ಲಡ್ಡು ಬಂದು ಬಾಯಿಗೆ ಬಿದ್ದಿಲ್ಲ, ಸಿಕ್ಕಿರುವ ಹಾಲಿವುಡ್ ಚಾನ್ಸ್ ಹಿಂದೆ ನೂರಾರು ಕಥೆಗಳಿವೆ!

By Shriram Bhat  |  First Published Jul 17, 2024, 11:49 AM IST

'ನನಗೆ ಭಾರತೀಯ ಸಿನಿರಂಗದಿಂದ ಮದುವೆಯಾದ ಬಳಿಕ ಕೂಡ ಬಹಳಷ್ಟು ಆಫರ್ಸ್ ಬಂದಿವೆ. ಆದರೆ, ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕಾರಣ, ನಾನು ನಿಕ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದೇನೆ. ನಾನು ನನ್ನ ಕೆರಿಯರ್ ಎಂದು..


ಬಾಲಿವುಡ್‌ನಲ್ಲಿ ಮಿಂಚಿ ಹಾಲಿವುಡ್‌ ಸಿನಿರಂಗಕ್ಕೂ ಕಾಲಿಟ್ಟಿರುವ ಪ್ರಿಯಾಂಕಾ ಚೋಪ್ರಾ, ಆಗಾಗ ಸಂದರ್ಶನಗಳಲ್ಲಿ ಮಾತನಾಡುತ್ತಾ ಇರುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) 'ನಾನು ಇಂದು ಹಾಲಿವುಡ್‌ ಸಿನಿಮಾದಲ್ಲಿ ಅವಕಾಶ ಪಡೆಯುತ್ತಿದ್ದೇನೆ. ಆದರೆ, ಈ ಚಾನ್ಸ್ ಹಿಂದೆ ಅದೆಷ್ಟೋ ಪರಿಶ್ರಮವಿದೆ. ಇದು ನನಗೆ ಸುಲಭವಾಗಿ ಒಲಿದು ಬಂದಿಲ್ಲ. ನಾನು ಅಮೆರಿಕಾಗೆ ಬಂದು ಇಲ್ಲಿ ಹೊಸಬಳಂತೆ ಅವಕಾಶಕ್ಕಾಗಿ ಅಲೆದಿದ್ದೇನೆ. ಆಫ್‌ಕೋರ್ಸ್‌ ನನಗೆ ಹಾಲಿವುಡ್ ಹೊಸದು ಕೂಡ' ಎಂದಿದ್ದಾರೆ. 

ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕಾದಲ್ಲಿ ಇರುವುದು ಗೊತ್ತೇ ಇದೆ. 2018ರಲ್ಲಿ ಹಾಲಿವುಡ್ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗರುವ ನಟಿ ಪ್ರಿಯಾಂಕಾ ಚೋಪ್ರಾ, ಆ ಬಳಿಕ ಭಾರತದಲ್ಲಿ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಪ್ರಿಯಾಂಕಾ ಅವರಿಗೆ ಬಾಲಿವುಡ್ ಅಥವಾ ಭಾರತೀಯ ಚಿತ್ರರಂಗದಲ್ಲಿ ಈಗಲೂ ಸಾಕಷ್ಟು ಆಫರ್ ಇದೆಯಂತೆ. ಆದರೆ ಅವರು ಮಾತ್ರ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣವನ್ನೂ ಸಹ ಅವರು ಬಹಿರಂಗ ಪಡಿಸಿದ್ದಾರೆ. 

Tap to resize

Latest Videos

undefined

ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್‌ ಹೇಳಿದ್ದು ಕೇಳಿ ಎಸ್‌ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?

'ನನಗೆ ಭಾರತೀಯ ಸಿನಿರಂಗದಿಂದ ಮದುವೆಯಾದ ಬಳಿಕ ಕೂಡ ಬಹಳಷ್ಟು ಆಫರ್ಸ್ ಬಂದಿವೆ. ಆದರೆ, ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕಾರಣ, ನಾನು ನಿಕ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದೇನೆ. ನಾನು ನನ್ನ ಕೆರಿಯರ್ ಎಂದು ಅವರಿಂದ ದೂರವಿದ್ದು ಜೀವಿಸಲು ಇಷ್ಟಪಡುವುದಿಲ್ಲ. ನನಗೆ ನಿಕ್ ಜತೆಯಲ್ಲೇ ಇದ್ದರಷ್ಟೇ ಖುಷಿ. ಹೀಗಾಗಿ ಶೂಟಿಂಗ್‌ ಸಲುವಾಗಿ ನಾನು ಭಾರತಕ್ಕೆ ಬಂದು ತಿಂಗಳಾನುಗಟ್ಟಲೆ ಅಲ್ಲಿರಲು ಅಸಾಧ್ಯ. ಇದೊಂದೇ ಕಾರಣಕ್ಕೆ ನಾನು ಬಾಲಿವುಡ್ ಹಾಗು ಭಾರತೀಯ ಸಿನಿಮಾ ಆಫರ್ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ. 

