ಪೋಷಕರಿಗೆ ಥ್ಯಾಂಕ್ಸ್ ಹೇಳಿದ ಪ್ರಿಯಾಂಕಾ ಚೋಪ್ರಾ ಭಾರತದ ಬಗ್ಗೆ ಹಾಗ್ಯಾಕೆ ಹೇಳಿದ್ರೋ ಏನೋ!

By Shriram Bhat  |  First Published Mar 17, 2024, 1:07 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪೋಷಕರ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವಳಿರುವಾಗ ನನ್ನ ಅಮ್ಮ ನನಗೆ ಅಡುಗೆ ಕಲಿಸುವಾಗ ಒಂದು ಮಾತು ಹೇಳಿದ್ದರು. ನೀನು ನಿನ್ನಿಂದ ಸಾಧ್ಯವಾದಷ್ಟೂ ಅಡುಗೆ ಕಲಿಯಲು ಪ್ರಯತ್ನ ಪಡು.


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪೋಷಕರ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವಳಿರುವಾಗ ನನ್ನ ಅಮ್ಮ ನನಗೆ ಅಡುಗೆ ಕಲಿಸುವಾಗ ಒಂದು ಮಾತು ಹೇಳಿದ್ದರು. ನೀನು ನಿನ್ನಿಂದ ಸಾಧ್ಯವಾದಷ್ಟೂ ಅಡುಗೆ ಕಲಿಯಲು ಪ್ರಯತ್ನ ಪಡು. ಒಮ್ಮೆ ಸಾಧ್ಯವಾಗದಿದ್ದರೆ ಚಿಂತೆ ಬಿಡು. ನೀನು ಮಾಡುವ ಕೆಲಸವನ್ನು, ಹಾರ್ಡ ವರ್ಕ್ ಮಾಡುವುದನ್ನು ಇಷ್ಟಪಟ್ಟು ಪ್ರಶಂಸುವ ಗಂಡ ನಿನಗೆ ಸಿಗಬಹುದು. ನಿನಗೆ ಅಡುಗೆ ಮಾಡಲು ಬಾರದಿದ್ದರೆ ಯೋಚನೆ ಬೇಡ, ವಿಜ್ಞಾನ ತುಂಬಾನೇ ಮುಂದುವರೆದಿದೆ. ಅಡುಗೆ ಮಾಡುವ ಹೊಸ ವಿಧಾನವೇ ಲಭ್ಯವಾಗಬಹುದು. ಇಂಥ ಅಮ್ಮ ನನ್ನವಳು. 

ಇನ್ನು ಅಪ್ಪನೂ ಅಷ್ಟೇ. ಯಾರಾದರೂ ನನ್ನ ಬಗ್ಗೆ ಕೆಟ್ಟದಾಗಿ ಹೇಳಿದರೆ ಅಪ್ಪ ನನ್ನ ಪರವಾಗಿ ನಿಂತು ಮಾತನಾಡುತ್ತಿದ್ದರು. 'ಅವಳು ನಟಿ. ಅವಳಿಗೆ ಅಡುಗೆ ಮಾಡಲು, ಮನೆಕೆಲಸ ಮಾಡಲು ಬರುವುದಿಲ್ಲ. ಆಕೆಗೆ ಮದುವೆಯಾಗಲು ಸಾಧ್ಯವೇ ಇಲ್ಲ. ಒಮ್ಮೆ ಮದುವೆಯಾದರೆ ಗತಿ ಏನು? ಗಂಡನ ಮನೆಯಲ್ಲಿ ಆಕೆ ಅಡುಗೆ ಮಾಡದೇ ಜೀವನ ನಡೆಸಲು ಸಾಧ್ಯವೇ' ಎಂದು ಸಾಕಷ್ಟು ಮಂದಿ ಕೊಂಕು ನುಡಿಯುತ್ತಿದ್ದರು. ಆಗ ಅಪ್ಪ 'ನನ್ನ ಮಗಳಿಗೆ ಅಡುಗೆ ಮಾಡಲು ಬರದಿದ್ದರೆ ಏನೂ ತೊಂದರೆಯಿಲ್ಲ. ನಾನು ಆಕೆಯ ಜತೆ ಒಬ್ಬರು ಅಡುಗೆಯವರನ್ನು ಕಳಿಸುತ್ತೇನೆ ಎನ್ನುತ್ತಿದ್ದರು. 

