ಮಹಿಳೆಯೊಬ್ಬರು ನಟ ಬಾಬಿ ಡಿಯೋಲ್ಗೆ ಅಚಾನಕ್ ಕಿಸ್ ಮಾಡಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಆಗಿದ್ದೇನು?
ಗಂಡಸರು ಮತ್ತು ಹೆಂಗಸರ ವಿಷಯ ಬಂದಾಗ ಇದು ಅತಿಯಾದ ವಾದ-ಪ್ರತಿವಾದ-ವಿವಾದಕ್ಕೆ ಗುರಿಯಾಗುವುದು ಇದೆ. ದೌರ್ಜನ್ಯದ ವಿಷಯ ಬಂದಾಗ ಎಲ್ಲರೂ ಹೆಣ್ಣುಮಕ್ಕಳ ಪರವಾಗಿಯೇ ಇರುತ್ತಾರೆ ಎನ್ನುವುದು ಸಾಮಾನ್ಯ ಮಾತು. ಹೆಣ್ಣು ಮಕ್ಕಳು ಗಂಡಸರ ಮೇಲೆ ನಡೆಸುವ ದೌರ್ಜನ್ಯಕ್ಕೆ ಎಣೆಯೇ ಇಲ್ಲವಾದರೂ, ಸದಾ ಗಂಡಿನದ್ದೇ ತಪ್ಪು ಎನ್ನುತ್ತಾರೆ ಎನ್ನುವುದು ಬಹುತೇಕ ಪುರುಷರ ಆರೋಪ. ಅದರಲ್ಲಿಯೂ ಅಪ್ಪಿ-ತಪ್ಪಿ ಗಂಡಸರು ಹೆಂಗಸರ ಮೈ ಮುಟ್ಟಿದರಂತೂ ಮುಗಿದೇ ಹೋಯ್ತು, ಸೀದಾ ಲೈಂಗಿಕ ದೌರ್ಜನ್ಯದ ಮಾತೇ ಬರುತ್ತದೆ. ಇನ್ನು ಕಿಸ್ ಏನಾದ್ರೂ ಕೊಟ್ಟುಬಿಟ್ಟರೆ...?
ಇದೇ ವಿಷಯವೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬಹುತೇಕ ಸಿನಿ ಪ್ರಿಯರಿಗೆ ಸಿನಿಮಾ ನಟರು ಎಂದರೆ ದೇವರ ಸಮಾನ. ಅವರನ್ನು ದೇವರು ಎಂದೇ ಭಕ್ತಿ ಭಾವದಿಂದ ಪೂಜಿಸುವವರು ಇದ್ದಾರೆ. ಅಭಿಮಾನವಿದ್ದರೆ ಚೆನ್ನ, ಆದರೆ ಕೆಲವರದ್ದು ಅತಿರೇಕದ ಅಂಧಾಭಿಮಾನವೂ ಇದೆ. ನಟ-ನಟಿಯರಿಗಾಗಿ ಜೀವವನ್ನೂ ಲೆಕ್ಕಿಸದೇ ಇರುವ ಅಭಿಮಾನಿಗಳೂ ಇದ್ದಾರೆ. ಇನ್ನು ಕೆಲವರಿಗಂತೂ ನಟ-ನಟಿಯರನ್ನು ಒಮ್ಮೆ ಮುಟ್ಟಿಬಿಟ್ಟರೆ ಸಾಕು, ಬದುಕೇ ಸಾರ್ಥಕ ಎಂದುಕೊಳ್ಳುತ್ತಾರೆ. ಅವರ ಒಂದು ಝಲಕ್ಗಾಗಿ ನೂಕು ನುಗ್ಗಾಟ ಮಾಡಿಯಾದರೂ ಹೆಣಗಾಡುತ್ತಾರೆ. ಇನ್ನು ಸುಲಭದಲ್ಲಿ ನಟ-ನಟಿ ಸಿಕ್ಕಿಬಿಟ್ಟರೆ ಬಿಡುತ್ತಾರೆಯೆ?
