ಕಮಲ್ ಹಾಸನ್ ಬಗ್ಗೆ ನಟಿ ಶ್ರುತಿ ಹಾಸನ್ ಹೀಗಾ ಹೇಳೋದು; ತಪ್ಪೇನಿದೆ ಅಂತಿದಾರಲ್ಲ ನೆಟ್ಟಿಗರು!

By Shriram Bhat  |  First Published Dec 28, 2023, 3:59 PM IST

ದೇವರ ಮುಂದೆ ಭಕ್ತಿಯಿಂದ ನಿಂತು ಅಥವಾ ಕುಳಿತು ಸಣ್ಣಪುಟ್ಟ ಬೇಡಿಕೆಗಳನ್ನು ದೇವರ ಮುಂದಿಡುತ್ತೇನೆ. ಹಲವರಂತೆ ಎಲ್ಲವನ್ನೂ ದೇವರ ಮೇಲೆಯೇ ಭಾರ ಹಾಕಿ ನಾನು ಕೆಲಸ ಮಾಡದೇ ಖಾಲಿ ಕುಳಿತುಕೊಳ್ಳುವುದಿಲ್ಲ. 


ಬಹುಭಾಷಾ ನಟಿ ಶ್ರುತಿ ಹಾಸನ್ (Shruti Haasan) ತಮ್ಮ ತಂದೆ ಕಮಲ್ ಹಾಸನ್ ಬಗ್ಗೆ ಮಾತನಾಡಿದ್ದಾರೆ. ಲೆಜೆಂಡ್ ಆಕ್ಟರ್ ಎಂದೇ ಕರೆಯಲ್ಪಡುವ ನಟ ಕಮಲ್ ಹಾಸನ್ (kamal Haasan), ಪಕ್ಕಾ ನಾಸ್ತಿಕ ವ್ಯಕ್ತಿ ಎಂಬುದು ಅವರನ್ನು ಬಲ್ಲವರಿಗೆ ಗೊತ್ತು. ಅವರು ದೇವರನ್ನು ನಂಬಲ್ಲ, ಸನಾತನ ಧರ್ಮದ ಬಗ್ಗೆಯೂ ಅವರು ಬಹಳಷ್ಟು ಕೆಟ್ಟದಾಗಿಯೇ ಮಾತನಾಡುತ್ತಾರೆ. ಇತ್ತೀಚೆಗೆ ಉದಯನಿಧಿ ಸ್ಟಾಲಿನ್ (Udayanidhi Stalin)ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದಾಗ ಇದೇ ಕಮಲ್ ಹಾಸನ್ ಅವರನ್ನು ಸಪೋರ್ಟ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಹಾಗಿದ್ದರೆ ಅವರ ಮಗಳು ಶ್ರುತಿ ಹಾಸನ್ ಕಥೆ ಏನು? ಅವರು ಹೇಗೆ, ನಾಸ್ತಕರೋ ಆಸ್ತಿಕರೋ ಎಂಬ ಸಹಜ ಕುತೂಹಲ ಹಲವರಲ್ಲಿದೆ. ಈ ಬಗ್ಗೆ ಸ್ವತಃ ನಟಿ ಶ್ರುತಿ ಹಾಸನ್ ಮಾತನಾಡಿದ್ದಾರೆ. 'ನನ್ನ ತಂದೆ ಕಮಲ್ ಹಾಸನ್ ಪಕ್ಕಾ ನಾಸ್ತಿಕ, ಅವರು ದೇವರನ್ನು ನಂಬಲ್ಲ. ಆದರೆ, ನಾನು ಹಾಗಲ್ಲ. ದೇವರನ್ನು ನಂಬುತ್ತೇನೆ, ದೆವ್ವವೂ ಇದೆ ಎಂಬ ಬಗ್ಗೆ ನನಗೆ ನಂಬಿಕೆಯಿದೆ. ನನಗೆ ಸಮಯ ಸಿಕ್ಕಾಗ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನೂ ಮಾಡಿಸುತ್ತೇನೆ. ಆದರೆ ನನ್ನ ನಂಬಿಕೆ ಮಾತ್ರ ಮೂಢನಂಬಿಕೆ ತರ ಇರಲ್ಲ ಅಂದುಕೊಂಡಿದ್ದೇನೆ.

Tap to resize

Latest Videos

ಆಸ್ಕರ್‌ ಪ್ರಶಸ್ತಿ ವಿಜೇತ ನಟನ ಅನುಮಾನಾಸ್ಪದ ಸಾವು; ವಿಚಿತ್ರ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ರಂತೆ!

