ಘಟಾನುಘಟಿ ತಾರೆಯರನ್ನು ಹಿಂದಿಕ್ಕಿ ತ್ರಿಷಾ ಕೃಷ್ಣನ್​ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Published : Mar 30, 2024, 04:00 PM ISTUpdated : Apr 01, 2024, 10:55 AM IST
ಘಟಾನುಘಟಿ ತಾರೆಯರನ್ನು ಹಿಂದಿಕ್ಕಿ ತ್ರಿಷಾ ಕೃಷ್ಣನ್​ ಪಡೆಯುತ್ತಿರುವ  ಸಂಭಾವನೆ ಎಷ್ಟು ಗೊತ್ತಾ?

ಸಾರಾಂಶ

ದಕ್ಷಿಣದ ಎಲ್ಲಾ ತಾರೆಯರನ್ನು ಸಂಭಾವನೆ ವಿಷಯದಲ್ಲಿ ಹಿಂದಿಕ್ಕಿರುವ ನಟಿ ತ್ರಿಷಾ ಕೃಷ್ಣನ್​ ಪ್ರತಿ ಚಿತ್ರಕ್ಕೆ ಪಡೆಯುತ್ತಿರುವುದು ಎಷ್ಟು ಗೊತ್ತಾ?   

ತ್ರಿಷಾ ಕೃಷ್ಣನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ಅವರು ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಇದಲ್ಲದೆ ವಿಜಯ್ ಸೇತುಪತಿ ನಟನೆಯ ‘ಲಿಯೋ’ ಚಿತ್ರಕ್ಕೆ ಅವರೇ ನಾಯಕಿ. ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಚಾರ್ಜ್​ ಮಾಡಿದ್ದ ನಟಿ ಸೌತ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು, ಆದರೆ ಇದೀಗ ತಮ್ಮದೇ ದಾಖಲೆಯನ್ನು ಅವರು ಮುರಿದಿದ್ದಾರೆ. ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರಕ್ಕೆ ತ್ರಿಷಾ ಅವರು  12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದು, ಈ ಪರಿ ಸಂಭಾವನೆ ಪಡೆದ ದಕ್ಷಿಣದ ಏಕೈಕ ನಟಿ ಎನಿಸಿಕೊಂಡಿದ್ದಾರೆ.   

ಅಷ್ಟಕ್ಕೂ ಸೌತ್​ನಲ್ಲಿ ಸದ್ಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹವಾ ಜೋರಾಗಿಯೇ ಇದೆ. ಬಾಲಿವುಡ್​ನಲ್ಲಿಯೂ ಬೇಡಿಕೆ ಇದೆ. ಆದರೆ ರಶ್ಮಿಕಾ ಪಡೆಯುವುದು ಕೇವಲ ನಾಲ್ಕು ಕೋಟಿ ರೂಪಾಯಿ ಮಾತ್ರ. ಆ ಬಳಿಕ ನಯನತಾರಾ, ಸಮಂತಾ ಬರುತ್ತಾರೆ ಎಂದು ವರದಿ ಒಂದು ಹೇಳಿದೆ. ಆದರೆ ತ್ರಿಷಾ ಅವರ ಸಂಭಾವನೆ 12 ಕೋಟಿ ರೂಪಾಯಿ! ಅಷ್ಟಕ್ಕೂ ತ್ರಿಷಾ ಸದ್ಯ  ಸೌತ್‌ನಲ್ಲಿ ಯಶಸ್ವಿ ನಾಯಕಿಯಾಗಿಯಾಗಿದ್ದಾರೆ.  ಹಿಂದಿಯ ಆರಂಭ ಸಿನಿಮಾದಲ್ಲಿಯೇ ಸೋಲನ್ನು ಅನುಭವಿಸಿ ಬಾಲಿವುಡ್​ ಸಹವಾಸವೇ ಬೇಡ ಎಂದು,  ದಕ್ಷಿಣದಲ್ಲಿಯೇ ನೆಲೆಯೂರಿದ್ದಾರೆ. ಅಂದಹಾಗೆ, ತ್ರಿಷಾ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ನಟನೆಗೆ ಒತ್ತು ಇರುವಂಥ ಪಾತ್ರಗಳನ್ನು ಮಾತ್ರ ಒಪ್ಪಿ ನಟಿಸುತ್ತಾರೆ. ಈ ಕಾರಣಕ್ಕೆ ಅವರು ಇಷ್ಟು ದೊಡ್ಡ ಮೊತ್ತದ ಹಣ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. 

ಗರ್ಲ್​ಫ್ರೆಂಡ್​ ಜತೆಯಿರಲು ಕರಣ್​ ಜೋಹರ್​ರ ಮನೆ ಬಾಡಿಗೆ ಪಡೆದ ಇಮ್ರಾನ್​ ಖಾನ್​: ತಿಂಗಳಿಗೆ ಅಬ್ಬಾ ಇಷ್ಟಾ?
 