ಬಾಬಿ ಡಿಯೋಲ್ @56: ಕಾಲಿವುಡ್ಗೆ ನಟನ ಎಂಟ್ರಿ- ಅನಿಮಲ್ಗಿಂತಲೂ ಭೀಕರ ರೂಪದ ಪೋಸ್ಟರ್ ರಿಲೀಸ್
ಈ ವಿಡಿಯೋದಲ್ಲಿಯೂ ಹಾಗೆಯೇ ಆಗಿದೆ. ಓರ್ವ ಮಹಿಳಾ ಅಭಿಮಾನಿ, ಬಾಬಿ ಡಿಯೋಲ್ ಜೊತೆ ಸೆಲ್ಫಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಮಹಿಳೆಯರ ಆಸೆಯನ್ನು ಬಾಬಿ ಡಿಯೋಲ್ ನೆರವೇರಿಸಿದ್ದಾರೆ. ಅಲ್ಲಿ ಅಷ್ಟೊಂದು ರಶ್ ಕೂಡ ಇರದ ಕಾರಣ, ಮಹಿಳೆಗೆ ಈ ಅವಕಾಶ ಸಲೀಸಾಗಿ ಸಿಕ್ಕಿದೆ. ಸೆಲ್ಫಿ ತೆಗೆದುಕೊಂಡು ಸುಮ್ಮನೇ ಹೋಗುವ ಬದಲು ಮಹಿಳೆ ಅಚಾನಕ್ ಆಗಿ ಬಾಬಿ ಡಿಯೋಲ್ ಅವರಿಗೆ ಕಿಸ್ ಮಾಡಿದ್ದಾಳೆ. ಇದನ್ನು ನೋಡಿ ಅರೆಕ್ಷಣ್ ನಟ ಕೂಡ ವಿಚಲಿತರಾದರೂ ಖುಷಿಯಿಂದ ಇದ್ದಾರೆ. ಮಹಿಳೆ ಯಾವುದೇ ಅಳುಕಿಲ್ಲದೇ ಕಿಸ್ ಮಾಡಿ ಜೀವನವೇ ಸಾರ್ಥಕವಾಯಿತು ಎಂದುಕೊಂಡು ಅಲ್ಲಿಂದ ಹೋಗಿದ್ದಾಳೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಒಂದು ವೇಳೆ ಆಕೆಗೆ ಬಾಬಿ ಡಿಯೋಲ್ ಕಿಸ್ ಕೊಟ್ಟಿದ್ದರೆ ಏನೆಲ್ಲಾ ಅನಾಹುತ ಆಗುತ್ತಿತ್ತು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಮಹಿಳೆ ನಟನಿಗೆ ಕೊಟ್ಟರೆ ಅದು ಅಭಿಮಾನ ಅಂತಾರೆ, ಇಲ್ಲವೇ ಮಹಿಳೆಯರನ್ನು ಹೊಗಳ್ತಾರೆ, ಅದೇ ಪುರುಷರೇನಾದರೂ ಹೀಗೆ ಮಾಡಿದ್ದರೆ ಆತನ ಮೇಲೆ ಏನೇನು ಗೂಬೆ ಕುಳ್ಳರಿಸಲಾಗುತ್ತಿತ್ತು, ಮಹಿಳೆಯರೇ ಮುಂದೆ ಬಂದು ಆತನ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದರು ಎಂದು ಭಾರಿ ಚರ್ಚೆ ಶುರುವಾಗಿದೆ. ಸಮಾಜ ಏಕೆ ಹೀಗೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮಹಿಳೆಯರಿಗೆ ಒಂದು ನ್ಯಾಯ, ಪುರುಷರಿಗೆ ಇನ್ನೊಂದಾ ಎನ್ನುತ್ತಿದ್ದಾರೆ. ಕೆಲವರು ಮಹಿಳೆಯ ವರ್ತನೆ ಅಸಭ್ಯ ಎಂದೂ ಹೇಳುತ್ತಿದ್ದಾರೆ. ನಟನೇ ಆಗಿರಲಿ, ಯಾರೇ ಆಗಿರಲಿ ಈ ರೀತಿ ಕಿಸ್ ಕೊಡುವುದು ಅಸಭ್ಯದ ಪರಮಾವಧಿ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬಾಬಿ ಡಿಯೋಲ್ಗೆ ಮಹಿಳೆ ಕೊಟ್ಟ ಕಿಸ್ ಬಹು ದೊಡ್ಡ ಚರ್ಚೆಗೆ ಗ್ರಾಸವಾಗುತ್ತಿದೆ. ಇವಳ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ಹಾಕಿ ಅಂತಿದ್ದಾರೆ ಕೆಲವರು!
ಅಂದು ವರುಣ್, ಇಂದು ರಣಬೀರ್: ರಶ್ಮಿಕಾಗೂ ಚಪ್ಪಲಿ ತೆಗೆಸಿದ ನಟ- ಸಂಸ್ಕಾರವಂತ ಪುರುಷರು ಎಂದ ಫ್ಯಾನ್ಸ್!