೀಕ್ಷಿಸಿರಲಿಲ್ಲ; ಸಮಂತಾ 'ಶಾಕುಂತಲಂ' ಸೋಲಿಗೆ ನಟಿ ಮಧೂ ರಿಯಾಕ್ಷನ್

Published : Apr 26, 2023, 12:32 PM IST
'ಬಾಹುಬಲಿ'ಯ ದೊಡ್ಡ ಸಕ್ಸಸ್ ಯಾರು ನಿರೀಕ್ಷಿಸಿರಲಿಲ್ಲ; ಸಮಂತಾ 'ಶಾಕುಂತಲಂ' ಸೋಲಿಗೆ ನಟಿ ಮಧೂ ರಿಯಾಕ್ಷನ್

ಸಾರಾಂಶ

'ಬಾಹುಬಲಿ'ಯ ದೊಡ್ಡ ಸಕ್ಸಸ್ ಯಾರು ನಿರೀಕ್ಷಿಸಿರಲಿಲ್ಲ, ಸಮಂತಾ 'ಶಾಕುಂತಲಂ' ಸೋಲಿನ ಬಗ್ಗೆ ನಟಿ ಮಧೂ ಪ್ರತಿಕ್ರಿಯೆ ನೀಡಿದ್ದಾರೆ. 

ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಬಿಗ್ ಬಜೆಟ್‌ನಲ್ಲಿ ತಯಾರಾಗಿದ್ದ ಶಾಕುಂತಲಂ ಸಿನಿಮಾ ರಿಲೀಸ್‌ಗೂ ಮೊದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದ್ದೂರಿಯಾಗಿ ತೆರೆಗೆ ಬಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯಸೋಲು ಕಂಡಿದೆ. ಈ ಚಿತ್ರದ ಮೇಲೆ ಸಮಂತಾ ಮತ್ತು ಸಿನಿಮಾತಂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇಡೀ ಸಿನಿಮಾತಂಡದ ನಿರೀಕ್ಷೆ ಹುಸಿಯಾಗಿದೆ. ಈ ಸಿನಿಮಾದಲ್ಲಿ ಸಮಂತಾ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಖ್ಯಾತ ನಟಿ ಮಧೂ ಮೇನಕಾ ಪಾತ್ರದಲ್ಲಿ ನಟಿಸಿದ್ದರು. 

ಶಾಕುಂತಲಂ ಸೋಲಿನ ಬಗ್ಗೆ ನಟಿ ಮಧೂ ಪ್ರತಿಕ್ರಿಯೆ ನೀಡಿದ್ದಾರೆ. ಸೋಲಿನ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಸೋಲು ತುಂಬಾ ನೋವಾಗಿದೆ ಎಂದಿರುವ ನಟಿ ಮಧೂ, ನಿರ್ಮಾಪಕರು ಈ ಚಿತ್ರಕ್ಕೆ ಎಲ್ಲವನ್ನೂ ನೀಡಿದ್ದರು. ಆದರೆ ಕಳೆದ ಪ್ರದರ್ಶನ ಕಂಡಿರುವುದು ತುಂಬಾ ಬೇಸರವಾಗಿದೆ. ಇಡೀ ವರ್ಷ ಚಿತ್ರಕ್ಕಾಗಿ ಶ್ರಮಿಸಲಾಗಿತ್ತು. ಯಾವುತ್ತು ಈ ಸಿನಿಮಾವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಅದ್ಭುತ ವಿಶ್ವಲ್ ಟ್ರೀಟ್ ಕೊಡಲು ಪ್ರಯತ್ನಿಸಿದ್ದಾರೆ. ಶೂಟಿಂಗ್ ಮಾಡುವಾಗ ಸಹ ಕಲಾವಿದರು ಅಥವಾ ತಂತ್ರಜ್ಞರಿಗೆ ಯಾವುದೇ ಒತ್ತಡ ಹೇರಿಲ್ಲ' ಎಂದು ಹೇಳಿದ್ದಾರೆ. 

ಇದೇ ಸಮಯದಲ್ಲಿ ಈ ಹಿಂದೆ ಸೂಪರ್ ಸಕ್ಸಸ್ ಕಂಡ ಸಿನಿಮಾಗಳನ್ನು ಉದಾಹರಣೆಗಳಾಗಿ ತೆಗೆದುಕೊಂಡರು. ಯಾವುದೇ ಸಿನಿಮಾದ ಯಶಸ್ಸು ಅಥವಾ ಸೋಲಿನ ಹಿಂದಿನ ನಿಖರವಾದ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. 'ಶಾಕುಂತಲಂ ಪಕ್ಕಾ ದಕ್ಷಿಣ ಭಾರತದ ಫ್ಲೇವರ್ ಇರುವ ಸಿನಿಮಾ. ಬಾಹುಬಲಿ, ಆರ್ ಆರ್ ಆರ್ ಸಿನಿಮಾಗಳು ಸಕ್ಸಸ್ ಕಂಡಿವೆ. ಆದರೆ ಆ ಸಿನಿಮಾಗಳ ಯಶಸ್ಸಿನ ಹಿಂದೆ ಯಾವುದೇ ನಿಖರವಾದ ಕಾರಣವಿಲ್ಲ. ಬಾಹುಬಲಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತದೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದ್ದರಿಂದ ಇದು ನಿಮಗೆ ನೋವುಂಟುಮಾಡುತ್ತದೆ. ಏಕೆಂದರೆ ಇದು ಎಲ್ಲರೂ ಕಷ್ಟಪಟ್ಟು ಶ್ರಮಿಸಿದ ಚಿತ್ರವಾಗಿದೆ' ಎಂದು ಹೇಳಿದ್ದಾರೆ. 

ಸಮಂತಾ SSLC ಮಾರ್ಕ್ಸ್‌ಕಾರ್ಡ್ ಮತ್ತೆ ವೈರಲ್; ಸ್ಟಾರ್ ನಟಿ ಹೇಳಿದ್ದೇನು?

ಶಕುಂತಲಂ ತೆಲುಗು ಭಾಷೆಯಲ್ಲಾದರೂ ಸಕ್ಸಸ್ ಕಾಣಬೇಕಿತ್ತು ಎಂದು ಮಧು ಹೇಳಿದ್ದಾರೆ. 'ಪೊನ್ನಿಯಿನ್ ಸೆಲ್ವನ್ 1 ಹಿಂದಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಅದು ತಮಿಳಿನಲ್ಲಿ ಬ್ಲಾಕ್‌ಬಸ್ಟರ್ ಆಗಿತ್ತು. ಹಿಂದಿ ಪ್ರೇಕ್ಷಕರನ್ನು ಮೋಡಿ ಮಾಡದಿದ್ದರೂ ಕನಿಷ್ಠಪಕ್ಷ ಈ ಚಿತ್ರ ತನ್ನ ಮೂಲ ಭಾಷೆಯ ಪ್ರೇಕ್ಷಕರನ್ನು ಸೆಳೆಯಬೇಕಿತ್ತು' ಎಂದು ಹೇಳಿದ್ದಾರೆ. 

16ನೇ ವಯಸ್ಸಿನಲ್ಲಿ ಸಮಂತಾ ಹೇಗಿದ್ದರು ನೋಡಿದ್ರಾ? ಆಗಲೇ ಫೇಮಸ್ ಈ ಸ್ಟಾರ್ ನಟಿ!

ಶಾಕುಂತಲೆಯಾಗಿ ಸಮಂತಾ ನಟಿಸಿದ್ರೆ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದರು. ಸಮಂತಾ ಮಗಳ ಪಾತ್ರದಲ್ಲಿ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?