ಚಿತ್ರರಂಗದಲ್ಲಿ ತ್ರಿಷಾ ಅವರ ಪಯಣ ಏರಿಳಿತ ಕಂಡಿದೆ. ಭಾರತದ ಶ್ರೇಷ್ಠ ಮತ್ತು ಅದ್ಭುತ ನಟಿಯರಲ್ಲಿ ತ್ರಿಷಾ ಕೃಷ್ಣನ್ (Trisha Krishnan) ಕೂಡ ಒಬ್ಬರು. 2002 ರಲ್ಲಿ ಮೌನಂ ಪೇಸಿಯಾದೆ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ನೀ ಮನಸು ನಾಕು ತೆಲುಸು ಎನ್ನುವ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. ಆ ಮೂಲಕ ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ಎರಡು ದಶಕಗಳ ಕಾಲ ಟಾಪ್ ಹಿರೋಯಿನ್ ಆಗಿ ಮೆರೆದರು. ಅವರು 2010 ರಲ್ಲಿ ಖಟ್ಟಾ ಮೀಠಾದಲ್ಲಿ ಅಕ್ಷಯ್ ಕುಮಾರ್ ಎದುರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನಿರಾಶೆಯನ್ನು ಎದುರಿಸಿದ ನಂತರ, ಅವರು ತಮ್ಮ ವೃತ್ತಿಜೀವನವನ್ನು ತಮಿಳು ಮತ್ತು ತೆಲುಗು ಚಿತ್ರರಂಗದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು, ಅಲ್ಲಿ ಅವರು ಗಣನೀಯ ಯಶಸ್ಸನ್ನು ಕಂಡರು. 

ತ್ರಿಷಾ ನಟಿಯಾಗಿ ಬಹಳಷ್ಟು ಖ್ಯಾತಿ ಪಡೆದರು. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು. ಹಲವಾರು ಹಿಟ್ ಸಿನಿಮಾಗಳನ್ನ ನೀಡುವ ಮೂಲಕ ಹಲವು ಮೈಲುಗಲ್ಲುಗಳನ್ನು ತಲುಪಿದರು. ಆದರೆ ಇದೆಲ್ಲದರ ಮಧ್ಯೆ ವಿವಾದಗಳು (contraversy) ತ್ರಿಷಾರನ್ನು ಬಿಟ್ಟಿರಲಿಲ್ಲ. ಹಲವಾರು ವಿವಾದಗಳ ಬಲೆಯಲ್ಲಿ ತ್ರಿಷಾ ಸಿಕ್ಕಿ ಹಾಕಿಕೊಂಡಿದ್ದರು. ತ್ರಿಷಾ ಹಿರೋಯಿನ್ ಆದ ನಂತರ, ಅವರ ನಗ್ನ ವೀಡಿಯೊ (nude video viral) ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಿತ್ತು. ಅಂದು ಸೋಶಿಯಲ್ ಮೀಡೀಯಾದ ಹಾವಳಿ ಇಲ್ಲದೇ ಇದ್ದರು ಸಹ, ಇಂಟರ್ನೆಟ್‌ನಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡಿತ್ತು. ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ನನ್ನದಲ್ಲ ಎಂದು ತ್ರಿಷಾ ಹೇಳಿಕೆ ನೀಡಿದ್ದರು. ಇದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ತ್ರಿಷಾ ಗಿಲ್ಲಿ ಸಿನಿಮಾದಲ್ಲಿ ನಟ ವಿಜಯ್ (Vijay) ಅವರ ಜೊತೆ ನಟಿಸಿದ್ದರು. ಆ ಸಮಯದಲ್ಲಿ, ಇಬ್ಬರ ನಡುವೆ ಆಫೇರ್ ಇದೆ ಎನ್ನುವ ವರದಿಗಳು ಹರಿದಾಡಿದ್ದವು. ನಂತರ ಅದು ತಣ್ಣಗಾಯಿತು. ಅದಾಗಿ ಎಷ್ಟೋ ವರ್ಷಗಳ ಬಳಿಕ ತ್ರಿಷಾ-ವಿಜಯ್ ಜೊತೆಯಾಗಿ ಲಿಯೋ ಚಿತ್ರದಲ್ಲಿ ನಟಿಸಿದ್ದರು.

ನನ್ನಾಸೆಯಾ ಹೂವೆ... 48 ವರ್ಷಗಳ ಬಳಿಕ ಡಾ.ರಾಜ್​ ಬದ್ಲು ರವಿಚಂದ್ರನ್​ ಜೊತೆ ಲಕ್ಷ್ಮಿ ಲವ್ಲಿ ಡ್ಯುಯೆಟ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!