ದೇವರ ಮುಂದೆ ಭಕ್ತಿಯಿಂದ ನಿಂತು ಅಥವಾ ಕುಳಿತು ಸಣ್ಣಪುಟ್ಟ ಬೇಡಿಕೆಗಳನ್ನು ದೇವರ ಮುಂದಿಡುತ್ತೇನೆ. ಹಲವರಂತೆ ಎಲ್ಲವನ್ನೂ ದೇವರ ಮೇಲೆಯೇ ಭಾರ ಹಾಕಿ ನಾನು ಕೆಲಸ ಮಾಡದೇ ಖಾಲಿ ಕುಳಿತುಕೊಳ್ಳುವುದಿಲ್ಲ. ನನಗೆ ನಮ್ಮನ್ನು ಮೀರಿದ ಒಂದು ಶಕ್ತಿ ಇದೆ ಎಂಬ ಬಗ್ಗೆ ನಂಬಿಕೆಯಿದೆ. ಆ ದಿವ್ಯ ಶಕ್ತಿಗೆ ನಾವು ತಲೆ ಬಾಗಲೇ ಬೇಕು ಎಂಬ ಅರಿವೂ ನನಗಿದೆ. ಕೇವಲ ದೇವರ ವಿಷಯದಲ್ಲಿ ಮಾತ್ರವಲ್ಲ, ಹಲವಾರು ಸಂಗತಿಗಳಲ್ಲಿ ನಾನು ನನ್ನ ತಂದೆಯಂತಲ್ಲ' ಎಂದಿದ್ದಾರೆ ನಟಿ ಶ್ರುತಿ ಹಾಸನ್.

ಜವಾನ್ ಡೈರೆಕ್ಟರ್ ಮುಂದಿನ ಸಿನಿಮಾಗೆ ಟಾಲಿವುಡ್ ಸ್ಟೈಲಿಶ್ ಸ್ಟಾರ್; ಪುಷ್ಪಾ 2 ಕಥೆ ಏನಾಯ್ತು?

ಕಮಲ್ ಹಾಸನ್ ಹಾಗು ಸಾರಿಕಾ ಮಗಳು ಶ್ರುತಿ ಹಾಸನ್ ತಂದೆ-ತಾಯಿ ಡಿವೋರ್ಸ್ ತೆಗೆದುಕೊಂಡ ಬಳಿಕ ಕೇವಲ ತಾಯಿ ಆಸರೆಯಲ್ಲಿ ಬೆಳೆದವಳು. ತಂದೆ ಹಾಗೂ ತಾಯಿ ಇಬ್ಬರೂ ಚಿತ್ರರಂಗದ ಹಿನ್ನೆಲೆಯವರಾಗಿದ್ದರೂ, ಸ್ಟಾರ್ ಕಿಡ್ ಆಗಿದ್ದರೂ ಸಿನಿಮಾರಂಗಕ್ಕೆ ಬಂದ ಶ್ರುತಿ ಹಾಸನ್ ಇಲ್ಲಿ ನೆಲೆ ಕಂಡುಕೊಳ್ಳಬೇಕಾದರೆ ಸಾಕಷ್ಟು ಕಾಲ ಹಿಡಿಯಿತು. ವೃತ್ತಿ ಜೀವನದ ಆರಂಭದಲ್ಲಿ 'ಐರನ್ ಲೆಗ್' ಪಟ್ಟ ಸಿಕ್ಕು ಸಾಕಷ್ಟು ಒದ್ದಾಡಿದ್ದು ಆಯಿತು. ಬಳಿಕ ಸಕ್ಸಸ್ ಸಿಕ್ಕಿ ಲಕ್ಕಿ ಹೀರೋಯಿನ್ ಆಗಿ ಬದಲಾದರು.

ಶ್ರಾವಣಿ ಸುಬ್ರಹ್ಮಣ್ಯಕ್ಕೆ ದಶಕದ ಸಂಭ್ರಮ; ಬರಲಿದೆ ಒನ್ಸ್‌ ಮೋರ್ ಶ್ರಾವಣಿ ಸುಬ್ರಹ್ಮಣ್ಯ!

ನಟಿ ಶ್ರುತಿ ಹಾಸನ್ಅವರು ತೆಲುಗು, ತಮಿಳು ಹಾಗೂ ಬಾಲಿವುಡ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಮಲ್ ಹಾಸನ್ ಮಗಳು ಆಗಿದ್ದರೂ ಸ್ವಂತ ಪ್ರತಿಭೆಯನ್ನು ನಂಬಿಕೊಂಡು ಬಂದು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾಳೆ. ಸ್ಟಾರ್ ನಟನ ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ಶ್ರುತಿ ಹಾಸನ್ ಸ್ಟಾರ್ ನಟಿ ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.  

click me!