ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಅನಿಮಲ್‌ ನಟ ರಣಬೀರ್‌ ಕಪೂರ್‌ ವಿರುದ್ಧ ದೂರು- ಅಷ್ಟಕ್ಕೂ ಆಗಿದ್ದೇನು?

By Suvarna News  |  First Published Dec 28, 2023, 2:25 PM IST

ಹಿಂದೂ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಬಾಲಿವುಡ್ ನಟ ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು ಮಾಡಲಾಗಿದೆ. ಅಷ್ಟಕ್ಕೂ ಆಗಿದ್ದೇನು? 
 


ನಟ ರಣಬೀರ್‌ ಕಪೂರ್‌ ಸದ್ಯ ಅನಿಮಲ್‌ ಚಿತ್ರದ ಖುಷಿಯಲ್ಲಿದ್ದಾರೆ. ಚಿತ್ರ ಬ್ಲಾಕ್‌ ಬಸ್ಟರ್‌ ಎಂದು ಸಾಬೀತಾಗಿದೆ. ಇದಾಗಲೇ ಹಲವಾರು ದಾಖಲೆ ಸೃಷ್ಟಿಸಿರೋ ಅನಿಮಲ್‌, ಬಾಲಿವುಡ್‌ ಚಿತ್ರಗಳ ಕೆಲವು ದಾಖಲೆಗಳನ್ನೂ ಮುರಿದಿದೆ. ಈ ಚಿತ್ರದ ಖುಷಿಯಲ್ಲಿರುವಾಗಲೇ ನಟ ರಣಬೀರ್‌ ಕಪೂರ್‌ ಅವರಿಗೆ ಶಾಕ್‌ ಎದುರಾಗಿದೆ. ಇವರ ವಿರುದ್ಧ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಅಡಿ ಇವರ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ ಈ ದೂರಿಗೂ ಅನಿಮಲ್‌ ಚಿತ್ರಕ್ಕೂ ಸಂಬಂಧವಿಲ್ಲ. ಅನಿಮಲ್‌ ಚಿತ್ರದಲ್ಲಿ ಮಿತಿಮೀರಿದ ಹಿಂಸಾಚಾರ, ಅಶ್ಲೀಲತೆ, ಮಹಿಳೆಯರ ಮೇಲಿನ ದೌರ್ಜನ್ಯ ಎಲ್ಲವೂ ಇದ್ದರೂ ಪ್ರೇಕ್ಷಕರು ಅದನ್ನು ತುಂಬು ಮನದಿಂದ ಸ್ವಾಗತಿಸಿರುವುದು ಚಿತ್ರದ ಕಲೆಕ್ಷನ್‌ ನೋಡಿದರೆ ತಿಳಿಯುತ್ತದೆ.  ಆದರೆ ಸದ್ಯ ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲಾಗಿದ್ದು ಕ್ರಿಸ್‌ಮಸ್‌ ಪಾರ್ಟಿಯಿಂದಾಗಿ!

ಹೌದು.  ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಿಸ್‌ಮಸ್ ಆಚರಿಸುತ್ತಿರುವ ವಿಡಿಯೋ ವೈರಲ್ ಆದ ಮೇಲೆ ಇದರ ವಿರುದ್ಧ  ಮುಂಬೈ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ. ಸಂಜಯ್ ತಿವಾರಿ ಎನ್ನುವವರು ಈ ದೂರು ಸಲ್ಲಿಸಿದ್ದಾರೆ. ವಕೀಲರಾದ ಆಶಿಶ್ ರಾಯ್ ಮತ್ತು ಪಂಕಜ್ ಮಿಶ್ರಾ ಅವರ ಮೂಲಕ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಎಫ್‌ಐಆರ್‍ ದಾಖಲು ಆಗಲಿಲ್ಲ.

Latest Videos

undefined

ಬಾಯ್‌ಫ್ರೆಂಡ್ ಜೊತೆ ಹಾಯಾಗಿದ್ದೇನೆ ಎಂದಿದ್ದ ಶ್ರುತಿ ಹಾಸನ್‌ ಮದ್ವೆಯಾಗಿದ್ದು ನಿಜನಾ ? ಕೊನೆಗೂ ಮೌನ ಮುರಿದ ನಟಿ!
 
ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಎಂದರೆ, ಕ್ರಿಸ್‌ಮಸ್‌ ಕೇಕ್‌ ಮೇಲೆ ಮದ್ಯವನ್ನು ಸುರಿದು ಕ್ರಿಸ್‌ಮಸ್‌ ಆಚರಿಸಿದ್ದಾರೆ ರಣಬೀರ್‌ ಕಪೂರ್‌. ಇಷ್ಟೇ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಕ್ರಿಸ್‌ಮಸ್‌ ಸಮಯದಲ್ಲಿ ಮದ್ಯ, ಕೇಕ್‌ ಎಲ್ಲವೂ ಮಾಮೂಲು. ಆದರೆ ರಣಬೀರ್‌ ಕಪೂರ್‌ ಇಲ್ಲೊಂದು ಎಡವಟ್ಟು ಮಾಡಿದ್ದಾರೆ. ಅದೇನೆಂದರೆ, ಕೇಕ್‌ನಲ್ಲಿ ಮದ್ಯ ಸುರಿಯುವ ಸಮಯದಲ್ಲಿ ಅವರು  "ಜೈ ಮಾತಾ ದಿ" ಎಂದಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಇದಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಹಲವು ನೆಟ್ಟಿಗರು ಗರಂ ಆಗಿದ್ದಾರೆ. ಹಲವರು ಕಮೆಂಟ್‌ ಮೂಲಕ ಆಕ್ರೋಶವನ್ನೂ ಹೊರಹಾಕಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಇವರ ವಿರುದ್ಧ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿದ್ದರೂ ಸದ್ಯ ಎಫ್‌ಐಆರ್‌ ದಾಖಲಾಗಿಲ್ಲ ಎನ್ನಲಾಗುತ್ತಿದೆ.

ಹಿಂದೂ ಧರ್ಮದಲ್ಲಿ, ಇತರ ದೇವತೆಗಳನ್ನು ಆವಾಹನೆ ಮಾಡುವ ಮೊದಲು ಅಗ್ನಿ ದೇವರನ್ನು ಆವಾಹನೆ ಮಾಡಲಾಗುತ್ತದೆ. ಆದರೆ ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಮತ್ತೊಂದು ಧರ್ಮದ ಹಬ್ಬವನ್ನು ಆಚರಿಸುವಾಗ ಮದ್ಯ ಬಳಸಿದರು. ಜೈ ಮಾತಾ ದಿ ಎಂದು ಘೋಷಣೆ ಕೂಗಿದರು. ಇದು ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವಂಥದ್ದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಂದಹಾಗೆ, ಈ ಕ್ರಿಸ್‌ಮಸ್‌ ಪಾರ್ಟಿಯನ್ನು ಇತ್ತೀಚೆಗೆ ಅಗಲಿದ ಬಾಲಿವುಡ್‌ ನಟ ಶಶಿ ಕಪೂರ್ ಅವರ ಮನೆಯಲ್ಲಿ ನಡೆಸಲಾಗಿತ್ತು.  ಕಪೂರ್ ಕುಟುಂಬದ ವಾರ್ಷಿಕ ಕ್ರಿಸ್‌ಮಸ್ ಪಾರ್ಟಿ ಇದಾಗಿದ್ದು,  ರಣಬೀರ್ ಮತ್ತು ಆಲಿಯಾ ಅವರ ಮಗಳು ರಾಹಾ ಮತ್ತು ಅಗಸ್ತ್ಯ ನಂದಾ ಅವರೊಂದಿಗೆ ಭಾಗವಹಿಸಿದ್ದರು. 

ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ ನಟಿ ಜಯಪ್ರದಾ! ಎಲ್ಲೆಡೆ ಭಾರಿ ಶೋಧ- ಆಗಿದ್ದೇನು?

 

click me!