ಅರೆರೆ ಎಂಥ ನಟನೆ, ರಶ್ಮಿಕಾಗೆ ಸಿಕ್ತು ಪುಷ್ಪಾ ಹೀರೋ ಸರ್ಟಿಫಿಕೇಟ್; ಏನಂದ್ರು ಅಲ್ಲು ಅರ್ಜುನ್?

By Shriram Bhat  |  First Published Mar 6, 2024, 1:31 PM IST

ನಟಿ ರಶ್ಮಿಕಾ ಮಂದಣ್ಣ, ಸಹನಟ-ತೆಲುಗಿನ ಹ್ಯಾಂಡಸಮ್‌ ಹೀರೋ ಅಲ್ಲು ಅರ್ಜುನ್ ಮಾತಿಗೆ ಖುಷಿಗೊಂಡಿದ್ದಾರೆ. ತಾವು ಗ್ಲಾಮರ್‌ಲೆಸ್ ರೋಲ್ ಒಪ್ಪಿಕೊಂಡು, ಚೆನ್ನಾಗಿ ನಟಿಸುತ್ತಿರುವ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದು ರಶ್ಮಿಕಾಗೆ ಸಖತ್ ಖುಷಿ ಕೊಟ್ಟಿದೆ ಎನ್ನಬಹುದು. 


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಬಹುದೊಡ್ಡ ಸರ್ಟಿಫಿಕೇಟ್ ಸಿಕ್ಕಂತಾಗಿದೆ. ಅದು ಎಂಥದ್ದು ಗೊತ್ತಾ? ಸ್ವತಃ ನಟ ಅಲ್ಲು ಅರ್ಜುನ್ ನಟಿ ರಶ್ಮಿಕಾ ಎದುರಿಗೇನೇ ಪುಷ್ಪಾ ನಟಿಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ತಮ್ಮ ಸಹನಟ, ಪುಷ್ಪಾ ಹೀರೋ ಅಲ್ಲು ಅರ್ಜುನ್ ತಮ್ಮ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಂತೆ ಪಕ್ಕದಲ್ಲೇ ಆಸೀನರಾಗಿ ಮುಗುಳ್ನುತ್ತಿದ್ದ ನಟಿ ರಶ್ಮಿಕಾ ಮುಖ ಅರಳಿದ ಕೆಂದಾವರೆ ಆಗಿದೆ. ನಟಿ ರಶ್ಮಿಕಾ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು. 

ಹಾಗಿದ್ದರೆ ಅಲ್ಲು ಅರ್ಜುನ್ ಹೇಳಿದ್ದೇನು ನೋಡಿ.. 'ನಟಿ ರಶ್ಮಿಕಾ 'ಪುಷ್ಪಾ 2'ದಲ್ಲಿ ಬಹಳಷ್ಟು ಒಳ್ಳೆಯ ಪರ್ಫಾಮೆನ್ಸ್ ಮಾಡಿದ್ದಾರೆ. ನನಗೆ ಭಯವಿತ್ತು, ಯಾಕೆಂದರೆ ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ರೋಲ್ ನಾರ್ಮಲ್‌ ಹುಡುಗಿ ಹಾಗೂ ಗ್ಲಾಮರಸ್ ಪಾತ್ರವಲ್ಲ. ಬದಲಿಗೆ ತೀರಾ ವಿಭಿನ್ನ ಎನಿಸುವ, ಒಂಥರಾ ಗ್ಲಾಮರ್‌ಲೆಸ್ ರೋಲ್. ಅದನ್ನು ಒಪ್ಪಿಕೊಂಡು, ನಾನು ಈ ಪಾತ್ರದಲ್ಲಿ ಚೆನ್ನಾಗಿ ಕಾಣುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು, ಅರಗಿಸಿಕೊಂಡು ನಟಿಸುವುದು ನಿಜವಾಗಿಯೋ ಒಬ್ಬ ನಟಿಗೆ ಕಷ್ಟವೇ. ಆದರೆ, ಅಂಥ ಪಾತ್ರವನ್ನು ನಟಿ ರಶ್ಮಿಕಾ ಈ 'ಪುಷ್ಪಾ 2'ದಲ್ಲಿ ಸಮರ್ಥವಾಗಿ ನಿಭಾಯಿಸುತ್ತ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ' ಎಂದಿದ್ದಾರೆ ಅಲ್ಲು ಅರ್ಜುನ್.

Tap to resize

Latest Videos

ಟಿಪಿಎಲ್ ಸೀಸನ್-3 ಮುಕ್ತಾಯ, ಕಿರುತೆರೆ ಕ್ರಿಕೆಟ್ ಲೀಗ್ ಈ ಸೀಸನ್‌ನಲ್ಲಿ ಗೆದ್ದವರು ಯಾರು?

