ಆಕ್ಟಿಂಗ್, ಸೆಕ್ಸ್ ಇವರೆರಡರಲ್ಲಿ ಒಂದನ್ನು ಬಿಡಬೇಕು ಅಂದರೆ ಏನನ್ನು ಬಿಡ್ತೀರಾ ಅನ್ನೋ ಪ್ರಶ್ನೆಗೆ ಈ ಬಾಲಿವುಡ್ ನಟ ಆಕ್ಟಿಂಗೇ ಬಿಡ್ತೀನಿ ಅನ್ನೋದಾ..
ಇದು ಕೊಂಚ ಹಳೇ ವೀಡಿಯೋ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಟ್ರೆಂಡಿಂಗ್ ಆಗ್ತನೇ ಇದೆ. ಇದಕ್ಕೆ ಕಾರಣ ಬಾಲಿವುಡ್ ನಟ ಕೊಟ್ಟ ಹಿಲೇರಿಯಸ್ ಉತ್ತರ. ಅದು 'ಕಾಫಿ ವಿತ್ ಕರಣ್' ಶೋ. ಈ ಶೋ ಕರಣ್ ಅವರ ಕೊಂಚ ಅಶ್ಲೀಲ, ಕೊಂಚ ಕಾಮಿಡಿ ಬೆರೆತ ಪ್ರಶ್ನೆಗಳಿಗೆ ಫೇಮಸ್ಸು. ಎಷ್ಟೋ ಸಲ ಕರಣ್ ಅವರ ಕೆಟ್ಟ ಪ್ರಶ್ನೆಗಳಿಗೆ ಹೌಹಾರಿ ಶೋ ಬಿಟ್ಟು ಎದ್ದು ಹೋದ ಸೆಲೆಬ್ರಿಟಿಗಳೂ ಇದ್ದಾರೆ. ಇನ್ನೂ ಕೆಲ ಸೆಲೆಬ್ರಿಟಿಗಳಿಗೆ ಇದೊಂಥರ ಫನ್. ಆದರೆ ಸಿನಿಮಾ ರಿಲೀಸ್ ಹೊತ್ತಿಗೆ ಆಕ್ಟರ್‌ಗಳನ್ನು ಕ್ಯಾಚ್ ಹಾಕ್ಕೊಳ್ಳೋದು ಕರಣ್‌ಗೆ ಕರತಲಾಮಲಕ. ಈ ಟೈಮಲ್ಲಿ ಸಿನಿಮಾಗೆ ಪಬ್ಲಿಸಿಟಿ ಬೇಕೇ ಬೇಕು, ಹೀಗಾಗಿ ಇಷ್ಟ ಇಲ್ಲದೇ ಹೋದರೂ ಜನರಿಗೆ ರೀಚ್ ಆಗೋ ಕಾರಣಕ್ಕೆ ಸೆಲೆಬ್ರಿಟಿಗಳು ಈ ಶೋಗೆ ಹೋಗಿ ಬೆಲ್ ಹೊಡೆದು ಬರ್ತಿರ್ತಾರೆ. ಆದರೆ ಈ ಶೋದ ಪ್ರೋಮೋ ಬಿಟ್ಟಾಗ ಸೆಲೆಬ್ರಿಟಿಗಳ ಪಾಡು ಯಾರಿಗೂ ಬೇಡ. ಇದನ್ನೇ ಸೋಷಿಯಲ್ ಮೀಡಿಯಾದಲ್ಲಿ, ಮ್ಯಾಗಜೀನ್‌ಗಳಲ್ಲಿ ಚಪ್ಪರಿಸಿಕೊಂಡು ಚರ್ಚಿಸುತ್ತಿದ್ದರೆ ಜೀವ ಬಾಯಿಗೆ ಬಂದವರ ಹಾಗೆ ಬಾಯಿ ಬಾಯಿ ಬಡಿದುಕೊಳ್ಳುವ ಸ್ಥಿತಿ ನಟ, ನಟಿಯರದ್ದು.
