ಬೇಬಿ ಬಂಪ್ ಫೋಕಸ್ ಮಾಡಿಯೇ ಫೋಟೋ ಕ್ಲಿಕ್ಕಿಸಿದ್ದು, ರಿಚಾ ಜೊತೆಯಲ್ಲಿ ಪತಿ ಅಲಿ ಫಜಲ್ ಸಹ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಜೊತೆ ಭಾವನಾತ್ಮಕ ಸಾಲುಗಳನ್ನು ರಿಚಾ ಚಡ್ಡಾ ಬರೆದುಕೊಂಡಿದ್ದಾರೆ.
ಮುಂಬೈ: ಬಾಲಿವುಡ್ ತಾರಾ ದಂಪತಿ (Bollywood Couple) ಅಲಿ ಫಜಲ್ (Ali Fazal) ಮತ್ತು ರಿಚಾ ಚಡ್ಡಾ (Richa Chadha) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ರಿಚಾ ಚಡ್ಡಾ ಮೆಟರಿನಿಟಿ ಫೋಟೋಶೂಟ್ (Maternity Photoshoot) ಮಾಡಿಸಿಕೊಂಡಿದ್ದಾರೆ. ಬೇಬಿ ಬಂಪ್ (Baby Bump) ಫೋಕಸ್ ಮಾಡಿಯೇ ಫೋಟೋ ಕ್ಲಿಕ್ಕಿಸಿದ್ದು, ರಿಚಾ ಜೊತೆಯಲ್ಲಿ ಪತಿ ಅಲಿ ಫಜಲ್ ಸಹ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ (Instagram) ಫೋಟೋ ಜೊತೆ ಭಾವನಾತ್ಮಕ ಸಾಲುಗಳನ್ನು (Emotional Lines) ರಿಚಾ ಚಡ್ಡಾ ಬರೆದುಕೊಂಡಿದ್ದಾರೆ. ಆದ್ರೆ ಕಮೆಂಟ್ ಬಾಕ್ಸ್ ಬ್ಲಾಕ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ತಮ್ಮ ಫೋಟೋಶೂಟ್ ಬಗ್ಗೆ ಕಮೆಂಟ್ ಮಾಡೋದನ್ನು ತಪ್ಪಿಸಲು ಈ ರೀತಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ರಿಚಾ ಚಡ್ಡಾ ಪೋಸ್ಟ್
ಫೋಟೋಗಳ ಜೊತೆಯಲ್ಲಿ ರಿಚಾ ಚಡ್ಡಾ ಭಾವನಾತ್ಮಕವಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಇಷ್ಟು ಶುದ್ಧವಾದ ಪ್ರೀತಿ ಈ ಜಗತ್ತಿಗೆ ಏನು ಕೊಡಲು ಸಾಧ್ಯ? ಇಂತಹ ಅತ್ಯದ್ಭುತವಾದ ಜೀವನದ ಪಯಣದಲ್ಲಿ ನನ್ನ ಸಂಗಾತಿಯಾಗಿರೋದಕ್ಕೆ ಅಲಿ ಫಜಲ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ. ನಂತರ ಫೋಟೋಶೂಟ್‌ಗೆ ಸಹಾಯ ಮಾಡಿದ ಸ್ನೇಹಿತರಿಗೂ ರಿಚಾ ಧನ್ಯವಾದ ಸಲ್ಲಿಸಿದ್ದಾರೆ. ನಮ್ಮ ಮಗುವಿನ ಮೇಲೆ ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ಇರಲಿ ಎಂದು ಬರೆದು ಕೊನೆಗೆ ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದ್ಚ್ಯತೇ. ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಶಿಷ್ಯತೇ" ಎಂಬ ಸಂಸ್ಕೃತ ಶ್ಲೋಕ ಬರೆಯಲಾಗಿದೆ.
