ಪತಿ ಶಾರುಖ್ ಖಾನ್ ಧರ್ಮವನ್ನು ನಾನು ಗೌರವಿಸುತ್ತೇನೆ. ಅದರ ಅರ್ಥ ನಾನು ಮತಾಂತರವಾಗುತ್ತೇನೆ ಎಂದಲ್ಲ ಎಂದು ಪತ್ನಿ ಗೌರಿ ಖಾನ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಧರ್ಮ ದಂಗಲ್ ಟೀಕೆಗಳಿಗೆ ಗೌರಿ ಉತ್ತರ ನೀಡಿದ್ದಾರೆ.
ಮುಂಬೈ(ಮೇ.28) ಶಾರುಖ್ ಖಾನ್ ಹಾಗೂ ಪತ್ನಿ ಗೌರಿ ಖಾನ್ ಹಲವು ಭಾರಿ ಧರ್ಮದ ವಿಚಾರದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಸಿನಿಮಾ ಬಿಡುಗಡೆ ವೇಳೆ ಇದೇ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಇದೀಗ ಮೊದಲ ಬಾರಿಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಧರ್ಮ, ಆರೋಪ, ಟೀಕೆಗಳಿಗೆ ಉತ್ತರಿಸಿದ್ದಾರೆ. ಶಾರುಖ್ ಖಾನ್ ಧರ್ಮವನ್ನು ನಾನು ಗೌರವಿಸುತ್ತೇನೆ. ಅದರ ಅರ್ಥ ನಾನು ಮತಾಂತರವಾಗುತ್ತೇನೆ ಎಂದಲ್ಲ ಎಂದು ಗೌರಿ ಕಾನ್ ಹೇಳಿದ್ದಾರೆ.
ಕಾಫಿ ವಿಥ್ ಕರಣ್ ಎಪಿಸೋಡ್‌ನಲ್ಲಿ ಗೌರಿ ಖಾನ್ ಹಲವು ವಿಚಾರಗಳ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಧರ್ಮದ ಕುರಿತು ನಮ್ಮೊಳಗೆ ಯಾವುದೇ ಚರ್ಚೆ, ಮಾತುಕತೆ ನಡೆಯಲ್ಲ. ಪ್ರತಿಯೊಬ್ಬರು ಅವರವರ ಧರ್ಮ ಪಾಲಿಸುತ್ತಾರೆ. ನಾನು ಶಾರುಖ್ ಖಾನ್ ಧರ್ಮವನ್ನು ಗೌರವಿಸುತ್ತೇನೆ. ಹಾಗಂತ ನಾನು ಇಸ್ಲಾಂಗೆ ಮತಾಂತರವಾಗುತ್ತೇನೆ ಎಂದಲ್ಲ. ಶಾರುಖ್ ಖಾನ್ ಕೂಡ ಯಾವತ್ತೂ ನನ್ನ ಧರ್ಮಕ್ಕೆ, ನನ್ನ ಸಂಪ್ರದಾಯಕ್ಕೆ ಅಗೌರವ ತೋರಿಲ್ಲ ಎಂದು ಗೌರಿ ಖಾನ್ ಹೇಳಿದ್ದಾರೆ.
undefined
ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!
ಪುತ್ರ ಆರ್ಯನ್ ಖಾನ್ ಹೆಚ್ಚು ಶಾರುಖ್ ಖಾನ್ ಧರ್ಮವನ್ನೇ ಪಾಲಿಸುತ್ತಾನೆ. ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರು ಯಾವುದೇ ಧರ್ಮ ಅನುಸರಿಸಬಹುದು. ಅದರಲ್ಲಿ ನಾವು ಯಾವುದೇ ಒತ್ತಡ ಹೇರುವುದಿಲ್ಲ ಎಂದು ಗೌರಿ ಖಾನ್ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಶಾರುಖ್ ಖಾನ್ ಕೂಡ ಇದೇ ಮಾತು ಹೇಳಿದ್ದರು. ಸಂದರ್ಶನ ಒಂದರಲ್ಲಿ ಶಾರುಖ್ ಖಾನ್, ನಾನು ಮುಸ್ಲಿಮ್, ಪತ್ನಿ ಹಿಂದೂ. ಆದರೆ ನಮ್ಮ ಮನೆಯಲ್ಲಿ ಹಿಂದೂ ಮುಸ್ಲಿಮ್ ಮಾತುಕತೆ ಬರುವುದಿಲ್ಲ. ನನ್ನ ಮಕ್ಕಳು ಹಿಂದೂಸ್ಥಾನದ ಮಕ್ಕಳು. ನನ್ನ ಮಗಳು ಚಿಕ್ಕವಳಿದ್ದಳು. ಶಾಲೆಯಿಂದ ನನ್ನಲ್ಲಿ ನಾವು ಯಾವ ಧರ್ಮ ಎಂದು ಕೇಳಿದ್ದಳು. ನಾವು ಭಾರತೀಯರು, ಯಾವುದೇ ಧರ್ಮ ನಮಗಿಲ್ಲ ಎಂದಿದ್ದೆ ಎಂದು ಶಾರುಖ್ ಸಂದರ್ಶನದಲ್ಲಿ ಹೇಳಿದ್ದರು.
ಗೌರಿ ಹಾಗೂ ಶಾರುಖ್ ಖಾನ್ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಇವರ ಮದುವೆಗೆ ಗೌರಿ ಪೋಷಕರ ಭಾರಿ ವಿರೋಧವಿತ್ತು. ಪ್ರಮುಖವಾಗಿ ಶಾರುಖ್ ಖಾನ್ ಬೇರೆ ಧರ್ಮ ಅನ್ನೋ ಕಾರಣಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್ 25, 1991ರಲ್ಲಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಮದುವೆಯಾಗಿದ್ದಾರೆ. ಇದೀಗ ಆರ್ಯನ್ ಖಾನ್, ಸುಹಾನ ಹಾಗೂ ಅಬ್‌ರಾಮ್ ಎಂಬ ಮೂರು ಮಕ್ಕಳ ಪೋಷಕರಾಗಿದ್ದಾರೆ.
ಗೌರಿ ಖಾನ್- ಟ್ವಿಂಕಲ್ ಖನ್ನಾವರೆಗೆ ಬಾಲಿವುಡ್ ಸ್ಟಾರ್ ಪತ್ನಿಯರ ಕರಾಳ ವಿವಾದಗಳು