'ಗೂಢಾಚಾರಿ-2' ಟೀಂ ಸೇರಿದ ಬಾಲಿವುಡ್ ಸ್ಟಾರ್; ತೆಲುಗು ನಟ ಅಡಿವಿಶೇಷ್ ಜೊತೆ ಇಮ್ರಾನ್ ಹಶ್ಮಿ

Published : Feb 18, 2024, 05:45 PM ISTUpdated : Feb 18, 2024, 05:47 PM IST
'ಗೂಢಾಚಾರಿ-2' ಟೀಂ ಸೇರಿದ ಬಾಲಿವುಡ್ ಸ್ಟಾರ್; ತೆಲುಗು ನಟ ಅಡಿವಿಶೇಷ್ ಜೊತೆ ಇಮ್ರಾನ್ ಹಶ್ಮಿ

ಸಾರಾಂಶ

ಗೂಢಚಾರಿ 2 ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ  ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ  ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ  ಅವರೀಗ ಟಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. 

ಟಾಲಿವುಡ್ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡಿವಿಶೇಷ್ (Adivi Sesh)ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ. 'ಗೂಢಚಾರಿ 2' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಇದೀಗ ಗೂಢಚಾರಿ ಸೀಕ್ವೆಲ್ ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.

ಗೂಢಚಾರಿ 2 (Goodachari 2) ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ  ಇಮ್ರಾನ್ ಹಶ್ಮಿ (Emraan Hashmi)ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ  ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ  ಅವರೀಗ ಟಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. ಗೂಢಚಾರಿ ಬಳಗ ಇಮ್ರಾನ್ ಫಸ್ಟ್ ಲುಕ್ ರಿಲೀಸ್ ಮಾಡಿ  ಅವರನ್ನು ಸ್ವಾಗತಿಸಿದೆ. ಆದ್ರೆ ಯಾವ ಪಾತ್ರದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ ಎಂಬ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ಇಮ್ರಾನ್ ಹಶ್ಮಿ ಎಂಟ್ರಿಗೆ ಇಡೀ ಚಿತ್ರತಂಡ ಖುಷಿಯಾಗಿದೆ. 

ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!

'ಗೂಢಚಾರಿ 2' ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿಶೇಷ್ ಅಭಿನಯಿಸಿದ್ದ 'ಮೇಜರ್' ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು 'ಗೂಢಚಾರಿ 2' ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ; ರಾಕಿಂಗ್ ಸ್ಟಾರ್ ಯಶ್ ಹೀಗೆ ಹೇಳಿದ್ಯಾಕೆ?

'ಗೂಢಚಾರಿ 2' ಚಿತ್ರಕ್ಕೆ ಅಡಿವಿಶೇಷ್ ಅವರೇ ಕಥೆ ಬರೆದಿದ್ದಾರೆ. 'ಕಾರ್ತೀಕೇಯ 2, 'ಮೇಜರ್' ಮತ್ತು 'ದಿ ಕಾಶ್ಮೀರ್ ಫೈಲ್ಸ್' ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು 'ಗೂಢಚಾರಿ 2' ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ. 'ಪಲ್ ಮೀಡಿಯಾ ಫ್ಯಾಕ್ಟರಿ', ‘ಅಭಿಷೇಕ್ ಅಗರ್ವಾಲ್ ಆರ್ಟ್ಸ್’ ಹಾಗೂ ‘ಎ.ಕೆ. ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ ‘ಗೂಢಚಾರಿ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬನಿತಾ ಸಂಧು ಅಡಿವಿಶೇಷ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ತಾಯಿ ಸಮಾನಳಾದ ಅಕ್ಕ ಮಾಡು ಅಂದ್ರು, ಒಪ್ಪಿ ನಟಿಸಿದೆ; ಗುಟ್ಟು ಬಿಚ್ಚಿಟ್ಟ ಅಗ್ನಿ ಶ್ರೀಧರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!