ಕೊನೆಗೆ ಕಮೆಂಟ್ ಬಾಕ್ಸ್ ಆಫ್ ಯಾಕೆ ಮಾಡಿರೋದರ ಬಗ್ಗೆ ರಿಚಾ ಚಡ್ಡಾ ಸ್ಪಷ್ಟನೆಯನ್ನು ನೀಡಿದ್ದಾರೆ. ನಾನು ಮಾಡಿರುವ ಈ ಪೋಸ್ಟ್ ನನ್ನ ಜೀವನದ ಅತ್ಯಂತ ಖಾಸಗಿ ವಿಷಯವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಕಿಡಿಗೇಡಿ ನೆಟ್ಟಿಗರಿಂದ ಬರುವ ನೆಗೆಟಿವ್ ಸಂದೇಶಗಳನ್ನು ಮೊದಲೇ ತಡೆದಿದ್ದಾರೆ.
ದೀಪಿಕಾ ಸುಳ್ಳು ಗರ್ಭಿಣಿ ಎಂದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ರಿಚಾ ಚಡ್ಡಾ!
ಫೆಬ್ರವರಿಯಲ್ಲಿ ಗುಡ್‌ನ್ಯೂಸ್ ಹಂಚಿಕೊಂಡಿದ್ದ ಜೋಡಿ
ರಿಚಾ ಚಡ್ಡಾ ಮತ್ತು ಅಲಿ ಫಜಲ್ 9ನೇ ಫೆಬ್ರವರಿಯಂದು ಪೋಷಕರಾಗುತ್ತಿರುವ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ 1+1=3 ಎಂಬ ಫೋಟೋ ಮತ್ತು ಗರ್ಭಿಣಿ ಎಮೋಜಿ ಚಿತ್ರ ಹಂಚಿಕೊಂಡಿದ್ದರು. ನಮ್ಮ ಜಗತ್ತಿನಲ್ಲಿ ಪುಟಾಣಿ ಹೃದಯ ಬಡಿತ ಆಗಮನ ಆಗುತ್ತಿದೆ. ಈ ಹೃದಯ ಬಡಿತ ನಮ್ಮ ಜಗತ್ತಿನ ಅತಿ ದೊಡ್ಡ ಶಬ್ದವಾಗಿದೆ ಎಂದು ಅಲಿ ಫಜಲ್ ಬರೆದುಕೊಂಡಿದ್ದರು. ರಿಚಾ ಚಡ್ಡಾ ಮತ್ತು ಅಲಿ ಫಜಲ್ 4 ಅಕ್ಟೋಬರ್ 2022ರಂದು ವೈವಾಹಿಕ ಬಂಧನಕ್ಕೊಳಗಾಗಿದ್ದರು. ಇಕೋ ಫ್ರೆಂಡ್ಲಿ ಥೀಮ್ ಅಡಿ ರಿಚಾ ಮತ್ತು ಅಲಿ ಮದುವೆ ನಡೆದಿತ್ತು.
ಹೀರಾಮಂಡಿ ಸಕ್ಸಸ್, ಮಿರ್ಜಾಪುರಕ್ಕೆ ಮಿಶ್ರ ಪ್ರತಿಕ್ರಿಯೆ
ರಿಚಾ ಚಡ್ಡಾ ಅಭಿನಯದ ಹೀರಾಮಂಡಿ ವೆಬ್ ಸಿರೀಸ್ ದೊಡ್ಡ ಯಶಸ್ಸು ಕಂಡಿತ್ತು. ಈ ವೆಬ್ ಸಿರೀಸ್‌ನಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದ್ರಿ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೀರಾಮಂಡಿ ಹೊಂದಿತ್ತು. ಇದೇ ತಿಂಗಳ ಜುಲೈ 5ರಂದು ಅಲಿ ಫೈಜಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಿರ್ಜಾಪುರ-3 ವೆಬ್ ಸಿರೀಸ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಗರ್ಭಿಣಿ ರಿಚಾ ಚಡ್ಡಾಗೆ ಕಾಡ್ತಿದೆ ಈ ಸಮಸ್ಯೆ, ಟ್ರೀಟ್ ಮಾಡದೇ ಕೈ ಎತ್ತಿದ್ರಾ ಡಾಕ್ಟರ್?