ಇನ್ನು ಇತ್ತೀಚೆಗೆ ಒಂದು ವೇದಿಕೆಯಲ್ಲಿ ಪ್ರಿಯಾಂಕಾ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ತಮ್ಮ ಹಾಗು ಪ್ರಿಯಾಂಕಾ ಮದುವೆ ಬಗ್ಗೆ  ಬಗ್ಗೆ ಒಂದು ಅಚ್ಚರಿ ಸ್ಟೇಟ್‌ಮೆಂಟ್ ನೀಡಿದ್ದಾರೆ. 'ನನಗೆ ನಮ್ಮಿಬ್ಬರ ಮದುವೆ ಬಗ್ಗೆ ರೀಗ್ರೇಟ್ ಇದೆ' ಎಂದಿದ್ದಾರೆ. ಅವರ ಮಾತನ್ನು ಕೇಳಿ ಸ್ಟೇಜ್ ಮೇಲಿದ್ದ ಹಲವರು ಶಾಕ್‌ಗೆ ಒಳಗಾಗಿದ್ದಾರೆ. ಇನ್ನೇನು ಅವರಿಬ್ಬರು ದೂರವಾಗುವ ದಿನ ಬಂದೇ ಬಿಡ್ತಾ ಅಂತ ಯೋಚಿಸಿ ಬಿಟ್ಟ ಕಣ್ಣು ಮುಚ್ಚದೇ ನಿಕ್‌ ಅವರನ್ನೇ ನೋಡಲು ಶುರು ಮಾಡಿದ್ದಾರೆ. ಆದರೆ ನಿಕ್ ಹೇಳಿದ್ದು ಬೇರೆಯದೇ ಸಂಗತಿ..!

ಶಿವರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಕೊಟ್ಟಿದ್ರು ಗಿಫ್ಟ್‌, ವಿಷ್ಣು ದಾದಾಗೆ ಅದ್ನ ಕೊಟ್ಟಿದ್ಯಾರು ಗೊತ್ತಾ? 

ನಿಕ್ ಜೊನಾಸ್ ಅವರು 'ನಾನು ಹಾಗು ಪ್ರಿಯಾಂಕಾ ಇಬ್ಬರೂ ನಮ್ಮ ವೆಡ್ಡಿಂಗ್ ಸಲುವಾಗಿ ಬಹಳಷ್ಟನ್ನು ಖರ್ಚು ಮಾಡಿದ್ದೇವೆ. ಆ ಬಗ್ಗೆ ನನಗೆ ರೀಗ್ರೆಟ್ ಇದೆ ಎಂದಿದ್ದಾರೆ. ನಿಕ್ ಹೇಳಿದ್ದೇನೆಂದರೆ, ನಾವಿಬ್ಬರೂ ನಮ್ಮ ಮದುವೆಯನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದರೆ ಸಾಕಿತ್ತು. ಯಾಕೆ ಅಷ್ಟೊಂದು ಗ್ರಾಂಡ್ ಆಗಿ, ಬಹಳಷ್ಟು ಡಾಲರ್ ವ್ಯಯಿಸಿ ಮದುವೆ ಮಾಡಿಕೊಳ್ಳಬೇಕಿತ್ತು? ಈಗ ಅದು ಅನಾವಶ್ಯಕ ಖರ್ಚು ಎನಿಸುತ್ತಿದೆ. ಆದರೆ, ಆಗಿದ್ದು ಆಗಿಹೋಗಿದೆ. ಆ ಬಗ್ಗೆ ನನಗೆ ನಿಜವಾಗಿಯೂ ಅಪರಾಧೀ ಭಾವ ಕಾಡುತ್ತಿದೆ. ಆದರೆ, ಈಗ ರೀಗ್ರೇಟ್ ಮಾಡಿಕೊಳ್ಳುವುದನ್ನು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ' ಎಂದಿದ್ದಾರೆ ನಿಕ್ ಜೊನಾಸ್. 

click me!