ನಟಿ ರಶ್ಮಿಕಾ ಮಂದಣ್ಣ, ಸಹನಟ-ತೆಲುಗಿನ ಹ್ಯಾಂಡಸಮ್‌ ಹೀರೋ ಅಲ್ಲು ಅರ್ಜುನ್ ಮಾತಿಗೆ ಖುಷಿಗೊಂಡಿದ್ದಾರೆ. ತಾವು ಗ್ಲಾಮರ್‌ಲೆಸ್ ರೋಲ್ ಒಪ್ಪಿಕೊಂಡು, ಚೆನ್ನಾಗಿ ನಟಿಸುತ್ತಿರುವ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದು ರಶ್ಮಿಕಾಗೆ ಸಖತ್ ಖುಷಿ ಕೊಟ್ಟಿದೆ ಎನ್ನಬಹುದು. ಪುಷ್ಪಾದಲ್ಲಿ ನಟಿ ರಶ್ಮಿಕಾ ಅವರದು ಸೀದಾ ಸಾದಾ ಹುಡುಗಿಯ ಪಾತ್ರ, ಸ್ವಲ್ಪ ರಫ್ ರೋಲ್ ಎನ್ನಬಹುದು. ಆ ಪಾತ್ರದಲ್ಲಿ ಗ್ಲಾಮರ್‌ಗೆ ಅವಕಾಶವೇ ಇಲ್ಲ. ಅದರಲ್ಲೂ ಈಗ ಶೂಟಿಂಗ್ ನಡೆಸಲಾಗುತ್ತಿರುವ 'ಪಷ್ಪಾ 2' ಚಿತ್ರವಂತೂ ಫುಲ್ ಗ್ಲಾಮರ್‌ಲೆಸ್ ರೋಲ್. ಹೀಗಾಗಿ ತಾವು ತೆರೆಯಲ್ಲಿ ಸ್ವಲ್ಪವೂ ಚೆಂದ ಕಾಣುವುದಿಲ್ಲ ಎಂಬುದನ್ನು ಅರಿತೇ ನಾಯಕಿ ನಟಿ ಅಭಿನಯಿಸುವುದು ಅನಿವಾರ್ಯ ಎನ್ನುವಂಥ ಪಾತ್ರ. 

ಪುಷ್ಪಾ ಹೀರೋ ನಟನೆ ಬಗ್ಗೆ ಅಭಿಪ್ರಾಯ ಹೇಳಿದ ರಶ್ಮಿಕಾ; ಅಲ್ಲು ಅರ್ಜುನ್ ರಿಯಾಕ್ಷನ್ ಏನು?

ಆದರೆ, ಹ್ಯೂಜ್ ಫ್ಯಾನ್ ಫಾಲೋವರ್ಸ್‌ ಹೊಂದಿರುವ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಎಂಥ ಪಾತ್ರವಾದರೂ ಸೈ, ಮಾಡುತ್ತೇನೆ. ತಾವೊಬ್ಬರು ಕೇವಲ ಗ್ಲಾಮರ್ ಗೊಂಬೆಯಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ ಎನ್ನಬಹುದು. ಈಗಾಗಲೇ ಬಿಡುಗಡೆಯಾಗು ಸೂಪರ್ ಹಿಟ್ ದಾಖಲಿಸಿರುವ ಪುಷ್ಪಾ ಚಿತ್ರದಲ್ಲಿ ರಶ್ಮಿಕಾ ನಟನೆಯ  ಬಗ್ಗೆ ಬಹಳಷ್ಟು ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ. ಇದೀಗ 'ಪುಷ್ಪಾ 2' ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಈಗಾಗಲೇ ರಶ್ಮಿಕಾ ನಟನೆಯ ಬಗ್ಗೆ ಅಲ್ಲು ಅರ್ಜುನ್ ಮೆಚ್ಚುಗೆ ಮಾತನಾಡಿದ್ದಾರೆ. ಸಿನಿಮಾ ರಿಲೀಸ್ ಬಳಿಕ ನಟಿ ರಶ್ಮಿಕಾ ಅದೆಷ್ಟು ಮೆಚ್ಚುಗೆ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ!

ಭಾರತಿ ಮದುವೆ ಆಗುವ ಮೊದಲು ನಟ ವಿಷ್ಣುವರ್ಧನ್ ಲವ್ ಮಾಡಿದ್ದ ಹುಡುಗಿ ಯಾರು, ಈಗೆಲ್ಲಿದ್ದಾರೆ?

click me!