ಛಾವ ಚಿತ್ರದ ಬಳಿಕ ನಿವೃತ್ತಿ ಮಾತನಾಡಿದ ನಂ.1 ನಟಿ ರಶ್ಮಿಕಾ ಮಂದಣ್ಣ, ಅಭಿಮಾನಿಗಳು ಶಾಕ್!

Published : Jan 23, 2025, 10:19 AM IST
ಛಾವ ಚಿತ್ರದ ಬಳಿಕ ನಿವೃತ್ತಿ ಮಾತನಾಡಿದ ನಂ.1 ನಟಿ ರಶ್ಮಿಕಾ ಮಂದಣ್ಣ, ಅಭಿಮಾನಿಗಳು ಶಾಕ್!

ಸಾರಾಂಶ

ಮಹಾರಾಣಿ ಯೇಸುಬಾಯಿ ಭೋನ್ಸಾಲೇ ಪಾತ್ರ ಟ್ರೈಲರ್ ರಿಲೀಸ್ ಆಗಿದೆ. ಇದರ ಬೆನ್ನಲ್ಲೇ ಭಾರತದ ನಂ.1 ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಛಾವಾ ಚಿತ್ರದ ಬಳಿಕ ನಿವೃತ್ತಿ ಕುರಿತು ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ಮುಂಬೈ(ಜ.23) ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸತತ ಸೂಪರ್ ಹಿಟ್ ಚಿತ್ರಗಳ ಮೂಲಕ ಭಾರತದ ನಂ.1 ನಟಿಯಾಗಿ ಮಿಂಚಿದ್ದಾರೆ. ಸದ್ಯ ಕೆಲ ಪ್ರಮುಖ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಪೈಕಿ ಮರಾಠ ರಾಣಿ, ಛತ್ರಪತಿ ಶಿವಾಜಿ ಮಹಾರಾಜ್ ಪತ್ನಿ ಮಹಾರಾಣಿ ಯೋಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಛಾವಾ ಚಿತ್ರ ಭಾರಿ ಸೆನ್ಸೇಶನ್ ಕ್ರಿಯೇಟ್ ಮಾಡಿದ. ಮರಾಠಾ ಸಾಮ್ರಾಜ್ಯದ ಮಹಾರಾಣಿ ಎಂದೇ ಗುರುತಿಸಿಕೊಂಡಿರುವ ಮಹಾರಾಣಿ ಯೇಸುಬಾಯಿ ಬೋನ್ಸಾಲೆ ಜೀವನಾಧಾರಿತ ಛಾವ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಾತುಗಳು ಅಭಿಮಾನಿಗಳ ಅಚ್ಚರಿ ತಂದಿದೆ. ಛಾವಾ ಚಿತ್ರದ ಬಳಿಕ ನಾನು ಚಿತ್ರರಂಗದಿಂದ ನಿವೃತ್ತಿಯಾದರೂ ಸಂತೋಷ ಎಂದಿದ್ದಾರೆ.

ವಿಕ್ಕಿ ಕೌಶಾಲ್ ನಾಯಕನ ನಟನಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದಾರೆ. ಛಾವಾ ಚಿತ್ರದ ಪೋಸ್ಟ್ ಬಿಡುಗಡೆ ಬೆನ್ನಲ್ಲೇ ಇದೀಗ ಟ್ರೈಲರ್ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ. ದಕ್ಷಿಣ ಭಾರತದದಿಂದ ಬಂದ ನನಗೆ ಮರಾಠಾ ಸಾಮ್ರಾಜ್ಯದ ಮಹಾರಾಣಿ ಪಾತ್ರ ಮಾಡಲು ಸಿಕ್ಕಿರುವುದು ನನ್ನ ಹೆಮ್ಮೆ ಹಾಗೂ ಭಾಗ್ಯ ಎಂದು ಭಾವಿಸುತ್ತೇನೆ. ಮಹಾರಾಣಿ ಯೇಸುಬಾಯಿ ಭೋನ್ಸಾಲೆ ಪಾತ್ರ ಮಾಡುತ್ತಿರುವುದು ನನ್ನ ಜೀವಮಾನದ ಅತ್ಯಂತ ಶ್ರೇಷ್ಠ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಕುರಿತು ನಾನು ನಿರ್ದೇಶ ಲಕ್ಷ್ಮಣ್ ಉಟೇಕರ್ ಹೇಳಿದ್ದೇನೆ. ಈ ಛಾವಾ ಚಿತ್ರದ ಬಳಿಕ ನಾನು ಚಿತ್ರರಂಗದಿಂದ ನಿವೃತ್ತಿಯಾಗಲು ನನಗೆ ಬೇಸರವಿಲ್ಲ. ಈ ಪಾತ್ರದಿಂದ ನನ್ನಲ್ಲಿ ಸಾರ್ಥಕ ಭಾವವಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