ಇಲ್ಲಿ ಕೇಳೋ ಪ್ರಶ್ನೆಗಳಿಗೆ ತುಂಟ, ಸ್ಮಾರ್ಟ್ ಉತ್ತರಗಳೂ ಬಂದಿವೆ. ಅದರಲ್ಲೊಂದು ಬಾಲಿವುಡ್ ಈ ಫೇಮಸ್ ನಟ ನೀಡಿರೋ ಉತ್ತರ. ಆತನಿಗೆ ಕರಣ್ ಜೋಹರ್ ಕೇಳಿರೋ ಪ್ರಶ್ನೆ 'ಸೆಕ್ಸ್ (Sex) ಅಥವಾ ಆಕ್ಟಿಂಗ್ (Acting) ಇದರಲ್ಲಿ ಒಂದನ್ನು ಬಿಡಬೇಕು ಅಂದ್ರೆ ಯಾವುದನ್ನು ಬಿಡ್ತೀರಾ ಅಂತ. ಪಕ್ಕದಲ್ಲಿ ಹೀರೋಯಿನ್ ಕೂತಿದ್ರೂ ಅಪ್ರಾಮಾಣಿಕನಾಗದ ನಟ 'ಆಕ್ಟಿಂಗ್' ಅಂತಲೇ ಹೇಳಿ ಬಿಟ್ರು. ಪಕ್ಕದಲ್ಲಿ ಕೂತ ನಟಿ ಆತನ ಕಡೆ ಮುಖ ಸೊಟ್ಟ ಮಾಡಿ ನೋಡಿದಾಗ ಏನು ಮಾಡೋದಕ್ಕಾಗುತ್ತೆ, ಅದೇ ಫ್ಯಾಕ್ಟ್ ಅನ್ನೋ ಥರ ಈ ನಟ ರಿಯಾಕ್ಷನ್ ನೀಡಿದ್ರು.
ಅಯೋಧ್ಯೆಯಲ್ಲಿ ನಟಿ ಹೇಮಾಮಾಲಿನಿ: 75ನೇ ವಯಸ್ಸಲ್ಲೂ ಭರತನಾಟ್ಯ ಕಂಡು ಮೂಕವಿಸ್ಮಿತರಾದ ಪ್ರೇಕ್ಷಕರು
ಅಷ್ಟಕ್ಕೂ ಈ ನಟ ಯಾರು ಅನ್ನೋ ಪ್ರಶ್ನೆ ನಿಮ್ ತಲೆ ಕೊರೀತಿರಬಹುದು. ಮತ್ಯಾರೂ ಅಲ್ಲ, 'ಜಬ್ ವಿ ಮೆಟ್' ಖ್ಯಾತಿಯ ಶಾಹಿದ್ ಕಪೂರ್.
ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಶೋದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಜೊತೆಗೆ ಶಾಹಿದ್ ಕಪೂರ್ ಸೀನ್ ಶೇರ್ (screen share) ಮಾಡಿದ್ರು. ಕರಣ್ ಎಂದಿನ ತನ್ನ ಟ್ರಿಕ್ಕೀ ಪ್ರಶ್ನೆಗಳೊಂದಿಗೆ ಈ ತಾರೆಗಳ ಮುಂದೆ ಬಂದರು. ಆಗ ಶಾಹಿದ್‌ಗೆ ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪದ ಹಾಗೆ ಎದುರಾದ ಪ್ರಶ್ನೆ ಅಂದರೆ 'ಸೆಕ್ಸ್ ಆಕ್ಟಿಂಗ್ ಇವರೆಡರಲ್ಲಿ ಒಂದನ್ನು ಬಿಡಬೇಕು ಅಂದರೆ ಯಾವ್ದನ್ನು ಬಿಡ್ತೀರಾ ಅಂತ. ನಮ್ ಜಬ್ ವಿ ಮೆಟ್‌ನ ಸಿಈಓ ಶಾಹಿದ್ ಸಾಹೇಬರು ಪಕ್ಕದಲ್ಲಿರೋ ಸೋನಾಕ್ಷಿ ಮುಂದೆನೇ 'ಬೇಕಿದ್ರೆ ಆಕ್ಟಿಂಗ್ ಬಿಡ್ತೀನಿ, ಆದ್ರೆ ಸೆಕ್ಸ್ ಬಿಡಕ್ಕಾಗಲ್ಲ' ಅಂದುಬಿಟ್ಟರು. ಸೋನಾಕ್ಷಿ ಕಕ್ಕಾಬಿಕ್ಕಿಯಾಗಿ ಶಾಹಿದ್ ಕಡೆ ನೋಡಿದರೆ, 'ಅದ್ರಲ್ಲೇನು ತಪ್ಪು, ಊಟನಾ ಆಕ್ಟಿಂಗಾ ಅಂದರೆ ಊಟನೇ ಅಂತ ಹೇಳಬೇಕು ತಾನೇ. ಸೆಕ್ಸ್ ಕೂಡ ಊಟದ ಥರವೇ ಬೇಸಿಕ್ ಇನ್‌ಸ್ಟಿಂಗ್ಟ್ (basic instinct) ಅಲ್ವಾ' ಅನ್ನೋ ಥರ ರಿಯಾಕ್ಷನ್ ಕೊಟ್ಟರು.
'ಹೌದೌದು' ಅಂತ ವಾರೆ ನಗೆ ನಕ್ಕರು ಸೋನಾಕ್ಷಿ.
ಅಂದ ಹಾಗೆ 'ಟಿಪ್ ಟಿಪ್ ಬರ್‌ಸಾ ಪಾನಿ' ಹಾಡಿಗೆ ಮಾದಕವಾಗಿ ಮೈ ಬಳುಕಿಸಿದ ರವೀನಾ ಟಂಡನ್ ಈ ನಟನ ಫಸ್ಟ್ ಕ್ರಶ್ (first crush) ಅಂತೆ. ಈ ಡ್ಯಾನ್ಸ್ ನೋಡಿದಮೇಲೆ ಶಾಹಿದ್‌ಗೂ ಡ್ಯಾನ್ಸ್ ಮೇಲೆ ವ್ಯಾಮೋಹ ಬೆಳೆಯಿತಂತೆ. ಅಂದಹಾಗೆ ಕರೀನಾ ಕಪೂರ್, ಪ್ರಿಯಾಂಕಾ ಚೋಪ್ಡಾ ಸೇರಿ ಬಾಲಿವುಡ್ (Bollywood) ಅನೇಕ ನಟಿಯರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದ (Relationship) ಶಾಹೀದ್ ವಯಸ್ಸು ಮೂವತ್ತು ದಾಟಿದ ಕೂಡಲೇ ಇವ್ರ ಸಾವಾಸ ಅಲ್ಲ ಅಂತ ಮೀರಾ ರಜಪೂತ್ ಅನ್ನೋ ಇಪ್ಪತ್ತರ ಚೆಲುವೆಯ ಕೈ ಹಿಡಿದು ಫ್ಯಾಮಿಲಿ ಮ್ಯಾನ್ ಆದರು. ಮೊನ್ನೆ ಮೊನ್ನೆ ಹೊಸ ಸಿನಿಮಾದಲ್ಲಿ ಕೃತಿ ಸನೂನ್ ಜೊತೆ ಶಾಹಿದ್ ಕಪೂರ್ ಅವರ ಬೆಡ್ ರೂಮ್ ಸೀನ್ (bed room scene) ಸಖತ್ ವೈರಲ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ತಕ್ಕಮಟ್ಟಿನ ಗಳಿಕೆ ದಾಖಲಿಸಿ ಮುಂದೆ ಸಾಗ್ತಾ ಇದೆ.
'ಗೂಢಾಚಾರಿ-2' ಟೀಂ ಸೇರಿದ ಬಾಲಿವುಡ್ ಸ್ಟಾರ್; ತೆಲುಗು ನಟ ಅಡಿವಿಶೇಷ್ ಜೊತೆ ಇಮ್ರಾನ್ ಹಶ್ಮಿ