ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!

By Shriram Bhat  |  First Published Jan 28, 2024, 6:52 PM IST

ನಟಿ ತಮ್ಮನ್ನಾ ಭಾಟಿಯಾ (Tamannaah Bhatia)ಬಹುಭಾಷಾ ನಟಿ ಮಾತ್ರವಲ್ಲ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದವರು. ಇಂದು ತಮನ್ನಾ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. 


ಆಧ್ಯಾತ್ಮಿಕ ಗುರು 'ಸದ್ಗುರು' ಖ್ಯಾತಿಯ ಜಗ್ಗಿ ವಾಸುದೇವ್ (Sadhguru Jaggi Vasudev) ಅವರಿಂದ ದೀಕ್ಷೆ ಪಡೆದಿರುವ ಬಹುಭಾಷಾ ನಟಿ ತಮನ್ನಾ, ತಮ್ಮ ಆಧ್ಯಾತ್ಮಿಕ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಹೌದು, ನಟಿ ತಮನ್ನಾ ಕಳೆದ ಹಲವಾರು ವರ್ಷಗಳಿಂದ ಕೊಯಮುತ್ತೂರಿನಲ್ಲಿರುವ ಈಶಾ ಯೋಗಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಅವರು ಸದ್ಗುರುಗಳ ಜತೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅದೇ ದಾರಿಯಲ್ಲಿ ಹಲವಾರು ಕೋರ್ಸುಗಳ ಮೂಲಕ ಸಾಗುತ್ತಿದ್ದಾರೆ. ಸದ್ಗುರುಗಳ 'ಈಶಾ ಯೋಗ ಸೆಂಟರ್ (Isha Yoga Center) ತಮಿಳು ನಾಡು ರಾಜ್ಯದ ಕೊಯಮುತ್ತೂರ್‌ (Coimbatore)ನಲ್ಲಿದೆ.

ನಟಿ ತಮ್ಮನ್ನಾ ಭಾಟಿಯಾ (Tamannaah Bhatia)ಬಹುಭಾಷಾ ನಟಿ ಮಾತ್ರವಲ್ಲ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದವರು. ಇಂದು ತಮನ್ನಾ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಇನ್ನು ಸದ್ಗುರು ಜಗ್ಗಿ ವಾಸುದೇವ್ ಅವರಂತೂ ಜಗತ್ತಿನಲ್ಲಿ ಸದ್ಯ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಆಧ್ಯಾತ್ಮಿಕ ಗುರುಗಳು ಹಾಗೂ ಚಿಂತಕರು. 

Tap to resize

Latest Videos

undefined

ಅಮ್ರತಂ ಜತೆ ಮದ್ವೆಯಾಗಿದ್ದ ಮಂಜುಳಾ ಮೈಗೆ ಬೆಂಕಿ-ಸಾವು; ಚಾಮರಾಜನಗರ ಹುಡುಗ ಮರುಮದ್ವೆಗೆ ಒಪ್ಪಿರಲಿಲ್ವಾ?!

ನಟಿ ತಮನ್ನಾ ಅವರು ಸದ್ಗುರುಗಳಿಂದ 'ಶಾಂಭವಿ ಮಹಾಮುದ್ರಾ ಕ್ರಿಯಾ'ಗೆ ಇನಿಶಿಯೇಟ್ ಆಗಿದ್ದು, ಈಗ ಅವರು ಶಾಂಭವಿಯನ್ನು (Shambhavi Mahamudra Kriya Initiation)ಪ್ರಾಕ್ಟಿಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ವತಃ ನಟಿ ತಮನ್ನಾ ಈ ಬಗ್ಗೆ ಮಾತನಾಡಿದ್ದು, 'ನಾನು  ಶಾಂಭವಿ ಮಹಾಮುದ್ರಾ ಕ್ರಿಯಾಗೆ ಸದ್ಗುರುಗಳಿಂದ ಇನಿಶಿಯೇಟ್ ಆಗಿರುವೆ. ಈ ಕೋರ್ಸ್ ನನಗೆ ಹೊಸ ಅನುಭವ ನೀಡಿದೆ. ನಾನು ಇದನ್ನು ಪ್ರಾಕ್ಟಿಸ್ ಮಾಡದೇ ಇರಲಾರೆ. ನಿಜವಾಗಿಯೂ ನನ್ನ ಮನಸ್ಸಿಗೆ ಶಾಂಭವಿ ಹೊಸ ಹೊಳಪು, ಶಾಂತಿಯನ್ನು ನೀಡಿದೆ ಎಂದಿದ್ದಾರೆ.

ಕತ್ರಿನಾಗಿಂತ ಒಳ್ಳೆಯ ನಟಿ ಸಿಕ್ರೆ 'ಡಿವೋರ್ಸ್‌' ಮಾಡ್ತೀರಾ; ಪ್ರಶ್ನೆ ಕೇಳಿ ತಬ್ಬಿಬ್ಬಾದ ವಿಕ್ಕಿ ಕೌಶಲ್‌ ಏನ್ ಹೇಳಿದ್ರು..?!

ನಟಿ ಸಮಂತಾ, ಕಾಜಲ್ ಅಗರವಾಲ್, ಹರಿಪ್ರಿಯಾ, ಕಂಗನಾ ರಣಾವತ್ (Kangana Ranaut)ಸೇರಿದಂತೆ ಹಲವಾರು ನಟಿಯರು ಸದ್ಗರುಗಳ ಅನುಯಾಯಿಗಳು. ಅಷ್ಟೇ ಅಲ್ಲ, ನಟ ವಿಜಯ್, ವಿಜಯ್ ದೇವರಕೊಂಡ,ರಣವೀರ್ ಸಿಂಗ್, ಅನುಪಮ್ ಖೇರ್, ಶಾರುಖ್ ಖಾನ್, ನಾನಿ ಸೇರಿದಂತೆ ಹಲವಾರು ನಟರೂ ಕೂಡ ಸದ್ಗುರುಗಳನ್ನು (Sadhguru)ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ, ಫಾಲೋ ಮಾಡುತ್ತಾರೆ. ಸದ್ಗುರುಗಳಿಂದ ದೀಕ್ಷೆ ಪಡೆದಿರುವ ಹಲವಾರು ನಟನಟಿಯರು ಅಲ್ಲಿ ಪ್ರಾಕ್ಟೀಸ್ ಮಾಡುವುದನ್ನು ನೋಡಬಹುದು. 

ಮತ್ತೊಂದು ಮದುವೆಗೆ ರೆಡಿಯಾದ್ರಾ ವರ್ತೂರು ಸಂತೋಷ್; ತನಿಷಾ ಅಲ್ವಂತೆ, ಮತ್ಯಾರು ಸಂತು ಸಂಗಾತಿ...!?

click me!