.ಕಾಲು ಮುರಿದುಕೊಂಡ ರಶ್ಮಿಕಾ! ಕುಂಟುತ್ತಾ ನಡೆವ ನಟಿಗೆ ವಿಜಯ್​ ದೇವರಕೊಂಡನೇ ಆಸರೆ- ವಿಡಿಯೋ ವೈರಲ್​

ನಾನು ಯಾವುದೇ ಸಂದರ್ಭದಲ್ಲೂ ಅಳುವುದಿಲ್ಲ. ಆದರೆ ಛಾವಾ ಟ್ರೈಲರ್ ನನ್ನನ್ನು ಭಾವುಕಳನ್ನಾಗಿ ಮಾಡಿದೆ. ವಿಕ್ಕಿ ಕೌಶಾಲ್ ದೇವರಂತೆ ಕಾಣುತ್ತಾರೆ. ವಿಕ್ಕಿ ಈ ಚಿತ್ರದ ಛಾವ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಹಲವು ಭಾರಿ ನನಗೆ ಅಚ್ಚರಿಯಾಗುತ್ತದೆ.ಕಾರಣ ಮಹಾರಾಣಿ ಪಾತ್ರಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದರೂ, ನನಗೆ ಈ ಮಹತ್ತರ ಜವಾಬ್ದಾರಿ ಯಾಕೆ ಕೊಟ್ಟರು ಅನ್ನೋದು ಹಲವು ಬಾರಿ ನನ್ನನ್ನು ಕಾಡಿದೆ. ಆದರೆ ನಾನು ನಿರ್ದೇಶಕರಿಗೆ ಸಂಪೂರ್ಣ ಶರಣಾಗಿದ್ದೇನೆ. ಪಾತ್ರಕ್ಕೆ ನ್ಯಾಯಕೊಡಿಸಲು ಪ್ರಯತ್ನ ಮಾಡಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ

ನಿರ್ದೇಶಕರು ಹೇಳಿದ ರೀತಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಹಲವು ಬಾರಿ ಅಭ್ಯಾಸ ಮಾಡಿದ್ದೇನೆ. ನಟನೆ, ಶೈಲಿ, ಭಾಷೆ ಎಲ್ಲವನ್ನೂ ಸತತವಾಗಿ ಅಭ್ಯಾಸ ಮಾಡುತ್ತಿದ್ದೇನೆ. ನಿರ್ದೇಶಕರು ಈ ವಿಚಾರದಲ್ಲಿ ಬಹಳ ಶಿಸ್ತಿನಿಂದ ಚಿತ್ರ ಮಾಡುತ್ತಿದ್ದಾರೆ. ಇಡೀ ತಂಡದ ಮೇಲೆ ಮಹತ್ತರ ಜವಾಬ್ದಾರಿ ಇದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಮಹಾರಾಣಿಯಾಗಿ ಕಾಣಿಸಿಕೊಂಡ ಛಾವ ಚಿತ್ರದ ಕುತೂಹಲ ಹೆಚ್ಚಾಗಿದೆ. ಸತತ ಹಿಟ್ ಚಿತ್ರಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಮುಡಿಗೆ ಮತ್ತೊಂದು ಗರಿ ಸೇರಿಕೊಳ್ಳಲಿದೆ ಎಂದು ಸಿನಿಮಾ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಐತಿಹಾಸಿಕ ಪಾತ್ರ ಅತ್ಯಂತ ಸವಾಲು. ಆದರೆ ಟ್ರೇಲರ್, ಪೋಸ್ಟ್ ನೋಡಿದರೆ ರಶ್ಮಿಕಾ ಮಂದಣ್ಣ ಈ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.  ಬಾಲಿವುಡ್ ಸಿನಿಮಾ ಇತಿಹಾಸದಲ್ಲಿ ಛಾವಾ ಚಿತ್ರ ಹೊಸ ಮೈಲಿಗಲ್ಲು ಬರೆಯುವ ಸಾಧ್ಯತೆ ಇದೆ. ಛಾವಾ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಬಿಗುಗಡೆಗೂ ಮೊದಲೇ ಬಾರಿ ಸಂಚಲನ ಸೃಷ್ಟಿಸಿದೆ.

ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಶ್ರೀವಲ್ಲಿ: ಮಹಾರಾಣಿ ಯೇಸುಬಾಯಿಯಾದ ರಶ್ಮಿಕಾ ಮಂದಣ್ಣ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?