Tap to resize

Latest Videos

ಮೆಯೋಸಿಟಿಸ್ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಳ್ಳುವ ಅನಿವಾರ್ಯತೆ ಇತ್ತು; ನಟಿ ಸಮಂತಾ

ಅಪ್ಪ ಹೇಳಿದಂತೆ ಅವರು ಸಾಯುವವರೆಗೂ ಶೂಟಿಂಗ್ ಹಾಗು ನಾನು ಹೋದಲ್ಲೆಲ್ಲಾ ನನ್ನ ಜತೆ ಕುಕ್‌ ಒಬ್ಬರನ್ನು ಕಳಿಸುತ್ತಿದ್ದರು ಕೂಡ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ತಮ್ಮ ಪೋಷಕರ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸುತ್ತ 'ನನ್ನ ಪೋಷಕರು ನಿಜವಾಗಿಯೂ ಆ ಕಾಲದಲ್ಲಿಯೇ ತುಂಬಾ ಪ್ರೊಗ್ರೆಸ್ಸಿವ್ ಎನ್ನಬೇಕು. ಏಕೆಂದರೆ,ನಾನು ಹುಟ್ಟಿ ಬೆಳೆದ ಸ್ಥಳ, ಕಾಲವನ್ನು ಗಣನೆಗೆ ತೆಗೆದುಕೊಂಡರೆ ಅಂದು, ಅಲ್ಲಿ ಬಹಳಷ್ಟು ಪೋಷಕರು  ನನ್ನ ಅಪ್ಪ-ಅಮ್ಮನಂತೆ ಹೇಳಲು ಸಾಧ್ಯವೇ ಇಲ್ಲ. 

ಅಮ್ಮನ ವಿರುದ್ಧವೇ ಹೋಗಿದ್ದೇಕೆ ಪ್ರಭಾಸ್; ಅತಿರೇಕಕ್ಕೆ ಹೋಗುವುದು ನನಗಿಷ್ಟ ಅಂದ್ಬಿಟ್ರು ಯಾಕೋ!

ಭಾರತದಲ್ಲಿ, ಅದೂ ಆ ಕಾಲದಲ್ಲಿ ನನ್ನಂಥ ಅಪ್ಪ-ಅಮ್ಮ ಸಿಗುವುದು ಕಷ್ಟವೇ. ಎಲ್ಲರೂ ಮಕ್ಕಳು ಹುಟ್ಟಿದಾಗಿನಿಂದ ಮುಂದೆ ಆಗುವ ಮದುವೆ ಬಗ್ಗೆಯೇ ಯೋಚಿಸುತ್ತ, ಆ ಬಗ್ಗೆಯೇ ಅವರಿಗೆ ತರಬೇತಿ ಕೊಡುತ್ತ ಇರುತ್ತಾರೆ. ಆದರೆ ನನ್ನ ಪೋಷಕರು ನನಗೆ ಇಷ್ಟವಾಗಿದ್ದನ್ನು ಮಾಡಲು ಬಿಟ್ಟರು. ನನಗೆ ಏನು ಸಾಧ್ಯವೋ ಅದನ್ನು ಮಾಡಲು ಹೇಳಿ ನನಗೆ ಅಸಾಧ್ಯವಾಗದ್ದರ ಬಗ್ಗೆ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ದೃಷ್ಟಿಯಿಂದಲೂ ನನ್ನ ಅಪ್ಪ-ಅಮ್ಮ ನನಗೆ ಸಪೋರ್ಟ್ ಮಾಡಿದ್ದಾರೆ. ಅವರಿಗೆ ನಾನು  ಥ್ಯಾಂಕ್ಸ್ ಹೇಳಲೇಬೇಕು' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಕೆಜಿಎಫ್‌ ನಿರ್ದೇಶಕರಿಗೆ ಗನ್ ಬಗ್ಗೆ ಶಾಕಿಂಗ್ ಪ್ರಶ್ನೆ ಕೇಳಿದ ರಾಜಮೌಳಿ; ಏನಂದ್ರು ಪ್ರಶಾಂತ್ ನೀಲ್?

click me!